AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: 2011, 2015, ಈಗ 2022 ರಲ್ಲೂ ಅದೇ ಕಥೆ; ವಾಡಿಕೆಯಂತೆ ಕ್ವಾಲಿಫೈಯರ್ ಪಂದ್ಯದಲ್ಲಿ ಕೈಕೊಟ್ಟ ಕೊಹ್ಲಿ!

Virat Kohli: ಈ ಬಾರಿ ಎರಡನೇ ಓವರ್‌ನಲ್ಲಿಯೇ ಔಟಾದ ವಿರಾಟ್ ಕೊಹ್ಲಿ ಈ ಪರಿಸ್ಥಿತಿಗೆ ಕಾರಣರಾದರು. ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೊಹ್ಲಿಯನ್ನು ಬಲಿಪಶು ಮಾಡಿದರು. ಕೊಹ್ಲಿ ಕೇವಲ 7 ರನ್ ಗಳಿಸಲಷ್ಟೇ ಶಕ್ತರಾದರು.

IPL 2022: 2011, 2015, ಈಗ 2022 ರಲ್ಲೂ ಅದೇ ಕಥೆ; ವಾಡಿಕೆಯಂತೆ ಕ್ವಾಲಿಫೈಯರ್ ಪಂದ್ಯದಲ್ಲಿ ಕೈಕೊಟ್ಟ ಕೊಹ್ಲಿ!
ಕೊಹ್ಲಿ
TV9 Web
| Updated By: ಪೃಥ್ವಿಶಂಕರ|

Updated on: May 28, 2022 | 7:00 AM

Share

ಐಪಿಎಲ್ ( IPL) ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ (Virat Kohli) ಹೆಸರಿನಲ್ಲಿರಬಹುದು, ಆದರೆ ಭಾರತೀಯ ಅನುಭವಿ ಬ್ಯಾಟ್ಸ್‌ಮನ್ ಕಳೆದ ಕೆಲವು ಸೀಸನ್‌ಗಳಿಂದ ಅದರಲ್ಲಿ ರನ್‌ಗಳಿಗಾಗಿ ಹೆಣಗಾಡುತ್ತಿದ್ದಾರೆ. ಐಪಿಎಲ್ 2022 (IPL 2022)ರ ಸೀಸನ್​ ಕೂಡ ಅವರಿಗೆ ದುಃಸ್ವಪ್ನದಂತಿದೆ, ಇಲ್ಲಿ ಪ್ರತಿ ರನ್‌ಗಾಗಿ ಕೊಹ್ಲಿ ತಿಣುಕಾಡುವಂತ್ತಾಗಿದೆ. ನಡುನಡುವೆ ಒಂದೋ ಎರಡೋ ಬಾರಿ ಫಾರ್ಮ್​ಗೆ ಬರೋದು ಕಂಡರೂ ಒಟ್ಟಿನಲ್ಲಿ ಫೇಲ್ ಆಗಿದ್ದಾರೆ. ಕೊಹ್ಲಿಯ ಈ ವೈಫಲ್ಯವು ಪ್ಲೇಆಫ್‌ಗಳವರೆಗೂ ಮುಂದುವರೆಯಿತು, ವಿರಾಟ್ ಬ್ಯಾಟ್ ಮೊದಲು ಎಲಿಮಿನೇಟರ್‌ನಲ್ಲಿ, ನಂತರ ಎರಡನೇ ಕ್ವಾಲಿಫೈಯರ್‌ನಲ್ಲಿ ಯಾವುದೇ ಅದ್ಭುತಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಇದರೊಂದಿಗೆ, ವಿಚಿತ್ರ ಕಾಕತಾಳೀಯವೊಂದು ಕೊಹ್ಲಿ ಕೊರಳಿಗೆ ಬಿದ್ದಿದೆ.

ಐಪಿಎಲ್ 2022 ರ ಎರಡನೇ ಕ್ವಾಲಿಫೈಯರ್ ಪಂದ್ಯವು ಶುಕ್ರವಾರ ಮೇ 27 ರಂದು ಅಹಮದಾಬಾದ್‌ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಈ ಪಂದ್ಯದಲ್ಲಿ ಬೆಂಗಳೂರು ಮೊದಲು ಬ್ಯಾಟ್ ಮಾಡಿತ್ತು. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಅವರ ಆರಂಭಿಕ ಜೋಡಿಯಿಂದ ತಂಡಕ್ಕೆ ತ್ವರಿತ ಆರಂಭದ ಅಗತ್ಯವಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಈ ಬಾರಿ ಎರಡನೇ ಓವರ್‌ನಲ್ಲಿಯೇ ಔಟಾದ ವಿರಾಟ್ ಕೊಹ್ಲಿ ಈ ಪರಿಸ್ಥಿತಿಗೆ ಕಾರಣರಾದರು. ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೊಹ್ಲಿಯನ್ನು ಬಲಿಪಶು ಮಾಡಿದರು. ಕೊಹ್ಲಿ ಕೇವಲ 7 ರನ್ ಗಳಿಸಲಷ್ಟೇ ಶಕ್ತರಾದರು.

