Hardik Pandya: ಗುಜರಾತ್ ಗೆದ್ದ ತಕ್ಷಣ ಹಾರ್ದಿಕ್ ಪಾಂಡ್ಯ ಬಳಿ ಅಳುತ್ತಾ ಓಡಿ ಬಂದ ನತಾಶ: ವಿಡಿಯೋ
GT vs RR, IPL Final: ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರೆ, ಹಾರ್ದಿಕ್ ಪಾಂಡ್ಯ (Hardik Pandya) ಹೆಂಡತಿ ನತಾಶ ಸ್ಟ್ಯಾನ್‌ಕೊವಿಚ್ ಏನು ಮಾಡಿದರು ನೋಡಿ.
ಇಂಡಿಯನ್ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ (Rajastan Royals) ತಂಡಕ್ಕೆ ಸೋಲುಣ್ಣಿಸುವ ಮೂಲಕ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ (Gujarat Titans) ತಂಡ ಮೊದಲ ಸೀಸನ್ನಲ್ಲೇ ಕಪ್ ಗೆದ್ದಿದೆ. ಹಾರ್ದಿಕ್ ಪಾಂಡ್ಯ ನಾಯಕನ ಆಟ, ಶುಭ್ಮನ್ ಗಿಲ್ (45), ಡೇವಿಡ್ ಮಿಲ್ಲರ್ (32) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿತು. ಕ್ಯಾಪ್ಟನ್ ಪಾಂಡ್ಯ 4 ಓವರ್ ಬೌಲಿಂಗ್ ಮಾಡಿ ಕೇವಲ 17 ರನ್ ನೀಡಿ 3 ಪ್ರಮುಖ ವಿಕೆಟ್ ಕಿತ್ತರು. ಬ್ಯಾಟಿಂಗ್ನಲ್ಲಿ 30 ಎಸೆತಗಳಲ್ಲಿ 3 ಫೋರ್, 1 ಸಿಕ್ಸರ್ ನೆರವಿನಿಂದ 34 ರನ್ ಚಚ್ಚಿದರು. ಗುಜರಾತ್ ತಂಡ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರೆ, ಹಾರ್ದಿಕ್ ಪಾಂಡ್ಯ (Hardik Pandya) ಮಡದಿ ಏನು ಮಾಡಿದರು ನೋಡಿ.
ಜಿಟಿ ತಂಡ 7 ವಿಕೆಟ್ಗಳ ಗೆಲುವು ಕಾಣುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ಸಂತಸದಿಂದ ಮೈದಾನದಕ್ಕೆ ಕಾಲಿಟ್ಟರು. ಈ ಸಂದರ್ಭ ಅವರ ಪತ್ನಿ ನತಾಶ ಸ್ಟ್ಯಾನ್‌ಕೊವಿಚ್ ಕೂಡ ಪಾಂಡ್ಯ ಬಳಿ ಓಡಿ ಬಂದು ಅಪ್ಪಿಕೊಂಡರು. ಖುಷಿ ತಾಳಲಾರದೆ ಕಣ್ಣೀರು ಕೂಡ ಹಾಕಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾರ್ದಿಕ್ ಇದು ಐದನೇ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುತ್ತಿರುವುದು. ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾಗ 2015, 2017, 2019 ಹಾಗೂ 2020 ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಈಗ ಜಿಟಿ ತಂಡದ ನಾಯಕನಾಗಿ ನಾನೊಬ್ಬ ಉತ್ತಮ ಕ್ಯಾಪ್ಟನ್ ಎಂಬುದನ್ನೂ ಸಾಭೀತು ಪಡಿಸಿದ್ದಾರೆ.
— Ashok (@Ashok94540994) May 29, 2022
ಈ ಫೈನಲ್ ಪಂದ್ಯದಲ್ಲಿ ಆರ್ಆರ್ ಬಿರುಸಿನ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ನಂತರ ವಿಕೆಟ್ ಕಳೆದುಕೊಳ್ಳುವುದರ ಜೊತೆಗೆ ನಿಧಾನಗತಿಯ ಬ್ಯಾಟಿಂಗ್ ನಡೆಸಿತು. ಆರ್ಆರ್ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 22 ರನ್ ಹಾಗೂ ಜೋಸ್ ಬಟ್ಲರ್ 39 ರನ್‌ಗಳಿಸಿ ಡಕ್ಕೆ ಆಸರೆಯಾದರು. ಆದರೆ ನಂತರ ಬಂದ ನಾಯಕ ಸಂಜು ಸ್ಯಾಮ್ಸನ್(14), ಪಡಿಕ್ಕಲ್(2), ಹೆಟ್ಮಾಯೆರ್(11), ಅಶ್ವಿನ್(6), ಪರಾಗ್(15), ಬೋಲ್ಟ್(11), ಮೆಕಾಯ್(8) ಜವಾಬ್ದಾರಿಯುತ ಆಟವಾಡುವಲ್ಲಿ ವಿಫಲರಾದರು. ಪರಿಣಾಮ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 130 ರನ್‌ಗಳಿಸಿತು. ಗುಜರಾತ್ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಹಾರ್ದಿಕ್ ಪಾಂಡ್ಯ(3/17), ಸಾಯಿ ಕಿಶೋರ್ (2/20) ರಾಜಸ್ಥಾನ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಶಮಿ, ಯಶ್ ದಯಾಳ್ ಹಾಗೂ ರಶೀದ್ ತಲಾ 1 ವಿಕೆಟ್ ಪಡೆದರು.
131 ರನ್ ಸಾಧಾರಣ ಗೆಲುವಿನ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡ ಕೂಡ 23 ರನ್ ಗಳಿಸುವಷ್ಟರಲ್ಲಿ ವೃದ್ದಿಮಾನ್ ಸಹಾ ಹಾಗೂ ಮ್ಯಾಥ್ಯೂ ವೇಡ್ ಅವರ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಆತಂಕಕ್ಕೆ ಸಿಲುಕಿತ್ತು.ಈ ಹಂತದಲ್ಲಿ ಜೊತೆಯಾದ ಶುಭ್ಮನ್ ಗಿಲ್ ಅಜೇಯ 45, ಹಾರ್ದಿಕ್ ಪಾಂಡ್ಯ 34 ಹಾಗೂ ಡೇವಿಡ್ ಮಿಲ್ಲರ್ ಅಜೇಯ 32 ರನ್ ಗಳಿಸುವುದರ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಗೆಲುವಿನ ನಗೆಯನ್ನು ಬೀರುವಂತೆ ಮಾಡಿದರು. ಕೊನೆಗೆ ಗುಜರಾತ್ ತಂಡವು 18.1 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 133 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:27 pm, Mon, 30 May 22