Dinesh Karthik: ಆರ್​ಸಿಬಿ ತಂಡದಿಂದ ನಿರ್ಗಮನ ಆಗುವಾಗ ದಿನೇಶ್ ಕಾರ್ತಿಕ್ ಆಡಿದ ಮಾತುಗಳೇನು ಕೇಳಿ

Dinesh Karthik: ಆರ್​ಸಿಬಿ ತಂಡದಿಂದ ನಿರ್ಗಮನ ಆಗುವಾಗ ದಿನೇಶ್ ಕಾರ್ತಿಕ್ ಆಡಿದ ಮಾತುಗಳೇನು ಕೇಳಿ
Dinesh Karthik RCB IPL 2022

RCB, IPL 2022: ಐಪಿಎಲ್ 2022 ರಲ್ಲಿ ಆರ್​ಸಿಬಿ ಕನಿಷ್ಠ ಕ್ವಾಲಿಫೈಯರ್ ವರೆಗೂ ಬಂದಿದೆ ಎಂಬ ಸಮಾಧಾನ ಅಭಿಮಾನಿಗಳದ್ದು. ಈ ಬಾರಿ ಆರ್​ಸಿಬಿ ಪರ ಮಿಂಚಿ ಎಲ್ಲರ ಗಮನ ಸೆಳೆದಿದ್ದು ದಿನೇಶ್ ಕಾರ್ತಿಕ್. ಇದೀಗ ಐಪಿಎಲ್​ನಿಂದ ನಿರ್ಗಮನವಾಗುತ್ತಿದ್ದಂತೆ ಮಾತನಾಡಿರುವ ಕಾರ್ತಿಕ್ ಏನು ಹೇಳಿದ್ದಾರೆ ಕೇಳಿ.

TV9kannada Web Team

| Edited By: Vinay Bhat

May 29, 2022 | 10:16 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಕ್ವಾಲಿಫೈಯರ್-2 ನಲ್ಲಿ ಸೋಲು ಕಂಡ ಪರಿಣಾಮ ಇಂಡಿಯನ್ ಪ್ರೀಮಿಯರ್ ಲೀಗ್ 2022 ರಿಂದ (IPL 2022) ಹೊರಬಿದ್ದಾಗಿದೆ. ಫೈನಲ್ ಹಂತಕ್ಕೇರುವಲ್ಲಿ ಎಡವಿದ ಆರ್​ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಂಡಿತು. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಈ ಪಂದ್ಯದಲ್ಲಿ ಆರ್​ಆರ್​ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಮಿಂಚಿದರೆ ಆರ್​ಸಿಬಿ ಮತ್ತೆ ನಿರಾಸೆ ಮೂಡಿಸಿತು. ಆದರೆ, ಈ ಬಾರಿ ಬೆಂಗಳೂರು ತಂಡ ನೀಡಿದ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಫಾಪ್ ಡುಪ್ಲೆಸಿಸ್ ಹೊಸ ನಾಯಕತ್ವದೊಂದಿಗೆ ಆರ್​​ಸಿಬಿ ಅನೇಕ ವಿಭಾಗಗಳಲ್ಲಿ ಹಿಂದಿನ ಸೀಸನ್​ಗಿಂತ ಬಲಿಷ್ಠವಾಗಿದೆ. ಕನಿಷ್ಠ ಕ್ವಾಲಿಫೈಯರ್ ವರೆಗೂ ಬಂದಿದೆ ಎಂಬ ಸಮಾಧಾನ ಅಭಿಮಾನಿಗಳದ್ದು. ಈ ಬಾರಿ ಆರ್​ಸಿಬಿ ಪರ ಮಿಂಚಿ ಎಲ್ಲರ ಗಮನ ಸೆಳೆಯುವುದರ ಜೊತೆಗೆ ಟೀಮ್ ಇಂಡಿಯಾಕ್ಕೂ ಕಮ್​ಬ್ಯಾಕ್ ಮಾಡಿದ್ದು ದಿನೇಶ್ ಕಾರ್ತಿಕ್ (Dinesh Karthik).

ಹೌದು, ಆರ್​​ಸಿಬಿ ನೀಡಿದ ಅವಕಾಶವನ್ನು ಎರಡೂ ಕೈಗಳಿಂದ ಬಾಜಿಕೊಂಡ ದಿನೇಶ್ ಕಾರ್ತಿಕ್ ಅತ್ಯುತ್ತಮ ಫಿನಿಶರ್ ಆಗಿ ಹೊರಹೊಮ್ಮಿದ್ದಾರೆ. ಇದರಿಂದಲೇ ಬರೋಬ್ಬರಿ ಮೂರು ವರ್ಷಗಳ ನಂತರ ಕಾರ್ತಿಕ್​ಗೆ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್​ನ ಬಾಗಿಲು ತೆರೆದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಭಾರತ ತಂಡದಲ್ಲಿ ಕಾರ್ತಿಕ್ ಹೆಸರಿದೆ. ಆದರೆ, ಆರ್​ಸಿಬಿ ತಂಡವನ್ನು ಫೈನಲ್​ಗೆ ಕೊಂಡೊಯ್ಯಲು ಸಾಧ್ಯವಾಗಿಲ್ಲ ಎಂಬ ನೋವೂ ಇದೆ. ಇದೀಗ ಆರ್​ಸಿಬಿ ಐಪಿಎಲ್​ನಿಂದ ನಿರ್ಗಮನವಾಗುತ್ತಿದ್ದಂತೆ ಮಾತನಾಡಿರುವ ಕಾರ್ತಿಕ್ ಏನು ಹೇಳಿದ್ದಾರೆ ಕೇಳಿ.

