ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶುಭ ಹಾರೈಸಿದ ರಿಷಬ್ ಶೆಟ್ಟಿ

ಸ್ಯಾಂಡಲ್​ವುಡ್ ಮಂದಿ ಈ ಗೇಮ್​ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಆರ್​ಸಿಬಿ ತಂಡಕ್ಕೆ ಶುಭಹಾರೈಸಿದ್ದಾರೆ.

TV9kannada Web Team

| Edited By: Rajesh Duggumane

May 27, 2022 | 6:04 PM

ಇಂದು (ಮೇ 27) ಐಪಿಎಲ್​ನ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಗೆದ್ದರೆ ಆರ್​ಸಿಬಿ ಫೈನಲ್​ಗೆ ಎಂಟ್ರಿ ಕೊಡಲಿದೆ. ಅಲ್ಲಿಯೂ ಗೆದ್ದರೆ ಕಪ್​ ನಮ್ಮದೆ. ಇಂದಿನ ಪಂದ್ಯದ ಬಗ್ಗೆ ಅನೇಕರಿಗೆ ನಿರೀಕ್ಷೆ ಇದೆ. ಸ್ಯಾಂಡಲ್​ವುಡ್ ಮಂದಿ ಈ ಗೇಮ್​ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಆರ್​ಸಿಬಿ ತಂಡಕ್ಕೆ ಶುಭಹಾರೈಸಿದ್ದಾರೆ. ಇಂದು ಟಿವಿ9 ಸ್ವೀಟ್ ಹೋಂ ಎಕ್ಸ್​​​ಪೋ (Tv9 Sweet Home Real Estate Expo 2022) ಆರಂಭವಾಗಿದೆ. ಈ ಎಕ್ಸ್​​​ಪೋಗೆ ರಿಷಬ್​ ಶೆಟ್ಟಿ ಚಾಲನೆ ನೀಡಿದ್ದಾರೆ. ಈ ವೇಳೆ ಅವರು ಟಿವಿ9 ಕನ್ನಡದ ಜತೆಗೆ ಮಾತಿಗೆ ಸಿಕ್ಕರು. ಆಗ, ಅವರು ಆರ್​ಸಿಬಿ ತಂಡಕ್ಕೆ ಶುಭ ಹಾರೈಸಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada