Faf du Plessis: ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ರು ಗೊತ್ತೇ?

RCB vs RR, Qualifier 2: ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕೂಡ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಕ್ವಾಲಿಫೈಯರ್-2ಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (Faf du Plessis) ಏನು ಹೇಳಿದ್ರು ಕೇಳಿ.

Faf du Plessis: ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ರು ಗೊತ್ತೇ?
Faf Du Plessis RR vs RCB IPL 2022
Follow us
TV9 Web
| Updated By: Vinay Bhat

Updated on:May 28, 2022 | 9:45 AM

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಹೊಸ ತಂಡ, ಹೊಸ ನಾಯಕನೊಂದಿಗೆ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕೂಡ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಕ್ವಾಲಿಫೈಯರ್-2ಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ಗಳಿಂದ ರಾಜಸ್ಥಾನ ರಾಯಲ್ಸ್‌ಗೆ ಶರಣಾಯಿತು. 6 ವರ್ಷಗಳ ಬಳಿಕ ಫೈನಲ್‌ಗೇರುವ ಕನಸಿನಲ್ಲಿದ್ದ ಆರ್‌ಸಿಬಿ ಆಘಾತ ಕಂಡರೆ, ರಾಯಲ್ಸ್ 14 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ರಜತ್ ಪಟಿದಾರ್ ಅರ್ಧಶತಕದಾಟದ ನಡುವೆಯೂ ಸ್ಲಾಗ್ ಓವರ್‌ಗಳಲ್ಲಿ ದಿಢೀರ್ ಕುಸಿತ ಕಂಡ ಪರಿಣಾಮ 8 ವಿಕೆಟ್‌ಗೆ 157 ರನ್ ಗಳಿಸಿತಷ್ಟೆ. ಪ್ರತಿಯಾಗಿ ರಾಯಲ್ಸ್ ತಂಡ ಜೋಸ್ ಬಟ್ಲರ್ ಶತಕದ ನೆರವಿನಿಂದ 18.1 ಓವರ್‌ಗಳಲ್ಲೇ ಜಯ ಸಾಧಿಸಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (Faf du Plessis) ಏನು ಹೇಳಿದ್ರು ಕೇಳಿ.

“ಈ ಪಿಚ್‌ ತುಂಬಾನೆ ವಿಶೇಷವಾಗಿತ್ತು. ಇಲ್ಲಿ ಹೊಸ ಚೆಂಡನ್ನು ಎದುರಿಸುವುದು ತುಂಬಾನೆ ಕಷ್ಟ. ಮೊದಲು 3-4 ಓವರ್ ನಮಗೆ ಸವಾಲಾಗಿತ್ತು. ಆದರೆ, ಹೆಚ್ಚಿನ ಹಾನಿಯಿಲ್ಲದೆ ನಾವು ಮೊದಲ ಆರು ಓವರ್‌ಗಳನ್ನು ದಾಟಿದ್ದೆವು. ಇದೊಂದು ರೀತಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಸೆಶನ್‌ನಂತೆ ಭಾಸವಾಗಿತ್ತು. ಬೌನ್ಸ್ ಹೆಚ್ಚಾಗಿತ್ತು. 180 ರನ್‌ಗಳನ್ನು ನಾವು ಗಳಿಸಿದರೆ ಎದುರಾಳಿಗೆ ಸವಾಲೊಡ್ಡಬಹುದು ಎಂಬ ಯೋಜನೆ ನಮ್ಮದಾಗಿತ್ತು. ಆದರೆ, ನಾವು ಅಂದುಕೊಂಡಂತೆ ಆಗಲಿಲ್ಲ”.

“ಹಾಗಿದ್ದರೂ ನಾನು ನಮ್ಮ ತಂಡದ ಪ್ರದರ್ಶನಕ್ಕೆ ಹೆಮ್ಮೆ ಪಡುತ್ತಿದ್ದೇನೆ. ಆರ್‌ಸಿಬಿ ತಂಡಕ್ಕೆ ಇದೊಂದು ಶ್ರೇಷ್ಠವಾದ ಆವೃತ್ತಿಯಾಗಿತ್ತು. ಆರ್‌ಸಿಬಿಯಲ್ಲಿ ಇದು ನನ್ನ ಮೊದಲ ಆವೃತ್ತಿ. ಇಲ್ಲಿ ನಮಗಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರು ಸೇರಿರುವುದು ನೋಡಲು ನಿಜಕ್ಕೂ ಹರ್ಷವಾಗುತ್ತಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
RR vs RCB Qualifier 2, IPL 2022: ಐದು ಓವರ್‌, ಕೇವಲ 34 ರನ್, ಐದು ವಿಕೆಟ್! ಆರ್​ಸಿಬಿ ಸೋಲಿಗೆ ಕಾರಣವಿದು
Image
RR vs RCB Qualifier 2: ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣವಾಗಿದ್ದು ಈ ಒಬ್ಬ ಬೌಲರ್
Image
RR vs RCB Qualifier 2, IPL 2022: ಆರ್​ಸಿಬಿ ವಿರುದ್ಧ ಅಬ್ಬರದ ಶತಕ ಸಿಡಿಸಿ ಕೊಹ್ಲಿ ದಾಖಲೆ ಸರಿಗಟ್ಟಿದ ಬಟ್ಲರ್!
Image
RR vs RCB IPL 2022 Qualifier 2 Highlights: ಬಟ್ಲರ್ ಶತಕ, ಫೈನಲ್​ಗೆ ರಾಜಸ್ಥಾನ; ಆರ್​ಸಿಬಿ ಅಭಿಮಾನಿಗಳಿಗೆ ಮತ್ತೆ ನಿರಾಸೆ

