IPL 2022 Final: 14 ವರ್ಷಗಳ ನಂತರ ರಾಜಸ್ಥಾನ ಫೈನಲ್‌ಗೆ! ಟೇಬಲ್ ಟಾಪರ್ ಗುಜರಾತ್ ಮುಂದಿನ ಎದುರಾಳಿ

IPL 2022 Final: ರಾಜಸ್ಥಾನ್ ರಾಯಲ್ಸ್ ತಂಡವು 2008 ರ ನಂತರ ಮೊದಲ ಬಾರಿಗೆ ಫೈನಲ್ ತಲುಪಿದೆ. ಲೀಗ್ ಸುತ್ತಿನ ಆರಂಭದಿಂದಲೂ ಎಲ್ಲಾ ವಿಭಾಗಗಳಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ.

IPL 2022 Final: 14 ವರ್ಷಗಳ ನಂತರ ರಾಜಸ್ಥಾನ ಫೈನಲ್‌ಗೆ! ಟೇಬಲ್ ಟಾಪರ್ ಗುಜರಾತ್ ಮುಂದಿನ ಎದುರಾಳಿ
ಹಾರ್ದಿಕ್, ಸ್ಯಾಮ್ಸನ್
Follow us
TV9 Web
| Updated By: ಪೃಥ್ವಿಶಂಕರ

Updated on: May 28, 2022 | 9:14 AM

ಐಪಿಎಲ್ 2022 (IPL 2022)ರ ಅಂತಿಮ ಸ್ಪರ್ಧಿಗಳನ್ನು ನಿರ್ಧರಿಸಲಾಗಿದೆ. ಮೇ 29 ರಂದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium)ನಲ್ಲಿ, ಲೀಗ್‌ನಲ್ಲಿ ಮೊದಲ ಬಾರಿಗೆ ಆಡುತ್ತಿರುವ ಗುಜರಾತ್ ಟೈಟಾನ್ಸ್ (Gujarat Titans), ಪ್ರಶಸ್ತಿ ಗೆಲ್ಲಲು ಲೀಗ್‌ನ ಮೊದಲ ಸೀಸನ್‌ನ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡವನ್ನು ಎದುರಿಸಲಿದೆ. ಫೈನಲ್ ಮತ್ತೊಮ್ಮೆ ಮೊದಲ ಕ್ವಾಲಿಫೈಯರ್‌ನ ಪುನರಾವರ್ತನೆಯನ್ನು ನೋಡುತ್ತದೆ. ಲೀಗ್ ಸುತ್ತಿನಲ್ಲಿ ತನ್ನ ಮುಂದೆ ನಿಲ್ಲುವ ಅವಕಾಶವನ್ನು ಬೇರೆ ಯಾವುದೇ ತಂಡಕ್ಕೆ ನೀಡದ ಗುಜರಾತ್ ಟೈಟಾನ್ಸ್ ಪ್ರಾಬಲ್ಯವನ್ನು ಸಂಜು ಸ್ಯಾಮ್ಸನ್ ತಂಡ ಎದುರಿಸಬೇಕಾಗಿದೆ. ಗೆಲುವು ಏನೇ ಇರಲಿ, ಬಹಳ ದಿನಗಳ ನಂತರ ಅಭಿಮಾನಿಗಳಿಗೆ ಹೊಸ ಚಾಂಪಿಯನ್‌ ದರ್ಶನ ಸಿಗುವುದು ನಿಶ್ಚಿತ.

