Sanju Samson: ರಾಜಸ್ಥಾನ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಲವ್ ಸ್ಟೋರಿ, ವೈವಾಹಿಕ ಬದುಕು ಹೇಗಿದೆ ಗೊತ್ತಾ? ಫೋಟೋ ನೋಡಿ

Sanju Samson: ಚಾರುಲತಾ ಅವರಿಗೆ ಸಂಜು ಹಾಯ್ ಎಂದು ಮೆಸೇಜ್ ಕಳಿಸಿದ್ದರಂತೆ. ಆದರೆ ಚಾರು ಸಂಜು ಅವರ ಸಂದೇಶಕ್ಕೆ ಪ್ರತಿಕ್ರಿಯಿಸಲಿಲ್ಲ. ಇದರಿಂದ ವಿಚಲಿತರಾದ ಸಂಜು ನೇರವಾಗಿ ಕಾಲೇಜಿಗೆ ತೆರಳಿ ಆಕೆಯನ್ನು ಭೇಟಿಯಾಗಿ ಚಾರುಲತಾಗೆ ಮನದಾಳದ ಮಾತು ಹೇಳಿದರಂತೆ.

TV9 Web
| Updated By: ಪೃಥ್ವಿಶಂಕರ

Updated on: May 29, 2022 | 7:00 AM

ನಮ್ಮ ದೇಶದಲ್ಲಿ ಕ್ರಿಕೆಟ್ ಅನ್ನು ಹಬ್ಬಕ್ಕಿಂತ ಕಡಿಮೆಯಿಲ್ಲ ಎಂದು ಪರಿಗಣಿಸಲಾಗುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್ ವಿಚಾರಕ್ಕೆ ಬಂದಾಗ, ಅದರ ಉತ್ಸಾಹವು ಬಹುಮುಖವಾಗುತ್ತದೆ. ಐಪಿಎಲ್ 2022 ರ ಅಂತಿಮ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಲಿದೆ. ಶುಕ್ರವಾರವೇ ರಾಜಸ್ಥಾನ್ ರಾಯಲ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದು, ಯುವ ನಾಯಕ ಸಂಜು ಸ್ಯಾಮ್ಸನ್ ಮತ್ತೊಮ್ಮೆ ತಮ್ಮ ತಂಡದ ಶಕ್ತಿ ಎಷ್ಟಿದೆ ಎಂಬುದನ್ನು ತೋರಿಸಿದ್ದಾರೆ. ಸಂಜು ಸ್ಯಾಮ್ಸನ್ ಅವರ ಕ್ರೀಡೆಗೆ ಹೆಸರುವಾಸಿ ಆದರೆ ಅವರ ವೈಯಕ್ತಿಕ ಜೀವನದ ಬಗ್ಗೆ ನಿಮಗೆ ತಿಳಿದಿದೆಯೇ? ಇವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ? ಸಂಜು ಸ್ಯಾಮ್ಸನ್ ಅವರ ಕ್ಯೂಟ್ ಲವ್ ಸ್ಟೋರಿ ಬಗ್ಗೆ ಇಲ್ಲಿದೆ ಮಾಹಿತಿ.

1 / 8
ಯುವ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ 22 ಡಿಸೆಂಬರ್ 2018 ರಂದು ಚಾರುಲತಾ ರಮೇಶ್ ಎಂಬ ಹುಡುಗಿಯನ್ನು ವಿವಾಹವಾದರು. ಚಾರುಲತಾ ಮತ್ತು ಸಂಜು ಇಬ್ಬರೂ ಕೇರಳದ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದಾರೆ. ಇಲ್ಲಿಂದ ಶುರುವಾಯಿತು ಇಬ್ಬರ ಪ್ರೇಮಕಥೆ.

2 / 8
Sanju Samson: ರಾಜಸ್ಥಾನ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಲವ್ ಸ್ಟೋರಿ, ವೈವಾಹಿಕ ಬದುಕು ಹೇಗಿದೆ ಗೊತ್ತಾ? ಫೋಟೋ ನೋಡಿ

ಸಂದರ್ಶನವೊಂದರಲ್ಲಿ ಸಂಜು ಸ್ಯಾಮ್ಸನ್ ಹೇಳಿರುವಂತೆ, ಅವರು ಆಗಸ್ಟ್ 22, 2013 ರಂದು 11:11 ಕ್ಕೆ ಚಾರುಲತಾ ಅವರಿಗೆ ಸಂದೇಶ ಹಾಯ್ ಎಂದು ಮೆಸೇಜ್ ಕಳಿಸಿದ್ದರಂತೆ. ಆದರೆ ಚಾರು ಸಂಜು ಅವರ ಸಂದೇಶಕ್ಕೆ ಪ್ರತಿಕ್ರಿಯಿಸಲಿಲ್ಲ. ಇದರಿಂದ ವಿಚಲಿತರಾದ ಸಂಜು ನೇರವಾಗಿ ಕಾಲೇಜಿಗೆ ತೆರಳಿ ಆಕೆಯನ್ನು ಭೇಟಿಯಾಗಿ ಚಾರುಲತಾಗೆ ಮನದಾಳದ ಮಾತು ಹೇಳಿದರಂತೆ.

