IPL 2022 ವೀಕ್ಷಣೆಯಲ್ಲಿ ಹೊಸ ದಾಖಲೆ: ಆರ್ಸಿಬಿಯ ಆ ಪಂದ್ಯ ನೋಡಿದ್ದು ಎಷ್ಟು ಮಂದಿ ಗೊತ್ತೇ?
RCB: ಎರಡು ಹೊಸ ತಂಡಗಳು ಹಾಗೂ ಮೆಗಾ ಹರಾಜಿನ ಬಳಿಕ ಈ ಬಾರಿಯ ಐಪಿಎಲ್ 2022 ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಅಚ್ಚರಿ ಎಂಬಂತೆ ಈ ಋತುವಿನಲ್ಲಿ ಐಪಿಎಲ್ ವೀಕ್ಷಕರ ಸಂಖ್ಯೆಯಲ್ಲಿ ಭಾರಿ ಕುಸಿತ ದಾಖಲಾಗಿದೆ. ಹೀಗಿರಯವಾಗ ಆರ್ಸಿಬಿ ಹಾಗೂ ಲಖನೌ ನಡುವಿನ ಎಲಿಮಿನೇಟರ್ ಪಂದ್ಯ ವೀಕ್ಷಣೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಅಂತಿಮ ಹಂತಕ್ಕೆ ಬಂದು ನಿಂತಿದೆ. ಮೇ. 29 ರಂದು ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (GT vs RR) ನಡುವೆ ಫೈನಲ್ ಫೈಟ್ ನಡೆಯುವ ಮೂಲಕ ಐಪಿಎಲ್ 2022ಕ್ಕೆ (IPL 2022) ತೆರೆ ಬೀಳಲಿದೆ. ಎರಡು ಹೊಸ ತಂಡಗಳು ಹಾಗೂ ಮೆಗಾ ಹರಾಜಿನ ಬಳಿಕ ಈ ಬಾರಿಯ ಐಪಿಎಲ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಅಚ್ಚರಿ ಎಂಬಂತೆ ಈ ಋತುವಿನಲ್ಲಿ ಐಪಿಎಲ್ ವೀಕ್ಷಕರ ಸಂಖ್ಯೆಯಲ್ಲಿ ಭಾರಿ ಕುಸಿತ ದಾಖಲಾಗಿದೆ. ಟೂರ್ನಿ ಆರಂಭವಾದ ಮೊದಲ 2 ವಾರ ಕುಸಿತದ ಬಳಿಕ 3ನೇ ವಾರ ಚೇತರಿಸಿಕೊಂಡಿದ್ದ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ (Star Sports) ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್(ಟಿಆರ್‌ಪಿ), 4ನೇ ವಾರ ಮತ್ತೆ ಕುಸಿದಿತ್ತು. ಕಳೆದ ಆವೃತ್ತಿಗೆ ಹೋಲಿಸಿದರೆ ಈ ಆವೃತ್ತಿಯ 4ನೇ ವಾರ ಟಿಆರ್‌ಪಿ (TRP) ಶೇ.35ರಷ್ಟುಇಳಿಕೆ ಕಂಡಿತ್ತು. ಹೀಗಿರಯವಾಗ ಆರ್ಸಿಬಿ (RCB) ಹಾಗೂ ಲಖನೌ ನಡುವಿನ ಎಲಿಮಿನೇಟರ್ ಪಂದ್ಯ ವೀಕ್ಷಣೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ಐಪಿಎಲ್ 2022ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೇಂಟ್ಸ್ ನಡುವಿನ ಎಲಿಮಿನೇಟರ್ ಪಂದ್ಯ ಹೊಸ ದಾಖಲೆ ಬರೆದಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಗೆಲುವು ಸಾಧಿಸಿತ್ತು. ಈ ತೀವ್ರ ಜಿದ್ದಿನ ಪಂದ್ಯವನ್ನ ಡಿಸ್ನಿ ಹಾಟ್ಸ್ಟಾರ್ನಲ್ಲಿ ಬರೋಬ್ಬರಿ 8.7 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಇದು ಪ್ರಸಕ್ತ ಐಪಿಎಲ್ನಲ್ಲಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯ ಎಂಬ ಖ್ಯಾತಿಗೆ ಭಾಜನವಾಗಿದೆ.
