AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯಾಘಾತದಿಂದ ಮೈದಾನದಲ್ಲೇ ಸಾವನ್ನಪ್ಪಿದ ಪಾಕ್ ಕ್ರಿಕೆಟರ್; ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿರುವ ಮಡದಿ

ಉಮರ್ ಖಾನ್ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇನ್ನೊಂದು ಮನಕಲುಕುವ ಘಟನೆ ಎಂದರೆ, ಉಮರ್ ಖಾನ್ ಅವರ ಪತ್ನಿಗೆ ರಕ್ತದ ಕ್ಯಾನ್ಸರ್ ಇದೆ.

ಹೃದಯಾಘಾತದಿಂದ ಮೈದಾನದಲ್ಲೇ ಸಾವನ್ನಪ್ಪಿದ ಪಾಕ್ ಕ್ರಿಕೆಟರ್; ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿರುವ ಮಡದಿ
ಉಮರ್ ಖಾನ್
TV9 Web
| Updated By: ಪೃಥ್ವಿಶಂಕರ|

Updated on:May 17, 2022 | 5:37 PM

Share

ಕ್ರಿಕೆಟ್ ಮೈದಾನದಲ್ಲಿ ಆಗಾಗ ಅಪಘಾತಗಳು ನಡೆಯುತ್ತಿರುತ್ತವೆ. ಸಾಮಾನ್ಯವಾಗಿ ಈ ಅಪಘಾತಗಳು ಆಟಗಾರನ ಪ್ರಾಣವನ್ನೇ ಕಳೆದುಕೊಳ್ಳುವಷ್ಟು ಭಯ ಹುಟ್ಟಿಸುತ್ತವೆ. ಪಾಕಿಸ್ತಾನದ ಕರಾಚಿ ನಗರದಲ್ಲಿ ಭಾನುವಾರ ಕ್ರಿಕೆಟಿಗರೊಬ್ಬರು (cricketer) ಸಾವನ್ನಪ್ಪಿದ ಇದೇ ರೀತಿಯ ಘಟನೆ ನಡೆದಿದೆ. ಪಾಕಿಸ್ತಾನಿ ಮಾಧ್ಯಮಗಳ ವರದಿಯ ಪ್ರಕಾರ, ಮೃತ ಕ್ರಿಕೆಟಿಗನ ಹೆಸರು ಉಮರ್ ಖಾನ್ ( Umar Khan) ಎಂದು ತಿಳಿದುಬಂದಿದೆ. ನಡೆದ ಘಟನೆ ಏನೆಂದರೆ, ಪಂದ್ಯದಲ್ಲಿ ಗೆದ್ದ ನಂತರ ತನ್ನ ತಂಡದೊಂದಿಗೆ ಈ ಆಟಗಾರ ಸಂಭ್ರಮಾಚರಣೆ ಮಾಡುತ್ತಿದ್ದ ಆದರೆ ಇದ್ದಕ್ಕಿದ್ದಂತೆ ಮೈದಾನದಲ್ಲೇ ಮೂರ್ಛೆ ಹೋಗಿದ್ದಾನೆ. ಕೂಡಲೇ ಉಮರ್ ಖಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ವೈದ್ಯರು ಈಗಾಗಲೇ ಉಮರ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ, ವಿಜಯದ ನಂತರ ಉಮರ್ ಖಾನ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂಬುದು ತಿಳಿದುಬಂದಿದೆ.

24 ನ್ಯೂಸ್ ಟಿವಿ ಚಾನೆಲ್ ವರದಿ ಪ್ರಕಾರ, ಕರಾಚಿಯ ಅನು ಭಾಯಿ ಪಾರ್ಕ್‌ನಲ್ಲಿ ಉಮರ್ ಖಾನ್ ಪಂದ್ಯ ಆಡುತ್ತಿದ್ದರು. ಈ ವೇಳೆ ಉಮರ್ ಉತ್ತಮ ಬೌಲಿಂಗ್ ಮಾಡುವ ಮೂಲಕ ಕೊನೆಯ ಓವರ್‌ನಲ್ಲಿ ತಮ್ಮ ತಂಡಕ್ಕೆ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಈ ಆಟಗಾರ ಕೊನೆಯ ಎಸೆತವನ್ನು ಬೌಲ್ ಮಾಡಿದ ತಕ್ಷಣ ಆತನ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಕೊನೆಯ ಎಸೆತವನ್ನು ಬೌಲ್ ಮಾಡಿದ ನಂತರ ಆತ ಮೈದಾನದಲ್ಲೇ ಕುಸಿದುಬಿದ್ದಿದ್ದಾನೆ. ಆದರೆ ಉಳಿದ ಆಟಗಾರರು ಇದನ್ನು ಗಮನಿಸದೆ ಗೆಲುವಿನ ಸಂಭ್ರಮದಲ್ಲಿ ತೊಡಗಿದ್ದಾರೆ. ಇದರ ನಂತರ ಅವರ ತಂಡದ ಸದಸ್ಯರು ಅವರನ್ನು ಅಬ್ಬಾಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಹೋಗುವಷ್ಟರಲ್ಲೇ ಉಮರ್ ಪ್ರಾಣಪಕ್ಷಿ ಹಾರಿಹೋಗಿದೆ.