3 / 8
Sanju Samson: ರಾಜಸ್ಥಾನ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಲವ್ ಸ್ಟೋರಿ, ವೈವಾಹಿಕ ಬದುಕು ಹೇಗಿದೆ ಗೊತ್ತಾ? ಫೋಟೋ ನೋಡಿ

ಚಾರುಲತಾ ಕೇರಳದ ತಿರುವನಂತಪುರಂ ನಿವಾಸಿಯಾಗಿದ್ದು, ಅವರು ಅಲ್ಲಿಯೇ ತಮ್ಮ ಶಾಲಾ ಶಿಕ್ಷಣವನ್ನು ಪೂರೈಸಿದ್ದಾರೆ. ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು. ಇದಾದ ಬಳಿಕ ಎಚ್‌ಆರ್‌ನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.

4 / 8
Sanju Samson: ರಾಜಸ್ಥಾನ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಲವ್ ಸ್ಟೋರಿ, ವೈವಾಹಿಕ ಬದುಕು ಹೇಗಿದೆ ಗೊತ್ತಾ? ಫೋಟೋ ನೋಡಿ

ಮದುವೆಗೂ ಮುನ್ನ ಸಂಜು ಮತ್ತು ಚಾರುಲತಾ 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ಈ ವಿಚಾರ ಯಾರಿಗೂ ತಿಳಿಯದಂತೆ ಗುಟ್ಟಾಗಿಟ್ಟಿದ್ದರು. 22 ಡಿಸೆಂಬರ್ 2018 ರಂದು, ಚಾರು ಮತ್ತು ಸಂಜು ಕೇವಲ 30 ಜನರ ಸಮ್ಮುಖದಲ್ಲಿ ಅತ್ಯಂತ ಸರಳ ರೀತಿಯಲ್ಲಿ ವಿವಾಹವಾದರು. ಸಂಜು ತಮ್ಮ ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು.

5 / 8
Sanju Samson: ರಾಜಸ್ಥಾನ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಲವ್ ಸ್ಟೋರಿ, ವೈವಾಹಿಕ ಬದುಕು ಹೇಗಿದೆ ಗೊತ್ತಾ? ಫೋಟೋ ನೋಡಿ

ಚಾರುಲತಾ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಆದರೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ Instagram ಒಟ್ಟು 41.1K ಅನುಯಾಯಿಗಳನ್ನು ಹೊಂದಿದ್ದಾರೆ.

6 / 8
Sanju Samson: ರಾಜಸ್ಥಾನ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಲವ್ ಸ್ಟೋರಿ, ವೈವಾಹಿಕ ಬದುಕು ಹೇಗಿದೆ ಗೊತ್ತಾ? ಫೋಟೋ ನೋಡಿ

ಮತ್ತೊಂದೆಡೆ, ನಾವು ಸಂಜು ಸ್ಯಾಮ್ಸನ್ ಬಗ್ಗೆ ಮಾತನಾಡಿದರೆ, ಐಪಿಎಲ್ 2022 ರಲ್ಲಿ ಅವರ ಹೆಸರು ರಿಂಗಣಿಸುತ್ತಿದೆ. ಅವರ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಉತ್ತಮ ಲಯದಲ್ಲಿ ಕಾಣುತ್ತಿದೆ ಮತ್ತು ಶುಕ್ರವಾರವೇ ರಾಜಸ್ಥಾನ್ ರಾಯಲ್ಸ್ RCB ಅನ್ನು ಸೋಲಿಸಿ ಫೈನಲ್ ಪ್ರವೇಶಿಸಿತು.

7 / 8
Sanju Samson: ರಾಜಸ್ಥಾನ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಲವ್ ಸ್ಟೋರಿ, ವೈವಾಹಿಕ ಬದುಕು ಹೇಗಿದೆ ಗೊತ್ತಾ? ಫೋಟೋ ನೋಡಿ

ಇನ್ನು ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಎರಡೂ ತಂಡಗಳು ಪಾಯಿಂಟ್‌ಗಳ ಪಟ್ಟಿಯಲ್ಲಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ

8 / 8
Follow us