IPL 2022: 3 ಬಾರಿ ಫೈನಲ್ಗೇರಿದರೂ ಆರ್ಸಿಬಿಗೆ ಕಪ್ ಗೆಲ್ಲಲಾಗಲಿಲ್ಲ! ಆ 3 ಫೈನಲ್ಗಳ ರೋಚಕ ಇತಿಹಾಸ ಇಲ್ಲಿದೆ
IPL 2022: ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಲಿದೆ. ಈ ತಂಡ ಈ ಹಿಂದೆ 3 ಬಾರಿ ಫೈನಲ್ ತಲುಪಿದರೂ ಪ್ರತಿ ಬಾರಿಯೂ ಸೋಲನ್ನು ಎದುರಿಸಿದೆ.
ಐಪಿಎಲ್ 2022 (IPL 2022)ರ ಕ್ವಾಲಿಫೈಯರ್ 2 ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ (Royal Challengers Bangalore and Rajasthan Royals) ನಡುವೆ ನಡೆಯಲಿದೆ. ಇಲ್ಲಿ ವಿಜೇತ ತಂಡವು ಕ್ವಾಲಿಫೈಯರ್ 1ರ ವಿಜೇತ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಫೈನಲ್‌ನಲ್ಲಿ ಎದುರಿಸಲಿದೆ. ಇಲ್ಲಿಗೆ ಸೋತ ತಂಡದ ಪಯಣ ಮುಗಿಯಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಲಿದೆ. ಈ ತಂಡ ಈ ಹಿಂದೆ 3 ಬಾರಿ ಫೈನಲ್ ತಲುಪಿದರೂ ಪ್ರತಿ ಬಾರಿಯೂ ಸೋಲನ್ನು ಎದುರಿಸಿದೆ.
2009ರಲ್ಲಿ ಬೆಂಗಳೂರು ಮೊದಲ ಬಾರಿಗೆ ಫೈನಲ್ ತಲುಪಿತ್ತು
ಐಪಿಎಲ್ 2009 ರ ಎರಡನೇ ಸೀಸನ್ನಲ್ಲಿ ಡೆಕ್ಕನ್ ಚಾರ್ಜರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಅಂತಿಮ ಪಂದ್ಯ ನಡೆದಿತ್ತು. ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ಈ ಪಂದ್ಯ ನಡೆದಿತ್ತು. ಟಾಸ್ ಗೆದ್ದ ಬೆಂಗಳೂರು ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಡೆಕ್ಕನ್ ಚಾರ್ಜರ್ಸ್ 6 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ಉತ್ತರವಾಗಿ ಬೆಂಗಳೂರು 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಕ್ಕನ್ ಚಾರ್ಜರ್ಸ್ ಪಂದ್ಯವನ್ನು 6 ರನ್‌ಗಳಿಂದ ಗೆದ್ದುಕೊಂಡಿತು. ಅನಿಲ್ ಕುಂಬ್ಳೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ:RR vs RCB Qualifier 2: 49 ಬೌಂಡರಿ, 17 ಸಿಕ್ಸರ್! ರಾಜಸ್ಥಾನ ವಿರುದ್ಧ ಕೊಹ್ಲಿ ಪ್ರದರ್ಶನ ಹೇಗಿದೆ ಗೊತ್ತಾ?
ಬೆಂಗಳೂರು 2011ರಲ್ಲಿ ಎರಡನೇ ಬಾರಿ ಫೈನಲ್ ತಲುಪಿತ್ತು
ಐಪಿಎಲ್ 2011 ರ ನಾಲ್ಕನೇ ಸೀಸನ್ನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಉತ್ತರವಾಗಿ ಬೆಂಗಳೂರು 8 ವಿಕೆಟ್‌ಗೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ 58 ರನ್‌ಗಳಿಂದ ಫೈನಲ್‌ನಲ್ಲಿ ಜಯಗಳಿಸಿತು. ಮುರಳಿ ವಿಜಯ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಬೆಂಗಳೂರು 2016ರಲ್ಲಿ ಮೂರನೇ ಬಾರಿ ಫೈನಲ್ ತಲುಪಿತ್ತು ಐಪಿಎಲ್ 2016 ರ ಅಂತಿಮ ಪಂದ್ಯವು ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಉತ್ತರವಾಗಿ ಬೆಂಗಳೂರು 7 ವಿಕೆಟ್ ಗೆ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯವನ್ನು ಹೈದರಾಬಾದ್ 8 ರನ್‌ಗಳಿಂದ ಗೆದ್ದುಕೊಂಡಿತು. ಬೆನ್ ಕಟ್ಟಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
Published On - 6:14 pm, Fri, 27 May 22