AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಬಲಿಷ್ಠ ತಂಡವಾಗಿದ್ದರೂ RCB ಎಡವಿದೆಲ್ಲಿ?

IPL 2022 Playoffs, RR vs RCB: ಇದೇ ಪಿಚ್​ನಲ್ಲಿ ಕಳೆದ ವರ್ಷ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 224 ರನ್​ ಕಲೆಹಾಕಿತ್ತು. ಈ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿದ ಇಂಗ್ಲೆಂಡ್ 188 ರನ್ ಬಾರಿಸಿತ್ತು.

IPL 2022: ಬಲಿಷ್ಠ ತಂಡವಾಗಿದ್ದರೂ RCB ಎಡವಿದೆಲ್ಲಿ?
RCB
TV9 Web
| Edited By: |

Updated on: May 27, 2022 | 11:02 PM

Share

ಐಪಿಎಲ್​ 2022ರ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಸೋಲುವ ಆರ್​ಸಿಬಿ ತಂಡವು ಐಪಿಎಲ್​ ಅಭಿಯಾನ ಅಂತ್ಯಗೊಳಿಸಿದೆ. ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದರೂ ಆರ್​​ಸಿಬಿ ನಿರ್ಣಾಯಕ ಪಂದ್ಯ ಎಡವಿತ್ತು. ಅದರಲ್ಲೂ ಬ್ಯಾಟಿಂಗ್​ ಪಿಚ್​ನಲ್ಲಿ ಮುಗ್ಗರಿಸುವ ಮೂಲಕ ಸೋಲೊಪ್ಪಿಕೊಂಡಿರುವುದೇ ಅಚ್ಚರಿ. ಏಕೆಂದರೆ ಆರ್​ಸಿಬಿ ತಂಡದಲ್ಲಿ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿದ್ದರೂ ರಾಜಸ್ಥಾನ್ ರಾಯಲ್ಸ್​ಗೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ವಿಫಲವಾಯಿತು. ಹಾಗಿದ್ರೆ ಆರ್​ಸಿಬಿ ತಂಡವು ಎಡವಿದ್ದೆಲ್ಲಿ ಎಂದು ನೋಡೋಣ…

ಅಹಮದಾಬಾದ್ ಪಿಚ್​ ಬ್ಯಾಟ್ಸ್​ಮನ್​ಗಳಿಗೆ ಸ್ವರ್ಗ. ಇದಾಗ್ಯೂ ಈ ಪಿಚ್​ನಲ್ಲಿ ಆರ್​ಸಿಬಿ ಬ್ಯಾಟ್ಸ್​ಮನ್​ಗಳು ರನ್​ಗಳಿಸಲು ಪರದಾಡಿದರು. ಅದರಲ್ಲೂ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 7 ರನ್​ಗಳಿಸಿ ಪವರ್​ಪ್ಲೇನಲ್ಲೇ ಹೊರನಡೆದರು. ಇನ್ನು ಪವರ್​ಪ್ಲೇನಲ್ಲಿ ಬ್ಯಾಟ್ ಬೀಸಿದ ಫಾಫ್ ಡುಪ್ಲೆಸಿಸ್ ಬರೋಬ್ಬರಿ 27 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 25 ರನ್ ಮಾತ್ರ.

ಇದಾಗ್ಯೂ ಮತ್ತೊಂದೆಡೆ ರಜತ್ ಪಾಟಿದಾರ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಅಹಮದಾಬಾದ್​ ಪಿಚ್​ನಲ್ಲಿ ಅದು ನಿಧಾನಗತಿಯ ಬ್ಯಾಟಿಂಗ್ ಎಂದೇ ಹೇಳಬಹುದು. ಏಕೆಂದರೆ ಪಾಟಿದಾರ್ ಅರ್ಧಶತಕ ಪೂರೈಸಲು ತೆಗೆದುಕೊಂಡಿದ್ದು ಬರೋಬ್ಬರಿ 40 ಎಸೆತಗಳನ್ನು ಎಂಬುದು ಉಲ್ಲೇಖಾರ್ಹ.