ಇದನ್ನೂ ಓದಿ:RR vs RCB IPL 2022 Qualifier 2 Highlights: ಬಟ್ಲರ್ ಶತಕ, ಫೈನಲ್​ಗೆ ರಾಜಸ್ಥಾನ; ಆರ್​ಸಿಬಿ ಅಭಿಮಾನಿಗಳಿಗೆ ಮತ್ತೆ ನಿರಾಸೆ

ಇದನ್ನೂ ಓದಿ
Image
IPL 2022 Qualifier 2: RR vs RCB: ಇಂದು ಕಣಕ್ಕಿಳಿಯುವ ಕಲಿಗಳು ಇವರೇ..!
Image
RR vs RCB IPL 2022 Qualifier 2 Highlights: ಬಟ್ಲರ್ ಶತಕ, ಫೈನಲ್​ಗೆ ರಾಜಸ್ಥಾನ; ಆರ್​ಸಿಬಿ ಅಭಿಮಾನಿಗಳಿಗೆ ಮತ್ತೆ ನಿರಾಸೆ
Image
IPL 2022: 3 ಬಾರಿ ಫೈನಲ್​ಗೇರಿದರೂ ಆರ್​ಸಿಬಿಗೆ ಕಪ್​ ಗೆಲ್ಲಲಾಗಲಿಲ್ಲ! ಆ 3 ಫೈನಲ್​ಗಳ ರೋಚಕ ಇತಿಹಾಸ ಇಲ್ಲಿದೆ

2011, 2015 ಮತ್ತು ಈಗ 2022 ರಲ್ಲೂ ಅದೇ ಕಥೆ ಈ ಮೂಲಕ ಮತ್ತೊಮ್ಮೆ ವಿರಾಟ್ ಕೊಹ್ಲಿ ಹಿಂದಿನ ಐಪಿಎಲ್ ಸೀಸನ್​ನಂತೆಯೇ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಯಾವುದೇ ಪರಿಣಾಮ ಬೀರದೆ ಔಟಾದರು. ಇದಕ್ಕೂ ಮುನ್ನ 2011ರಲ್ಲಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಋತುವಿನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲೂ ಬೆಂಗಳೂರು ಮೊದಲು ಬ್ಯಾಟ್ ಮಾಡಿದ್ದು, ಕೊಹ್ಲಿ 8 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ನಂತರ 2015ರಲ್ಲೂ ಬೆಂಗಳೂರಿಗೆ ಎರಡನೇ ಕ್ವಾಲಿಫೈಯರ್ ಆಡುವ ಅವಕಾಶ ಸಿಕ್ಕಿದ್ದು, ರಾಂಚಿಯಲ್ಲಿ ಪಂದ್ಯ ನಡೆದಿದ್ದು, ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿತ್ತು. ಮತ್ತೊಮ್ಮೆ ಕೊಹ್ಲಿ ವಿಫಲರಾಗಿ ಕೇವಲ 12 ರನ್ ಗಳಿಸಿ ಔಟಾದರು. ಪ್ರಾಸಂಗಿಕವಾಗಿ, ಬೆಂಗಳೂರು ಮೂರು ಬಾರಿಯೂ ಮೊದಲು ಬ್ಯಾಟ್ ಮಾಡಿತು.

ಗೆದ್ದ ರಾಜಸ್ಥಾನ ರಾಜಸ್ಥಾನ್ ರಾಯಲ್ಸ್ ತಂಡದ 14 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಚಾಂಪಿಯನ್ ತಂಡವು ತನ್ನ ಪ್ರಶಸ್ತಿ ಯಶಸ್ಸಿನ ನಂತರ ಮತ್ತೊಮ್ಮೆ ಪ್ರಶಸ್ತಿಯ ಸಮೀಪಕ್ಕೆ ಬಂದಿದೆ. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಐಪಿಎಲ್ 2022 ರ ಫೈನಲ್‌ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಏಕಪಕ್ಷೀಯ ರೀತಿಯಲ್ಲಿ 7 ವಿಕೆಟ್‌ಗಳ ಅಂತರದಿಂದ ಸೋಲಿಸಿತು. ಈ ಋತುವಿನ ತನ್ನ ಪ್ರಮುಖ ಪಂದ್ಯದಲ್ಲಿ ರಾಜಸ್ಥಾನವು ಪ್ರತಿ ಮುಂಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿತು. ಪ್ರಸಿದ್ಧ್ ಕೃಷ್ಣ ನೇತೃತ್ವದ ಬೌಲರ್‌ಗಳು ಬೆಂಗಳೂರನ್ನು ಕೇವಲ 157 ರನ್‌ಗಳಿಗೆ ಸೀಮಿತಗೊಳಿಸಿದರು ಮತ್ತು ನಂತರ ಸುಲಭ ಜಯವನ್ನು ಪಡೆದರು, ಜೋಸ್ ಬಟ್ಲರ್ ಅವರ ದಾಖಲೆಯ ನಾಲ್ಕನೇ ಶತಕದೊಂದಿಗೆ ರಾಜಸ್ಥಾನ ಫೈನಲ್​ಗೇರಿದೆ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?