ಆರ್ಸಿಬಿ-ಲಖನೌ ಪಂದ್ಯವನ್ನ 8.7 ಮಿಲಿಯನ್ ಮಂದಿ ನೋಡುವ ಮೂಲಕ ಚೆನ್ನೈ-ಮುಂಬೈ ಪಂದ್ಯದ ದಾಖಲೆ ಉಡೀಸ್ ಆಗಿದೆ. ಈ ಪಂದ್ಯವನ್ನ 8.3 ಮಿಲಿಮಂದಿ ಹಾಟ್ಸ್ಟಾರ್ನಲ್ಲಿ ವೀಕ್ಷಿಸಿದ್ದರು. ಈ ಪಂದ್ಯದಲ್ಲಿ ಧೋನಿ ಕೊನೆ ಓವರ್ನಲ್ಲಿ ಅಬ್ಬರಿಸಿ ಚೆನ್ನೈಗೆ ಗೆಲುವು ತಂದುಕೊಟ್ಟೊಇದ್ದರು. ಈ ಈ ಹಿಂದಿನ ದಾಖಲೆಯನ್ನು ಆರ್ಸಿಬಿ-ಲಖನೌ ಪಂದ್ಯ ಅಳಿಸಿ ಹಾಕಿದೆ.
Virat Kohli: ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿ ಸಂಭ್ರಮಿಸಿದ್ದು ಹೇಗೆ ನೋಡಿ
ಕ್ವಾಲಿಫೈಯರ್- 2 ನಲ್ಲಿ ಆರ್ಸಿಬಿಗೆ ಸೋಲು:
ಐಪಿಎಲ್ 2022 ರಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಮತ್ತೆ ಆರ್ಸಿಬಿ ಪಾಲಿಗೆ ಕನಸಾಗಿಯೇ ಉಳಿದಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿಗೆ 7 ವಿಕೆಟ್ ಗಳ ಸೋಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿಗೆ ಪ್ರಮುಖ ಬ್ಯಾಟಿಗರು ಕೈ ಕೊಟ್ಟರು. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್ ವೈಫಲ್ಯ ಅನುಭವಿಸಿದರು. ನಾಯಕ ಫಾ ಡು ಪ್ಲೆಸಿಸ್ ನಿಧಾನಗತಿಯ ಇನಿಂಗ್ಸ್ ಆಗಿ 25 ರನ್ ಗಳಿಸಿದರೆ, ರಜತ್ ಪಟಿದಾರ್ 58 ರನ್ ಗಳ ಕಾಣಿಕೆ ನೀಡಿದರು. 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದು ರಾಜಸ್ಥಾನ್ ಬಲಿಷ್ಠ ಬ್ಯಾಟಿಂಗ್ ಎದುರು ಏನೇನೂ ಮೊತ್ತವಾಗಿರಲಿಲ್ಲ. ಮತ್ತೆ ಸಿಡಿದ ಜೋಸ್ ಬಟ್ಲರ್ ಭರ್ಜರಿ ಶತಕ ಸಿಡಿಸಿ 106 ರನ್ ಗಳಿಸಿ ಅಜೇಯರಾಗುಳಿದರು. ತಕ್ಕ ಸಾಥ್ ನೀಡಿದ ಯಶಸ್ವಿ ಜೈಸ್ವಾಲ್ 21, ಸಂಜು ಸ್ಯಾಮ್ಸನ್ 23 ರನ್ ಗಳ ಕೊಡುಗೆ ನೀಡಿದರು. ಇದರಿಂದಾಗಿ ರಾಜಸ್ಥಾನ್ 18.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 161 ರನ್ ಗಳಿಸುವ ಮೂಲಕ ಜಯ ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:56 pm, Sat, 28 May 22