- Kannada News Photo gallery Cricket photos Team India star deepak chahar haldi rasam ahead of his wedding with fiance jaya bhardwaj
Deepak Chahar Wedding: ಹರಿಶಿಣ ಕಾರ್ಯಕ್ರಮದಲ್ಲಿ ಮಿಂಚಿದ ದೀಪಕ್- ಜಯಾ; ಫೋಟೋ ನೋಡಿ
Deepak Chahar Wedding: ಬುಧವಾರ ರಾತ್ರಿ ಒಂಬತ್ತು ಗಂಟೆಗೆ ಮದುವೆ ಸಮಾರಂಭ ಆರಂಭವಾಗಲಿದೆ. ದೀಪಕ್ ಚಹಾರ್ ಮತ್ತು ಜಯಾ ಅವರ ಕುಟುಂಬ ಸದಸ್ಯರು ಮತ್ತು ಇತರ ಆಪ್ತರು ಕೂಡ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
Updated on:Jun 01, 2022 | 10:06 PM



ಬುಧವಾರ ಬೆಳಗ್ಗೆ ಇಬ್ಬರಿಗೂ ಹಳದಿ ಕಾರ್ಯಕ್ರಮ ನಡೆದಿತ್ತು. ಚಹಾರ್ ಬಿಳಿ ಬಣ್ಣದ ಕುರ್ತಾ ಧರಿಸಿ ಕಾಣಿಸಿಕೊಂಡಿದ್ದರು. ಚಹಾರ್ ಅವರ ಸಹೋದರ ಮತ್ತು ಪಂಜಾಬ್ ಕಿಂಗ್ಸ್ ಸ್ಟಾರ್ ಕ್ರಿಕೆಟಿಗ ರಾಹುಲ್ ಚಹಾರ್ ಸಮಾರಂಭದ ವೀಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ದೀಪಕ್ ಸ್ನೇಹಿತರು, ರಾಹುಲ್ ಜೊತೆ ಸೇರಿ ದೀಪಕ್ಗೆ ಅರಿಶಿನ ಹಚ್ಚಿ ಡ್ಯಾನ್ಸ್ ಮಾಡಿದ್ದು ಕಂಡುಬಂತು.

ಬುಧವಾರ ರಾತ್ರಿ ಒಂಬತ್ತು ಗಂಟೆಗೆ ಮದುವೆ ಸಮಾರಂಭ ಆರಂಭವಾಗಲಿದೆ. ದೀಪಕ್ ಚಹಾರ್ ಮತ್ತು ಜಯಾ ಅವರ ಕುಟುಂಬ ಸದಸ್ಯರು ಮತ್ತು ಇತರ ಆಪ್ತರು ಕೂಡ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ತಮ್ಮ ಕುಟುಂಬದೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ದೀಪಕ್ ಬಹಳ ದಿನಗಳಿಂದ ಕ್ರಿಕೆಟ್ ಕ್ಷೇತ್ರದಿಂದ ದೂರ ಉಳಿದಿದ್ದರು. ಗಾಯದ ಕಾರಣ, ಅವರು IPL 2022 ರ ಭಾಗವಾಗಲು ಸಹ ಸಾಧ್ಯವಾಗಲಿಲ್ಲ. ಅವರು ಇನ್ನೂ ತಮ್ಮ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ, ಆದ್ದರಿಂದ ಅವರು ಯಾವಾಗ ಮರಳುತ್ತಾರೆ ಎಂಬುದು ಖಚಿತವಾಗಿಲ್ಲ.
Published On - 9:58 pm, Wed, 1 June 22




