Deepak Chahar Wedding: ಜಯ ಜೊತೆ ಇಂದು ದೀಪಕ್ ಮದುವೆ! ಧೋನಿ, ಕೊಹ್ಲಿ, ರೋಹಿತ್ ಸಂಭ್ರಮದಲ್ಲಿ ಬಾಗಿ

Deepak Chahar Wedding: ದೀಪಕ್ ಅವರ ವಿವಾಹ ಮಹೋತ್ಸವದಲ್ಲಿ ಐಪಿಎಲ್ ಟೀಮ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಪಾಲ್ಗೊಳ್ಳಲಿದ್ದಾರೆ ಮತ್ತು ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳಿವೆ.

Deepak Chahar Wedding: ಜಯ ಜೊತೆ ಇಂದು ದೀಪಕ್ ಮದುವೆ! ಧೋನಿ, ಕೊಹ್ಲಿ, ರೋಹಿತ್ ಸಂಭ್ರಮದಲ್ಲಿ ಬಾಗಿ
ಪ್ರೇಯಸಿಯೊಂದಿಗೆ ದೀಪಕ್ ಚಾಹರ್
Follow us
TV9 Web
| Updated By: ಪೃಥ್ವಿಶಂಕರ

Updated on: Jun 01, 2022 | 7:44 PM

ಟೀಂ ಇಂಡಿಯಾದ ಉದಯೋನ್ಮುಖ ತಾರೆ ದೀಪಕ್ ಚಹಾರ್ (Deepak Chahar) ತಮ್ಮ ಬಹುದಿನದ ಗೆಳತಿ ಜಯ ಭಾರದ್ವಾಜ್ (Deepak Chahar and Jaya Bhardwaj Wedding) ಅವರನ್ನು ಬುಧವಾರ (ಜೂನ್ 1)ದಂದು ಮದುವೆಯಾಗಲಿದ್ದಾರೆ. ದೀಪಕ್ ಅವರ ವಿವಾಹ ಮಹೋತ್ಸವದಲ್ಲಿ ಐಪಿಎಲ್ ಟೀಮ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಕೂಡ ಪಾಲ್ಗೊಳ್ಳಲಿದ್ದಾರೆ ಮತ್ತು ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಇರುವುದರಿಂದ ಕ್ರಿಕೆಟ್ ಜಗತ್ತಿನಲ್ಲಿ ಈ ಮದುವೆಯ ವಾತಾವರಣ ಬಿಸಿಯಾಗಿದೆ. ಈ ಮದುವೆಯಲ್ಲಿ ಧೋನಿ ಮಾತ್ರವಲ್ಲದೆ ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಭಾಗವಹಿಸಲಿದ್ದಾರೆ. ದೀಪಕ್ ಮದುವೆಗೆ ಎರಡೂ ಕುಟುಂಬದ ವಿಶೇಷ ವ್ಯಕ್ತಿಗಳು ಮತ್ತು ದೀಪಕ್ ಆಪ್ತರನ್ನು ಆಹ್ವಾನಿಸಲಾಗಿದೆ.

ಮಂಗಳವಾರದಿಂದ ಮದುವೆ ವಿಧಿವಿಧಾನಗಳು ಆರಂಭಗೊಂಡಿವೆ. ಆಗ್ರಾದ ದೊಡ್ಡ ಪಂಚತಾರಾ ಹೋಟೆಲ್‌ನಲ್ಲಿ ಈ ಮದುವೆ ನಡೆಯುತ್ತಿದೆ. ಮಂಗಳವಾರ ಸಂಜೆ ಈ ಹೋಟೆಲ್‌ನಲ್ಲಿ ಮೆಹೆಂದಿ ಮತ್ತು ಸಂಗೀತ ಸಮಾರಂಭ ನಡೆಯಿತು. ಬುಧವಾರವೂ ಬೆಳಗ್ಗೆಯಿಂದ ವಿವಾಹ ವಿಧಿವಿಧಾನಗಳು ನಡೆಯಲಿದ್ದು, ಸಂಜೆಯ ವೇಳೆಗೆ ವಿವಾಹ ನೆರವೇರಲಿದೆ. ಈ ಮೆರವಣಿಗೆಯಲ್ಲಿ ದೀಪಕ್‌ನ ಹಲವು ಆಪ್ತರು ಹಾಗೂ ಕ್ರಿಕೆಟ್ ಲೋಕದ ತಾರೆಯರು ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:IND vs SA: ದೀಪಕ್ ಔಟ್! ಜಡೇಜಾ- ಸೂರ್ಯಕುಮಾರ್ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ಬಿಸಿಸಿಐ