ಇದೇವೇಳೆ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ದಿನೇಶ್ ಕಾರ್ತಿಕ್ ಹಾಗೂ ವೇಗಿ ಹರ್ಷಲ್ ಪಟೇಲ್ ಬಗ್ಗೆಯೂ ಫಾಫ್ ವಿಶೇಷ ಮಾತುಗಳನ್ನಾಡಿದ್ದಾರೆ. “ಹರ್ಷಲ್, ಡಿಕೆ ಭಾರತ ತಂಡಕ್ಕೆ ಅರ್ಹವಾಗಿ ಆಯ್ಕೆಯಾಗಿದ್ದೀರಿ. ಇಂದಿನ ಪಂದ್ಯದಲ್ಲಿ ನಮ್ಮ ತಂಡ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ವಿರುದ್ಧ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಲು ವಿಫಲವಾದರು ಕೂಡ ನಾನು ಹೆಮ್ಮೆ ಪಡುತ್ತಿದ್ದೇನೆ.”

IPL 2022 Final: 14 ವರ್ಷಗಳ ನಂತರ ರಾಜಸ್ಥಾನ ಫೈನಲ್‌ಗೆ! ಟೇಬಲ್ ಟಾಪರ್ ಗುಜರಾತ್ ಮುಂದಿನ ಎದುರಾಳಿ

“ನಮ್ಮ ತಂಡದಲ್ಲಿ ಕೆಲ ಅದ್ಭುತ ಯುವ ಆಟಗಾರರು ಇದ್ದಾರೆ. ಮೂರು ವರ್ಷದ ಯೋಜನೆ ನಮ್ಮ ಮುಂದಿದೆ. ಹಾಗಾಗಿ ಈ ಅವಕಾಶವನ್ನು ಮತ್ತಷ್ಟು ಉತ್ತಮವಾಗಿ ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ. ರಜತ್ ಎಷ್ಟು ಅದ್ಭುತವಾದ ಆಟವನ್ನು ಪ್ರದರ್ಶಿಸಿದರು ಎಂಬುದನ್ನು ನೀವು ನೋಡಿದ್ದೀರಿ. ನಮ್ಮ ಅಭಿಮಾನಿಗಳನ್ನು ಮರೆಯುವಂತಿಲ್ಲ. ಎಲ್ಲೇ ಹೋದರೂ ಆರ್‌ಸಿಬಿ-ಆರ್‌ಸಿಬಿ ಎಂಬ ಘೋಷಣೆಗಳು ಕೇಳಿಸುತ್ತದೆ. ಈ ಘೋಷಣೆಗಳು ನಮ್ಮ ತಂಡದ ಆಟಗಾರರ ಕಿವಿಗೆ ಬೀಳುತ್ತಿದ್ದಂತೆಯೇ ಭಾವುಕರಾಗುತ್ತಾರೆ. ಮುಂಬೈ-ಡೆಲ್ಲಿ ಪಂದ್ಯದಲ್ಲಿಯೂ ಈ ಬೆಂಬಲ ದೊರೆಯಿತು. ನಮ್ಮ ತಂಡದ ಅಭಿಮಾನಿಗಳಿಗೆ ತುಂದು ಹೈದಯದ ಧನ್ಯವಾದ,” ಎಂಬುದು ಡುಪ್ಲೆಸಿಸ್ ಮಾತಾಗಿತ್ತು.

ಕ್ವಾಲಿಫೈಯರ್‌-2 ಪಂದ್ಯದಲ್ಲಿ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಮೇ 29ರಂದು ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಎದುರು ಪೈಪೋಟಿ ನಡೆಸಲಿದೆ. 2008ರಲ್ಲಿ ಶೇನ್‌ ವಾರ್ನ್‌ ಸಾರಥ್ಯದಲ್ಲಿ ಆರ್​ಆರ್​​ ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿತ್ತು. ಜಿಟಿ ಗೆದ್ದರೆ ಚೊಚ್ಚಲ ಸೀಸನ್​ನಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಲಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:45 am, Sat, 28 May 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್