RR vs RCB Qualifier 2: ಅಹಮದಾಬಾದ್ ಪಿಚ್ ರಿಪೋರ್ಟ್​: ಗೆಲ್ಲಬೇಕಿದ್ರೆ ಅಬ್ಬರಿಸಲೇಬೇಕು..!

RR vs RCB Qualifier 2: ಐಪಿಎಲ್​ನಲ್ಲಿ ಉಭಯ ತಂಡಗಳು ಇದುವರೆಗೆ 27 ಪಂದ್ಯಗಳನ್ನು ಆಡಿದೆ. ಈ ವೇಳೆ ಆರ್​ಸಿಬಿ 13 ಬಾರಿ ಗೆದ್ದಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ಗೆದ್ದಿರುವುದು 11 ಬಾರಿ ಮಾತ್ರ.

RR vs RCB Qualifier 2: ಅಹಮದಾಬಾದ್ ಪಿಚ್ ರಿಪೋರ್ಟ್​: ಗೆಲ್ಲಬೇಕಿದ್ರೆ ಅಬ್ಬರಿಸಲೇಬೇಕು..!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on:May 27, 2022 | 4:34 PM

IPL 2022: ಐಪಿಎಲ್ ಸೀಸನ್​ 15 ರ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ಮುಖಾಮುಖಿಯಾಗಲಿದೆ. ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಏಕೆಂದರೆ ಗೆದ್ದ ತಂಡ ಫೈನಲ್​ಗೆ ಪ್ರವೇಶಿಸಿದರೆ ಸೋತ ತಂಡ ಐಪಿಎಲ್​ನಿಂದ ಔಟ್ ಆಗಲಿದೆ. ಹೀಗಾಗಿ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಇನ್ನು ಈ ಪಂದ್ಯವು ಅಹಮದಾಬಾದ್​ನಲ್ಲಿ ನಡೀತಿರುವುದರಿಂದ ಕುತೂಹಲ ಮತ್ತಷ್ಟು ಹೆಚ್ಚಿದೆ.

ಏಕೆಂದರೆ ಅಹಮದಾಬಾದ್​ನಲ್ಲಿರುವುದು ಹೊಸ ಪಿಚ್​. ಅಂದರೆ ಹಳೆ ಗ್ರೌಂಡ್​ ಅನ್ನು ನವೀಕರಿಸಲಾಗಿದೆ. ಇದಾದ ಬಳಿಕ ಇಲ್ಲಿ 6 ಟಿ20 ಮ್ಯಾಚ್ ಮಾತ್ರ ನಡೆದಿದೆ. ಈ ವೇಳೆ ಮೊದಲು ಬ್ಯಾಟ್ ಮಾಡಿದ ತಂಡ 3 ಸಲ ಗೆದ್ದಿದೆ. ಇನ್ನು ಚೇಸ್ ಮಾಡಿದ ಟೀಮ್ ಕೂಡ ಸಲ ಜಯ ಸಾಧಿಸಿದೆ. ಅಂದರೆ ಈ ಪಿಚ್​ನಲ್ಲಿ ಚೇಸಿಂಗ್ ಹಾಗೂ ಬೌಲಿಂಗ್ ಮೂಲಕ ಗೆಲುವು ದಾಖಲಿಸಬಹುದು.

ಇದಾಗ್ಯೂ ಈ ಪಿಚ್​ನ ಕನಿಷ್ಠ ಸ್ಕೋರ್ 160. ಅಂದರೆ ಮೊದಲು ಬ್ಯಾಟ್ ಮಾಡಿದ ಟೀಮ್ ಕಡಿಮೆ ಅಂದರೂ 180 ಕ್ಕಿಂತ ಮೇಲೆ ರ ನ್ ಕಲೆಹಾಕಬೇಕು. ಈ ಹಿಂದೆ ಇದೇ ಗ್ರೌಂಡ್​ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ 224 ರನ್​ ಬಾರಿಸಿತ್ತು. ಇದು ಇಲ್ಲಿನ ಗರಿಷ್ಠ ಸ್ಕೋರ್ ಆಗಿದೆ. ಹಾಗಾಗಿ ಮೈದಾನದಲ್ಲಿ ದೊಡ್ಡ ಮೊತ್ತಗಳಿಸಿದರೆ ಮಾತ್ರ ಗೆಲ್ಲಬಹುದು.

