IPL 2022: ಕೊಹ್ಲಿ, ಕಾರ್ತಿಕ್, ಹಸರಂಗ; ಆರ್​ಸಿಬಿ ಗೆಲುವಿಗೆ ಕಂಟಕವಾದ ಕನ್ನಡಿಗ ಪ್ರಸಿದ್ಧ್ ಕೃಷ್ಣ..!

IPL 2022: ಪ್ರಸಿದ್ಧ್ ತಮ್ಮ 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 3 ದೊಡ್ಡ ವಿಕೆಟ್ ಪಡೆದರು. ಇದರೊಂದಿಗೆ ರಾಜಸ್ಥಾನದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.

IPL 2022: ಕೊಹ್ಲಿ, ಕಾರ್ತಿಕ್, ಹಸರಂಗ; ಆರ್​ಸಿಬಿ ಗೆಲುವಿಗೆ ಕಂಟಕವಾದ ಕನ್ನಡಿಗ ಪ್ರಸಿದ್ಧ್ ಕೃಷ್ಣ..!
ಕೊಹ್ಲಿ ವಿಕೆಟ್ ಪಡೆದ ಸಂಭ್ರಮದಲ್ಲಿ ಪ್ರಸಿದ್ಧ್
Follow us
TV9 Web
| Updated By: ಪೃಥ್ವಿಶಂಕರ

Updated on: May 28, 2022 | 7:31 AM

ಕ್ರಿಕೆಟ್ ಕ್ಷೇತ್ರದಲ್ಲಿ ಭವಿಷ್ಯ ಬದಲಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಕೆಲವು ಎಸೆತಗಳಲ್ಲಿ, ಯಾವುದೇ ಆಟಗಾರನು ಸ್ಟಾರ್​ ಆಗುತ್ತಾನೆ ಅಥವಾ ನಿಷ್ಪ್ರಯೋಜಕನಾಗುತ್ತಾನೆ. ಐಪಿಎಲ್‌ನಂತಹ ದೀರ್ಘ ಮತ್ತು ದೊಡ್ಡ ಟೂರ್ನಿಗಳಲ್ಲಿ ಇದು ಸಾಮಾನ್ಯ. ಆದಾಗ್ಯೂ, ಕಠಿಣ ಪಂದ್ಯದ ವೈಫಲ್ಯವನ್ನು ಮುಂದಿನ ಇನ್ನಷ್ಟು ಕಷ್ಟಕರವಾದ ಪಂದ್ಯದಲ್ಲಿ ಯಶಸ್ಸಿಗೆ ಪರಿವರ್ತಿಸುವ ಕೆಲವು ಆಟಗಾರರಿದ್ದಾರೆ. IPL 2022 ರ ಎರಡು ಪಂದ್ಯಗಳಲ್ಲಿ ಈ ಘಟನೆ ಸಂಭವಿಸಿದೆ. ಇದಕ್ಕೆ ಉದಾಹರಣೆಯೇ ನಮ್ಮ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna). ಪ್ರಸಿದ್ಧ್ ತಮ್ಮ ಮಾರಕ ದಾಳಿಯಿಂದ ಮೊದಲ ಕ್ವಾಲಿಫೈಯರ್‌ನ ವೈಫಲ್ಯವನ್ನು ಎರಡನೇ ಕ್ವಾಲಿಫೈಯರ್‌ನಲ್ಲಿ ಯಶಸ್ಸಾಗಿ ಪರಿವರ್ತಿಸಿದರು. ಜೊತೆಗೆ ಗುಜರಾತ್ ವಿರುದ್ಧ ತಂಡದ ಸೋಲಿಗೆ ಕಾರಣರಾಗಿದ್ದ ಪ್ರಸಿದ್ಧ್ ಈ ಪಂದ್ಯದಲ್ಲಿ ಹೀರೋ ಆಗಿ ಮಿಂಚಿದರು.

ಪ್ರಸಿದ್ಧ್ ಕೃಷ್ಣ, ಭಾರತೀಯ ಕ್ರಿಕೆಟ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ಹೆಸರು. ಇತ್ತೀಚಿನ ದಿನಗಳಲ್ಲಿ ಅವರು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಇದರಿಂದಾಗಿ ಅವರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿದ್ದು, ಪ್ರಸಿದ್ಧ್ ಅಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಈ ಸಾಮರ್ಥ್ಯದಿಂದಾಗಿ, ಐಪಿಎಲ್ 2022 ರ ಮೊದಲು ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ 10 ಕೋಟಿಗೂ ಹೆಚ್ಚು ಬೆಲೆಗೆ ಪ್ರಸಿದ್ಧರನ್ನು ಖರೀದಿಸಿತು. ಆದಾಗ್ಯೂ, ಈ ಸೀಸನ್​ನಲ್ಲಿ ಪ್ರಸಿದ್ಧ್ ಪ್ರದರ್ಶನ ಏರಿಳಿತಗಳಿಂದ ಕೂಡಿದೆ. ಕೆಲವು ಪಂದ್ಯಗಳಲ್ಲಿ ಪ್ರಸಿದ್ಧ್ ಉತ್ತಮ ಫಾರ್ಮ್​ನಲ್ಲಿ ಕಾಣಿಸಿಕೊಂಡರೆ, ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದರು.

