Sanju Samson: ನಾವು ಆತನಿಗೋಸ್ಕರ ಕಪ್ ಗೆದ್ದೇ ಗೆಲ್ಲುತ್ತೇವೆ ಎಂದ ರಾಜಸ್ಥಾನ್ ರಾಯಲ್ಸ್

RR vs RCB: Qaulifier 2: ರಾಯಲ್ ಚಾಲೆಂಜರ್ಸ್ ಬೆಂಗಳೂರು​ ವಿರುದ್ಧ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿದ ಆರ್ ಆರ್ ಫೈನಲ್​​ಗೆ ಲಗ್ಗೆಯಿಟ್ಟಿದೆ. ಜೋಸ್‌ ಬಟ್ಲರ್‌ ಸಿಡಿಸಿದ ದಾಖಲೆಯ 4ನೇ ಶತಕ ಹಾಗೂ ವೇಗದ ಬೌಲರ್‌ಗಳ ಭರ್ಜರಿ ಪ್ರದರ್ಶನದಿಂದ ಅಬ್ಬರಿಸಿದ ರಾಯಲ್ಸ್‌ 7 ವಿಕೆಟ್‌ಗಳಿಂದ ಜಿಯಿಸಿ 2008ರ ಬಳಿಕ ಇದೇ ಮೊದಲ ಬಾರಿ ಐಪಿಎಲ್‌ ಫೈನಲ್‌ ತಲುಪಿದ ಸಾಧನೆ ಮಾಡಿದೆ.

Sanju Samson: ನಾವು ಆತನಿಗೋಸ್ಕರ ಕಪ್ ಗೆದ್ದೇ ಗೆಲ್ಲುತ್ತೇವೆ ಎಂದ ರಾಜಸ್ಥಾನ್ ರಾಯಲ್ಸ್
Rajasthan Royals IPL 2022
Follow us
| Updated By: Vinay Bhat

Updated on: May 28, 2022 | 11:17 AM

ಮೊದಲ ಕ್ವಾಲಿಫೈಯರ್​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕುಂಡಿದ್ದ ರಾಜಸ್ಥಾನ್ ರಾಯಲ್ಸ್ (GT vs RR) ಕ್ವಾಲಿಫೈಯರ್ – 2 ನಲ್ಲಿ ಬೊಂಬಾಟ್ ಕಮ್​ಬ್ಯಾಕ್ ಮಾಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು​ ವಿರುದ್ಧ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿದ ಆರ್ ಆರ್ (RR vs RCB) ಫೈನಲ್​​ಗೆ ಲಗ್ಗೆಯಿಟ್ಟಿದೆ. ಜೋಸ್‌ ಬಟ್ಲರ್‌ ಸಿಡಿಸಿದ ದಾಖಲೆಯ 4ನೇ ಶತಕ ಹಾಗೂ ವೇಗದ ಬೌಲರ್‌ಗಳ ಭರ್ಜರಿ ಪ್ರದರ್ಶನದಿಂದ ಅಬ್ಬರಿಸಿದ ರಾಯಲ್ಸ್‌ 7 ವಿಕೆಟ್‌ಗಳಿಂದ ಜಿಯಿಸಿ 2008ರ ಬಳಿಕ ಇದೇ ಮೊದಲ ಬಾರಿ ಐಪಿಎಲ್‌ ಫೈನಲ್‌ ತಲುಪಿದ ಸಾಧನೆ ಮಾಡಿದೆ. ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ಶೇನ್ ವಾರ್ನ್ ನಾಯಕತ್ವದಲ್ಲಿ ಫೈನಲ್​ ತಲುಪಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತ್ತು. ಈಗ ಮತ್ತೆ ಫೈನಲ್​ಗೇರಿರುವ ಆರ್​ಆರ್​ ಈ ಬಾರಿ ಕಪ್ ಗೆದ್ದು ನಾವು ಅದನ್ನು ದಂತಕಥೆ ಶೇನ್ ವಾರ್ನ್​ಗೆ (Shane Warne) ಅರ್ಪಿಸುತ್ತೇವೆ ಎಂದು ಹೇಳಿದೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್, “ಕಳೆದ ಪಂದ್ಯದಲ್ಲಿ ಸೋಲು ಕಂಡು ಈಗ ಕಮ್​ಬ್ಯಾಕ್ ಮಾಡುವುದು ಸುಲಭವಲ್ಲ. ಐಪಿಎಲ್​ನಲ್ಲಿ ಸೋಲು-ಗೆಲುವು ಮಾಮೂಲಿ. ನಾವು ಕೂಡ ಕೆಲವು ಪಂದ್ಯಗಳನ್ನು ಸೋತಿದ್ದೇವೆ. ನಮಗೆ ಸೋತ ನಂತರ ಹೇಗೆ ಕಮ್​ಬ್ಯಾಕ್ ಮಾಡಬೇಕೆಂದು ಚೆನ್ನಾಗಿ ತಿಳಿದಿದೆ. ಈ ವಿಕೆಟ್ ವೇಗಿಗಳಿಗೆ ಹೆಚ್ಚಿನ ನೆರವು ನೀಡಿತು. ಚೆನ್ನಾಗಿ ಬೌನ್ಸ್ ಆಗುತ್ತಿತ್ತು. ಮೊದಲ ಇನ್ನಿಂಗ್ಸ್ ಅನ್ನು ಚೆನ್ನಾಗಿ ಮುಗಿಸಿದೆವು. ಮ್ಯಾಕ್ಸ್​ವೆಲ್ ಮತ್ತು ದಿನೇಶ್ ಕಾರ್ತಿಕ್ ಎಷ್ಟು ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಅವರನ್ನು ಬೇಗನೆ ಔಟ್ ಮಾಡಿದ್ದು ಸಹಕಾರಿ ಆಯಿತು,” ಎಂದು ಹೇಳಿದ್ದಾರೆ.

