RR vs RCB Qualifier 2: 49 ಬೌಂಡರಿ, 17 ಸಿಕ್ಸರ್‌! ರಾಜಸ್ಥಾನ ವಿರುದ್ಧ ಕೊಹ್ಲಿ ಪ್ರದರ್ಶನ ಹೇಗಿದೆ ಗೊತ್ತಾ?

RR vs RCB Qualifier 2: ಇದುವರೆಗೆ ರಾಜಸ್ಥಾನ ವಿರುದ್ಧದ ಪ್ರದರ್ಶನ ನೋಡಿದರೆ ಈ ತಂಡದ ವಿರುದ್ಧ ಒಟ್ಟು 512 ಎಸೆತಗಳನ್ನು ಎದುರಿಸಿದ್ದಾರೆ. ಇಷ್ಟು ಎಸೆತಗಳನ್ನು ಎದುರಿಸಿದ ಕೊಹ್ಲಿ ಬ್ಯಾಟ್‌ನಿಂದ 593 ರನ್‌ಗಳು ಹೊರಬಿದ್ದಿವೆ.

RR vs RCB Qualifier 2: 49 ಬೌಂಡರಿ, 17 ಸಿಕ್ಸರ್‌! ರಾಜಸ್ಥಾನ ವಿರುದ್ಧ ಕೊಹ್ಲಿ ಪ್ರದರ್ಶನ ಹೇಗಿದೆ ಗೊತ್ತಾ?
ವಿರಾಟ್ ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on: May 27, 2022 | 5:28 PM

ರಾಜಸ್ಥಾನ್ ರಾಯಲ್ಸ್ (Rajasthan Royals) 2018 ರ ನಂತರ ಈ ಸೀಸನ್​ನಲ್ಲಿ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ಲೇಆಫ್‌ಗೆ ಪ್ರವೇಶಿಸಿದೆ. ಇದೀಗ ಅವರು 2008 ರ ನಂತರ ಮೊದಲ ಬಾರಿಗೆ ಫೈನಲ್ ಆಡುವ ಮತ್ತು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಇದಕ್ಕಾಗಿ ರಾಜಸ್ಥಾನ, ರಾಯಲ್ ಚಾಲೆಂಜರ್ಸ್ ತಂಡವನ್ನು ಸೋಲಿಸಬೇಕಾಗಿದೆ. ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ ಮತ್ತು ಬೆಂಗಳೂರು (RR vs RCB) ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ತಲುಪಲಿದ್ದು, ಗುಜರಾತ್ ವಿರುದ್ಧ ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ. ರಾಜಸ್ಥಾನವು ಫೈನಲ್ ತಲುಪಲು ಮತ್ತು ಪ್ರಶಸ್ತಿಯನ್ನು ಗೆಲ್ಲಲು ಪ್ರಯತ್ನಿಸುತ್ತದೆ. ಆದರೆ ಎದುರಾಳಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ರಾಜಸ್ಥಾನದ ಗೆಲುವಿನ ದಾರಿಯಲ್ಲಿ ದೊಡ್ಡ ಅಡಚಣೆಯಾಗಬಹುದು. ಏಕೆಂದರೆ ರಾಜಸ್ಥಾನದ ವಿರುದ್ಧ ಕೊಹ್ಲಿ ಪ್ರದರ್ಶನವೇ ಇದಕ್ಕೆ ಸಾಕ್ಷಿಯಾಗಿದೆ.

ರಾಜಸ್ಥಾನ ವಿರುದ್ಧದ ಕೊಹ್ಲಿ ದಾಖಲೆ ನೋಡಿದರೆ, ಅದು ಉತ್ತಮವಾಗಿದೆ. ಕೊಹ್ಲಿ ರಾಯಲ್ಸ್ ವಿರುದ್ಧ ಹೆಚ್ಚು ರನ್ ಗಳಿಸಿದ್ದಾರೆ ಆದರೆ ಹೆಚ್ಚು ವೇಗವಾಗಿ ಅಲ್ಲ. ಅದೇನೆಂದರೆ, ರಾಜಸ್ಥಾನದ ವಿರುದ್ಧ, ಅವರ ಬ್ಯಾಟ್‌ನಿಂದ ರನ್‌ಗಳು ಹೊರಬಂದಿವೆ ಆದರೆ ಬಿರುಗಾಳಿಯ ವೇಗದಲ್ಲಿ ಬಂದಿಲ್ಲ. ಈ ಸೀಸನ್​ನಲ್ಲಿ ಕೊಹ್ಲಿ ಫಾರ್ಮ್ ನೋಡಿದರೆ ತೀರ ಕಳಪೆಯಾಗಿದೆ. ವಿರಾಟ್ ರನ್‌ಗಳಿಸಲು ಹೆಣಗಾಡುತ್ತಿದ್ದಾರೆ. ಜೊತೆಗೆ ಮೂರು ಬಾರಿ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದಾರೆ. ಆದರೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಬಲಿಷ್ಠ ಇನ್ನಿಂಗ್ಸ್ ಆಡಿದ್ದರು. ಆದರೆ ಲಕ್ನೋ ವಿರುದ್ಧ ಅವರ ಬ್ಯಾಟ್‌ನಿಂದ ಹೆಚ್ಚು ರನ್‌ಗಳು ಬರಲಿಲ್ಲ.

