GT vs RR Final: ಹಾರ್ದಿಕ್ ಸುಳ್ಳು ಹೇಳುತ್ತಿದ್ದಾನೆ ಎಂದ ನೆಹ್ರಾ! ಪ್ರಶಸ್ತಿ ಬಳಿಕ ಪಾಂಡ್ಯ- ನೆಹ್ರಾ ಮನದಾಳದ ಮಾತು ಹೀಗಿತ್ತು

GT vs RR Final: ಆರಂಭದಲ್ಲಿ ಗುಜರಾತ್‌ನ ಬ್ಯಾಟಿಂಗ್-ಬೌಲಿಂಗ್ ದುರ್ಬಲವಾಗಿದೆ ಎಂದು ಜನರು ಹೇಳುತ್ತಿದ್ದರು. ಆದರೆ ನಮ್ಮ ಹುಡುಗರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.

GT vs RR Final: ಹಾರ್ದಿಕ್ ಸುಳ್ಳು ಹೇಳುತ್ತಿದ್ದಾನೆ ಎಂದ ನೆಹ್ರಾ! ಪ್ರಶಸ್ತಿ ಬಳಿಕ ಪಾಂಡ್ಯ- ನೆಹ್ರಾ ಮನದಾಳದ ಮಾತು ಹೀಗಿತ್ತು
ಆಶಿಶ್ ನೆಹ್ರಾ, ಹಾರ್ದಿಕ್ ಪಾಂಡ್ಯ
Follow us
TV9 Web
| Updated By: ಪೃಥ್ವಿಶಂಕರ

Updated on:May 30, 2022 | 3:59 PM

ಗುಜರಾತ್ ಟೈಟಾನ್ಸ್ ತನ್ನ ಮೊದಲ ಸೀಸನ್​ನಲ್ಲೇ ಅದ್ಭುತ ಪ್ರದರ್ಶನ ನೀಡುವ ಮೂಲಕ 15ನೇ ಆವೃತ್ತಿಯ ಚಾಂಪಿಯನ್ (IPL 2022 Final)) ಆಗಿ ಹೊರಹೊಮ್ಮಿತು. ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಗುಜರಾತ್ ತಂಡ ರಾಜಸ್ಥಾನ್ ರಾಯಲ್ಸ್ (Gujarat defeated Rajasthan Royals) ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಕೇವಲ 131 ರನ್​ಗಳ ಗುರಿ ಬೆನ್ನತ್ತಿದ ಗುಜರಾತ್ ತಂಡ 11 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಹಾರ್ದಿಕ್ ಪಾಂಡ್ಯ ತಮ್ಮ ನಾಯಕತ್ವವನ್ನು ಸಾಬೀತುಪಡಿಸಿದರು. ಮೊದಲ ಬಾರಿಗೆ ಐಪಿಎಲ್‌ನಂತಹ ದೊಡ್ಡ ಟೂರ್ನಿಯಲ್ಲಿ ನಾಯಕರಾಗಿದ್ದ ಪಾಂಡ್ಯ ಬ್ಯಾಟ್ ಮತ್ತು ಬಾಲ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಶ್ರಮಿಸಿದರು. ಆದರೆ, ಗುಜರಾತ್ ತಂಡದ ನಾಯಕ ಈ ಗೆಲುವನ್ನು ಮುಖ್ಯ ಕೋಚ್ ಆಶಿಶ್ ನೆಹ್ರಾ ಅವರಿಗೆ ತೊಡಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಪಾಂಡ್ಯ, ನೆಹ್ರಾ ತಂಡದೊಂದಿಗೆ ಹೇಗೆ ಶ್ರಮಿಸಿದರು ಎಂಬುದನ್ನು ವಿವರಿಸಿದರು.

IPL 2022 ಚಾಂಪಿಯನ್ ಆದ ನಂತರ, ಗುಜರಾತ್ ಟೈಟಾನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ ನಾಯಕ ಪಾಂಡ್ಯ ಅವರೊಂದಿಗೆ ಮಾತನಾಡಿದರು. ಐಪಿಎಲ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಈ ವಿಡಿಯೋದಲ್ಲಿ, ಆಶಿಶ್ ನೆಹ್ರಾ, ನಾಯಕ ಹಾರ್ದಿಕ್ ಪಾಂಡ್ಯ ಬಳಿ ಈ ಐಪಿಎಲ್ ಜರ್ನಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವಂತೆ ಕೇಳಿಕೊಂಡರು. ಇದಕ್ಕೆ ಪಾಂಡ್ಯ ಆಸಕ್ತಿದಾಯಕ ಉತ್ತರವನ್ನು ಸಹ ನೀಡಿದ್ದರು. ಆರಂಭದಲ್ಲಿ ಗುಜರಾತ್‌ನ ಬ್ಯಾಟಿಂಗ್-ಬೌಲಿಂಗ್ ದುರ್ಬಲವಾಗಿದೆ ಎಂದು ಜನರು ಹೇಳುತ್ತಿದ್ದರು. ಆದರೆ ನಮ್ಮ ಹುಡುಗರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದರು. ಹಾರ್ದಿಕ್ ಪಾಂಡ್ಯ, ‘ನಾನು ಮೊದಲ ವರ್ಷದಲ್ಲಿಯೇ ಸಿಕ್ಸರ್ ಬಾರಿಸಿದ್ದೇನೆ. ನಾನು ತುಂಬಾ ಸಂತೋಷವಾಗಿದ್ದೇನೆ. ಮೊದಮೊದಲು ಜನರು ಈ ತಂಡದಲ್ಲಿ ಅಂತ ಹೇಳಿಕೊಳ್ಳುವಂತಹ ಬ್ಯಾಟಿಂಗ್, ಹಾಗೂ ಬೌಲಿಂಗ್ ಇಲ್ಲ ಎಂದಿದ್ದರು. ಆದರೆ ನಾವು ಚಾಂಪಿಯನ್ ಆಗಿದ್ದೇವೆ, ಇದು ಹೆಮ್ಮೆಯ ವಿಚಾರ ಎಂದಿದ್ದಾರೆ.

