AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ನಾಯಕ ಬದಲಾದರೂ ಹಣೆಬರಹ ಬದಲಾಗಲಿಲ್ಲ! ಬೇಡದ ದಾಖಲೆಯೊಂದಿಗೆ ಚೆನ್ನೈ ಹಿಂದಿಕ್ಕಿದ ಆರ್​ಸಿಬಿ

IPL 2022: ಈ ಹಿಂದೆ, ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ 7 ಬಾರಿ ಪ್ಲೇ ಆಫ್‌ನಿಂದ ಹೊರಗುಳಿಯಬೇಕಾಯಿತು. ಆದರೆ, ಸಿಎಸ್‌ಕೆ 4 ಬಾರಿ ಪ್ರಶಸ್ತಿ ಗೆದ್ದಿದ್ದರೆ, ಬೆಂಗಳೂರು ಈ ಭಾಗದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

IPL 2022: ನಾಯಕ ಬದಲಾದರೂ ಹಣೆಬರಹ ಬದಲಾಗಲಿಲ್ಲ! ಬೇಡದ ದಾಖಲೆಯೊಂದಿಗೆ ಚೆನ್ನೈ ಹಿಂದಿಕ್ಕಿದ ಆರ್​ಸಿಬಿ
RCB IPL 2022
TV9 Web
| Updated By: ಪೃಥ್ವಿಶಂಕರ|

Updated on:May 28, 2022 | 6:53 PM

Share

ಮತ್ತೊಂದು ಸೀಸನ್, ಮತ್ತೊಂದು ನಿರಾಸೆ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bangalore)ದ ಕಥೆ. 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಈ ತಂಡ ಮೊದಲ ಪ್ರಶಸ್ತಿಗಾಗಿ ಕಾಯುತ್ತಿದೆ. ಕೆಲವು ಸಂದರ್ಭಗಳಲ್ಲಿ, ತಂಡವು ಹತ್ತಿರ ಬಂದರೂ ಕೊನೆಯ ಅಡಚಣೆಯನ್ನು ದಾಟಲು ಸಾಧ್ಯವಾಗಲಿಲ್ಲ. IPL 2022 ರಲ್ಲಿ ಹೊಸ ನಾಯಕ, ಬದಲಾದ ತಂಡ ಮತ್ತು ಹೊಸ ಚೈತನ್ಯದೊಂದಿಗೆ, ತಂಡವು ಉತ್ತಮ ಪ್ರದರ್ಶನ ತೋರಿ ಕ್ವಾಲಿಫೈಯರ್ 2 ಹಂತ ತಲುಪಿತು. ಆದರೆ ತಂಡದ ನಾಯಕ ಬದಲಾದರೂ ಹಣೆಬರಹ ಮಾತ್ರ ಬದಲಾಗಲಿಲ್ಲ. ಇದು ಕಳೆದ 14 ಋತುಗಳಲ್ಲಿ ಅನೇಕ ಬಾರಿ ಸಂಭವಿಸಿದೆ. ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಸೋಲು ಬೆಂಗಳೂರು ಮತ್ತು ಅದರ ಅಭಿಮಾನಿಗಳ ಹೃದಯಕ್ಕೆ ಆಘಾತ ನೀಡಿದೆ. ಇದರೊಂದಿಗೆ ಆರ್​ಸಿಬಿ ಬೇಡದ ದಾಖಲೆಗೆ ಕೊರಳೊಡ್ಡಿದೆ.

ಶುಕ್ರವಾರ ಮೇ 27 ರಂದು ಅಹಮದಾಬಾದ್‌ನಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 7 ವಿಕೆಟ್‌ಗಳಿಂದ ಬೆಂಗಳೂರು ತಂಡವನ್ನು ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಬೆಂಗಳೂರು ಕೇವಲ 157 ರನ್ ಗಳಿಸಿತು. ಕಳೆದ ಕೆಲವು ಸೀಸನ್‌ಗಳಂತೆ ಮತ್ತೊಮ್ಮೆ ಪ್ಲೇಆಫ್‌ನಲ್ಲಿ ತಂಡದ ದೊಡ್ಡ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸಲು ವಿಫಲರಾಗಿ ನಿರಾಸೆ ಮೂಡಿಸಿದರು. ಜೋಸ್ ಬಟ್ಲರ್ ಅವರ ದಾಖಲೆಯ ಶತಕದ ನೆರವಿನಿಂದ ರಾಜಸ್ಥಾನ್ ಈ ಗುರಿಯನ್ನು ಅತ್ಯಂತ ಸುಲಭವಾಗಿ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.

