RR vs RCB Qualifier 2: ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣವಾಗಿದ್ದು ಈ ಒಬ್ಬ ಬೌಲರ್

Royal Challengers Bangalore: ಆರ್​ಸಿಬಿ ಪ್ರಮುಖ ಪಂದ್ಯದಲ್ಲೇ ತಂಡದ ಅನುಭವಿ ಬ್ಯಾಟರ್​ಗಳು ಕೈಕೊಟ್ಟರು. ಬೌಲರ್​ಗಳು ಕೂಡ ಕೈ ಹಿಡಿಯಲಿಲ್ಲ. ಬೆಂಗಳೂರು ತಂಡ ಈರೀತಿ ಸೋಲು ಕಾಣಲು ಕಾರಣವಾಗಿದ್ದು ಒಬ್ಬ ಬೌಲರ್ ಎಂದರೆ ನಂಬಲೇಬೇಕು.

RR vs RCB Qualifier 2: ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣವಾಗಿದ್ದು ಈ ಒಬ್ಬ ಬೌಲರ್
RCB IPL 2022
Follow us
TV9 Web
| Updated By: Vinay Bhat

Updated on:May 28, 2022 | 8:08 AM

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಪ್ ಗೆಲ್ಲುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡದ ಕನಸು ನುಚ್ಚು ನೂರಾಗಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್ – 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ಹೀನಾಯವಾಗಿ ಸೋತು ಕಪ್ ಇಲ್ಲದೆ ಈ ಬಾರಿ ಕೂಡ ಟೂರ್ನಿಯನ್ನು ಮುಗಿಸಿದೆ. ಪ್ರಮುಖ ಪಂದ್ಯದಲ್ಲೇ ತಂಡದ ಅನುಭವಿ ಬ್ಯಾಟರ್​ಗಳು ಕೈಕೊಟ್ಟರು. ಬೌಲರ್​ಗಳು ಕೂಡ ಕೈ ಹಿಡಿಯಲಿಲ್ಲ. ಜೋಸ್ ಬಟ್ಲರ್ ಸ್ಫೋಟಕ ಶತಕಕ್ಕೆ ಫಾಫ್ ಪಡೆ ತಬ್ಬಿಬ್ಬಾಯಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಜು ಸ್ಯಾಮ್ಸನ್ ಪಡೆ ಮಿಂಚಿನ ಪ್ರದರ್ಶನ ತೋರಿತು. ಈ ಮೂಲಕ ಆರ್​ಆರ್​ ಐಪಿಎಲ್ 2022 (IPL 2022) ಫೈನಲ್​ಗೆ ಪ್ರವೇಶ ಪಡೆದಿದ್ದು ಮೇ. 29 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಟ್ರೋಫಿ ಎತ್ತಿ ಹಿಡಿಯಲು ಹೋರಾಟ ನಡೆಸಲಿದೆ. ಇಲ್ಲಿ ಬೆಂಗಳೂರು ತಂಡ ಈರೀತಿ ಸೋಲು ಕಾಣಲು ಕಾರಣವಾಗಿದ್ದು ಒಬ್ಬ ಬೌಲರ್ ಎಂದರೆ ನಂಬಲೇಬೇಕು. ಅವರೇ ಕನ್ನಡಿಗ ಪ್ರಸಿದ್ಧ್ ಕೃಷ್ಣ.

