AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಒಬ್ಬ ಪಾಕಿಸ್ತಾನಿಯಾಗಿ ಹೇಳುತ್ತಿದ್ದೇನೆ, ಕೊಹ್ಲಿ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ; ಶೋಯೆಬ್ ಅಖ್ತರ್

Virat Kohli: ಏನಾದರೂ ಹೇಳುವ ಮೊದಲು, ಸಣ್ಣ ಮಕ್ಕಳು ಅವರನ್ನು ನೋಡುತ್ತಾರೆ ಎಂದು ಜನರು ಭಾವಿಸಬೇಕು. ಒಬ್ಬ ಪಾಕಿಸ್ತಾನಿಯಾಗಿ ನಾನು ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದು ಹೇಳುತ್ತಿದ್ದೇನೆ.

Virat Kohli: ಒಬ್ಬ ಪಾಕಿಸ್ತಾನಿಯಾಗಿ ಹೇಳುತ್ತಿದ್ದೇನೆ, ಕೊಹ್ಲಿ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ; ಶೋಯೆಬ್ ಅಖ್ತರ್
ಶೋಯೆಬ್ ಅಖ್ತರ್, ವಿರಾಟ್ ಕೊಹ್ಲಿ
TV9 Web
| Updated By: ಪೃಥ್ವಿಶಂಕರ|

Updated on:Jun 01, 2022 | 9:26 PM

Share

ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League)ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ (Virat Kohli) ಮೇಲೆ ನಿರಂತರವಾಗಿ ಟೀಕಾ ಪ್ರಹಾರ ನಡೆಯುತ್ತಿದೆ. ವಿರಾಟ್ ಕೊಹ್ಲಿಯ ಫಾರ್ಮ್ ಶಾಶ್ವತವಾಗಿ ಮರೆಯಾಗಲಿದೆಯೇ? ವಿರಾಟ್ ಕೊಹ್ಲಿ ಮ್ಯಾಜಿಕ್ ಮುಗಿದಿದೆಯೇ? ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಎರಡೂವರೆ ವರ್ಷಕ್ಕೂ ಹೆಚ್ಚು ಕಾಲ ಶತಕ ಸಿಡಿಸದೇ ಇರುವ ವಿರಾಟ್, ಸಚಿನ್ ಅವರ 100 ಶತಕಗಳ ದಾಖಲೆಯನ್ನು ಮುರಿಯಲಾರರೇ ಎಂಬ ದೊಡ್ಡ ಪ್ರಶ್ನೆಯೂ ಕಾಡುತ್ತಿದೆ. ಆದರೆ, ಈ ಎಲ್ಲಾ ಪ್ರಶ್ನೆಗಳ ನಡುವೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar), ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಸಹ ಆಡಿದ್ದಾರೆ. ವಿರಾಟ್ ಕೊಹ್ಲಿಯನ್ನು ಪ್ರಶ್ನಿಸುವವರು ಸ್ವಲ್ಪ ಆಲೋಚಿಸಿ ಮಾತನಾಡಬೇಕು. ಈ ಆಟಗಾರನಿಗೆ ಸಲ್ಲಬೇಕಾದ ಗೌರವ ಸಿಗಬೇಕು ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಖಂಡಿತವಾಗಿಯೂ 100 ಶತಕಗಳ ಗಡಿ ಮುಟ್ಟುತ್ತಾರೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿಯ ಅಭಿಮಾನಿ ಶೋಯೆಬ್ ಅಖ್ತರ್

