Sourav Ganguly: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ; ದಾದಾ ರಾಜೀನಾಮೆ ವದಂತಿಗೆ ತೆರೆ ಎಳೆದ ಜೈ ಶಾ
Sourav Ganguly: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಗಂಗೂಲಿ ರಾಜೀನಾಮೆ ಸುದ್ದಿಯನ್ನು ಕಟುವಾಗಿ ನಿರಾಕರಿಸಿದ್ದಾರೆ. ಜೊತೆಗೆ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂಬುದನ್ನು ಜೈ ಶಾ ಖಚಿತ ಪಡಿಸಿರುವದಾಗಿ ಸುದ್ದಿ ಸಂಸ್ಥೆ ಎಎನ್ಐ ಟ್ವಿಟ್ ಮಾಡುವ ಮೂಲಕ ಎಲ್ಲಾ ವದಂತಿಗಳಿಗೂ ತೆರೆ ಎಳಿದಿದೆ.
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಬಿಸಿಸಿಐ (BCCI) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂಬುದನ್ನು ಮಂಡಳಿಯ ಕಾರ್ಯದರ್ಶಿ ಜಯ್ ಶಾ (Jay Shah) ಇದನ್ನು ಖಚಿತಪಡಿಸಿದ್ದಾರೆ. ಸೌರವ್ ಗಂಗೂಲಿ ಅವರ ಟ್ವಿಟರ್ ಪೋಸ್ಟ್ ನಂತರ, ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತೊರೆದಿದ್ದಾರೆ ಎಂಬ ಸುದ್ದಿ ಹರಡಿತು. ಇದರ ಜೊತೆಗೆ ಗಂಗೂಲಿ ಅವರು ರಾಜ್ಯಸಭೆಗೆ ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡಲಾರಂಭಿಸಿತ್ತು. ಆದರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಗಂಗೂಲಿ ರಾಜೀನಾಮೆ ಸುದ್ದಿಯನ್ನು ಕಟುವಾಗಿ ನಿರಾಕರಿಸಿದ್ದಾರೆ. ಜೊತೆಗೆ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂಬುದನ್ನು ಜೈ ಶಾ ಖಚಿತ ಪಡಿಸಿರುವದಾಗಿ ಸುದ್ದಿ ಸಂಸ್ಥೆ ಎಎನ್ಐ ಟ್ವಿಟ್ ಮಾಡುವ ಮೂಲಕ ಎಲ್ಲಾ ವದಂತಿಗಳಿಗೂ ತೆರೆ ಎಳಿದಿದೆ. ಸೌರವ್ ಗಂಗೂಲಿ 2019 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಂದಿನಿಂದ ಅವರು ಈ ಹುದ್ದೆಯಲ್ಲಿದ್ದಾರೆ.
Sourav Ganguly has not resigned as the president of BCCI: Jay Shah, BCCI Secretary to ANI pic.twitter.com/C2O3r550aL
ಇದನ್ನೂ ಓದಿ— ANI (@ANI) June 1, 2022
ಟ್ವಿಟರ್‌ನಲ್ಲಿ ಗಂಗೂಲಿ ಪೋಸ್ಟ್ ಮಾಡಿದ್ದೇನು?
