AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GT vs RR, IPL 2022 Final: ಫೈನಲ್​ನಲ್ಲಿ ಗೆದ್ದ ತಕ್ಷಣ ಗುಜರಾತ್ ಟೈಟಾನ್ಸ್ ಆಟಗಾರರು ಮಾಡಿದ್ದೇನು ನೋಡಿ

Gujarat Titans, IPL Final: ರಾಜಸ್ಥಾನ್ ರಾಯಲ್ಸ್ ವಿರುದ್ಧ ಬ್ಯಾಟಿಂಗ್–ಬೌಲಿಂಗ್​ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಜಿಟಿ 7 ವಿಕೆಟ್​ಗಳ ಜಯ ತನ್ನದಾಗಿಸಿತು. ಹಾರ್ದಿಕ್ ಪಾಂಡ್ಯ ಅವರ ನಾಯಕನ ಆಟ ತಂಡಕ್ಕೆ ನೆರವಾದರೆ ಇತ್ತ ಸಂಜು ಸ್ಯಾಮ್ಸನ್ ತಾವು ಮಾಡಿದ ಕೆಲ ಎಡವಟ್ಟಿನಿಂದ ರಾಜಸ್ಥಾನ್ ಎರಡನೇ ಬಾರಿ ಕಪ್ ಎತ್ತಿ ಹಿಡಿಯುವ ಅವಕಾಶವನ್ನು ಕಳೆದುಕೊಂಡಿತು.

GT vs RR, IPL 2022 Final: ಫೈನಲ್​ನಲ್ಲಿ ಗೆದ್ದ ತಕ್ಷಣ ಗುಜರಾತ್ ಟೈಟಾನ್ಸ್ ಆಟಗಾರರು ಮಾಡಿದ್ದೇನು ನೋಡಿ
GT vs RR IPL 2022 Final
TV9 Web
| Edited By: |

Updated on:May 30, 2022 | 8:09 AM

Share

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗೆ ಅದ್ಧೂರಿ ತೆರೆ ಬಿದ್ದಿದೆ. ಚೊಚ್ಚಲ ಆವೃತ್ತಿಯಲ್ಲೇ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ (Gujarat Titans) ತಂಡ ಪ್ರಶಸ್ತಿ ಗೆಲ್ಲುವ ಮೂಲಕ ವಿಶೇಷ ಸಾಧನೆಯನ್ನೂ ಮಾಡಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಜಿಟಿ 7 ವಿಕೆಟ್​ಗಳ ಜಯ ತನ್ನದಾಗಿಸಿತು. ಹಾರ್ದಿಕ್ ಪಾಂಡ್ಯ (Hardik Pandya) ಅವರ ನಾಯಕನ ಆಟ ತಂಡಕ್ಕೆ ನೆರವಾದರೆ ಇತ್ತ ಸಂಜು ಸ್ಯಾಮ್ಸನ್ ತಾವು ಮಾಡಿದ ಕೆಲ ಎಡವಟ್ಟಿನಿಂದ ರಾಜಸ್ಥಾನ್ ಎರಡನೇ ಬಾರಿ ಕಪ್ ಎತ್ತಿ ಹಿಡಿಯುವ ಅವಕಾಶವನ್ನು ಕಳೆದುಕೊಂಡಿತು. ಶುಭ್ಮನ್ ಗಿಲ್ (Shubhman Gill) ವಿನ್ನಿಂಗ್ ಶಾಟ್ ಹೊಡೆಯುತ್ತಿದ್ದಂತೆ ಗುಜರಾತ್ ತಂಡದ ಆಟಗಾರರ ಖುಷಿಗೆ ಪಾರವೇ ಇರಲಿಲ್ಲ. ಮಿಲ್ಲರ್ ಹಾಗೂ ಗಿಲ್ ಮೈದಾನದಲ್ಲೇ ತಬ್ಬಿಕೊಂಡು ಸಂಭ್ರಮಿಸಿದರೆ ಡಗೌಟ್​ನಲ್ಲಿ ಜಿಟಿ ಪ್ಲೇಯರ್ಸ್​ ಖುಷಿಯಲ್ಲಿ ಕುಣಿದು ಕುಪ್ಪಳಿಸಿದರು. ಇದರ ವಿಡಿಯೋವನ್ನು ಐಪಿಎಲ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಕಾದಾಟ ಅಂದುಕೊಂಡಷ್ಟರ ಮಟ್ಟಿಗೆ ರೋಚಕತೆ ಪಡೆಯಲಿಲ್ಲ. ಟೈಟಾನ್ಸ್ ತಂಡದ ಟೈಟ್ ಬೌಲಿಂಗ್​ಗೆ ರಾಜಸ್ಥಾನ್ ಸುಸ್ತಾಯಿತು. ಅಚ್ಚರಿ ಎಂಬಂತೆ ಪ್ರಮುಖ ಪಂದ್ಯದಲ್ಲೇ ಆರ್​ ಆರ್ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಜಿಟಿ ಚೇಸಿಂಗ್​ನಲ್ಲಿ ಕಿಂಗ್ ಎದ್ದು ಗೊತ್ತಿದ್ದರೂ ಸಂಜು ತೆಗೆದುಕೊಂಡ ಈ ನಿರ್ಧಾರ ಅಚ್ಚರಿಗೆ ಕಾರಣವಾಯಿತು. ಬ್ಯಾಟಿಂಗ್​ಗೆ ಇಳಿದ ರಾಜಸ್ಥಾನಕ್ಕೆ ಉತ್ತಮ ಆರಂಭ ಕೂಡ ಸಿಗಲಿಲ್ಲ. ನಿಧಾನ ಗತಿಯಲ್ಲಿ ಬ್ಯಾಟ್ ಮಾಡುವ ಜೊತೆಗೆ 100 ರನ್​ಗೂ ಮೊದಲೇ 6 ವಿಕೆಟ್ ಕಳೆದುಕೊಂಡಿತು.

