AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಚೊಚ್ಚಲ ಐಪಿಎಲ್​ನಲ್ಲೇ 368 ರನ್: ಯುವ ಆಟಗಾರ ಟೀಮ್ ಇಂಡಿಯಾ ಪರ ಆಡುವುದು ಖಚಿತ..!

IPL 2022: ಚೊಚ್ಚಲ ಸೀಸನ್​ ಐಪಿಎಲ್​ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ತಿಲಕ್ ವರ್ಮಾ 368 ರನ್​ಗಳಿಸಿದಲ್ಲದೆ, ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕಕ್ಕೆ ಹೊಸ ಶಕ್ತಿ ತುಂಬಿದ್ದಾರೆ.

IPL 2022: ಚೊಚ್ಚಲ ಐಪಿಎಲ್​ನಲ್ಲೇ 368 ರನ್: ಯುವ ಆಟಗಾರ ಟೀಮ್ ಇಂಡಿಯಾ ಪರ ಆಡುವುದು ಖಚಿತ..!
Tilak Varma
TV9 Web
| Edited By: |

Updated on: May 17, 2022 | 7:07 PM

Share

IPL 2022: ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಏಕೆಂದರೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್​ 12 ಪಂದ್ಯಗಳಲ್ಲಿ 9 ರಲ್ಲಿ ಸೋಲು ಕಂಡಿದೆ. ಇದಾಗ್ಯೂ ಮುಂಬೈ ಪರ ಆಡಿದ ಕೆಲ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಯುವ ಎಡಗೈ ದಾಂಡಿಗ ತಿಲಕ್ ವರ್ಮಾ. ಚೊಚ್ಚಲ ಐಪಿಎಲ್ ಸೀಸನ್​ ಆಡಿರುವ ತಿಲಕ್ 12 ಪಂದ್ಯಗಳಲ್ಲಿ 368 ರನ್​ಗಳಿಸಿದ್ದಾರೆ. ಈ ಮೂಲಕ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ತಿಲಕ್ ವರ್ಮಾರ ಪ್ರದರ್ಶನದ ಬಗ್ಗೆ ಇದೀಗ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar) ಕೂಡ ಹಾಡಿಹೊಗಳಿದ್ದಾರೆ.

ಯುವ ಆಟಗಾರನ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಗವಾಸ್ಕರ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಂಡ ಒತ್ತಡದಲ್ಲಿದ್ದಾಗ ತಿಲಕ್ ವರ್ಮಾ ಕ್ರೀಸ್ ಗೆ ಬಂದಿದ್ದರು. ಆರಂಭದಲ್ಲಿ ಅವರು ಇನ್ನಿಂಗ್ಸ್ ನಡೆಸಿದ ರೀತಿ ಎಲ್ಲರನ್ನು ಆಕರ್ಷಿಸಿತು. ತಿಲಕ್ ಅವರು ವೈವಿಧ್ಯಮಯ ಹೊಡೆತಗಳನ್ನು ಹೊಂದಿದ್ದಾರೆ. ಅವರ ಸಾಮರ್ಥ್ಯವು ಅವರಿಗೆ ಕ್ರಿಕೆಟ್ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುವುದನ್ನು ತೋರಿಸುತ್ತದೆ ಎಂದು ಗವಾಸ್ಕರ್ ಹೇಳಿದರು.

ಇದನ್ನೂ ಓದಿ: IPL 2022: ಏನಿದು RCB ಹಾಲ್ ಆಫ್ ಫೇಮ್ ಪ್ರಶಸ್ತಿ?

ಸ್ವಲ್ಪ ಕಷ್ಟಪಟ್ಟು, ಅವರ ಫಿಟ್ನೆಸ್ ಮತ್ತು ತಂತ್ರವನ್ನು ಸುಧಾರಿಸಿದರೆ ತಿಲಕ್ ಇನ್ನೂ ಕೂಡ ಉತ್ತಮ ಆಟಗಾರನಾಗುತ್ತಾನೆ. ಈ ಯುವ ಬ್ಯಾಟ್ಸ್‌ಮನ್ ಹಿಂದೆ ಬಂದು ಆಡುತ್ತಾರೆ. ಹಾಗೆಯೇ ಅವರು ನೇರ ಬ್ಯಾಟ್‌ನೊಂದಿಗೆ ಆಡುತ್ತಿದ್ದಾರೆ. ಮುಂಭಾಗದತ್ತ ರಕ್ಷಣಾತ್ಮಕ ಹೊಡೆತವನ್ನು ಆಡುವಾಗ, ಅವರ ಬ್ಯಾಟ್ ಪ್ಯಾಡ್‌ನ ಬಳಿ ಇರುತ್ತದೆ. ಅಂದರೆ ಆತನ ಬ್ಯಾಟಿಂಗ್ ಶೈಲಿಯು ಸರಿಯಾಗಿದೆ. ಹೀಗಾಗಿ ತಿಲಕ್ ವರ್ಮಾ ಭವಿಷ್ಯದಲ್ಲಿ ಭಾರತ ಪರ ಟೆಸ್ಟ್, ಏಕದಿನ ಹಾಗೂ ಟಿ20 ಸ್ವರೂಪಗಳಲ್ಲಿ ಆಡಲಿದ್ದಾರೆ ಎಂದು ಸುನಿಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.

ಒಟ್ಟಿನಲ್ಲಿ ಚೊಚ್ಚಲ ಸೀಸನ್​ ಐಪಿಎಲ್​ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ತಿಲಕ್ ವರ್ಮಾ 368 ರನ್​ಗಳಿಸಿದಲ್ಲದೆ, ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕಕ್ಕೆ ಹೊಸ ಶಕ್ತಿ ತುಂಬಿದ್ದಾರೆ. ಹೀಗಾಗಿ 19 ವರ್ಷದ ಯುವ ಆಟಗಾರ ಮುಂದಿನ ದಿನಗಳಲ್ಲಿ ಬಲಿಷ್ಠ ಬ್ಯಾಟ್ಸ್​ಮನ್ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್​​
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್​​
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