ಸೌರವ್ ಗಂಗೂಲಿ ಟ್ವಿಟರ್‌ನಲ್ಲಿ, ಬಹುಶಃ ಬಹಳಷ್ಟು ಜನರಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುವ ಏನನ್ನಾದರೂ ಪ್ರಾರಂಭಿಸಲು ನಾನು ಯೋಜಿಸುತ್ತಿದ್ದೇನೆ. 1992ರಲ್ಲಿ ನನ್ನ ಕ್ರಿಕೆಟ್ ಪಯಣ ಆರಂಭಿಸಿದ್ದು 2022ಕ್ಕೆ 30 ವರ್ಷಗಳು ಪೂರೈಸಲಿದೆ. ಅಲ್ಲಿಂದ ಇಲ್ಲಿಯವರೆಗೆ ಕ್ರಿಕೆಟ್ ನನಗೆ ಬಹಳಷ್ಟು ನೀಡಿದೆ. ಮುಖ್ಯವಾಗಿ ಅದು ನನಗೆ ನಿಮ್ಮೆಲ್ಲರ ಬೆಂಬಲವನ್ನು ನೀಡಿದೆ. ನನ್ನ ಪಯಣದಲ್ಲಿ ಭಾಗವಾದ, ಬೆಂಬಲ ನೀಡಿದ, ನಾನು ಈಗ ಇರುವ ಸ್ಥಿತಿಗೆ ಮುಟ್ಟಲು ಕಾರಣವಾದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದಗಳನ್ನು ಹೇಳುತ್ತೇವೆ. ಇವತ್ತು ನಾನು ಹೊಸತೊಂದನ್ನು ಆರಂಭಿಸಲು ಯೋಚಿಸುತ್ತಿದ್ದೇನೆ, ಇದರಿಂದ ಬಹಳಷ್ಟು ಜನರಿಗೆ ಸಹಾಯ ಮಾಡಬಲ್ಲೆ ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಬದುಕಿನ ಹೊಸ ಅಧ್ಯಾಯಕ್ಕೆ ಪ್ರವೇಶಿಸುವ ಈ ಹೊತ್ತಲ್ಲಿಯೂ ನೀವು ನನ್ನನ್ನು ಬೆಂಬಲಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಸೌರವ್ ತಮ್ಮ ಟ್ವೀಟ್ನಲ್ಲಿ ಬರೆದಿದ್ದಾರೆ.
— Sourav Ganguly (@SGanguly99) June 1, 2022
ಗಂಗೂಲಿ ಭೇಟಿಯಾಗಿದ್ದ ಅಮಿತ್ ಶಾ
ಕಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಂಗಾಳದಲ್ಲಿ ಸೌರವ್ ಗಂಗೂಲಿ ರಾತ್ರಿ ಭೋಜನದ ಆತಿಥ್ಯ ವಹಿಸಿದ್ದರು. ಅಮಿತ್ ಶಾ ಅವರಿಗೆ ಆತಿಥ್ಯ ವಹಿಸಿದರ ಬಗ್ಗೆ ತೃಣಮೂಲ ಕಾಂಗ್ರಸ್ ಟೀಕಾ ಪ್ರಹಾರ ಮಾಡಿದಾಗ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಜತೆ ಕೂಡಾ ತಾನು ಉತ್ತಮ ಸಂಬಂಧ ಹೊಂದಿರುವುದಾಗಿ ಗಂಗೂಲಿ ಹೇಳಿದ್ದರು. ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನನಗೆ ತುಂಬಾ ಹತ್ತಿರದ ವ್ಯಕ್ತಿ. ಈ ಸಂಸ್ಥೆಗೆ ಸಹಾಯ ಮಾಡಲು ನಾನು ಅವರನ್ನು ಸಂಪರ್ಕಿಸಿದ್ದೆ ಎಂದು ಗಂಗೂಲಿ ಮಾಧ್ಯಮದವರಲ್ಲಿ ಹೇಳಿದ್ದಾರೆ.
ಅಮಿತ್ ಶಾ ಔತಣಕೂಟದ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಸೌರವ್ “ಊಹಾಪೋಹಗಳು ಹರಿದಾಡುತ್ತಿವೆ. ಆದರೆ ನಾನು ಅಮಿತ್ ಶಾ ಅವರನ್ನು 2008 ರಿಂದ ಬಲ್ಲೆ. ಆಟವಾಡುವಾಗ ನಾನು ಅವರನ್ನು ಭೇಟಿಯಾಗುತ್ತಿದ್ದೆ. ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು.
Published On - 6:45 pm, Wed, 1 June 22