ಇದನ್ನೂ ಓದಿ
Image
IPL 2022: ಐಪಿಎಲ್​ ಫೈನಲ್​ ವೇದಿಕೆಯಲ್ಲೂ ‘ಕೆಜಿಎಫ್’ ಹವಾ; ರಾಕಿ ಭಾಯ್ ಅವತಾರ ತಾಳಿದ ರಣವೀರ್ ಸಿಂಗ್- ವಿಡಿಯೋ ಇಲ್ಲಿದೆ
Image
IPL 2022 Final GT vs RR: ಫೈನಲ್ ಪ್ಲೇಯಿಂಗ್ ಇಲೆವೆನ್
Image
IND vs SL: ಸಂಕಷ್ಟದಲ್ಲಿರುವ ಲಂಕಾ ನೆರವಿಗೆ ದಾವಿಸಿದ ಟೀಂ ಇಂಡಿಯಾ; ಟಿ20 ಸರಣಿ ಆಯೋಜನೆಗೆ ಸಿದ್ಧತೆ
Image
IPL 2022 Final: ಐಪಿಎಲ್​ ಫೈನಲ್​ಗೆ ಸಜ್ಜಾಗಿರುವ ನರೇಂದ್ರ ಮೋದಿ ಸ್ಟೇಡಿಯಂನ ವಿಶೇಷತೆಗಳೇನು?

