AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಮುಂದಿನ ಪಂದ್ಯದಲ್ಲಿ RCB, ಡೆಲ್ಲಿ ಸೋತರೆ, ಯಾರಿಗೆ ಚಾನ್ಸ್​?

IPL 2022 RCB: ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್​ಸಿಬಿ ತಂಡ ಸೋತರೆ ಪಾಯಿಂಟ್ಸ್ ಟೇಬಲ್​ನ ನಾಲ್ಕನೇ ಸ್ಥಾನಕ್ಕಾಗಿ 4 ತಂಡಗಳ ನಡುವೆ ಪೈಪೋಟಿ ಕಂಡು ಬರಲಿದೆ.

IPL 2022: ಮುಂದಿನ ಪಂದ್ಯದಲ್ಲಿ RCB, ಡೆಲ್ಲಿ ಸೋತರೆ, ಯಾರಿಗೆ ಚಾನ್ಸ್​?
RCB
TV9 Web
| Edited By: |

Updated on: May 17, 2022 | 3:36 PM

Share

IPL 2022: ಐಪಿಎಲ್​ ಸೀಸನ್​ 15 ಪಾಯಿಂಟ್ಸ್​ ಟೇಬಲ್​ನ ಟಾಪ್ 4 ಸ್ಥಾನದಿಂದ ಆರ್​ಸಿಬಿ ತಂಡವು ಹೊರಬಿದ್ದಿದೆ. ಪಂಜಾಬ್ ಕಿಂಗ್ಸ್ ವಿರುದ್ದ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಾಯಿಂಟ್ಸ್​ ಟೇಬಲ್​ನಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದೆ. ಇಲ್ಲಿ ಆರ್​ಸಿಬಿ ಹಾಗೂ ಡೆಲ್ಲಿ ತಂಡದ ಪಾಯಿಂಟ್ಸ್ 14 ಆಗಿದ್ದರೂ, ನೆಟ್​ ರನ್​ ರೇಟ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಮುಂದಿದೆ. ಇದಾಗ್ಯೂ ಆರ್​ಸಿಬಿ ತಂಡಕ್ಕೆ ಮತ್ತೆ ನಾಲ್ಕನೇ ಸ್ಥಾನಕ್ಕೇರುವ ಅವಕಾಶವಿದೆ. ಗುಜರಾತ್ ಟೈಟನ್ಸ್ ವಿರುದ್ದದ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ತಂಡವು ಭರ್ಜರಿ ಜಯ ಸಾಧಿಸಿ ಉತ್ತಮ ನೆಟ್​ ರನ್ ರೇಟ್ ಪಡೆಯುವ ಮೂಲಕ ಪಾಯಿಂಟ್ಸ್​ ಟೇಬಲ್​ನಲ್ಲಿ ನಾಲ್ಕನೇ ಸ್ಥಾನಕ್ಕೇರಬಹುದು. ಈ ಮೂಲಕ ಪ್ಲೇಆಫ್​ಗೆ ಅರ್ಹತೆ ಪಡೆಯಬಹುದು.

ಆದರೆ ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಒಂದು ಪಂದ್ಯವಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಗೆದ್ದರೆ, ಆರ್​ಸಿಬಿ ಗುಜರಾತ್ ಟೈಟನ್ಸ್​ ವಿರುದ್ದ ಜಯ ಸಾಧಿಸಿದರೆ ನೆಟ್ ರನ್​ ರೇಟ್​ ಲೆಕ್ಕಾಚಾರಗಳು ಮುನ್ನಲೆಗೆ ಬರಲಿದೆ. ಇಲ್ಲಿ ಉತ್ತಮ ನೆಟ್ ರನ್​ ಹೊಂದಿರುವ ಕಾರಣ ಡೆಲ್ಲಿಗೆ ಪ್ಲೇಆಫ್ ಚಾನ್ಸ್ ಹೆಚ್ಚಿದೆ. ಇದಾಗ್ಯೂ ಆರ್​ಸಿಬಿ ಗುಜರಾತ್ ಟೈಟನ್ಸ್​ ವಿರುದ್ದ ಭರ್ಜರಿ ಜಯ ಸಾಧಿಸಿದ್ರೆ ಡೆಲ್ಲಿ ತಂಡವನ್ನು ಹಿಂದಿಕ್ಕಿ ಪ್ಲೇಆಫ್​ಗೇರಬಹುದು.

ಒಂದು ವೇಳೆ ಈ ಪಂದ್ಯದಲ್ಲಿ ಡೆಲ್ಲಿ ತಂಡವು ಸೋತರೆ ಆರ್​ಸಿಬಿ ತಂಡದ ಹಾದಿ ಸುಲಭವಾಗಲಿದೆ. ಅಂದರೆ ಗುಜರಾತ್ ಟೈಟನ್ಸ್ ವಿರುದ್ದ ಆರ್​ಸಿಬಿ ಗೆದ್ದರೆ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಫಲಿತಾಂಶದಿಂದ ಪ್ಲೇಆಫ್​ ಬಹುತೇಕ ನಿರ್ಧಾರವಾಗಲಿದೆ. ಅಂದರೆ ಡೆಲ್ಲಿ ವಿರುದ್ದ ಮುಂಬೈ ಇಂಡಿಯನ್ಸ್ ಗೆದ್ದರೆ ಆರ್​ಸಿಬಿ ತಂಡದ ಪ್ಲೇಆಫ್ ಅರ್ಹತೆ ಖಚಿತವಾಗಲಿದೆ.