ಇದನ್ನೂ ಓದಿ
Image
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
Image
IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಇನ್ನು ಕಳೆದ ಸೀಸನ್​ನಲ್ಲಿ ಆರ್​ಸಿಬಿ ಈ ಪಿಚ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಒಂದು ಮ್ಯಾಚ್ ಆಡಿದೆ. ಆ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡ 171 ರನ್​ ಕಲೆಹಾಕಿತ್ತು. ಆದರೆ ಈ ಟಾರ್ಗೆಟ್ ಅನ್ನು ಚೇಸ್ ಮಾಡುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಬಹುತೇಕ ಯಶಸ್ವಿಯಾಗಿದೆ. ಇದಾಗ್ಯೂ ಕೊನೆಯ ಓವರ್​ನಲ್ಲಿ 1 ರನ್​ನಿಂದ ಆರ್​ಸಿಬಿ ಆ ಪಂದ್ಯವನ್ನು ಗೆದ್ದುಕೊಂಡಿತ್ತು. ಅಂದರೆ ಕಳೆದ ಸೀಸನ್​ನಲ್ಲಿ ಆಡಿದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು 170 ರನ್​ಗಳವರೆಗೆ ಚೇಸ್ ಮಾಡಿದೆ. ಹೀಗಾಗಿ ಗೆಲ್ಲಬೇಕಿದ್ದರೆ ಕನಿಷ್ಠ 180 ರನ್​ಗಳಿಸುವುದು ಅನಿವಾರ್ಯ.

ಇಲ್ಲಿ ಮತ್ತೊಂದು ವಿಶೇಷ ಎಂದರೆ ಕಳೆದ ಸೀಸನ್​ನಲ್ಲಿ ಆರ್​ಸಿಬಿ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅಲ್ಲದೆ ಈ ಪಿಚ್​ನಲ್ಲಿ ಟಾಸ್ ಗೆದ್ದ ಬಹುತೇಕ ತಂಡಗಳು ಬೌಲಿಂಗ್ ಅನ್ನೇ ಆಯ್ಕೆ ಮಾಡಿಕೊಳ್ಳುತ್ತೆ. ಒಂದು ವೇಳೆ ಆರ್​ಸಿಬಿ ತಂಡ ಟಾಸ್ ಸೋತರೆ ಬೃಹತ್ ಮೊತ್ತ ಪೇರಿಸಿ ಗೆಲುವು ದಾಖಲಿಸಬಹುದು.

ಇದಾಗ್ಯೂ ಈ ಪಿಚ್ ಬ್ಯಾಟಿಂಗ್​ಗೆ ಹೆಚ್ಚಿನ ಅನುಕೂಲಕರವಾಗಿದ್ದರೂ, ಸ್ಪಿನ್ ಬೌಲಿಂಗ್ ಕೂಡ ಸಹಕಾರಿಯಾಗಿದೆ. ಇತ್ತ ಆರ್​ಸಿಬಿ ತಂಡದಲ್ಲಿ ಸ್ಪಿನ್ ಮಾಂತ್ರಿಕನಾಗಿ ವನಿಂದು ಹಸರಂಗ ಇದ್ದರೆ, ಅತ್ತ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಯುಜುವೇಂದ್ರ ಚಹಲ್ ಇದ್ದಾರೆ. ಹಾಗಾಗಿ ಸ್ಪಿನ್ ಮ್ಯಾಜಿಕ್ ನಡೆದರೂ ಅಚ್ಚರಿಪಡಬೇಕಿಲ್ಲ. ಒಟ್ಟಿನಲ್ಲಿ ಅಹಮದಾಬಾದ್​ ಪಿಚ್​​ ಬ್ಯಾಟಿಂಗ್​ಗೆ ಅನುಕೂಲಕರವಾಗಿರುವ ಕಾರಣ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಕ್ಸ್​-ಫೋರ್​ಗಳ ಸುರಿಮಳೆಯಾಗಲಿದೆಯಾ ಕಾದು ನೋಡಬೇಕಿದೆ.

ರಾಜಸ್ಥಾನ್ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಒಬೆಡ್ ಮೆಕಾಯ್, ಯುಜ್ವೇಂದ್ರ ಚಾಹಲ್, ಕರುಣ್ ನಾಯರ್, ಆರ್ ಅಶ್ವಿನ್, ಜೇಮ್ಸ್ ನೀಶಮ್, ರಸ್ಸಿ ವಂಡರ್​ ಡಸ್ಸೆನ್, ನವದೀಪ್ ಸೈನಿ, ಕೆಸಿ ಕಾರಿಯಪ್ಪ, ಡೇರಿಲ್ ಮಿಚೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಅನುನಯ್ ಸಿಂಗ್, ಕುಲದೀಪ್ ಸೇನ್, ಧ್ರುವ್ ಜುರೆಲ್, ಶುಭಂ ಗರ್ವಾಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಅನೇಶ್ವರ್ ಗೌತಮ್ , ಶೆರ್ಫೇನ್ ರುದರ್‌ಫೋರ್ಡ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ಚಾಮ ಮಿಲಿಂದ್, ಜೇಸನ್ ಬೆಹ್ರೆಂಡಾರ್ಫ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಫಿನ್ ಅಲೆನ್, ಸಿದ್ದಾರ್ಥ್ ಕೌಲ್

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:34 pm, Fri, 27 May 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