ಇದನ್ನೂ ಓದಿ:IPL 2022 Closing Ceremony: ಐಪಿಎಲ್ ಸಮಾರೋಪ ಸಮಾರಂಭದಲ್ಲಿ ದೇಸಿ ನೃತ್ಯ

ಇದನ್ನೂ ಓದಿ
Image
IPL 2022 Qualifier 2: RR vs RCB: ಇಂದು ಕಣಕ್ಕಿಳಿಯುವ ಕಲಿಗಳು ಇವರೇ..!
Image
RR vs RCB IPL 2022 Qualifier 2 Highlights: ಬಟ್ಲರ್ ಶತಕ, ಫೈನಲ್​ಗೆ ರಾಜಸ್ಥಾನ; ಆರ್​ಸಿಬಿ ಅಭಿಮಾನಿಗಳಿಗೆ ಮತ್ತೆ ನಿರಾಸೆ
Image
IPL 2022: 3 ಬಾರಿ ಫೈನಲ್​ಗೇರಿದರೂ ಆರ್​ಸಿಬಿಗೆ ಕಪ್​ ಗೆಲ್ಲಲಾಗಲಿಲ್ಲ! ಆ 3 ಫೈನಲ್​ಗಳ ರೋಚಕ ಇತಿಹಾಸ ಇಲ್ಲಿದೆ

3 ದಿನಗಳ ಹಿಂದೆ ಪ್ಲಾಪ್ ಸ್ಟಾರ್ ಕೇವಲ 3 ದಿನಗಳ ಹಿಂದೆ 3 ಎಸೆತಗಳಲ್ಲಿ ತಂಡದ ಸೋಲಿಗೆ ಕಾರಣರಾಗಿದ್ದ ಪ್ರಸಿದ್ದ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಮೇ 24 ರ ಸಂಜೆ ಕೊನೆಯ ಓವರ್​ನಲ್ಲಿ ಪ್ರಸಿದ್ಧ್ ರಾಜಸ್ಥಾನ್ ತಂಡಕ್ಕೆ ವಿಲನ್ ಆಗಿದ್ದರು. ಕ್ವಾಲಿಫೈಯರ್ 1 ರಲ್ಲಿ ಅವರು ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ 16 ರನ್‌ಗಳನ್ನು ಉಳಿಸಬೇಕಾಗಿತ್ತು, ಆದರೆ ಅವರು ಓವರ್‌ನ ಮೊದಲ 3 ಎಸೆತಗಳಲ್ಲಿ 3 ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದರು. ಇದರಿಂದ ರಾಜಸ್ಥಾನ ನೇರವಾಗಿ ಫೈನಲ್‌ಗೆ ತಲುಪುವ ಅವಕಾಶವನ್ನು ಕಳೆದುಕೊಂಡಿತ್ತು. ರಾಜಸ್ಥಾನಕ್ಕೆ ಮತ್ತೊಮ್ಮೆ ಅವಕಾಶ ಸಿಕ್ಕಿತು, ಹಾಗೆಯೇ ಪ್ರಸಿದ್ಧ್​ಗೆ ಮತ್ತೊಂದು ಅವಕಾಶ ಸಿಕ್ಕಿತು. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ನಿಂತಿದ್ದು ಕೇವಲ 5 ಎಸೆತಗಳ ಅಂತರದಲ್ಲಿ ಪ್ರಸಿದ್ಧ್ ತನ್ನ ಪ್ರಾಬಲ್ಯ ಮೆರೆದರು.

ಆರ್​ಸಿಬಿಗೆ ಕಂಟಕವಾದ ಪ್ರಸಿದ್ಧ್

ಪ್ರಸಿದ್ಧ್ ಎರಡನೇ ಓವರ್‌ನ ಐದನೇ ಎಸೆತದಲ್ಲಿ ವಿರಾಟ್ ಕೊಹ್ಲಿಯನ್ನು ತಮ್ಮ ವೇಗ ಮತ್ತು ಬೌನ್ಸ್‌ನಿಂದ ಔಟ್ ಮಾಡುವ ಮೂಲಕ ಪೆವಿಲಿಯನ್‌ಗೆ ಮರಳಿಸಿದರು. ಜೊತೆಗೆ ತಮ್ಮ ತಂಡಕ್ಕೆ ಗೆಲುವಿನ ಉತ್ಸಾಹ ಹೆಚ್ಚಿಸಿದರು. ಪ್ರಸಿದ್ಧ್ ಇಲ್ಲಿಗೆ ನಿಲ್ಲಲಿಲ್ಲ, ನಂತರ ಬೆಂಗಳೂರಿನ ಫೈನರ್ ದಿನೇಶ್ ಕಾರ್ತಿಕ್ ಅವರನ್ನು ಬಲಿ ಪಡೆದರು. ಇವರ ಜೊತೆಗೆ ಕೊನೆಯ ಓವರ್‌ನಲ್ಲಿ ಆಘಾತ ನೀಡಿದ್ದಲ್ಲದೆ, ಮುಂದಿನ ಬಾಲ್‌ನಲ್ಲಿ ಮಾರಕ ಯಾರ್ಕರ್‌ನೊಂದಿಗೆ ವನಿಂದು ಹಸರಂಗ ಅವರನ್ನು ಬೌಲ್ಡ್ ಮಾಡಿದರು. ಈ ಮೂಲಕ ಪ್ರಸಿದ್ಧ್ ತಮ್ಮ 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 3 ದೊಡ್ಡ ವಿಕೆಟ್ ಪಡೆದರು. ಇದರೊಂದಿಗೆ ರಾಜಸ್ಥಾನದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.