“ನಾನು ಇಲ್ಲಿಯವರೆಗೂ ಅನೇಕ ತಂಡಗಳ ಪರ ಐಪಿಎಲ್‌ ಟೂರ್ನಿಯಲ್ಲಿ ಪ್ರತಿನಿಧಿಸಿದ್ದೇನೆ. ಆದರೆ, ಆರ್‌ಸಿಬಿಗೆ ಇರುವ ಅಭಿಮಾನಿಗಳ ಬಳಗ ಬೇರೆ ಯಾವುದೇ ತಂಡದಲ್ಲಿ ನೋಡಿಲ್ಲ. ಮೈದಾನದಲ್ಲಿ ಸಿಗುವ ಬೆಂಬಲ ಬೇರೆ ಯಾವುದೇ ತಂಡದಲ್ಲಿ ಇದುವರೆಗೂ ಲಭಿಸಿಲ್ಲ. ಇದಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಈ ರೀತಿಯ ದೊಡ್ಡ ಅಭಿಮಾನಿಗಳ ಬಳಗದಿಂದ ಬೆಂಬಲ ಸಿಕ್ಕಿದ್ದರಿಂದ ಆರ್‌ಸಿಬಿಗಾಗಿ ಏನಾದರೂ ಮಾಡಬೇಕೆಂದಿನಿಸಿತು,” ಎಂದು ಹೇಳಿದ್ದಾರೆ. ಕಾರ್ತಿಕ್ ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ಡೆಲ್ಲಿ, ಪಂಜಾಬ್‌, ಮುಂಬೈ, ಆರ್​ಸಿಬ(ಈ ಹಿಂದೆ ಹಾಗೂ ಪ್ರಸ್ತುತ), ಗುಜರಾತ್ ಲಯನ್ಸ್‌ ಹಾಗೂ ಕೆಕೆಆರ್ ತಂಡಗಳ ಪರ ಆಡಿದ್ದಾರೆ. ಈ ಎಲ್ಲ ತಂಡಗಳ ಪೈಕಿ ಆರ್‌ಸಿಬಿ ತಂಡ ದೊಡ್ಡ ಪ್ರಮಾಣದ ಅಭಿಮಾನಿಗಳ ಬಳಗವನ್ನು ಹೊಂದಿದೆ ಎಂದು ಕಾರ್ತಿಕ್‌ ಹೇಳಿದ್ದಾರೆ.

GT vs RR, IPL 2022 Final: ಐಪಿಎಲ್ 2022ಕ್ಕೆ ಇಂದು ತೆರೆ: ಯಾರಾಗಲಿದ್ದಾರೆ ಚಾಂಪಿಯನ್?

ಆರ್​ಸಿಬಿ ಪರ ಆಡಿದಾಗ ನಾನು ಮೈದಾನದಲ್ಲಿ ಪಡೆದ ಹರ್ಷೋದ್ಗಾರಗಳು ನನಗೆ ಬೇರೆಲ್ಲಿಯೂ ಸಿಕ್ಕಿಲ್ಲ. ನಿಮ್ಮಂತಹ ಅಭಿಮಾನಿಗಳಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಈ ವಯಸ್ಸಿನಲ್ಲಿ ನಾನು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇನೆ ಅದೆಲ್ಲವೂ ಸಿಕ್ಕಿದೆ. ತುಂಬಾ ಧನ್ಯವಾದಗಳು, ನೀವು ನನ್ನ ಜೀವನದಲ್ಲಿ ಬಹಳಷ್ಟು ಅರ್ಥವನ್ನು ಹೊಂದಿದ್ದೀರಿ. ಏಕೆಂದರೆ ನೀವು ಜನರ ಮುಖದಲ್ಲಿ ನಗುವನ್ನು ಮೂಡಿಸಲು ಸಾಧ್ಯವಾದಾಗ, ನೀವು ಕ್ರೀಡೆಯನ್ನು ಆಡಲು ನಿಜವಾದ ಕಾರಣ ಅದು. ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ, ನಾನು ಈ ಫ್ರ್ಯಾಂಚೈಸ್ ಅಲ್ಲಿ ಕಂಡುಕೊಂಡಿದ್ದೇನೆ ಮತ್ತು ಅಕ್ಷರಶಃ ನನ್ನನ್ನು ತೆರೆದ ತೋಳುಗಳಿಂದ ಸ್ವೀಕರಿಸಿದ ಈ ಅಭಿಮಾನಿಗಳ ಬಳಗವನ್ನು ಹೊಂದಿದ್ದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ,” ಎಂಬುದು ಕಾರ್ತಿಕ್ ಮಾತು.

“ಒಂದು ತಂಡವಾಗಿ ಸಾಧನೆ ಮಾಡಿದ್ದಕ್ಕಾಗಿ ಹಲವು ಹಾದಿಗಳಲ್ಲಿ ನಾನು ಆಶೀರ್ವದಿಸಿದ್ದೇನೆ. ಇದರಲ್ಲಿ ತುಂಬಾ ಮುಖ್ಯವಾಗಿ ನನ್ನ ಸೋಶಿಯಲ್‌ ಮೀಡಿಯಾ ಖಾತೆಗಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್, ಟ್ವಿಟರ್ ಸೇರಿದಂತೆ ಎಲ್ಲಾ ಕಡೆ ನನ್ನ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಇದರಲ್ಲಿ ಸ್ವಲ್ಪ ವಿಷಯಗಳನ್ನು ಓದಿದ್ದೇನೆ. ಅವರು ನೀಡುವ ಬೆಂಬಲ ಹಾಗೂ ಪ್ರೋತ್ಸಾಹ ಸಾಕಷ್ಟು ಧನಾತ್ಮಕ ಅಂಶಗಳನ್ನು ನೀಡಿದೆ ಎಂದು ಹೇಳಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada