AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GT vs RR Head to Head Records: ಫೈನಲ್ ಕದನದಲ್ಲಿ ಗೆಲುವು ಯಾರಿಗೆ? ಮುಖಾಮುಖಿ ವರದಿ ಕಥೆ ಹೇಳುವುದೇನು?

GT vs RR Head to Head Records: ಈ ಸೀಸನ್​ನಲ್ಲಿ ಎರಡೂ ತಂಡಗಳು ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿವೆ. ಒಂದು ಪಂದ್ಯ ಲೀಗ್ ಹಂತದಲ್ಲಿ ಮತ್ತು ಇನ್ನೊಂದು ಪ್ಲೇ ಆಫ್‌ನಲ್ಲಿ ನಡೆದಿತ್ತು. ಈ ಎರಡೂ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಗೆದ್ದಿತ್ತು.

GT vs RR Head to Head Records: ಫೈನಲ್ ಕದನದಲ್ಲಿ ಗೆಲುವು ಯಾರಿಗೆ? ಮುಖಾಮುಖಿ ವರದಿ ಕಥೆ ಹೇಳುವುದೇನು?
GT vs RR
TV9 Web
| Updated By: ಪೃಥ್ವಿಶಂಕರ|

Updated on:May 28, 2022 | 3:38 PM

Share

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium)ನಲ್ಲಿ ಭಾನುವಾರ ನಡೆಯಲಿರುವ ಐಪಿಎಲ್ 2022 (IPL 2022) ಫೈನಲ್ ಪಂದ್ಯವನ್ನು ಆಯೋಜಿಸಲು ಸಿದ್ಧವಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡು ಬಲಿಷ್ಠ ತಂಡಗಳು ಪರಸ್ಪರ ಸೆಣಸಲಿವೆ. ಹೊಸದಾಗಿ ಐಪಿಎಲ್​ಗೆ ಎಂಟ್ರಿಕೊಟ್ಟಿರುವ ತಂಡ ಗುಜರಾತ್ ಟೈಟಾನ್ಸ್ ಮತ್ತು ಲೀಗ್‌ನ ಮೊದಲ ಸೀಸನ್​ನ ವಿಜೇತ ತಂಡ ರಾಜಸ್ಥಾನ್ ರಾಯಲ್ಸ್ (GT vs RR) ನಡುವೆ ಪ್ರಶಸ್ತಿ ಹಣಾಹಣಿ ನಡೆಯಲಿದೆ. ರಾಜಸ್ಥಾನವು ತನ್ನ ಎರಡನೇ ಪ್ರಶಸ್ತಿಯನ್ನು ಪಡೆಯುವ ಅವಕಾಶವನ್ನು ಹೊಂದಿದೆ, ಆದರೆ ಗುಜರಾತ್ 2008 ರಲ್ಲಿ ರಾಜಸ್ಥಾನ ಮಾಡಿದ್ದನ್ನು ಮಾಡಬೇಕಾಗಿದೆ. ಈಗ ಫೈನಲ್‌ನ ಫಲಿತಾಂಶ ಏನಾಗಲಿದೆ ಎಂಬುದು ಭಾನುವಾರ ರಾತ್ರಿ ತಿಳಿಯಲಿದೆ, ಆದರೆ ಈ ಅಮೋಘ ಪಂದ್ಯಕ್ಕೂ ಮುನ್ನ ಗುಜರಾತ್ ಮತ್ತು ರಾಜಸ್ಥಾನ ನಡುವಿನ ಅಂಕಿ-ಅಂಶಗಳನ್ನು (GT vs RR Head To Head) ನೋಡಬೇಕಾಗಿದೆ.

ಈ ಎರಡೂ ತಂಡಗಳು ಸೀಸನ್​ನ ಉದ್ದಕ್ಕೂ ಪ್ರಬಲ ಆಟ ಪ್ರದರ್ಶಿಸಿದವು ಮತ್ತು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡು ಪ್ಲೇಆಫ್ ತಲುಪಿದವು. ಈ ಎರಡು ತಂಡಗಳ ವಿಶೇಷತೆ ಎಂದರೆ ಸಮಬಲ. ತಂಡದ ಬೌಲಿಂಗ್ ಮತ್ತು ಬ್ಯಾಟಿಂಗ್ ನಡುವೆ ಉತ್ತಮ ಸಮತೋಲನವಿದೆ. ಇದು ಈ ಎರಡು ತಂಡಗಳನ್ನು ಇಲ್ಲಿಯವರೆಗೆ ತಂದಿದೆ. ರಾಜಸ್ಥಾನ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಜಾಸ್ ಬಟ್ಲರ್ ಅಗ್ರಸ್ಥಾನದಲ್ಲಿದ್ದಾರೆ. ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಯುಜ್ವೇಂದ್ರ ಚಹಾಲ್ ಕೂಡ ರಾಜಸ್ಥಾನ ತಂಡದಲ್ಲಿದ್ದಾರೆ.