ಹೌದು, ಕ್ವಾಲಿಫೈಯರ್ – 2 ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಕನ್ನಡಿಗನೇ ವಿಲನ್ ಆಗಿದ್ದು. ರಾಜಸ್ಥಾನ್ ಫ್ರಾಂಚೈಸಿ ತನ್ನ ಮೇಲಿಟ್ಟ ನಂಬಿಕೆಯನ್ನು ಪ್ರಸಿದ್ಧ್ ಸಂಪೂರ್ಣವಾಗಿ ಉಳಿಸಿಕೊಂಡರು. 4 ಓವರ್ ಬೌಲಿಂಗ್ ಮಾಡಿ ಕೇವಲ 22 ರನ್ ನೀಡಿ 3 ಪ್ರಮುಖ ವಿಕೆಟ್ ಕಿತ್ತರು. ಇವರು ಪಡೆದುಕೊಂಡ ವಿಕೆಟ್ ಎಲ್ಲವೂ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಅಲ್ಲಿಂದಲೇ ಆರ್​ಸಿಬಿ ಕುಸಿತ ಕಂಡಿತು. ಆರಂಭದಲ್ಲೇ ಬ್ರೇಕ್ ನೀಡಿದ್ದೇ ಇವರು. 7 ರನ್ ಗಳಿಸಿದ್ದ ವಿರಾಟ್ ಕೊಹ್ಲಿಯನ್ನು ಪೆವಿಲಿಯನ್​ಗೆ ಅಟ್ಟಿದರೆ, ಪಂದ್ಯವನ್ನು ಫಿನಿಶ್ ಮಾಡಲೆಂದು ಬಂದ ದಿನೇಶ್ ಕಾರ್ತಿಕ್​​ಗೆ 6 ರನ್ ಗಳಿಸಿದ್ದಾಗ ತಮ್ಮ ಅದ್ಭುತ ಸ್ಪೆಲ್ ಮೂಲಕ ಔಟ್ ಮಾಡಿದರು. ಇದರ ಬೆನ್ನಲ್ಲೇ ವನಿಂದು ಹಸರಂಗ ಅವರನ್ನೂ ಕ್ಲೀನ್ ಬೌಲ್ಡ್ ಮಾಡಿದರು. ಹೀಗೆ 3 ಪ್ರಮುಖ ವಿಕೆಟ್​ಗಳನ್ನು ಕಿತ್ತು ಬೆಂಗಳೂರು ಪಾಲಿಗೆ ವಿಲನ್ ಆಗಿ ಬಿಟ್ಟರು.

ಈ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಇನ್ನಿಂಗ್ಸ್‌ ಆರಂಭಿಸಿದ ವಿರಾಟ್‌ ಕೊಹ್ಲಿ(7) ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ನಂತರ ಜೊತೆಯಾದ ನಾಯಕ ಫಾಫ್‌ ಡುಪ್ಲೆಸ್ಸಿ(25) ಹಾಗೂ ರಜತ್‌ ಪಟಿದಾರ್‌(58) ಉತ್ತಮ ಆಟವಾಡಿದರು. ಅಲ್ಲದೇ 2ನೇ ವಿಕೆಟ್‌ಗೆ 70 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಪತಿದಾರ್‌ 58 ರನ್‌(42 ಬಾಲ್‌, 4 ಬೌಂಡರಿ, 3 ಸಿಕ್ಸ್) ಅರ್ಧಶತಕ ಸಿಡಿಸಿ ಮತ್ತೊಮ್ಮೆ ಅಬ್ಬರಿಸಿದರು.

ಇದನ್ನೂ ಓದಿ
Image
RR vs RCB Qualifier 2, IPL 2022: ಆರ್​ಸಿಬಿ ವಿರುದ್ಧ ಅಬ್ಬರದ ಶತಕ ಸಿಡಿಸಿ ಕೊಹ್ಲಿ ದಾಖಲೆ ಸರಿಗಟ್ಟಿದ ಬಟ್ಲರ್!
Image
IPL 2022: ಕೊಹ್ಲಿ, ಕಾರ್ತಿಕ್, ಹಸರಂಗ; ಆರ್​ಸಿಬಿ ಗೆಲುವಿಗೆ ಕಂಟಕವಾದ ಕನ್ನಡಿಗ ಪ್ರಸಿದ್ಧ್ ಕೃಷ್ಣ..!
Image
IPL 2022: 2011, 2015, ಈಗ 2022 ರಲ್ಲೂ ಅದೇ ಕಥೆ; ವಾಡಿಕೆಯಂತೆ ಕ್ವಾಲಿಫೈಯರ್ ಪಂದ್ಯದಲ್ಲಿ ಕೈಕೊಟ್ಟ ಕೊಹ್ಲಿ!
Image
IPL 2022: ಬಲಿಷ್ಠ ತಂಡವಾಗಿದ್ದರೂ RCB ಎಡವಿದೆಲ್ಲಿ?