Faf du Plessis: ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ರು ಗೊತ್ತೇ?

ಇದನ್ನೂ ಓದಿ
Image
IPL 2022 Final: 14 ವರ್ಷಗಳ ನಂತರ ರಾಜಸ್ಥಾನ ಫೈನಲ್‌ಗೆ! ಟೇಬಲ್ ಟಾಪರ್ ಗುಜರಾತ್ ಮುಂದಿನ ಎದುರಾಳಿ
Image
RR vs RCB Qualifier 2, IPL 2022: ಐದು ಓವರ್‌, ಕೇವಲ 34 ರನ್, ಐದು ವಿಕೆಟ್! ಆರ್​ಸಿಬಿ ಸೋಲಿಗೆ ಕಾರಣವಿದು
Image
RR vs RCB Qualifier 2: ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣವಾಗಿದ್ದು ಈ ಒಬ್ಬ ಬೌಲರ್
Image
RR vs RCB Qualifier 2, IPL 2022: ಆರ್​ಸಿಬಿ ವಿರುದ್ಧ ಅಬ್ಬರದ ಶತಕ ಸಿಡಿಸಿ ಕೊಹ್ಲಿ ದಾಖಲೆ ಸರಿಗಟ್ಟಿದ ಬಟ್ಲರ್!

“ಟಾಸ್ ಗೆದ್ದಿದ್ದು ಈ ಪಂದ್ಯ ಜಯಿಸಲು ಮತ್ತೊಂದು ಕಾರಣ. ನನಗನಿಸುವ ಪ್ರಕಾರ ಟಾಸ್ ಒಂದು ಪಂದ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮೊದಲ ಮತ್ತು ಎರಡನೇ ಇನ್ನಿಂಗ್ಸ್​ಗೆ ವಿಕೆಟ್ ತುಂಬಾನೆ ಬದಲಾಗಿತ್ತು. ಒಬೆಡ್ ಮೆಕಾಯ್ ಅವರಿಗೆ ಇದು ಚೊಚ್ಚಲ ಐಪಿಎಲ್. ಅವರನ್ನು ನಂಬಿ ಬೌಲಿಂಗ್ ಕೊಡಬಹುದು. ಜೋಸ್ ಬಟ್ಲರ್ ಕೊಡುಗೆ ತಂಡಕ್ಕ ಅತ್ಯುತ್ತಮವಾಗಿದೆ.”

ರಾಜಸ್ಥಾನ್ ಚೊಚ್ಚಲ ಸೀಸನ್​ನಲ್ಲಿ ಪ್ರಶಸ್ತಿ ಗೆದ್ದ ಬಗ್ಗೆ ಮಾತನಾಡಿದ ಸ್ಯಾಮ್ಸನ್, “ನಾನು ಆಗ ತುಂಬಾ ಚಿಕ್ಕವನಾಗಿದ್ದೆ. ಆಗ ನಾನು ಕೇರಳದಲ್ಲಿ ಅಂಡರ್- 16 ಪಂದ್ಯವನ್ನಾಡುತ್ತಿದ್ದೆ. ನನ್ನ ಸ್ನೇಹಿತರ ಜೊತೆ ಫೈನಲ್ ಪಂದ್ಯ ವೀಕ್ಷಣೆ ಮಾಡಿದ್ದೆ. ಕೊನೆಯಲ್ಲಿ ಶೇರ್ ವಾರ್ನ್ ಮತ್ತು ಸೊಹೈಲ್ ತನ್ವೀರ್ ವಿನ್ನಿಂಗ್ ಶಾಟ್ ಹೊಡೆದ ಕ್ಷಣ ಈಗಲೂ ನನ್ನ ಕಣ್ಣ ಮುಂದಿದೆ,” ಎಂಬುದು ಸ್ಯಾಮ್ಸನ್ ಮಾತು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