ಇದನ್ನೂ ಓದಿ:IPL 2022: ಆರ್​ಸಿಬಿ ಜರ್ಸಿ ಕಳಚಿ ಬೌಲ್ಟ್ ನೀಡಿದ ರಾಜಸ್ಥಾನ ಜರ್ಸಿ ತೊಟ್ಟ ಆರ್​ಸಿಬಿ ಅಭಿಮಾನಿ! ವಿಡಿಯೋ ವೈರಲ್

ಇದನ್ನೂ ಓದಿ
Image
GT vs RR Prediction Playing XI IPL 2022 Final: ಫೈನಲ್ ಕದನಕ್ಕೆ ಉಭಯ ತಂಡಗಳ ಸಂಭಾವ್ಯ ಇಲೆವೆನ್
Image
IPL 2022: ಆರ್​ಸಿಬಿ ಜರ್ಸಿ ಕಳಚಿ ಬೌಲ್ಟ್ ನೀಡಿದ ರಾಜಸ್ಥಾನ ಜರ್ಸಿ ತೊಟ್ಟ ಆರ್​ಸಿಬಿ ಅಭಿಮಾನಿ! ವಿಡಿಯೋ ವೈರಲ್
Image
GT vs RR IPL 2022 Final Live Streaming: ಗುಜರಾತ್- ರಾಜಸ್ಥಾನ ಫೈನಲ್ ವಾರ್! ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಪ್ಲೇಆಫ್‌ನಲ್ಲಿ ಹೆಚ್ಚಿನ ಸೋಲು

ಈ ಮೂಲಕ ಮತ್ತೊಮ್ಮೆ ಬೆಂಗಳೂರು ಪ್ಲೇಆಫ್‌ನಿಂದಲೇ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್‌ನ ಅನಗತ್ಯ ದಾಖಲೆಯನ್ನೂ ಮುರಿದಿದೆ. ಬೆಂಗಳೂರು ಪ್ಲೇಆಫ್‌ನಿಂದ ಹೊರಬಿದ್ದಿರುವುದು ಇದೇ ಮೊದಲ ಅಥವಾ ಎರಡನೇ ಬಾರಿ ಅಲ್ಲ, ಬರೋಬ್ಬರಿ ಎಂಟನೇ ಬಾರಿಗೆ ಬೆಂಗಳೂರು ಪ್ರಶಸ್ತಿ ಗೆಲ್ಲದೆ ಕೊನೆಯ ನಾಲ್ಕರ ಘಟ್ಟಕ್ಕೆ ತಲುಪಬೇಕಾಯಿತು, ಇದು ಈಗ ಹೊಸ ದಾಖಲೆಯಾಗಿದೆ. ಈ ಹಿಂದೆ, ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ 7 ಬಾರಿ ಪ್ಲೇ ಆಫ್‌ನಿಂದ ಹೊರಗುಳಿಯಬೇಕಾಯಿತು. ಆದರೆ, ಸಿಎಸ್‌ಕೆ 4 ಬಾರಿ ಪ್ರಶಸ್ತಿ ಗೆದ್ದಿದ್ದರೆ, ಬೆಂಗಳೂರು ಈ ಭಾಗದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

ಬೆಂಗಳೂರಿನ ಪ್ರದರ್ಶನ ಹೇಗಿತ್ತು?

ಈ ಋತುವಿನ ಬಗ್ಗೆ ಮಾತನಾಡುವುದಾದರೆ, ಬೆಂಗಳೂರು ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ 8 ರಲ್ಲಿ ಗೆದ್ದು 16 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಪ್ರವೇಶಿಸಿತು. ಬೆಂಗಳೂರು ನಾಲ್ಕನೇ ಸ್ಥಾನ ಗಳಿಸಿದ್ದರಿಂದ ಎಲಿಮಿನೇಟರ್ ಪಂದ್ಯವನ್ನು ಆಡಬೇಕಾಗಿತ್ತು, ಅದರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಸೋಲಿಸಿ ನಂತರ ಎರಡನೇ ಕ್ವಾಲಿಫೈಯರ್ ತಲುಪಿತು. ಇಲ್ಲಿ ಅಂತಿಮವಾಗಿ ರಾಜಸ್ಥಾನದ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಬೆಂಗಳೂರು ಸತತ ಮೂರನೇ ಸೀಸನ್‌ಗೆ ಪ್ಲೇಆಫ್‌ಗೆ ಅರ್ಹತೆ ಗಳಿಸಿತು, ಆದರೆ ಹಿಂದಿನ ಎರಡು ಸೀಸನ್‌ಗಳಿಗಿಂತ ಭಿನ್ನವಾಗಿ, ಈ ಬಾರಿ ತಂಡವು ಎಲಿಮಿನೇಟರ್‌ಗಿಂತ ಮುಂಚಿತವಾಗಿ ಒಂದು ಪಂದ್ಯವನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

Published On - 6:53 pm, Sat, 28 May 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