ಇದನ್ನೂ ಓದಿ
Image
IPL 2022: ಎಬಿಡಿ, ಕ್ರಿಸ್ ಗೇಲ್​ಗೆ RCB ಯ ಹಾಲ್ ಆಫ್ ಫೇಮ್ ಗೌರವ
Image
IPL 2022: ಇಬ್ಬರು ಯುವ ಆಟಗಾರರ ಪ್ರದರ್ಶನಕ್ಕೆ ಗಂಗೂಲಿ ಫಿದಾ..!
Image
Virat Kohli: ಕಳಪೆ ಫಾರ್ಮ್​ ನಡುವೆಯೂ 2 ದಾಖಲೆ ಬರೆದ ಕಿಂಗ್ ಕೊಹ್ಲಿ
Image
IPL 2022: RCB ತಂಡದ ಸೋಲಿಗೆ ಇವರಿಬ್ಬರೇ ಕಾರಣ..!

ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ಸೋತು, ಆರ್​ಸಿಬಿ ತಂಡ ಕೂಡ ಗುಜರಾತ್ ಟೈಟನ್ಸ್ ವಿರುದ್ದ ಸೋತರೆ, ಪ್ಲೇಆಫ್​ ಲೆಕ್ಕಾಚಾರ ಜಟಿಲವಾಗಲಿದೆ. ಏಕೆಂದರೆ ಎರಡೂ ತಂಡಗಳ ನೆಟ್​ ರನ್​ ರೇಟ್ ಮೂಲಕ ನಾಲ್ಕನೇ ಸ್ಥಾನ ನಿರ್ಧಾರವಾಗಲಿದೆ. ಅಂದರೆ ಉಭಯ ತಂಡಗಳ ಪಾಯಿಂಟ್ಸ್ 14 ಆಗಿರಲಿದ್ದು, ಉತ್ತಮ ನೆಟ್ ರನ್​ ರೇಟ್ ಹೊಂದಿರುವ ತಂಡ ಪ್ಲೇಆಫ್​ಗೆ ಅರ್ಹತೆ ಪಡೆಯಬಹುದು. ಇಲ್ಲಿ ಆರ್​ಸಿಬಿ ತಂಡದ ನೆಟ್​ ರನ್​ ರೇಟ್​ ಮೈನಸ್​ನಲ್ಲಿ ಇರುವ ಕಾರಣ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್​ ವಿರುದ್ದ ಹೀನಾಯವಾಗಿ ಸೋಲಬೇಕಾಗುತ್ತದೆ. ಅಂದರೆ ಮಾತ್ರ ಆರ್​ಸಿಬಿ ತಂಡ ಗುಜರಾತ್ ಟೈಟನ್ಸ್ ವಿರುದ್ದ ಸೋತರೂ ಪ್ಲೇಆಫ್​ಗೆ ಅರ್ಹತೆ ಪಡೆಯಬಹುದು.

ಇಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್​ಸಿಬಿ ಮುಂದಿನ ಪಂದ್ಯಗಳಲ್ಲಿ ಸೋತರೆ, ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೂ ಪ್ಲೇಆಫ್​ಗೆ ಎಂಟ್ರಿ ಕೊಡುವ ಅವಕಾಶ ದೊರೆಯಲಿದೆ. ಏಕೆಂದರೆ ಕೆಕೆಆರ್ (12 ಪಾಯಿಂಟ್ಸ್​) ಹಾಗೂ ಪಂಜಾಬ್ ಕಿಂಗ್ಸ್​​ (12 ಪಾಯಿಂಟ್ಸ್​) ಗೆ ಇನ್ನೂ 1 ಪಂದ್ಯವಿದ್ದು, ಈ ಪಂದ್ಯದಲ್ಲಿ ಗೆದ್ದರೆ 14 ಪಾಯಿಂಟ್ಸ್ ಆಗಲಿದೆ. ಹಾಗಾಗಿ ಉತ್ತಮ ನೆಟ್ ರನ್​ ರೇಟ್ ಮೂಲಕ ಈ ತಂಡಗಳು ಗೆದ್ದರೆ 4ನೇ ಸ್ಥಾನಕ್ಕೇರಬಹುದು.

ಒಟ್ಟಿನಲ್ಲಿ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್​ಸಿಬಿ ತಂಡ ಸೋತರೆ ಪಾಯಿಂಟ್ಸ್ ಟೇಬಲ್​ನ ನಾಲ್ಕನೇ ಸ್ಥಾನಕ್ಕಾಗಿ 4 ತಂಡಗಳ ನಡುವೆ ಪೈಪೋಟಿ ಕಂಡು ಬರಲಿದೆ. ಈ ವೇಳೆ ಯಾರು ಉತ್ತಮ ನೆಟ್ ರನ್​ ರೇಟ್ ಹೊಂದಿರಲಿದೆಯೋ ಆ ತಂಡ ಪ್ಲೇಆಫ್​ಗೆ ಅರ್ಹತೆ ಪಡೆಯಲಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್​​
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್​​
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