ಇದನ್ನೂ ಓದಿ
Image
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
Image
IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಒಂದೆಡೆ ಫಾಫ್ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ರೆ, ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮಾಡಿದರೂ ರಜತ್ ಪಾಟಿದಾರ್ ಹೆಚ್ಚಿನ ಡಾಟ್​ ಬಾಲ್​ಗಳನ್ನು ಆಡಿದರು. ಪರಿಣಾಮ ಆರ್​ಸಿಬಿ ಪವರ್​ಪ್ಲೇನಲ್ಲಿ ಕಲೆಹಾಕಿದ್ದು ಕೇವಲ 46 ರನ್​ ಮಾತ್ರ. ಇನ್ನು ಇದಾದ ಬಳಿಕ ಕೂಡ ಆರ್​ಸಿಬಿ ಬ್ಯಾಟ್ಸ್​ಮನ್​ಗಳು ವೇಗದ ಎಸೆತಗಳಲ್ಲಿ ರನ್​ಗಳಿಸಲು ಪರದಾಡಿದರು. ಪರಿಣಾಮ ವೇಗದ ಬೌಲರ್​ಗಳ 12 ಓವರ್​ಗಳಲ್ಲಿ ಆರ್​ಸಿಬಿ ಕಲೆಹಾಕಿದ್ದು ಕೇವಲ 73 ರನ್​ ಮಾತ್ರ.

ಇತ್ತ ಸ್ಪಿನ್ನರ್​ಗಳ ವಿರುದ್ದ ಅಬ್ಬರಿಸಿದ್ದ ಆರ್​ಸಿಬಿ ಬ್ಯಾಟ್ಸ್​ಮನ್​ಗಳು 8 ಓವರ್​ಗಳಲ್ಲಿ 76 ರನ್​ ಬಾರಿಸಿದ್ದರು. ಅಂದರೆ ಇಲ್ಲಿ ವೇಗಿಗಳನ್ನು ಎದುರಿಸುವಲ್ಲಿ ಆರ್​ಸಿಬಿ ಬ್ಯಾಟ್ಸ್​ಮನ್​ಗಳು ಎಡವಿದ್ದರು. ಅದರಲ್ಲೂ ಪವರ್​ಪ್ಲೇನಲ್ಲಿ ವೇಗಿಗಳ ಎದುರು ಆರ್​ಸಿಬಿ ಆಟಗಾರರಾದ ಫಾಫ್ ಡುಪ್ಲೆಸಿಸ್ ಹಾಗೂ ರಜತ್ ಪಾಟಿದಾರ್ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದು ಆರ್​ಸಿಬಿಗೆ ಮುಳುವಾಯಿತು.

ಮೊದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ರಾಜಸ್ಥಾನ್ ರಾಯಲ್ಸ್ ವೇಗಿಗಳು ಅಂತಿಮ 5 ಓವರ್​ಗಳಲ್ಲಿ ಆರ್​ಸಿಬಿ ಮಧ್ಯಮ ಕ್ರಮಾಂಕವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ ಆರ್​ಸಿಬಿ 8 ವಿಕೆಟ್ ನಷ್ಟಕ್ಕೆ 158 ರನ್​ಗಳಿಸಲಷ್ಟೇ ಶಕ್ತರಾದರು. ಈ ಸಾಧಾರಣ ಸ್ಕೋರ್​ಗಳಿಸುವ ಮೂಲಕ ಆರ್​ಸಿಬಿ ಅದಾಗಲೇ ಅರ್ಧ ಪಂದ್ಯವನ್ನು ಸೋತಿತ್ತು ಎನ್ನಬಹುದು.

ಏಕೆಂದರೆ ಅಹಮದಾಬಾದ್ ಪಿಚ್​​ನಲ್ಲಿನ ಅವರೇಜ್ ಸ್ಕೋರ್ 160. ಅಂದರೆ ಈ ಪಿಚ್​ನಲ್ಲಿ ಚೇಸಿಂಗ್ ತುಂಬಾ ಸುಲಭ. ಗೆಲ್ಲಬೇಕಿದ್ದರೆ ಕನಿಷ್ಠ 180 ಕ್ಕಿಂತ ಹೆಚ್ಚಿನ ರನ್​ಗಳಿಸಲೇಬೇಕು. ಇತ್ತ ಸಾಧಾರಣ ಸವಾಲು ಪಡೆದ ರಾಜಸ್ಥಾನ್ ರಾಯಲ್ಸ್​ಗೆ ಪವರ್​ಪ್ಲೇನಲ್ಲೇ ಪವರ್​ ತುಂಬುವ ಮೂಲಕ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಪವರ್ ತುಂಬಿದರು. ಆ ಮೂಲಕ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಇತ್ತ ಬಟ್ಲರ್ ಅಬ್ಬರಕ್ಕೆ ನಲುಗಿದ ಆರ್​ಸಿಬಿ ಬೌಲರ್​ಗಳು ಲಯ ತಪ್ಪಿದರು.

