KKR vs LSG Prediction Playing XI: ಕೋಲ್ಕತ್ತಾ ಓಪನರ್ ಯಾರು? ಲಕ್ನೋ ತಂಡದಲ್ಲೂ ಬದಲಾವಣೆ; ಸಂಭಾವ್ಯ XI

KKR vs LSG Prediction Playing XI IPL 2022: ಕೋಲ್ಕತ್ತಾಗೆ ಆರೋನ್ ಫಿಂಚ್ ಅವರನ್ನು ಎರಡನೇ ಪ್ರಮುಖ ಆರಂಭಿಕ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಆದರೆ ನಾಲ್ವರು ವಿದೇಶಿ ಆಟಗಾರರ ಕೋಟಾ ತಂಡದಲ್ಲಿ ಈಗಾಗಲೇ ನಿಗದಿಯಾಗಿದೆ ಮತ್ತು ನಾಲ್ವರೂ ಕಳೆದ ಪಂದ್ಯದಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

KKR vs LSG Prediction Playing XI: ಕೋಲ್ಕತ್ತಾ ಓಪನರ್ ಯಾರು? ಲಕ್ನೋ ತಂಡದಲ್ಲೂ ಬದಲಾವಣೆ; ಸಂಭಾವ್ಯ XI
KKR vs LSG
Follow us
TV9 Web
| Updated By: ಪೃಥ್ವಿಶಂಕರ

Updated on:May 17, 2022 | 6:49 PM

IPL 2022 ರ ಲೀಗ್ ಹಂತದ ಪಂದ್ಯಗಳು ಮುಗಿಯಲಾರಂಭಿಸಿವೆ. ಪ್ರತಿ ತಂಡವು ತಮ್ಮ ಕೊನೆಯ ಪಂದ್ಯವನ್ನು ಆಡಲು ಸಿದ್ಧವಾಗಿದೆ, ಇದು ಕೊನೆಯ ನಾಲ್ಕು ತಂಡಗಳ ಚಿತ್ರವನ್ನು ತೆರದಿಡಲಿದೆ. ಈ ಸಂಚಿಕೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (KKR vs LSG) ಮೊದಲು ಸ್ಪರ್ಧಿಸಲಿವೆ. ಮೇ 18 ಬುಧವಾರ, ನವಿ ಮುಂಬೈನಲ್ಲಿ ಎರಡು ತಂಡಗಳು ಮುಖಾಮುಖಿಯಾಗಲಿವೆ. ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿರುವ ಕೆಕೆಆರ್‌ಗೆ ಇದು ಸುಲಭದ ಸವಾಲಲ್ಲ. ಹೀಗಾಗಿ ಈ ಪಂದ್ಯವನ್ನು ಗೆಲ್ಲಲು ಕೆಕೆಆರ್ ಬಲಿಷ್ಠ ಆಟಗಾರರ ತಂಡವನ್ನು ಆಯ್ಕೆ ಮಾಡಬೇಕಿದೆ. ಅದೇ ಸಮಯದಲ್ಲಿ, ಎರಡು ಸತತ ಸೋಲಿನ ನಂತರ, ಲಕ್ನೋ ಕೂಡ ಕೆಲವು ಬದಲಾವಣೆಗಳನ್ನು ಮಾಡುವುದನ್ನು ಕಾಣಬಹುದು.

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಕೋಲ್ಕತ್ತಾಗೆ ಹೆಚ್ಚು ಮಹತ್ವದ್ದಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ ಸಂಪೂರ್ಣ ಒತ್ತು ನೀಡಲು ಬಯಸಿದೆ. ಕಳೆದೆರಡು ಪಂದ್ಯಗಳ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ಮತ್ತು ನಂತರ ಸನ್ ರೈಸರ್ಸ್ ಹೈದರಾಬಾದ್ ಸೋಲನುಭವಿಸಿತ್ತು. ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ತಂಡವು ಕೆಲವು ಬದಲಾವಣೆಗಳನ್ನು ಮಾಡಿತ್ತು, ಇದರಲ್ಲಿ ಪ್ಯಾಟ್ ಕಮಿನ್ಸ್ ಗಾಯಗೊಂಡಿದ್ದರಿಂದ ಬದಲಾವಣೆ ಇತ್ತು. ಅದೇ ಪರಿಸ್ಥಿತಿ ಈಗ ಈ ಪಂದ್ಯಕ್ಕೂ ಎದುರಾಗಿದ್ದು, ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ಅವರ ಬದಲಿಗೆ ಬೇರೆಯವರು ಕಣಕ್ಕಿಳಿಯಲಿದ್ದಾರೆ.