ರಾಜಸ್ಥಾನ್ ರಾಯಲ್ಸ್ ತಂಡವು ತಮ್ಮ ಮಾರ್ಗದರ್ಶಕ ಮತ್ತು ಮಾಜಿ ನಾಯಕ ಶೇನ್ ವಾರ್ನ್‌ಗಾಗಿ ಈ ಸೀಸನ್​ನಲ್ಲಿ ಕಪ್ ಗೆಲ್ಲಲು ಬಯಸಿದೆ. ಇದಕ್ಕೆ ಉತ್ತರವೆಂಬಂತೆ ರಾಯಲ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಏಕಪಕ್ಷೀಯ ರೀತಿಯಲ್ಲಿ ಗೆದ್ದ ರೀತಿ ನೋಡಿದರೆ ಗುಜರಾತ್​ಗೆ ಫೈನಲ್‌ನಲ್ಲಿ ಕಠಿಣ ಸವಾಲನ್ನು ನೀಡಲಿದೆ ಎಂಬುದನ್ನು ಸಾಬೀತುಪಡಿಸಿದೆ. ಸ್ಯಾಮ್ಸನ್ ಮತ್ತು ಹಾರ್ದಿಕ್ ಇಬ್ಬರೂ ನಾಯಕರಾಗಿ ಐಪಿಎಲ್ ಗೆದ್ದಿಲ್ಲ. ಹೀಗಾಗಿ ಈ ಇಬ್ಬರು ಇತಿಹಾಸವನ್ನು ರಚಿಸುವ ಅವಕಾಶವನ್ನು ಹೊಂದಿರುತ್ತಾರೆ.

ಇದನ್ನೂ ಓದಿ:ICC Test Rankings: ನಂ.1 ಸ್ಥಾನ ಉಳಿಸಿಕೊಂಡ ರವೀಂದ್ರ ಜಡೇಜಾ! ಕೊಹ್ಲಿ-ರೋಹಿತ್ ಸ್ಥಾನ ಯಾವುದು?

ಇದನ್ನೂ ಓದಿ
Image
IPL 2022 Qualifier 2: RR vs RCB: ಇಂದು ಕಣಕ್ಕಿಳಿಯುವ ಕಲಿಗಳು ಇವರೇ..!
Image
RR vs RCB IPL 2022 Qualifier 2 Highlights: ಬಟ್ಲರ್ ಶತಕ, ಫೈನಲ್​ಗೆ ರಾಜಸ್ಥಾನ; ಆರ್​ಸಿಬಿ ಅಭಿಮಾನಿಗಳಿಗೆ ಮತ್ತೆ ನಿರಾಸೆ
Image
IPL 2022: 3 ಬಾರಿ ಫೈನಲ್​ಗೇರಿದರೂ ಆರ್​ಸಿಬಿಗೆ ಕಪ್​ ಗೆಲ್ಲಲಾಗಲಿಲ್ಲ! ಆ 3 ಫೈನಲ್​ಗಳ ರೋಚಕ ಇತಿಹಾಸ ಇಲ್ಲಿದೆ

2008ರ ನಂತರ ಮೊದಲ ಬಾರಿಗೆ ಫೈನಲ್ ತಲುಪಿದ ರಾಜಸ್ಥಾನ

ರಾಜಸ್ಥಾನ್ ರಾಯಲ್ಸ್ ತಂಡವು 2008 ರ ನಂತರ ಮೊದಲ ಬಾರಿಗೆ ಫೈನಲ್ ತಲುಪಿದೆ. ಲೀಗ್ ಸುತ್ತಿನ ಆರಂಭದಿಂದಲೂ ಎಲ್ಲಾ ವಿಭಾಗಗಳಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ. ಜೋಸ್ ಬಟ್ಲರ್ ರನ್ ಗಳಿಸುತ್ತಿದ್ದು, ಯುಜ್ವೇಂದ್ರ ಚಾಹಲ್ ಸತತವಾಗಿ ವಿಕೆಟ್ ಕಬಳಿಸುತ್ತಿದ್ದರು, ಹೀಗಾಗಿ ತಂಡವೂ ಗೆಲ್ಲುತ್ತಿತ್ತು. 14 ಪಂದ್ಯಗಳಲ್ಲಿ ತಂಡ ಒಂಬತ್ತು ಪಂದ್ಯಗಳನ್ನು ಗೆದ್ದು 18 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿತು. ಈ ಕಾರಣದಿಂದಾಗಿ, ರಾಯಲ್ಸ್ ಫೈನಲ್‌ಗೆ ಪ್ರವೇಶಿಸಲು ಎರಡು ಅವಕಾಶಗಳನ್ನು ಪಡೆದರು.

