RR vs RCB Qualifier 2, IPL 2022: ಆರ್​ಸಿಬಿ ವಿರುದ್ಧ ಅಬ್ಬರದ ಶತಕ ಸಿಡಿಸಿ ಕೊಹ್ಲಿ ದಾಖಲೆ ಸರಿಗಟ್ಟಿದ ಬಟ್ಲರ್!

Jos Buttler: ಐಪಿಎಲ್-2022ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಬಟ್ಲರ್ ಮೊದಲ ಸ್ಥಾನದಲ್ಲಿದ್ದಾರೆ. ಈ ವಿಚಾರದಲ್ಲಿ ಬಟ್ಲರ್ ಹತ್ತಿರದಲ್ಲೂ ಯಾರು ಇಲ್ಲದ ಕಾರಣ ಆರೆಂಜ್ ಕ್ಯಾಪ್ ಪಡೆಯುವುದು ಖಚಿತವಾಗಿದೆ.

RR vs RCB Qualifier 2, IPL 2022: ಆರ್​ಸಿಬಿ ವಿರುದ್ಧ ಅಬ್ಬರದ ಶತಕ ಸಿಡಿಸಿ ಕೊಹ್ಲಿ ದಾಖಲೆ ಸರಿಗಟ್ಟಿದ ಬಟ್ಲರ್!
ಜೋಸ್ ಬಟ್ಲರ್
Follow us
TV9 Web
| Updated By: ಪೃಥ್ವಿಶಂಕರ

Updated on: May 28, 2022 | 8:00 AM

ಜೋಸ್ ಬಟ್ಲರ್ (Jos Buttler) ಕ್ರಿಕೆಟ್ ದುನಿಯಾದ ತುಂಬಾ ಅಪಾಯಕಾರಿ ಬ್ಯಾಟ್ಸ್‌ಮನ್ ಎಂದು ಹೇಳಲಾಗುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) 15 ನೇ ಸೀಸನ್​ನಲ್ಲಿ ಅವರು ಇದನ್ನು ಸಾಬೀತುಪಡಿಸಿದ್ದಾರೆ. ಬಟ್ಲರ್ IPL-2022 ಅನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಿದರು ಆದರೆ ಮಧ್ಯದಲ್ಲಿ ಅವರು ತಮ್ಮ ವೇಗವನ್ನು ಕಳೆದುಕೊಂಡಿದ್ದರು. ಆದರೆ ರಾಜಸ್ಥಾನ್ ರಾಯಲ್ಸ್‌ (Rajasthan Royals)ಗೆ ಹೆಚ್ಚು ಅಗತ್ಯವಿರುವಾಗ ಬಟ್ಲರ್ ಮತ್ತೆ ಲಯಕ್ಕೆ ಮರಳಿದರು. 2018 ರಿಂದ ಮೊದಲ ಬಾರಿಗೆ ರಾಜಸ್ಥಾನ ಪ್ಲೇಆಫ್‌ಗೆ ಕಾಲಿಟ್ಟಿದ್ದು, ಇದರಲ್ಲಿ ಈ ಬ್ಯಾಟ್ಸ್‌ಮನ್ ಪ್ರದರ್ಶನ ಬಹುಮುಖ್ಯವಾಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಆಡಿತು, ಈ ಪಂದ್ಯದಲ್ಲಿ ಬಟ್ಲರ್ 89 ರನ್ ಗಳಿಸಿದರು. ಇದಾದ ಬಳಿಕ ಶುಕ್ರವಾರ ನಡೆದ ಎರಡನೇ ಕ್ವಾಲಿಫೈಯರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ವಿರುದ್ಧ ಬ್ಯಾಟಿಂಗ್‌ನಲ್ಲೂ ಭರ್ಜರಿ ಶತಕ ಸಿಡಿಸಿದ್ದರು.

ಐಪಿಎಲ್-2022ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಬಟ್ಲರ್ ಮೊದಲ ಸ್ಥಾನದಲ್ಲಿದ್ದಾರೆ. ಈ ವಿಚಾರದಲ್ಲಿ ಬಟ್ಲರ್ ಹತ್ತಿರದಲ್ಲೂ ಯಾರು ಇಲ್ಲದ ಕಾರಣ ಆರೆಂಜ್ ಕ್ಯಾಪ್ ಪಡೆಯುವುದು ಖಚಿತವಾಗಿದೆ. ಲಕ್ನೋ ಸೂಪರ್ ಜೈಂಟ್ಸ್‌ನ ನಾಯಕ ಕೆಎಲ್ ರಾಹುಲ್, ಬಟ್ಲರ್​ಗೆ ಸವಾಲಾಗಿದ್ದ ಒಬ್ಬ ಬ್ಯಾಟ್ಸ್‌ಮನ್, ಆದರೆ ಲಕ್ನೋ ಈ ಲೀಗ್‌ನಿಂದ ಹೊರಗುಳಿದಿದೆ. ಬಟ್ಲರ್ ಅವರ ಶತಕದ ಆಧಾರದ ಮೇಲೆ ರಾಜಸ್ಥಾನ ಫೈನಲ್‌ಗೆ ಲಗ್ಗೆ ಇಟ್ಟಿತು. 2008ರ ನಂತರ ಇದೇ ಮೊದಲ ಬಾರಿಗೆ ಈ ತಂಡ ಫೈನಲ್ ತಲುಪಿದೆ.