ಇದನ್ನೂ ಓದಿ:PAK vs SL: ಕ್ರಿಕೆಟ್​ಗೂ ಬರೆ ಎಳೆದ ಲಂಕಾದ ತುರ್ತು ಪರಿಸ್ಥಿತಿ; ಪಾಕ್-ಲಂಕಾ ಸರಣಿ ಮುಂದೂಡಿಕೆ, ಏಕದಿನ ಸರಣಿ ರದ್ದು!

ಇದನ್ನೂ ಓದಿ
Image
Shikhar Dhawan Acting Debut: ನಟನೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಶಿಖರ್ ಧವನ್; ಮೊದಲ ಚಿತ್ರ ಇದೇ ವರ್ಷ ರಿಲೀಸ್!
Image
IND vs SA: ಭಾರತ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಪ್ರಕಟ! ಬೇಬಿ ಎಬಿಗಿಲ್ಲ ಅವಕಾಶ

ಉಮರ್ ಖಾನ್ ಪತ್ನಿಗೆ ಕ್ಯಾನ್ಸರ್ ಉಮರ್ ಖಾನ್ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇನ್ನೊಂದು ಮನಕಲುಕುವ ಘಟನೆ ಎಂದರೆ, ಉಮರ್ ಖಾನ್ ಅವರ ಪತ್ನಿಗೆ ರಕ್ತದ ಕ್ಯಾನ್ಸರ್ ಇದೆ. ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತಿದ್ದ ಉಮರ್ ಖಾನ್ ನಿಯಮಿತವಾಗಿ ಕ್ಲಬ್ ಕ್ರಿಕೆಟ್ ಆಡುತ್ತಿದ್ದರು. ಆದರೆ ಈಗ ಉಮರ್ ಅವರ ನಿಧನ ಅವರ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ಕಳೆದ ಎರಡು ದಿನಗಳಲ್ಲಿ ಕರಾಚಿಯಲ್ಲಿ ಇಬ್ಬರು ಆಟಗಾರರು ಸಾವನ್ನಪ್ಪಿದ್ದಾರೆ. ಈ ಹಿಂದೆ, ಒಬ್ಬ ಫುಟ್ಬಾಲ್ ಆಟಗಾರ ಕೂಡ ಸಾವನ್ನಪ್ಪಿದ್ದು, ಇದಕ್ಕೆ ಕಾರಣ ಅತಿಯಾದ ಬಿಸಿಲು ಎಂಬುದು ತಿಳಿದುಬಂದಿದೆ.

2 ದಿನಗಳಲ್ಲಿ ಇಬ್ಬರು ಕ್ರಿಕೆಟಿಗರು ಸಾವನ್ನಪ್ಪಿದ್ದಾರೆ ಈ ಹಿಂದೆ ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್‌ ಆಟಗಾರ ಆ್ಯಂಡ್ರ್ಯೂ ಸೈಮಂಡ್ಸ್‌ ಶನಿವಾರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಮೃತರಾಗಿದ್ದರು. ಇತ್ತೀಚೆಗಷ್ಟೇ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಸಾರ್ವಕಾಲಿಕ ಶ್ರೇಷ್ಠ ಲೆಗ್‌ ಸ್ಪಿನ್ನರ್, ಕ್ರಿಕೆಟ್‌ ದಂತಕತೆ ಶೇನ್‌ ವಾರ್ನ್‌ ಹಠಾತ್‌ ನಿಧನರಾಗಿದ್ದರು. ಇದೀಗ ಆಂಡ್ರ್ಯೂ ಸೈಮಂಡ್ಸ್ ಕೂಡ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಕಾಂಗರೋ ನಾಡಿಗೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಶನಿವಾರ ರಾತ್ರಿ ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಎಂಬಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಟೌನ್ಸ್‌ವಿಲ್ಲೆಯಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಹಾರ್ವೇ ರೇಂಜ್‌ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮಧ್ಯರಾತ್ರಿ 11ರ ಸುಮಾರಿಗೆ ಹಾರ್ವೇ ರೇಂಜ್‌ ರಸ್ತೆಯಲ್ಲಿ ಸೈಮಂಡ್ಸ್‌ ಕಾರು ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಸೈಮಂಡ್ಸ್‌ ಒಬ್ಬರೇ ಇದ್ದರು. ಅಲೈಸ್‌ ರಿವರ್‌ ಬ್ರಿಡ್ಜ್‌ ಸಮೀಪ ನಿಯಂತ್ರಣ ತಪ್ಪಿದ ಕಾರು ರಸ್ತೆಯಿಂದ ಹೊರಗೆ ಸಂಚರಿಸಿ, ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದದಾರೆ.

Published On - 5:37 pm, Tue, 17 May 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್