ಇಲ್ಲಿ ಆರ್​ಸಿಬಿ ಬೌಲರ್​ಗಳು ಉತ್ತಮ ಪ್ರದರ್ಶನ ನೀಡದಿದ್ದರೂ, ಸೋಲಿಗೆ ಪ್ರಮುಖ ಕಾರಣ ಬ್ಯಾಟ್ಸ್​ಮನ್​ಗಳು ಎನ್ನಬಹುದು. ಏಕೆಂದರೆ ಬ್ಯಾಟ್ಸ್​ಮನ್​ಗಳಿಗೆ ಸ್ವರ್ಗದಂತಿದ್ದ ಪಿಚ್​ನಲ್ಲಿ ರನ್​ಗಳಿಸಲು ಪರದಾಡಿದ್ದು ಆರ್​ಸಿಬಿಗೆ ಮುಳುವಾಯಿತು. ಅದರಲ್ಲೂ ಅವರೇಜ್ ಸ್ಕೋರ್​ಗಳಿಸಲು ಕೂಡ ಸಾಧ್ಯವಾಗದೇ ಮೊದಲ ಇನಿಂಗ್ಸ್ ಮುಕ್ತಾಯದ ವೇಳೆಗೆ ಅರ್ಧ ಸೋಲೊಪ್ಪಿಕೊಂಡಿತು.

ಆದರೆ ರಾಜಸ್ಥಾನ್ ರಾಯಲ್ಸ್ ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಆರ್​ಸಿಬಿ ಪವರ್​ಪ್ಲೇನಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂಬುದನ್ನು ತೋರಿಸಿ ಕೊಡುವಂತೆ ಬ್ಯಾಟ್ ಬೀಸಿದ್ದರು. ಅಲ್ಲದೆ ಮೊದಲ 6 ಓವರ್​ಗಳಲ್ಲಿ ರಾಜಸ್ಥಾನ್ ರಾಯಲ್ಸ್​ 67 ರನ್​ ಬಾರಿಸಿ ಉತ್ತಮ ಆರಂಭವನ್ನು ಪಡೆಯಿತು. ಈ ಮೂಲಕ ಗೆದ್ದು ಇದೀಗ 2008 ರ ಬಳಿಕ ಮತ್ತೊಮ್ಮೆ ಫೈನಲ್​ಗೆ ಲಗ್ಗೆಯಿಟ್ಟಿದೆ.

ಅಂದಹಾಗೆ ಇದೇ ಪಿಚ್​ನಲ್ಲಿ ಕಳೆದ ವರ್ಷ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 224 ರನ್​ ಕಲೆಹಾಕಿತ್ತು. ಈ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿದ ಇಂಗ್ಲೆಂಡ್ 188 ರನ್ ಬಾರಿಸಿತ್ತು. ಹಾಗೆಯೇ ಕಳೆದ ಸೀಸನ್ ಐಪಿಎಲ್​ನಲ್ಲಿ ಆರ್​ಸಿಬಿ ಈ ಪಿಚ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಒಂದು ಮ್ಯಾಚ್ ಆಡಿದೆ. ಆ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡ 171 ರನ್​ ಕಲೆಹಾಕಿತ್ತು. ಆದರೆ ಈ ಟಾರ್ಗೆಟ್ ಅನ್ನು ಚೇಸ್ ಮಾಡುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಬಹುತೇಕ ಯಶಸ್ವಿಯಾಗಿತ್ತು. ಇದಾಗ್ಯೂ ಕೊನೆಯ ಓವರ್​ನಲ್ಲಿ 1 ರನ್​ನಿಂದ ಆರ್​ಸಿಬಿ ಆ ಪಂದ್ಯವನ್ನು ಗೆದ್ದುಕೊಂಡಿತ್ತು.  ಈ ಎರಡು ಪಂದ್ಯಗಳ ಫಲಿತಾಂಶವನ್ನು ಮತ್ತು ಆರ್​ಸಿಬಿ ತಂಡದ ಇಂದಿನ ಬ್ಯಾಟಿಂಗ್​ ಅನ್ನು ಹೋಲಿಸಿದರೆ, ಆರ್​ಸಿಬಿ ಎಡವಿದೆಲ್ಲಿ ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ರಶ್ಮಿಕಾ, ವಿಜಯ್ ಆರತಕ್ಷತೆ: ನವದಂಪತಿಗೆ ಆಶೀರ್ವಾದ ಮಾಡಿದ ಚಿರಂಜೀವಿ
ರಶ್ಮಿಕಾ, ವಿಜಯ್ ಆರತಕ್ಷತೆ: ನವದಂಪತಿಗೆ ಆಶೀರ್ವಾದ ಮಾಡಿದ ಚಿರಂಜೀವಿ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