ಇದನ್ನೂ ಓದಿ
Image
Sourav Ganguly: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ; ದಾದಾ ರಾಜೀನಾಮೆ ವದಂತಿಗೆ ತೆರೆ ಎಳೆದ ಜೈ ಶಾ
Image
Rishabh Pant: ರಿಷಬ್ ಪಂತ್ ದುರಹಂಕಾರಿ! ಅವರ ನಾಯಕತ್ವ ನನ್ನ ತಲೆ ಕೆರೆದುಕೊಳ್ಳುವಂತೆ ಮಾಡಿತು; ಆಕಾಶ ವಾಣಿ
Image
ಧೋನಿಯ ಆ ನಿರ್ಧಾರದಿಂದಾಗಿ ನಾನು ಏಕದಿನ ಕ್ರಿಕೆಟ್​ಗೆ ಗುಡ್​ ಬೈ ಹೇಳಲು ಬಯಸಿದ್ದೆ! ಸೆಹ್ವಾಗ್ ಶಾಕಿಂಗ್ ಹೇಳಿಕೆ

ಸ್ಟೇಡಿಯಂನಲ್ಲಿ ಪ್ರೀತಿ ನಿವೇದನೆ

ದೀಪಕ್ ಅವರ ಭಾವಿ ಪತ್ನಿ ಜಯಾ ದೆಹಲಿ ನಿವಾಸಿಯಾಗಿದ್ದು, ವರದಿಗಳ ಪ್ರಕಾರ ಜಯಾ ಅವರು ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸಹೋದರ ಸಿದ್ಧಾರ್ಥ್ ಟಿವಿ ಶೋ ಬಿಗ್ ಬಾಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಜಯಾಗೆ, ಟೀಂ ಇಂಡಿಯಾದ ಪಂದ್ಯ ಮುಗಿದ ನಂತರ ದೀಪಕ್​ ಕ್ರೀಡಾಂಗಣದಲ್ಲೇ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ, ದೀಪಕ್ ಸ್ಟ್ಯಾಂಡ್‌ನಲ್ಲಿ ಕುಳಿತ ಜಯ ಅವರ ಬಳಿಗೆ ಹೋಗಿ ಮೊಣಕಾಲು ಮೇಲೆ ಕುಳಿತು ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಈ ಪ್ರಸ್ತಾಪಕ್ಕೆ ಜಯಾ ಕೂಡ ಹೌದು ಎಂದು ಉತ್ತರಿಸಿದರು. ಇಡೀ ಜಗತ್ತು ದೀಪಕ್ ಅವರ ಈ ನಿವೇದನೆಯನ್ನು ನೋಡಿ ಅಚ್ಚರಿಗೊಂಡಿತ್ತು.

ಐಪಿಎಲ್-2022 ಗೆ ಗೈರಾಗಿದ್ದ ದೀಪಕ್

IPL-2022 ಗಾಗಿ 14 ಕೋಟಿ ಮೊತ್ತಕ್ಕೆ ದೀಪಕ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತು. ಆದರೆ ಅವರು ಇಂಜುರಿಯಿಂದ ಇಡೀ ಸೀಸನ್​ನಲ್ಲು ಆಡಲು ಸಾಧ್ಯವಾಗಲಿಲ್ಲ. ಅವರು ಎಷ್ಟು ಸಮಯದವರೆಗೆ ಈ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕಾರಣಕ್ಕಾಗಿ ಅವರು ಇತ್ತೀಚೆಗೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಆಯ್ಕೆಯಾಗಿಲ್ಲ. ದೀಪಕ್ ಭಾರತಕ್ಕಾಗಿ 20 20 ಪಂದ್ಯಗಳನ್ನು ಆಡಿದ್ದಾರೆ ಮತ್ತು ಏಳು ಏಕದಿನ ಪಂದ್ಯಗಳನ್ನು ಸಹ ಆಡಿದ್ದಾರೆ. ದೀಪಕ್ ಟಿ20ಯಲ್ಲಿ 26 ವಿಕೆಟ್ ಪಡೆದಿದ್ದು, ಏಕದಿನದಲ್ಲಿ 10 ವಿಕೆಟ್ ಪಡೆದಿದ್ದಾರೆ. ದೀಪಕ್ ಗಾಯದಿಂದ ವಾಪಸಾಗಿ ಟೀಂ ಇಂಡಿಯಾ ಜೆರ್ಸಿಯನ್ನು ಯಾವಾಗ ತೊಡಲಿದ್ದಾರೆ ಎಂದು ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್