ಆರ್​ಆರ್​ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ 22 ರನ್ ಹಾಗೂ ಜೋಸ್‌ ಬಟ್ಲರ್‌ 39 ರನ್‌ಗಳಿಸಿ ಡಕ್ಕೆ ಆಸರೆಯಾದರು. ಆದರೆ ನಂತರ ಬಂದ ನಾಯಕ ಸಂಜು ಸ್ಯಾಮ್ಸನ್‌(14), ಪಡಿಕ್ಕಲ್‌(2), ಹೆಟ್ಮಾಯೆರ್‌(11), ಅಶ್ವಿನ್‌(6), ಪರಾಗ್‌(15), ಬೋಲ್ಟ್‌(11), ಮೆಕಾಯ್‌(8) ಜವಾಬ್ದಾರಿಯುತ ಆಟವಾಡುವಲ್ಲಿ ವಿಫಲರಾದರು. ಪರಿಣಾಮ ರಾಜಸ್ಥಾನ್‌ ರಾಯಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 130 ರನ್‌ಗಳಿಸಿತು. ಗುಜರಾತ್‌ ಪರ ಅದ್ಭುತ ಬೌಲಿಂಗ್‌ ದಾಳಿ ನಡೆಸಿದ ಹಾರ್ದಿಕ್‌ ಪಾಂಡ್ಯ(3/17), ಸಾಯಿ ಕಿಶೋರ್‌ (2/20) ರಾಜಸ್ಥಾನ್‌ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಶಮಿ, ಯಶ್‌ ದಯಾಳ್‌ ಹಾಗೂ ರಶೀದ್‌ ತಲಾ 1 ವಿಕೆಟ್‌ ಪಡೆದರು.

IPL 2022 Closing Ceremony: ವಿಶ್ವ ದಾಖಲೆ ನಿರ್ಮಿಸಿದ ಬಿಸಿಸಿಐ

131 ರನ್ ಸಾಧಾರಣ ಗೆಲುವಿನ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡ ಕೂಡ 23 ರನ್ ಗಳಿಸುವಷ್ಟರಲ್ಲಿ ವೃದ್ದಿಮಾನ್ ಸಹಾ ಹಾಗೂ ಮ್ಯಾಥ್ಯೂ ವೇಡ್ ಅವರ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಆತಂಕಕ್ಕೆ ಸಿಲುಕಿತ್ತು.ಈ ಹಂತದಲ್ಲಿ ಜೊತೆಯಾದ ಶುಭ್ಮನ್ ಗಿಲ್ ಅಜೇಯ 45, ಹಾರ್ದಿಕ್ ಪಾಂಡ್ಯ 34 ಹಾಗೂ ಡೇವಿಡ್ ಮಿಲ್ಲರ್ ಅಜೇಯ 32 ರನ್ ಗಳಿಸುವುದರ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಗೆಲುವಿನ ನಗೆಯನ್ನು ಬೀರುವಂತೆ ಮಾಡಿದರು. ಕೊನೆಗೆ ಗುಜರಾತ್ ತಂಡವು 18.1 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 133 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

ಲೀಗ್‌ ಹಂತದಲ್ಲೇ ಅಂಕಪಟ್ಟಿಯ ಅಗ್ರಸ್ಥಾನ ಅಲಂಕರಿಸಿ ಈ ಬಾರಿ ಟ್ರೋಫಿ ಗೆಲ್ಲುವ ಫೇವರಿಟ್‌ ತಂಡ ಎನಿಸಿಕೊಂಡಿದ್ದ ಗುಜರಾತ್‌ ಟೈಟನ್ಸ್‌ ತಂಡ ಅದಕ್ಕೆ ತಕ್ಕ ಆಟವಾಡುವ ಮೂಲಕ ಪ್ಲೇ-ಆಫ್ಸ್‌ ಪಂದ್ಯಗಳಲ್ಲಿ ಅಧಿಕಾರಯುತ ಪದರ್ಶನ ನಿಡಿ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚಾಂಪಿಯನ್ಸ್‌ ಪಟ್ಟ ಪಡೆದಿದೆ. ಗೆದ್ದ ತಂಡ 20 ಕೋಟಿ ರೂ. ಬಹುಮಾನ ಪಡೆದುಕೊಂಡರೆ ರನ್ನರ್ ಅಪ್ ಆದ ರಾಜಸ್ಥಾನ್ ತಂಡಕ್ಕೆ 13 ಕೋಟಿ ರೂ. ನೀಡಲಾಯಿತು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:09 am, Mon, 30 May 22

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್