ಇದನ್ನೂ ಓದಿ:IPL 2022: ಆರ್​ಸಿಬಿಗೆ ಕಹಿ ಸುದ್ದಿ; ಐಪಿಎಲ್​ ನಿಯಮ ಉಲ್ಲಂಘಿಸಿದ ಕಾರ್ತಿಕ್​ಗೆ ಆಡಳಿತ ಮಂಡಳಿಯಿಂದ ವಾಗ್ದಂಡನೆ!

ಇದನ್ನೂ ಓದಿ
Image
IPL 2022 Qualifier 2: ಕ್ರೀಡಾಂಗಣಕ್ಕೆ ಏನೆಲ್ಲ ನಿಷಿದ್ಧ, ಎಷ್ಟು ಗಂಟೆಗೆ ಎಂಟ್ರಿ.. ಪಾರ್ಕಿಂಗ್ ವ್ಯವಸ್ಥೆ ಹೇಗಿದೆ? ಇಲ್ಲಿದೆ ಮಾಹಿತಿ
Image
IPL 2022: ಆರ್​ಸಿಬಿಗೆ ಕಹಿ ಸುದ್ದಿ; ಐಪಿಎಲ್​ ನಿಯಮ ಉಲ್ಲಂಘಿಸಿದ ಕಾರ್ತಿಕ್​ಗೆ ಆಡಳಿತ ಮಂಡಳಿಯಿಂದ ವಾಗ್ದಂಡನೆ!
Image
RCB: ಪಂದ್ಯ ಆರಂಭಕ್ಕೂ ಮುನ್ನವೇ ಸಖತ್ ಟ್ರೆಂಡ್ ಆದ ಆರ್​ಸಿಬಿ: ಕಪ್ ನಮ್ದೆ ಎನ್ನುತ್ತಿರುವ ಫ್ಯಾನ್ಸ್

ರಾಜಸ್ಥಾನ ವಿರುದ್ಧ ಕೊಹ್ಲಿಯ ದಾಖಲೆಯೇ ಹೀಗಿದೆ

ವಿರಾಟ್ ಕೊಹ್ಲಿ ಐಪಿಎಲ್ ಆರಂಭದಿಂದಲೂ ಈ ಲೀಗ್‌ನಲ್ಲಿ ಆಡುತ್ತಿದ್ದಾರೆ. ಇದುವರೆಗೆ ರಾಜಸ್ಥಾನ ವಿರುದ್ಧದ ಪ್ರದರ್ಶನ ನೋಡಿದರೆ ಈ ತಂಡದ ವಿರುದ್ಧ ಒಟ್ಟು 512 ಎಸೆತಗಳನ್ನು ಎದುರಿಸಿದ್ದಾರೆ. ಇಷ್ಟು ಎಸೆತಗಳನ್ನು ಎದುರಿಸಿದ ಕೊಹ್ಲಿ ಬ್ಯಾಟ್‌ನಿಂದ 593 ರನ್‌ಗಳು ಹೊರಬಿದ್ದಿವೆ. ಈ ಸಮಯದಲ್ಲಿ ಅವರ ಸ್ಟ್ರೈಕ್ ರೇಟ್ 115.82 ಆಗಿದೆ. ರಾಜಸ್ಥಾನ ವಿರುದ್ಧ ಕೊಹ್ಲಿ ಬ್ಯಾಟ್‌ನಲ್ಲಿ 49 ಬೌಂಡರಿ ಹಾಗೂ 17 ಸಿಕ್ಸರ್‌ಗಳು ದಾಖಲಾಗಿವೆ.

ಈ ಸೀಸನ್​ನಲ್ಲಿ ತಂಡಗಳ ಮುಖಾಮುಖಿ ವರದಿ

ಈ ಸೀಸನ್​ನಲ್ಲಿ ಈ ಎರಡು ತಂಡಗಳ ನಡುವೆ ಎರಡು ಪಂದ್ಯಗಳು ನಡೆದಿವೆ. ಈ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನವನ್ನು ನೋಡಿದರೆ, ವಿಶೇಷವೇನೂ ಮಾಡಿಲ್ಲ. ಏಪ್ರಿಲ್ 26 ರಂದು ರಾಜಸ್ಥಾನ ಮತ್ತು ಬೆಂಗಳೂರು ನಡುವೆ ನಡೆದ ಪಂದ್ಯದಲ್ಲಿ, ಕೊಹ್ಲಿ ಬ್ಯಾಟ್‌ನಿಂದ ಕೇವಲ ಒಂಬತ್ತು ರನ್‌ಗಳು ಬಂದವು, ಈ ಪಂದ್ಯದಲ್ಲಿ ಅವರು ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ರಿಯಾನ್ ಪರಾಗ್​ಗೆ ಕ್ಯಾಚ್ ನೀಡಿದರು. ಈ ಪಂದ್ಯವನ್ನು ರಾಜಸ್ಥಾನ 29 ರನ್‌ಗಳಿಂದ ಗೆದ್ದುಕೊಂಡಿತು. ಇದಕ್ಕೂ ಮುನ್ನ ಏಪ್ರಿಲ್ 5 ರಂದು ನಡೆದ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್‌ನಿಂದ ಕೇವಲ ಐದು ರನ್​ಗಳು ಬಂದಿದ್ದವು. ಈ ಪಂದ್ಯದಲ್ಲಿ ಕೊಹ್ಲಿ ರನೌಟ್ ಆಗಿದ್ದರು. ಆದರೆ ಈ ಪಂದ್ಯದಲ್ಲಿ ಬೆಂಗಳೂರು ಗೆಲುವು ಸಾಧಿಸಿತ್ತು.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್