ಇದನ್ನೂ ಓದಿ:IPL 2022 Final: 14 ವರ್ಷಗಳ ನಂತರ ರಾಜಸ್ಥಾನ ಫೈನಲ್‌ಗೆ! ಟೇಬಲ್ ಟಾಪರ್ ಗುಜರಾತ್ ಮುಂದಿನ ಎದುರಾಳಿ

ಇದನ್ನೂ ಓದಿ
Image
IPL 2022 Prize Money: ಚಾಂಪಿಯನ್​ಗೆ 20 ಕೋಟಿ, ರನ್ನರ್ ಅಪ್​ಗೆ 13 ಕೋಟಿ! ಆರ್​ಸಿಬಿಗೆ ಸಿಕ್ಕಿದ್ದೆಷ್ಟು?
Image
RR vs RCB Qualifier 2, IPL 2022: ಐದು ಓವರ್‌, ಕೇವಲ 34 ರನ್, ಐದು ವಿಕೆಟ್! ಆರ್​ಸಿಬಿ ಸೋಲಿಗೆ ಕಾರಣವಿದು

ಮುಖಾಮುಖಿ ಅಂಕಿಅಂಶಗಳು ಹೀಗಿವೆ

ಗುಜರಾತ್ ಇದೇ ಮೊದಲ ಬಾರಿಗೆ ಲೀಗ್‌ನಲ್ಲಿ ಆಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅವರ ಮತ್ತು ರಾಜಸ್ಥಾನ ನಡುವೆ ಹೆಚ್ಚು ಪಂದ್ಯಗಳು ನಡೆದಿಲ್ಲ. ಈ ಸೀಸನ್​ನಲ್ಲಿ ಎರಡೂ ತಂಡಗಳು ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿವೆ. ಒಂದು ಪಂದ್ಯ ಲೀಗ್ ಹಂತದಲ್ಲಿ ಮತ್ತು ಇನ್ನೊಂದು ಪ್ಲೇ ಆಫ್‌ನಲ್ಲಿ ನಡೆದಿತ್ತು. ಈ ಎರಡೂ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಗೆದ್ದಿತ್ತು. ಏಪ್ರಿಲ್ 14 ರಂದು ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ 37 ರನ್ ಗಳಿಂದ ಗೆದ್ದಿತ್ತು. ಅದೇ ವೇಳೆ ಮೊದಲ ಕ್ವಾಲಿಫೈಯರ್‌ನಲ್ಲೂ ಗುಜರಾತ್ ತಂಡ ಜಯಭೇರಿ ಬಾರಿಸಿತ್ತು. ಈ ಪಂದ್ಯದಲ್ಲಿ ಗುಜರಾತ್ ಏಳು ವಿಕೆಟ್‌ಗಳಿಂದ ಗೆದ್ದಿತ್ತು.

ಕೊಹ್ಲಿ ದಾಖಲೆ ಮುರಿಯಲಿದ್ದಾರೆ ಬಟ್ಲರ್!

ಗುಜರಾತ್ ಮತ್ತು ರಾಜಸ್ತಾನ ನಡುವಿನ ಫೈನಲ್ ಪಂದ್ಯ ರೋಚಕವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಇದಕ್ಕೆ ಕಾರಣ ಈ ಎರಡು ತಂಡಗಳ ಆಟದ ಶೈಲಿ. ಎರಡೂ ತಂಡಗಳು ಆಕ್ರಮಣಕಾರಿ ಮತ್ತು ಬುದ್ಧಿವಂತ ಆಟಕ್ಕೆ ಹೆಸರುವಾಸಿಯಾಗಿದೆ. ಗುಜರಾತ್ ಎರಡು ಪಂದ್ಯಗಳಲ್ಲಿ ರಾಜಸ್ಥಾನವನ್ನು ನಿಸ್ಸಂದೇಹವಾಗಿ ಸೋಲಿಸಿದೆ ಆದರೆ ಪಾಂಡ್ಯ ತಂಡವು ಸಂಜು ತಂಡವನ್ನು ಲಘುವಾಗಿ ತೆಗೆದುಕೊಳ್ಳುವ ತಪ್ಪನ್ನು ಮಾಡಲಾರದು. ರಾಜಸ್ಥಾನದ ಬ್ಯಾಟ್ಸ್‌ಮನ್ ಬಟ್ಲರ್ ಸರಿಯಾದ ಸಮಯದಲ್ಲಿ ತಮ್ಮ ಲಯ ಕಂಡುಕೊಂಡಿದ್ದಾರೆ. ಆರಂಭಿಕ ಪಂದ್ಯಗಳಲ್ಲಿ ಅಬ್ಬರಿಸಿದ ನಂತರ, ಈ ಬಲಗೈ ಬ್ಯಾಟ್ಸ್‌ಮನ್ ಕೆಲವು ಪಂದ್ಯಗಳಲ್ಲಿ ದಾರಿ ತಪ್ಪಿದರು. ಆದರೆ ಪ್ಲೇಆಫ್‌ಗೆ ಬಂದ ತಕ್ಷಣ ಅವರು ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಬಾಂಗ್ಲಾ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬಟ್ಲರ್ ಅದ್ಭುತ ಶತಕ ಬಾರಿಸಿದ್ದರು. ಇದು ಈ ಋತುವಿನಲ್ಲಿ ಅವರ ನಾಲ್ಕನೇ ಶತಕವಾಗಿತ್ತು. ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿರಾಟ್ ಕೊಹ್ಲಿ ದಾಖಲೆಯನ್ನು ಈ ಮೂಲಕ ಮುರಿದಿದ್ದಾರೆ. 2016ರಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದರು.

Published On - 3:38 pm, Sat, 28 May 22

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್