ಮೊದಲ ಕ್ವಾಲಿಫೈಯರ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಿದ್ದರು. ಆದರೆ 189 ರನ್‌ಗಳ ಗುರಿಯನ್ನು ಉಳಿಸಿಕೊಳ್ಳಲು ರಾಜಸ್ಥಾನಕ್ಕೆ ಸಾಧ್ಯವಾಗಲಿಲ್ಲ. ಜೋಸ್ ಬಟ್ಲರ್ (89) ಮತ್ತು ಸ್ಯಾಮ್ಸನ್ (47) ಅವರ ಇನ್ನಿಂಗ್ಸ್ ವ್ಯರ್ಥವಾಯಿತು. ಆದರೆ, ಎರಡನೇ ಕ್ವಾಲಿಫೈಯರ್​ನಲ್ಲಿ ಈ ಕೊರತೆಯನ್ನು ನೀಗಿಸಿಕೊಂಡರು. ಇಲ್ಲಿ ತಂಡವು ಆರ್‌ಸಿಬಿ ವಿರುದ್ಧ ಏಕಪಕ್ಷೀಯ ಶೈಲಿಯಲ್ಲಿ ಗೆಲುವು ಸಾಧಿಸಿತು. ಪ್ರಸಿದ್ಧ್ ಕೃಷ್ಣ ಮತ್ತು ಒಬೆಯ್ ಮೆಕಾಯ್ ಅವರ ಅದ್ಭುತ ಬೌಲಿಂಗ್​ನ ಆಧಾರದ ಮೇಲೆ ಆರ್​ಸಿಬಿಯನ್ನು ಕೇವಲ 158 ರನ್‌ಗಳಿಗೆ ಕಟ್ಟಿಹಾಕಿದರು. ಇದಾದ ಬಳಿಕ ಜೋಸ್ ಬಟ್ಲರ್ ಅವರ ಶತಕದ ನೆರವಿನಿಂದ ತಂಡಕ್ಕೆ ಸುಲಭ ಜಯ ತಂದುಕೊಟ್ಟು ಫೈನಲ್ ಪಂದ್ಯಕ್ಕೆ ಟಿಕೆಟ್ ಕಾತ್ರಿಪಡಿಸಿಕೊಂಡರು.

ಲೀಗ್‌ನಲ್ಲಿ ಮೊದಲ ಬಾರಿಗೆ ಆಡುತ್ತಿರುವ ಗುಜರಾತ್ ಟೈಟಾನ್ಸ್, ಈ ಸೀಸನ್​ನ ಬಲಿಷ್ಠ ತಂಡವಾಗಿ ಹೊರಹೊಮ್ಮುತ್ತದೆ ಎಂದು ಜನರು ನಿರೀಕ್ಷಿಸಿರಲಿಲ್ಲ. ಲೀಗ್ ಸುತ್ತಿನಲ್ಲಿ ಅವರು ಟೇಬಲ್ ಟಾಪರ್ ಆಗಿದ್ದರು. 14 ಪಂದ್ಯಗಳನ್ನು ಆಡಿದ್ದ ಗುಜರಾತ್, ಅದರಲ್ಲಿ ಕೇವಲ ನಾಲ್ಕು ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿ 20 ಅಂಕಗಳೊಂದಿಗೆ ಇತರ ಎಲ್ಲ ತಂಡಗಳಿಗಿಂತ ಗುಜರಾತ್ ಮೇಲಿತ್ತು. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ತಂಡದಲ್ಲಿ ಹೇಳಲು ದೊಡ್ಡ ಸ್ಟಾರ್‌ಗಳು ಇರಲಿಲ್ಲ, ಆದರೆ ಇದು ತಂಡದ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಪ್ರತಿಯೊಬ್ಬ ಆಟಗಾರನೂ ತಂಡದ ಗೆಲುವಿಗೆ ತಮ್ಮದೆ ಆದ ಕೊಡುಗೆ ನೀಡಿದ್ದೆ ತಂಡದ ಸಾಧನೆಗೆ ಕಾರಣವಾಗಿತ್ತು.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್