IPL 2022 Final: 10, 20, 50 ಸಾವಿರವೂ ಅಲ್ಲ; ಅಬ್ಬಬ್ಬಾ.. ಐಪಿಎಲ್ ಫೈನಲ್ ಪಂದ್ಯಕ್ಕೆ ಟಿಕೆಟ್ ಬೆಲೆ ಇಷ್ಟೊಂದಾ..!

IPL 2022 Final: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅತ್ಯಂತ ದುಬಾರಿ ಟಿಕೆಟ್ 65,000 ರೂ. ಈ ದುಬಾರಿ ಟಿಕೆಟ್‌ಗಳನ್ನು ಖರೀದಿಸಿದವರು ಕ್ವಾಲಿಫೈಯರ್-2 ಮತ್ತು ಐಪಿಎಲ್ ಫೈನಲ್ ಪಂದ್ಯವನ್ನು ನೋಡಬಹುದಾಗಿದೆ.

IPL 2022 Final: 10, 20, 50 ಸಾವಿರವೂ ಅಲ್ಲ; ಅಬ್ಬಬ್ಬಾ.. ಐಪಿಎಲ್ ಫೈನಲ್ ಪಂದ್ಯಕ್ಕೆ ಟಿಕೆಟ್ ಬೆಲೆ ಇಷ್ಟೊಂದಾ..!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on:May 28, 2022 | 7:37 PM

ಐಪಿಎಲ್ (IPL 2022) 15 ನೇ ಸೀಸನ್​ನ ಅಂತಿಮ ಪಂದ್ಯವು ಗುಜರಾತ್‌ ಅಹಮದಾಬಾದ್‌ನ ಭವ್ಯವಾದ ನರೇಂದ್ರ ಮೋದಿ ಕ್ರೀಡಾಂಗಣ (Narendra Modi Stadium in Ahmedabad)ದಲ್ಲಿ ನಡೆಯಲಿದೆ. ಈ ಮೆಗಾ ಫೈನಲ್ ಪಂದ್ಯದ ಆನ್‌ಲೈನ್ ಟಿಕೆಟ್‌ಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾಗಿ ದಾಖಲೆ ಸೃಷ್ಟಿಯಾಗಿದೆ. ಟಿಕೆಟ್ ಸಿಗದವರು ಫೈನಲ್ ಪಂದ್ಯ ವೀಕ್ಷಿಸಲು ಒಂಬತ್ತು ಪಟ್ಟು ದುಬಾರಿ ಹಣ ನೀಡಿ ಟಿಕೆಟ್ ಖರೀದಿಸಲು ಸಿದ್ಧರಾಗಿದ್ದಾರೆ. ಕೆಲವು ಕ್ರಿಕೆಟ್ ಅಭಿಮಾನಿಗಳು 800 ರೂಪಾಯಿ ಟಿಕೆಟ್‌ಗೆ 8,000 ರೂಪಾಯಿ ಮತ್ತು 1,500 ರೂಪಾಯಿ ಟಿಕೆಟ್‌ಗೆ 15,000 ರೂಪಾಯಿ ನೀಡಲು ಮುಂದಾಗಿದ್ದಾರೆ. ವಿಶೇಷವೆಂದರೆ ಎಲ್ಲಾ ಐಷಾರಾಮಿ ಸೌಲಭ್ಯಗಳು ದೊರೆಯುವ ಅತ್ಯಂತ ದುಬಾರಿ ಬೆಲೆಯಾದ 65,000 ರೂಪಾಯಿ ಮೌಲ್ಯದ ಟಿಕೆಟ್‌ ಕೂಡ ಬಿಡುಗಡೆ ಮಾಡಲಾಗಿದ್ದ,. ಅತ್ಯಂತ ದುಬಾರಿ ಬೆಲೆಯ ಟಿಕೆಟ್‌ಗಳು ಕೂಡ ಕೆಲವೇ ಗಂಟೆಗಳಲ್ಲಿ ಮಾರಾಟವಾಗಿವೆ.