ವಿರಾಟ್ ಕೊಹ್ಲಿ ಬಗ್ಗೆ ಜನರು ಯೋಚಿಸಿ ಮಾತನಾಡಬೇಕು ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ಸ್ಪೋರ್ಟ್ಸ್ಕೀಡಾ ಜೊತೆಗಿನ ಸಂವಾದದಲ್ಲಿ ಶೋಯೆಬ್, ‘ಏನಾದರೂ ಹೇಳುವ ಮೊದಲು, ಸಣ್ಣ ಮಕ್ಕಳು ಅವರನ್ನು ನೋಡುತ್ತಾರೆ ಎಂದು ಜನರು ಭಾವಿಸಬೇಕು. ಒಬ್ಬ ಪಾಕಿಸ್ತಾನಿಯಾಗಿ ನಾನು ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದು ಹೇಳುತ್ತಿದ್ದೇನೆ. ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಗಳಿಸಬೇಕೆಂದು ನಾನು ಬಯಸುತ್ತೇನೆ. ಜೊತೆಗೆ ಕೊಹ್ಲಿ 45 ವರ್ಷ ವಯಸ್ಸಿನವರೆಗೂ ಕ್ರಿಕೆಟ್ ಆಡಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ
Image
Deepak Chahar Wedding: ಜಯ ಜೊತೆ ಇಂದು ದೀಪಕ್ ಮದುವೆ! ಧೋನಿ, ಕೊಹ್ಲಿ, ರೋಹಿತ್ ಸಂಭ್ರಮದಲ್ಲಿ ಬಾಗಿ
Image
Sourav Ganguly: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ; ದಾದಾ ರಾಜೀನಾಮೆ ವದಂತಿಗೆ ತೆರೆ ಎಳೆದ ಜೈ ಶಾ

ಇದನ್ನೂ ಓದಿ:GT vs RR Final: ಕೊಹ್ಲಿ ದಾಖಲೆ ಮುರಿಯಲ್ಲಾಗಲಿಲ್ಲ! ಈ ಐಪಿಎಲ್​ನಲ್ಲಿ ಬಟ್ಲರ್ ಸೃಷ್ಟಿಸಿದ ಪ್ರಮುಖ ದಾಖಲೆಗಳಿವು

ವಿರಾಟ್ ಈಗ ತನ್ನ ಸಾಮರ್ಥ್ಯವನ್ನು ತೋರಿಸಬೇಕಾಗಿದೆ- ಶೋಯೆಬ್ ಅಖ್ತರ್

ಶೋಯೆಬ್ ಅಖ್ತರ್, ‘ವಿರಾಟ್ ಕೊಹ್ಲಿ ಈಗ ಜನರಿಗೆ ವಿರಾಟ್ ಕೊಹ್ಲಿ ಏನೆಂದು ತೋರಿಸುವ ಸಮಯ ಬಂದಿದೆ? ಎಂದಿದ್ದಾರೆ. ಜನರು ನಿಮ್ಮ ಹೆಂಡತಿ ಮತ್ತು ಮಗುವಿನ ಬಗ್ಗೆ ಟ್ವೀಟ್ ಮಾಡುತ್ತಾರೆ. ವಿಶ್ವಕಪ್ ಸೋತ ನಂತರ ನೀವು ಟೀಕೆಗೆ ಗುರಿಯಾಗಿದ್ದೀರಿ. ಹೀಗಾಗಿ ಕೊಹ್ಲಿ ನೀನೇನು ಎಂಬುದನ್ನು ಸಾಭೀತುಪಡಿಸಬೇಕು ಎಂದಿದ್ದಾರೆ.

ಐಪಿಎಲ್ 2022ರಲ್ಲಿ ವಿರಾಟ್ ಬ್ಯಾಟ್ ಮೌನ

ಒಂದು ಕಾಲದಲ್ಲಿ ಐಪಿಎಲ್‌ನಲ್ಲಿ 973 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಈಗ ರನ್‌ಗಾಗಿ ಹಾತೊರೆಯುತ್ತಿದ್ದಾರೆ. ವಿರಾಟ್ ಕೊಹ್ಲಿ ಈ ವರ್ಷ 16 ಪಂದ್ಯಗಳಲ್ಲಿ ಕೇವಲ 22.73 ಸರಾಸರಿಯಲ್ಲಿ 341 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 115.99 ಆಗಿತ್ತು. ವಿರಾಟ್ ಬ್ಯಾಟ್‌ನಿಂದ ಎರಡು ಅರ್ಧಶತಕಗಳು ಹೊರಹೊಮ್ಮಿದವು. ಇದಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು. ಆರ್​ಸಿಬಿ ಪ್ಲೇಆಫ್ ತಲುಪಿತು, ಆದರೆ ಫೈನಲ್‌ಗೆ ಬರಲು ಸಾಧ್ಯವಾಗಲಿಲ್ಲ.

Published On - 9:26 pm, Wed, 1 June 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್