ನಂತರ ಕಣಕ್ಕಿಳಿದ ಗ್ಲೆನ್‌ ಮ್ಯಾಕ್ಸ್‌ವೆಲ್‌(24) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಆದರೆ ರಜತ್ ಪಟಿದಾರ್‌ ವಿಕೆಟ್‌ ಪತನದ ಬಳಿಕ ಬಂದ ಯಾವುದೇ‌ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿ ಆಡಲಿಲ್ಲ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಬಂದ ಮಹಿಪಾಲ್‌ ಲೋಮ್ರೋರ್‌(8), ದಿನೇಶ್‌ ಕಾರ್ತಿಕ್(6)‌, ಹನಿಂದು ಹಸರಂಗ(0), ಹರ್ಷಲ್‌ ಪಟೇಲ್‌(1) ಬಹುಬೇಗನೆ ವಿಕೆಟ್‌ ಒಪ್ಪಿಸಿದರು. ಪರಿಣಾಮ ಆರ್‌ಸಿಬಿ 8 ವಿಕೆಟಿಗೆ ಕೇವಲ 157 ರನ್‌ ಗಳಿಸಿತು.

ಅದಕ್ಕುತ್ತರವಾಗಿ ರಾಜಸ್ಥಾನ ತಂಡವು 18.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 161 ರನ್ ಗಳಿಸಿ ಗೆದ್ದಿತು. ಜೋಸ್ ಬಟ್ಲರ್ (ಅಜೇಯ 106; 60ಎ, 4X10, 6X6) ಈ ಬಾರಿಯ ಟೂರ್ನಿಯಲ್ಲಿ ನಾಲ್ಕನೇ ಶತಕ ಪೂರೈಸಿದರು. ಯಶಸ್ವಿ ಜೈಸ್ವಾಲ್ (21 ರನ್) ಮತ್ತು ಬಟ್ಲರ್ ಇನಿಂಗ್ಸ್‌ಗೆ ಉತ್ತಮ ಆರಂಭ ನೀಡಿದರು. ಕೇವಲ ಐದು ಓವರ್‌ಗಳಲ್ಲಿ 61 ರನ್‌ಗಳು ಸೇರಿದವು. ಜೋಶ್ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಯಶಸ್ವಿ ಔಟಾದಾಗ ಜೊತೆಯಾಟವೂ ಮುರಿಯಿತು. ಆದರೆ, ಬಟ್ಲರ್ ಆಟಕ್ಕೆ ತಡೆಯೇ ಇರಲಿಲ್ಲ. 23 ಎಸೆತಗಳಲ್ಲಿ ಅರ್ಧಶತಕ ತಲುಪಿದರು.

ಸಂಜು 23 ರನ್ ಗಳಿಸಿ ಹಸರಂಗಾ ಬೌಲಿಂಗ್‌ನಲ್ಲಿ ಔಟಾದರು. ದೇವದತ್ ಪಡಿಕ್ಕಲ್ ಕೂಡ 9 ರನ್ ಗಳಿಸಿ ನಿರ್ಗಮಿಸಿದರು. ಬಟ್ಲರ್ ತಾವೆದುರಿಸಿದ 59ನೇ ಎಸೆತದಲ್ಲಿ ಶತಕ ಪೂರೈಸಿದರು. ನಂತರದ ಎಸೆತದಲ್ಲಿ ಸಿಕ್ಸರ್ ಗಳಿಸಿ, ತಂಡವನ್ನು ಗೆಲುವಿನ ಗೆರೆ ದಾಟಿಸಿ ಫೈನಲ್​ ಪ್ರವೇಶಿಸುವಂತೆ ಮಾಡಿದರು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:08 am, Sat, 28 May 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್