ಕೆಕೆಆರ್ ಓಪನರ್ ಯಾರು? ಕೋಲ್ಕತ್ತಾಗೆ ಆರೋನ್ ಫಿಂಚ್ ಅವರನ್ನು ಎರಡನೇ ಪ್ರಮುಖ ಆರಂಭಿಕ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಆದರೆ ನಾಲ್ವರು ವಿದೇಶಿ ಆಟಗಾರರ ಕೋಟಾ ತಂಡದಲ್ಲಿ ಈಗಾಗಲೇ ನಿಗದಿಯಾಗಿದೆ ಮತ್ತು ನಾಲ್ವರೂ ಕಳೆದ ಪಂದ್ಯದಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗಾಗಿ ಅವರುಗಳನ್ನು ಬದಲಾಯಿಸುವುದು ಕಷ್ಟ. ಹಾಗಾದರೆ ಕೆಕೆಆರ್ ಏನು ಮಾಡುತ್ತದೆ? ತಂಡವು ಆಡುವ XI ನಲ್ಲಿ ಮತ್ತೊಮ್ಮೆ ಶೆಲ್ಡನ್ ಜಾಕ್ಸನ್ ಅವರಿಗೆ ಅವಕಾಶ ನೀಡಲಿದ್ದು, ಸ್ಯಾಮ್ ಬಿಲ್ಲಿಂಗ್ಸ್ ಅವರಿಗೆ ಓಪನಿಂಗ್ ಜವಬ್ದಾರಿ ನೀಡಬಹುದು. ಇದನ್ನು ಹೊರತುಪಡಿಸಿ, ಬೇರೆ ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಲಾಗುವುದಿಲ್ಲ.

ಇದನ್ನೂ ಓದಿ
Image
KKR vs LSG Head to Head: ಪ್ಲೇ ಆಫ್​ಗೇರಲು ಕೋಲ್ಕತ್ತಾ- ಲಕ್ನೋಗೆ ಗೆಲುವು ಅಗತ್ಯ; ಮುಖಾಮುಖಿ ವರದಿ ಹೀಗಿದೆ
Image
ಹೃದಯಾಘಾತದಿಂದ ಮೈದಾನದಲ್ಲೇ ಸಾವನ್ನಪ್ಪಿದ ಪಾಕ್ ಕ್ರಿಕೆಟರ್; ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿರುವ ಮಡದಿ
Image
Shikhar Dhawan Acting Debut: ನಟನೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಶಿಖರ್ ಧವನ್; ಮೊದಲ ಚಿತ್ರ ಇದೇ ವರ್ಷ ರಿಲೀಸ್!

LSGಗೆ ಮರಳಿ ಮನೀಷ್? ಲಖನೌ ವಿಷಯಕ್ಕೆ ಬಂದರೆ ತಂಡ ಸತತ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಈ ಎರಡೂ ಪಂದ್ಯಗಳಲ್ಲಿ ಎಲ್‌ಎಸ್‌ಜಿ ಬ್ಯಾಟಿಂಗ್‌ ಕಳಪೆಯಾಗಿತ್ತು. ಅದರಲ್ಲೂ ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಆರಂಭಿಕ ಜೋಡಿ ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಇಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ, ಆದರೆ ಮಧ್ಯಮ ಕ್ರಮಾಂಕವು ತನ್ನ ಪೂರ್ಣ ಸಾಮರ್ಥ್ಯದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಯುವ ಬ್ಯಾಟ್ಸ್‌ಮನ್ ಆಯುಷ್ ಬಡೋನಿ ಉತ್ತಮ ಆರಂಭದ ನಂತರ ಯಾವುದೇ ವಿಶೇಷ ಸಾಧನೆ ತೋರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಕೃಷ್ಣಪ್ಪ ಗೌತಮ್​ಗೆ ಅವಕಾಶ ನೀಡಬಹುದು. ಅಂದಹಾಗೆ, ಮನೀಶ್ ಪಾಂಡೆ ಮರಳುವ ಸಾಧ್ಯತೆಯೂ ಇದೆ. ಬೌಲಿಂಗ್‌ನಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ.

KKR vs LSG: ಸಂಭಾವ್ಯ ಪ್ಲೇಯಿಂಗ್ XI ಕೋಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಸ್ಯಾಮ್ ಬಿಲ್ಲಿಂಗ್ಸ್, ನಿತೀಶ್ ರಾಣಾ, ಆಂಡ್ರೆ ರಸೆಲ್, ರಿಂಕು ಸಿಂಗ್, ಶೆಲ್ಡನ್ ಜಾಕ್ಸನ್, ಸುನಿಲ್ ನರೈನ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಮನೀಶ್ ಪಾಂಡೆ/ಕೃಷ್ಣಪ್ಪ ಗೌತಮ್, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಮೊಹ್ಸಿನ್ ಖಾನ್, ಅವೇಶ್ ಖಾನ್, ರವಿ ಬಿಷ್ಣೋಯ್

Published On - 6:49 pm, Tue, 17 May 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