GT vs RR IPL 2022 Final Live Streaming: ಗುಜರಾತ್- ರಾಜಸ್ಥಾನ ಫೈನಲ್ ವಾರ್! ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ

GT vs RR IPL 2022 Final Live Streaming: ಗುಜರಾತ್- ರಾಜಸ್ಥಾನ ಫೈನಲ್ ವಾರ್! ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ
RR vs GT IPL 2022

GT vs RR IPL 2022 Final Live Streaming: ಗುಜರಾತ್ ಈ ಸೀಸನ್​ನಲ್ಲಿ ಮೊದಲ ಬಾರಿಗೆ ಆಡುತ್ತಿದೆ. ಮೊದಲ ಟೂರ್ನಿಯಲ್ಲೇ ಅದ್ಭುತ ಆಟ ಪ್ರದರ್ಶಿಸಿ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಫೈನಲ್ ಪ್ರವೇಶಿಸಿದೆ.

TV9kannada Web Team

| Edited By: pruthvi Shankar

May 28, 2022 | 4:23 PM

ಐಪಿಎಲ್-2022ರ (IPL 2022) ಫೈನಲ್‌ಗೆ ವೇದಿಕೆ ಸಿದ್ಧವಾಗಿದೆ. ಈ ಸೀಸನ್​ನ ಎರಡು ಫೈನಲಿಸ್ಟ್ ತಂಡಗಳನ್ನು ನಿರ್ಧರಿಸಲಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ- ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಈ ಸೀಸನ್​ನ ಎರಡು ಅಗ್ರ ತಂಡಗಳ ನಡುವೆ ಪ್ರಶಸ್ತಿ ರೇಸ್ ನಡೆಯಲಿದೆ. ಈ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ನಡುವೆ ನಡೆಯಲಿದೆ. ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ಕ್ವಾಲಿಫೈಯರ್-1ರಲ್ಲೂ ಈ ಎರಡು ತಂಡಗಳು ಮುಖಾಮುಖಿಯಾಗಿದ್ದು, ಇದರಲ್ಲಿ ಗುಜರಾತ್ ಗೆದ್ದು ನೇರವಾಗಿ ಅಂತಿಮ ಟಿಕೆಟ್ ಕಾಯ್ದಿರಿಸಿತ್ತು. ಅದೇ ಸಮಯದಲ್ಲಿ ರಾಜಸ್ಥಾನ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಆಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್‌ಗೆ ಟಿಕೆಟ್ ಪಡೆಯಿತು. ಇದೀಗ ಈ ಎರಡು ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.

ಗುಜರಾತ್ ಈ ಸೀಸನ್​ನಲ್ಲಿ ಮೊದಲ ಬಾರಿಗೆ ಆಡುತ್ತಿದೆ. ಮೊದಲ ಟೂರ್ನಿಯಲ್ಲೇ ಅದ್ಭುತ ಆಟ ಪ್ರದರ್ಶಿಸಿ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಫೈನಲ್ ಪ್ರವೇಶಿಸಿದೆ. ತಮ್ಮ ನಾಯಕತ್ವದಲ್ಲಿ ಶೇನ್ ವಾರ್ನ್ ಮಾತ್ರ ಮಾಡಲು ಸಾಧ್ಯವಾಗಿದ್ದನ್ನು ಸಂಜು ಸ್ಯಾಮ್ಸನ್ ಈಗ ಮಾಡಲು ರಾಜಸ್ಥಾನದ ಪರ ಸಿದ್ದರಿದ್ದಾರೆ. ಈ ಲೀಗ್‌ನ ಮೊದಲ ಸೀಸನ್‌ನಲ್ಲಿ ರಾಜಸ್ಥಾನ ಫೈನಲ್‌ ಪ್ರವೇಶಿಸಿ ಗೆದ್ದಿತ್ತು. ಆ ವರ್ಷದ ನಂತರ ರಾಜಸ್ಥಾನ ಈ ವರ್ಷ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶೇನ್ ವಾರ್ನ್ ನಾಯಕತ್ವದಲ್ಲಿ ಮಾಡಿದ ಕೆಲಸವನ್ನು ಈ ತಂಡ ಮಾಡಲು ಸಾಧ್ಯವೇ ಎಂಬುದನ್ನು ಈಗ ನೋಡಬೇಕು.

ಇದನ್ನೂ ಓದಿ:GT vs RR Head to Head Records: ಫೈನಲ್ ಕದನದಲ್ಲಿ ಗೆಲುವು ಯಾರಿಗೆ? ಮುಖಾಮುಖಿ ವರದಿ ಕಥೆ ಹೇಳುವುದೇನು?

ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಹೀಗಿದೆ

ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯ ಯಾವಾಗ ನಡೆಯಲಿದೆ? ಐಪಿಎಲ್-2022 ರ ಫೈನಲ್ ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಮೇ 29 ಭಾನುವಾರ ನಡೆಯಲಿದೆ.

ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯ ಎಲ್ಲಿ ನಡೆಯಲಿದೆ? ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಈ ಪಂದ್ಯ ನಡೆಯಲಿದೆ.

ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ? ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ಟಾಸ್ ರಾತ್ರಿ 7 ಗಂಟೆಗೆ ನಡೆಯಲಿದ್ದು, ಮೊದಲ ಇನಿಂಗ್ಸ್ 07:30 ಕ್ಕೆ ಆರಂಭವಾಗಲಿದೆ.

ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯದ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು? ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವಿವಿಧ ಭಾಷೆಗಳಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ

ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ IPL-2022 ಫೈನಲ್ ಪಂದ್ಯವನ್ನು ಆನ್‌ಲೈನ್ ಲೈವ್ ಸ್ಟ್ರೀಮಿಂಗ್‌ನಲ್ಲಿ ಎಲ್ಲಿ ವೀಕ್ಷಿಸಬಹುದು? ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ IPL-2022 ಪಂದ್ಯದ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಅನ್ನು ಚಂದಾದಾರಿಕೆಯೊಂದಿಗೆ Disney+Hotstar ನಲ್ಲಿ ನೋಡಬಹುದು.

Follow us on

Related Stories

Most Read Stories

Click on your DTH Provider to Add TV9 Kannada