AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ದೀಪಕ್ ಔಟ್! ಜಡೇಜಾ- ಸೂರ್ಯಕುಮಾರ್ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ಬಿಸಿಸಿಐ

IND vs SA: ಐಪಿಎಲ್ 2022 ರ ನಂತರ, ಭಾರತ ತಂಡ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿ ಆಡಲಿದೆ. ಇದಕ್ಕಾಗಿ ಆಯ್ಕೆ ಸಮಿತಿಯು ಕೆಲವೇ ದಿನಗಳಲ್ಲಿ ತಂಡವನ್ನು ಪ್ರಕಟಿಸಲಿದೆ. ಆದರೆ ಈ ಮೊದಲು ಸೂರ್ಯಕುಮಾರ್ ಮತ್ತು ರವೀಂದ್ರ ಜಡೇಜಾ ಗಾಯದ ಬಗ್ಗೆ ಪ್ರಮುಖ ಸುದ್ದಿ ಬೆಳಕಿಗೆ ಬಂದಿದೆ.

IND vs SA: ದೀಪಕ್ ಔಟ್! ಜಡೇಜಾ- ಸೂರ್ಯಕುಮಾರ್ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ಬಿಸಿಸಿಐ
ಸೂರ್ಯಕುಮಾರ್ ಮತ್ತು ರವೀಂದ್ರ ಜಡೇಜಾ
TV9 Web
| Updated By: ಪೃಥ್ವಿಶಂಕರ|

Updated on: May 18, 2022 | 4:35 PM

Share

ಟೀಂ ಇಂಡಿಯಾ (Team India) ಆಟಗಾರರು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಸೀಸನ್​ನಲ್ಲಿ (IPL2022) ನಿರತರಾಗಿದ್ದಾರೆ. ಆದರೆ ಅದರ ನಂತರ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಪ್ರಾರಂಭಿಸಲಿದ್ದಾರೆ. ಐಪಿಎಲ್ ನಂತರ, ಭಾರತ ಜೂನ್-ಜುಲೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನು ಹಾಗೂ ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಆಡಬೇಕಾಗಿದೆ. ಆದರೆ ಆಯ್ಕೆಗಾರರ ​​ಮುಂದಿರುವ ಸಮಸ್ಯೆ ಗಾಯಗೊಂಡಿರುವ ಭಾರತದ ಆಟಗಾರರದ್ದಾಗಿದೆ. ಈ ಐಪಿಎಲ್​ನಲ್ಲಿ ಅನೇಕ ಭಾರತೀಯ ಕ್ರಿಕೆಟಿಗರು ಗಾಯಗೊಂಡು ಲೀಗ್‌ನಿಂದ ಹೊರಗುಳಿದಿದ್ದಾರೆ. ಆದ್ದರಿಂದ ಟೀಮ್ ಇಂಡಿಯಾದ ಆಯ್ಕೆದಾರರಿಗೆ ತಲೆನೋವು ಹೆಚ್ಚಿದೆ. ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ರವೀಂದ್ರ ಜಡೇಜಾ (Ravindra Jadeja) ಲೀಗ್‌ನಿಂದ ಹೊರಗುಳಿದಿದ್ದಾರೆ. ಇದೀಗ ಅವರು ತಂಡಕ್ಕೆ ಮರಳುವ ಬಗ್ಗೆ ದೊಡ್ಡ ಅಪ್‌ಡೇಟ್ ಬಂದಿದೆ. ಇದರೊಂದಿಗೆ ದೀಪಕ್ ಚಹಾರ್ ಬಗ್ಗೆಯೂ ದೊಡ್ಡ ಸುದ್ದಿ ಹೊರಬಿದ್ದಿದೆ.

InsideSport ವೆಬ್‌ಸೈಟ್‌ನ ವರದಿಯ ಪ್ರಕಾರ, ಸೂರ್ಯಕುಮಾರ್ ಮತ್ತು ಜಡೇಜಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಲಭ್ಯವಿಲ್ಲ. ಆದರೆ ಇಬ್ಬರೂ ಇಂಗ್ಲೆಂಡ್ ಪ್ರವಾಸದಲ್ಲಿ ತಂಡಕ್ಕೆ ಮರಳಬಹುದು. ಬಿಸಿಸಿಐ ಮೂಲವೊಂದನ್ನು ಉಲ್ಲೇಖಿಸಿ, ದೀಪಕ್ ಚಹಾರ್ ಬಹಳ ಸಮಯದಿಂದ ಹೊರಗುಳಿದಿದ್ದಾರೆ. “ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಅವರು ಲಭ್ಯವಿಲ್ಲ. ಆದರೆ ಸೂರ್ಯಕುಮಾರ್ ಮತ್ತು ಜಡೇಜಾ ಇಂಗ್ಲೆಂಡ್ ಪ್ರವಾಸದ ಹೊತ್ತಿಗೆ ಅವರು ಫಿಟ್ ಆಗುತ್ತಾರೆ ಎಂದು ನಾವು ಭಾವಿಸುತ್ತೇವೆ. ಒಂದು ವೇಳೆ ಅವರು 100 ಪ್ರತಿಶತದಷ್ಟು ಫಿಟ್ ಆಗಿಲ್ಲದಿದ್ದರೂ ಸಹ, 15 ನೇ ತಾರೀಖಿನಂದು ಈ ಇಬ್ಬರನ್ನು ಇಂಗ್ಲೆಂಡ್ ಪ್ರವಾಸಕ್ಕೆ ಕಳುಹಿಸಲಾಗುವುದು. ನಂತರ ಅಲ್ಲಿ ಈ ಇಬ್ಬರು ಇಂಗ್ಲೆಂಡ್‌ನಲ್ಲಿ ತನ್ನ ಪುನರ್ವಸತಿಯನ್ನು ಪೂರ್ಣಗೊಳಿಸುತ್ತಾರೆ. ದೀಪಕ್‌ಗೆ ಸಂಬಂಧಿಸಿದಂತೆ, ಅವರ ರಿಕವರಿಗೆ ಈಗ ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ:IND vs SA: ಟೀಂ ಇಂಡಿಯಾ ಕೋಚ್ ಆಗಲಿದ್ದಾರೆ ವಿವಿಎಸ್ ಲಕ್ಷ್ಮಣ್; ದ್ರಾವಿಡ್​ಗೆ ಯಾವ ಜವಬ್ದಾರಿ?

