IND vs SA: ಟೀಂ ಇಂಡಿಯಾ ಕೋಚ್ ಆಗಲಿದ್ದಾರೆ ವಿವಿಎಸ್ ಲಕ್ಷ್ಮಣ್; ದ್ರಾವಿಡ್ಗೆ ಯಾವ ಜವಬ್ದಾರಿ?
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾದ ಕೋಚ್ ಆಗಲಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿದೆ.
ಈ ಐಪಿಎಲ್ (IPL 2022) ನಂತರ ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವೆ T20 ಸರಣಿ ನಡೆಯಲಿದೆ. ವರದಿಗಳ ಪ್ರಕಾರ, ಆ ಐದು ಪಂದ್ಯಗಳ T20 ಸರಣಿಯಲ್ಲಿ ಅನೇಕ ಯುವ ಆಟಗಾರರು ಅವಕಾಶ ಪಡೆಯಲಿದ್ದಾರೆ. ಐಪಿಎಲ್ 2022 ರಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಬಹುದು. ಆದರೆ ವಿರಾಟ್-ರೋಹಿತ್ (Virat-Rohit ) ಮತ್ತು ಬುಮ್ರಾ ಅವರಂತಹ ಆಟಗಾರರಿಗೆ ವಿಶ್ರಾಂತಿ ನೀಡಬಹುದು. ಏತನ್ಮಧ್ಯೆ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ರಾಹುಲ್ ದ್ರಾವಿಡ್ ( Rahul Dravid) ಬದಲಿಗೆ ವಿವಿಎಸ್ ಲಕ್ಷ್ಮಣ್ (VVS Laxman) ಟೀಮ್ ಇಂಡಿಯಾದ ಕೋಚ್ ಆಗಲಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿದೆ. ಸದ್ಯ ವಿವಿಎಸ್ ಲಕ್ಷ್ಮಣ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿದ್ದು, ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸಕ್ಕೂ ತೆರಳಬೇಕಿರುವುದರಿಂದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಂಡದೊಂದಿಗೆ ಅಲ್ಲಿಂದ ತೆರಳಲಿದ್ದಾರೆ.
ಇನ್ಸೈಡ್ ಸ್ಪೋರ್ಟ್ ವರದಿಯ ಪ್ರಕಾರ, ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಬಿಸಿಸಿಐ ಅಧಿಕಾರಿಯೊಬ್ಬರು, ‘ಟೀಮ್ ಇಂಡಿಯಾ ಈಗ ಲೀಸೆಸ್ಟರ್‌ಶೈರ್‌ನಲ್ಲಿ ಅಭ್ಯಾಸ ಪಂದ್ಯವನ್ನು ಆಡಬೇಕಾಗಿದೆ. ಜೂನ್ 24 ರಿಂದ ಬರ್ಮಿಂಗ್ ಹ್ಯಾಮ್ನಲ್ಲಿ ಕೊನೆಯ ಟೆಸ್ಟ್ ಪಂದ್ಯ ನಡೆಯಲಿದ್ದು, ಜೂನ್ 15 ಅಥವಾ 16 ರಂದು ರಾಹುಲ್ ದ್ರಾವಿಡ್ ಮತ್ತು ಟೀಂ ಇಂಡಿಯಾ ಇಂಗ್ಲೆಂಡ್ಗೆ ತೆರಳಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಹೆ ತಂಡದ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಲಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ:Big news: ಐಪಿಎಲ್ನಲ್ಲಿ ಮತ್ತೆ ಕಳ್ಳಾಟ! ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ ಸಿಬಿಐ
ಎರಡು ತಂಡಗಳನ್ನು ಆಯ್ಕೆ ಕಳೆದ ವರ್ಷ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ, ಆ ಸಮಯದಲ್ಲಿ ಭಾರತದ ಬಿ ತಂಡವು ಶ್ರೀಲಂಕಾ ವಿರುದ್ಧ ODI ಮತ್ತು T20 ಸರಣಿಗಳನ್ನು ಆಡಲು ಹೋಗಿತ್ತು. ಆಗ ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ ಆದರೆ ಶ್ರೀಲಂಕಾ ಪ್ರವಾಸಕ್ಕೆ ರಾಹುಲ್ ದ್ರಾವಿಡ್ ಕೋಚ್ ಪಾತ್ರದಲ್ಲಿ ಬಂದಿದ್ದರು. ಈ ಬಾರಿಯೂ ಅಂಥದ್ದೇನಾದರೂ ಆಗಬಹುದು.
ಭಾರತ-ದಕ್ಷಿಣ ಆಫ್ರಿಕಾ ಸರಣಿ ವೇಳಾಪಟ್ಟಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಐದು ಪಂದ್ಯಗಳ ಟಿ20 ಸರಣಿ ಜೂನ್ 9 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಇದಾದ ಬಳಿಕ ಎರಡನೇ ಟಿ20-ಜೂನ್ 12 ಕಟಕ್‌ನಲ್ಲಿ, ಮೂರನೇ ಟಿ20 ಜೂನ್ 14 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಜೂನ್ 17 ರಂದು ರಾಜ್‌ಕೋಟ್‌ನಲ್ಲಿ ಮತ್ತು ಜೂನ್ 19 ರಂದು ಬೆಂಗಳೂರಿನಲ್ಲಿ ಪಂದ್ಯ ನಡೆಯಲಿದೆ.
ದಕ್ಷಿಣ ಆಫ್ರಿಕಾದ 16 ಜನರ ಟಿ20 ತಂಡ- ಟೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಎನ್ರಿಕ್ ನಾರ್ಖಿಯಾ, ವೇಯ್ನ್ ಪಾರ್ನೆಲ್, ಡ್ವೇಯ್ನ್ ಪ್ರಿಟೋರಿಯಸ್, ಕಗಿಸೋ ರಬಾಡ, ರಾಸಿ ವ್ಯಾನ್ ಡಾರ್ ಡುಸನ್, ಮಾರ್ಕೊ ಯಾನ್ಸನ್.
Published On - 3:41 pm, Wed, 18 May 22