ಇದನ್ನೂ ಓದಿ
Image
GT vs RR Final: ಆರೆಂಜ್ ಕ್ಯಾಪ್ ಜೊತೆಗೆ ಮೋಸ್ಟ್ ವ್ಯಾಲ್ಯುಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಜೋಸ್ ಬಟ್ಲರ್..!
Image
GT vs RR, IPL 2022: ಐಪಿಎಲ್ 2022 ಫೈನಲ್ ಪಂದ್ಯ ಫಿಕ್ಸಿಂಗ್?: ಅನುಮಾನ ಹುಟ್ಟುಹಾಕಿದೆ ಫೋಟೋಗಳು ಎಂದ ಫ್ಯಾನ್ಸ್

ಟ್ರೋಫಿ ಗೆಲ್ಲುವುದಕ್ಕಿಂತ ಹೆಚ್ಚು ಸಂತೋಷವಿಲ್ಲ- ನೆಹ್ರಾ

ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ ಮಾತನಾಡಿ, ಗುಜರಾತ್ ತಂಡ ಆಡುವ ರೀತಿ ನನಗೆ ತುಂಬಾ ಖುಷಿ ತಂದಿದೆ. ಟ್ರೋಫಿ ಗೆದ್ದಿರುವುದು ಸರಿಯೇ ಆದರೆ ನಮ್ಮ ತಂಡ ಆಡುವ ರೀತಿ ನನಗೆ ಅತ್ಯಂತ ಖುಷಿ ತಂದಿದೆ ಎಂದರು. ಹುಡುಗರು ಆಟ ತೋರಿದ ರೀತಿ, ಪರಸ್ಪರ ಬೆರೆತ ರೀತಿ. ಮೊದಲ ಸೀಸನ್‌ನಲ್ಲಿ ಚಾಂಪಿಯನ್ ಆಗಿರುವುದು ಅದ್ಭುತವಾಗಿದೆ ಎಂದಿದ್ದಾರೆ.

ಪಾಂಡ್ಯಗೆ ನೆಹ್ರಾ ಹೇಳಿದ ಸುಳ್ಳು!

ಐಪಿಎಲ್ ಗೆಲ್ಲುವಲ್ಲಿ ಯಶಸ್ವಿಯಾದ ಮೊದಲ ಭಾರತೀಯ ಮುಖ್ಯ ಕೋಚ್ ಆಶಿಶ್ ನೆಹ್ರಾ ಎಂಬುದು ಇಲ್ಲಿ ಹೆಗ್ಗಳಿಕೆಯಾಗಿದೆ. ಆಶಿಶ್ ನೆಹ್ರಾ ಗುಜರಾತ್‌ನ ಪ್ರತಿಯೊಬ್ಬ ಆಟಗಾರರೊಂದಿಗೆ ಹೇಗೆ ಶ್ರಮಿಸಿದರು ಎಂಬುದನ್ನು ಹಾರ್ದಿಕ್ ಪಾಂಡ್ಯ ಅಭಿಮಾನಿಗಳಿಗೆ ತಿಳಿಸಿದರು. ಆಶಿಶ್ ನೆಹ್ರಾಗೆ ಗೆಲುವಿನ ಮುಖ ಒಲಿದಿದೆ, ಏಕೆಂದರೆ ಅವರು ಪ್ರತಿಯೊಬ್ಬ ಆಟಗಾರನೊಂದಿಗೆ ತುಂಬಾ ಕಠಿಣವಾಗಿ ಕೆಲಸ ಮಾಡಿದರು. ಅವರು ಪ್ರತಿಯೊಬ್ಬ ಬ್ಯಾಟ್ಸ್‌ಮನ್, ಬೌಲರ್‌ನತ್ತ ಗಮನ ಹರಿಸಿದರು. ನೆಹ್ರಾ ಕೋಚಿಂಗ್​ನಲ್ಲಿ ಅಭ್ಯಾಸ ಮಾಡುತ್ತಿದ್ದ ಪ್ರತಿಯೊಬ್ಬ ಆಟಗಾರನೂ ಅಭ್ಯಾಸದ ನಂತರ ಕ್ರೀಸ್‌ಗೆ ಹೋಗಿ ಬಾಲನ್ನು ಬ್ಯಾಟ್‌ ಮಧ್ಯದಲ್ಲಿ ಆಡಿ ಸಿಕ್ಸರ್ ಬಾರಿಸುವೆ ಎಂದು ಯೋಚಿಸುತ್ತಿದ್ದರು ಎಂಬ ಹೊಗಳಿಕೆಯ ಮಾತನ್ನು ಪಾಂಡ್ಯ ನೆಹ್ರಾ ಬಗ್ಗೆ ಹೇಳಿದ್ದರು. ಈ ಮಾತು ಕೇಳಿದ ಆಶಿಶ್ ನೆಹ್ರಾ ಈ ವಿಚಾರದಲ್ಲಿ ಸ್ವಲ್ಪ ನಾಚಿಕೆಪಟ್ಟು ಹಾರ್ದಿಕ್ ಪಾಂಡ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದ್ದರು. ಇದಾದ ಬಳಿಕ ಆಶಿಶ್ ನೆಹ್ರಾ ಅಲ್ಲಿಂದ ಎದ್ದು ಹೋದರು.

Published On - 3:59 pm, Mon, 30 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್