ಇದನ್ನೂ ಓದಿ
Image
IND vs SA: ಟೀಂ ಇಂಡಿಯಾ ಕೋಚ್ ಆಗಲಿದ್ದಾರೆ ವಿವಿಎಸ್ ಲಕ್ಷ್ಮಣ್; ದ್ರಾವಿಡ್​ಗೆ ಯಾವ ಜವಬ್ದಾರಿ?
Image
MI vs SRH Highlights, IPL 2022: ಡೇವಿಡ್ ಏಕಾಂಗಿ ಹೋರಾಟ ವ್ಯರ್ಥ; ಕೊನೆಗೂ ಗೆದ್ದ ಹೈದರಾಬಾದ್
Image
KKR vs LSG Head to Head: ಪ್ಲೇ ಆಫ್​ಗೇರಲು ಕೋಲ್ಕತ್ತಾ- ಲಕ್ನೋಗೆ ಗೆಲುವು ಅಗತ್ಯ; ಮುಖಾಮುಖಿ ವರದಿ ಹೀಗಿದೆ

ಸುಂದರ್ ಮತ್ತು ನಟರಾಜನ್​ಗೆ ಫಿಟ್ನೆಸ್ ಪರೀಕ್ಷೆ ಸನ್‌ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಆಡಿದ್ದ ವಾಷಿಂಗ್ಟನ್ ಸುಂದರ್ ಮತ್ತು ಟಿ.ನಟರಾಜನ್ ಕೂಡ ಗಾಯಗೊಂಡಿದ್ದರು. ಆದರೆ ಇಬ್ಬರೂ ಕಮ್ ಬ್ಯಾಕ್ ಮಾಡಿ ಇದೀಗ ಐಪಿಎಲ್​ನಲ್ಲಿ ಆಡುತ್ತಿದ್ದಾರೆ. ಆದರೆ, ಇಬ್ಬರೂ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಿದೆ. ಆಯ್ಕೆ ಸಮಿತಿಯ ಸದಸ್ಯರು ಮಾತನಾಡಿ, ಸುಂದರ್ ಮತ್ತು ನಟರಾಜನ್ ಗಾಯದಿಂದ ಮರಳಿದ್ದಾರೆ ಮತ್ತು ಇಬ್ಬರೂ ಐಪಿಎಲ್ ಆಡುತ್ತಿದ್ದಾರೆ. ಹೀಗಾಗಿ ಇಬ್ಬರೂ ಆಡಲು ರೆಡಿಯಾಗಿದ್ದಾರೆ. ಇಬ್ಬರಿಗೂ ಫಿಟ್‌ನೆಸ್‌ ಪರೀಕ್ಷೆ ನಡೆಸಬೇಕು ಎಂಬ ಮಾಹಿತಿ ನೀಡಿದ್ದಾರೆ.

ಶಾ ಬಗ್ಗೆ ಪ್ರಶ್ನೆ ಆದರೆ, ಪೃಥ್ವಿ ಶಾ ಅವರ ಫಿಟ್‌ನೆಸ್ ಬಗ್ಗೆ ಪ್ರಶ್ನೆಗಳಿವೆ. ಈ ದೆಹಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ IPL-2022 ಕ್ಕಿಂತ ಮೊದಲು BCCI ನ ಯೋ-ಯೋ ಟೆಸ್ಟ್‌ನಲ್ಲಿ ವಿಫಲರಾಗಿದ್ದರು. ಇತ್ತೀಚೆಗಷ್ಟೇ ಟೈಫಾಯಿಡ್‌ನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಾ ಕುರಿತು ಮಾತನಾಡಿದ ಸಮಿತಿಯ ಸದಸ್ಯರು, ನೋಡಿ, ಫ್ರಾಂಚೈಸಿಯಲ್ಲಿ ಯಾವ ರೀತಿಯ ಫಿಟ್‌ನೆಸ್ ಪರೀಕ್ಷೆ ತೆಗೆದುಕೊಳ್ಳುತ್ತಾರೆ ಎಂಬುದು ನಮಗೆ ತಿಳಿದಿಲ್ಲ. ಫಿಟ್‌ನೆಸ್ ವಿಷಯದಲ್ಲಿ ತಂಡಕ್ಕೆ ಕೆಲವು ಮಾರ್ಗಸೂಚಿಗಳಿವೆ, ಅವುಗಳನ್ನು ಪೂರ್ಣಗೊಳಿಸಿದರೆ ಅವರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಅವರು ವಿಫಲವಾದರೆ ಅವರನ್ನು ತಂಡದಿಂದ ಹೊರಗಿಡಲಾಗುತ್ತದೆ ಎಂದಿದ್ದಾರೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