ಐಪಿಎಲ್‌ ಟಿಕೆಟ್‌ಗಳ ಮಾರಾಟದಲ್ಲಿ ಕಾಳಾದಂದೆ

ಈ ವರ್ಷದ 15ನೇ ಟಾಟಾ ಐಪಿಎಲ್‌ನ ಫೈನಲ್ ಪಂದ್ಯವನ್ನು ಲೈವ್ ಸ್ಟೇಡಿಯಂನಲ್ಲಿ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಆದ್ಯತೆ ನೀಡುತ್ತಿದ್ದಾರೆ. ಐಪಿಎಲ್ ಫೈನಲ್‌ನ ಅಗ್ಗದ ಟಿಕೆಟ್‌ನ ಬೆಲೆ 800 ರೂ ಆಗಿದ್ದರೆ, ಅತ್ಯಂತ ದುಬಾರಿ ಟಿಕೆಟ್ ಬೆಲೆ 65,000 ರೂ. ಆಗಿದೆ. ನರೇಂದ್ರ ಮೋದಿ ಕ್ರೀಡಾಂಗಣದ ಪ್ರೇಕ್ಷಕರ ಸಾಮರ್ಥ್ಯ 1 ಲಕ್ಷ 32 ಸಾವಿರ. ಈ ವರ್ಷದ ಐಪಿಎಲ್ ಪಂದ್ಯ ಭಾನುವಾರ ನಡೆಯಲಿರುವುದರಿಂದ ಕ್ರೀಡಾಂಗಣ ಕಿಕ್ಕಿರಿದು ತುಂಬುವ ಸಾಧ್ಯತೆ ಇದೆ. ಐಪಿಎಲ್ ಅಭಿಮಾನಿಗಳು ಈಗಾಗಲೇ ಬ್ಯಾಂಡ್‌ವ್ಯಾಗನ್‌ಗೆ ಹಾರಿ ಎಲ್ಲಾ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಹೀಗಾಗಿ ಈ ವರ್ಷ ಅಹಮದಾಬಾದ್​ನಲ್ಲಿ ಭಾನುವಾರ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದ ಟಿಕೆಟ್​ಗಾಗಿ ಕಾಳಸಂತೆ ವಹಿವಾಟು ದೊಡ್ಡ ಪ್ರಮಾಣದಲ್ಲಿ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ
Image
GT vs RR Prediction Playing XI IPL 2022 Final: ಫೈನಲ್ ಕದನಕ್ಕೆ ಉಭಯ ತಂಡಗಳ ಸಂಭಾವ್ಯ ಇಲೆವೆನ್
Image
IPL 2022: ಆರ್​ಸಿಬಿ ಜರ್ಸಿ ಕಳಚಿ ಬೌಲ್ಟ್ ನೀಡಿದ ರಾಜಸ್ಥಾನ ಜರ್ಸಿ ತೊಟ್ಟ ಆರ್​ಸಿಬಿ ಅಭಿಮಾನಿ! ವಿಡಿಯೋ ವೈರಲ್
Image
GT vs RR IPL 2022 Final Live Streaming: ಗುಜರಾತ್- ರಾಜಸ್ಥಾನ ಫೈನಲ್ ವಾರ್! ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ:IPL 2022: ನಾಯಕ ಬದಲಾದರೂ ಹಣೆಬರಹ ಬದಲಾಗಲಿಲ್ಲ! ಬೇಡದ ದಾಖಲೆಯೊಂದಿಗೆ ಚೆನ್ನೈ ಹಿಂದಿಕ್ಕಿದ ಆರ್​ಸಿಬಿ

65 ಸಾವಿರ ರಾಯಲ್ ಟಿಕೆಟ್

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅತ್ಯಂತ ದುಬಾರಿ ಟಿಕೆಟ್ 65,000 ರೂ. ಈ ದುಬಾರಿ ಟಿಕೆಟ್‌ಗಳನ್ನು ಖರೀದಿಸಿದವರು ಕ್ವಾಲಿಫೈಯರ್-2 ಮತ್ತು ಐಪಿಎಲ್ ಫೈನಲ್ ಪಂದ್ಯವನ್ನು ನೋಡಬಹುದಾಗಿದೆ. ಟಿಕೆಟ್ ಹೊಂದಿರುವವರಿಗೆ ಪ್ರತ್ಯೇಕ ಕ್ಯಾಬಿನ್‌, ಊಟ, ಟಿವಿ ಸೆಟ್‌ ಮತ್ತು ಆರಾಮದಾಯಕ ಸೋಫಾ ಒದಗಿಸಲಾಗುತ್ತದೆ. ವಿಶೇಷವೆಂದರೆ ಈ ದುಬಾರಿ ಟಿಕೆಟ್​ಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾಗುತ್ತಿರುವುದು ಅಚ್ಚರಿ ಮೂಡಿಸಿದೆ.

ಅಹಮದಾಬಾದ್‌ನ ಹೋಟೆಲ್‌ಗಳೂ ಭರ್ತಿಯಾಗಿವೆ

ಇದೀಗ ಐಪಿಎಲ್ ಫೈನಲ್ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಮೊದಲು ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಜೊತೆಗೆ ಅಹಮದಾಬಾದ್‌ನ ಎಲ್ಲಾ ದೊಡ್ಡ ಮತ್ತು ಸಣ್ಣ ವಸತಿ ಹೋಟೆಲ್‌ಗಳ ಬುಕ್ಕಿಂಗ್‌ಗಳು ಈಗ ಭರ್ತಿಯಾಗಿವೆ. ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವುದರಿಂದ ದೇಶದ ಇತರೆ ಮಹಾನಗರಗಳ ವಿಮಾನ ಟಿಕೆಟ್ ದರವೂ ದುಬಾರಿಯಾಗಿದೆ. ದಿನಕ್ಕೆ 7,000 ರೂ. ತೆಗೆದುಕೊಳ್ಳುತ್ತಿದ ರೂಂ ಬಾಡಿಗೆಯನ್ನು ಈಗ 15,000 ರೂ.ಗೆ ಏರಿಕೆ ಮಾಡಲಾಗಿದೆ.

Published On - 7:37 pm, Sat, 28 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್