ಇದನ್ನೂ ಓದಿ:Rajat Patidar: ಪವರ್​ಫುಲ್ ದಾಖಲೆ ಬರೆದ ರಜತ್ ಪಾಟಿದಾರ್

ಇದನ್ನೂ ಓದಿ
Image
IPL 2022 Qualifier 2: RR vs RCB: ಇಂದು ಕಣಕ್ಕಿಳಿಯುವ ಕಲಿಗಳು ಇವರೇ..!
Image
RR vs RCB IPL 2022 Qualifier 2 Highlights: ಬಟ್ಲರ್ ಶತಕ, ಫೈನಲ್​ಗೆ ರಾಜಸ್ಥಾನ; ಆರ್​ಸಿಬಿ ಅಭಿಮಾನಿಗಳಿಗೆ ಮತ್ತೆ ನಿರಾಸೆ
Image
IPL 2022: 3 ಬಾರಿ ಫೈನಲ್​ಗೇರಿದರೂ ಆರ್​ಸಿಬಿಗೆ ಕಪ್​ ಗೆಲ್ಲಲಾಗಲಿಲ್ಲ! ಆ 3 ಫೈನಲ್​ಗಳ ರೋಚಕ ಇತಿಹಾಸ ಇಲ್ಲಿದೆ

ಬಟ್ಲರ್ ಬಿರುಸಿನ ಫಾರ್ಮ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು 157 ರನ್ ಗಳಿಸಿತ್ತು. ಇದನ್ನು ಸಾಧಿಸಲು, ಉತ್ತಮ ಆರಂಭದ ಅಗತ್ಯವಿತ್ತು, ಅದನ್ನು ರಾಜಸ್ಥಾನ ಪಡೆಯಿತು. ಬಟ್ಲರ್, ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸಾವಾಲ್ ಅವರೊಂದಿಗೆ ಮೊದಲ ವಿಕೆಟ್‌ಗೆ 61 ರನ್ ಸೇರಿಸಿದರು. ಯಶಸ್ವಿ 21 ರನ್ ಗಳಿಸಿ ಔಟಾದರು. ಆದರೆ ಬಟ್ಲರ್ ತಮ್ಮ ಕೆಲಸವನ್ನು ಮುಂದುವರಿಸಿ ಅದ್ಭುತ ಅರ್ಧಶತಕ ಗಳಿಸಿದರು. ಇದು ಈ ಋತುವಿನಲ್ಲಿ ಅವರ ಐದನೇ ಅರ್ಧಶತಕವಾಗಿತ್ತು. ಏಳನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಹರ್ಷಲ್ ಪಟೇಲ್‌ಗೆ ಸಿಕ್ಸರ್ ಬಾರಿಸುವ ಮೂಲಕ ಬಟ್ಲರ್ 50 ರನ್ ಪೂರೈಸಿದರು, ಇದಕ್ಕಾಗಿ ಅವರು 23 ಎಸೆತಗಳನ್ನು ಎದುರಿಸಿದರು ಮತ್ತು 200 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು.

ಕೊಹ್ಲಿ ಶತಕಕ್ಕೆ ಸಮ ಅರ್ಧಶತಕ ಗಳಿಸಿದ ಬಳಿಕ ಬಟ್ಲರ್‌ಗೆ ಜೀವದಾನ ಸಿಕ್ಕಿತು. 11ನೇ ಓವರ್​ನ ಮೊದಲ ಎಸೆತದಲ್ಲಿ ಪಟೇಲ್ ಎಸೆತ ಬಟ್ಲರ್ ಬ್ಯಾಟ್​ನ ಅಂಚನ್ನು ತಾಘಿ ವಿಕೆಟ್ ಕೀಪರ್ ಕಾರ್ತಿಕ್ ಕಡೆ ಹೋಯಿತು, ಆದರೆ ಕಾರ್ತಿಕ್ ಈ ಸರಳ ಕ್ಯಾಚ್ ಬಿಟ್ಟುಕೊಟ್ಟರು. ಆ ವೇಳೆ ಬಟ್ಲರ್ 66 ರನ್ ಗಳಿಸಿದ್ದರು. ಇಲ್ಲಿಂದ ಅವರು ಹಿಂತಿರುಗಿ ನೋಡದೆ ಈ ಸೀಸನ್​ನ ನಾಲ್ಕನೇ ಶತಕವನ್ನು ಗಳಿಸಿದರು. 18ನೇ ಓವರ್​ನ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ಶತಕ ಪೂರೈಸಿದರು. ಈ ಮೂಲಕ ಐಪಿಎಲ್ ಒಂದು ಸೀಸನ್​ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿರಾಟ್ ಕೊಹ್ಲಿ ದಾಖಲೆಯನ್ನು ಬಟ್ಲರ್ ಸರಿಗಟ್ಟಿದರು. 2016ರಲ್ಲಿ ಕೊಹ್ಲಿ ನಾಲ್ಕು ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ಬಟ್ಲರ್ ಅಜೇಯ 106 ರನ್ ಗಳಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಅವರು 60 ಎಸೆತಗಳನ್ನು ಎದುರಿಸಿ, 10 ಬೌಂಡರಿಗಳ ಜೊತೆಗೆ ಆರು ಸಿಕ್ಸರ್‌ಗಳನ್ನು ಬಾರಿಸಿದರು.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್