IPL 2022 Points Table: ಟಾಪ್ ನಾಲ್ಕರಿಂದ ಆರ್​ಸಿಬಿ ಔಟ್: ನೂತನ ಐಪಿಎಲ್ ಪಾಯಿಂಟ್ ಟೇಬಲ್ ಹೇಗಿದೆ?

IPL 2022 Orange Cap and Purple Cap: ಐಪಿಎಲ್ 2022ರ ಪಾಯಿಂಟ್ ಟೇಬಲ್ (IPL 2022 Point Table) ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬುದನ್ನು ನೋಡೋಣ.

IPL 2022 Points Table: ಟಾಪ್ ನಾಲ್ಕರಿಂದ ಆರ್​ಸಿಬಿ ಔಟ್: ನೂತನ ಐಪಿಎಲ್ ಪಾಯಿಂಟ್ ಟೇಬಲ್ ಹೇಗಿದೆ?
IPL 2022
Follow us
TV9 Web
| Updated By: Vinay Bhat

Updated on:May 17, 2022 | 12:24 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) 15ನೇ ಆವೃತ್ತಿ ರೋಚಕ ಘಟ್ಟದತ್ತ ಸಾಗುತ್ತಿದೆ. ಒಂದು ತಂಡದ ಸೋಲು-ಗೆಲುವು ಇನ್ನೊಂದು ತಂಡದ ಅಳಿವು-ಉಳಿವಿನ ಲೆಕ್ಕಚಾರ ಆರಂಭವಾಗಿದೆ. ಈ ಬಾರಿ ಹಿಂದಿನ ಸೀಸನ್​ನಲ್ಲಿ ನೀರಸ ಪ್ರದರ್ಶನ ತೋರುತ್ತಿದ್ದ ತಂಡ ಹೊಸ ಆಟಗಾರರನ್ನು ಸೇರಿಸಿ ಭರ್ಜರಿ ಪ್ರದರ್ಶನ ತೋರುತ್ತಿದ್ದರೆ, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಇದರ ನಡುವೆ ಎರಡು ಹೊಸ ತಂಡಗಳಾದ ಗುಜರಾತ್ ಮತ್ತು ಲಖನೌ ಕೂಡ ನಿರೀಕ್ಷೆ ಹುಟ್ಟಿಸಿದ್ದು, ಹಾರ್ದಿಕ್ ಪಡೆ ಕ್ವಾಲಿಫೈ ಆದ ಮೊದಲ ತಂಡವಾಗಿದೆ. ಈ ಬಾರಿ ಅತಿ ಹೆಚ್ಚು ರನ್ ಕಲೆಹಾಕಿದವರಿಗೆ ಆರೆಂಜ್ ಕ್ಯಾಪ್, ಅತಿ ಹೆಚ್ಚು ವಿಕೆಟ್ ಕಿತ್ತವರು ಪರ್ಪಲ್ ಕ್ಯಾಪ್ ಧರಿಸುತ್ತಾರೆ. ಹಾಗಾದ್ರೆ ಐಪಿಎಲ್ 2022ರ ಪಾಯಿಂಟ್ ಟೇಬಲ್ (IPL 2022 Point Table) ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬುದನ್ನು ನೋಡೋಣ.

ಪಾಯಿಂಟ್ ಟೇಬಲ್:

  1. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನದಲ್ಲಿದ್ದು ಕ್ವಾಲಿಫೈ ಆದ ಮೊದಲ ತಂಡವಾಗಿದೆ. ಆಡಿದ 13 ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಸೋಲು, ಹತ್ತರಲ್ಲಿ ಗೆಲುವು ಕಂಡು 20 ಅಂಕದೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ. ಗುಜರಾತ್ ನಿವ್ವಳ ರನ್ ರೇಟ್ +0.391 ಆಗಿದೆ.
  2. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಎರಡನೇ ಸ್ಥಾನಕ್ಕೆ ಜಿಗಿದಿದೆ. ಇವರು ಆಡಿದ 13 ಪಂದ್ಯಗಳ ಪೈಕಿ ಎಂಟರಲ್ಲಿ ಗೆಲುವು ಐದರಲ್ಲಿ ಸೋಲುಂಡು ಒಟ್ಟು 16 ಅಂಕ ಸಂಪಾದಿಸಿದೆ. ಆರ್​ಆರ್​ +0.304 ರನ್​​ರೇಟ್ ಹೊಂದಿದೆ.
  3. ಇದನ್ನೂ ಓದಿ
    Image
    BS Chandrasekhar: ಪೋಲಿಯೋ ಕೈಯಿಂದ ವಿಶ್ವಶ್ರೇಷ್ಠ ಲೆಗ್ ಸ್ಪಿನ್ನರ್: ಇಂದು ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಬಿಎಸ್ ಚಂದ್ರಶೇಖರ್ ಹುಟ್ಟುಹಬ್ಬ
    Image
    ಭಾರತದಿಂದ ಜಮೈಕಾಕ್ಕೆ ಕ್ರಿಕೆಟ್ ಕಿಟ್ ಉಡುಗೊರೆ: ಇದೊಂದು ಹೆಮ್ಮೆಯ ಕ್ಷಣ ಎಂದ ಜಮೈಕಾ ಕ್ರಿಕೆಟ್ ಮುಖ್ಯಸ್ಥ
    Image
    David Warner: ಸರ್ಫರಾಜ್​ರನ್ನು ತಡೆದು ನಾನು ಮೊದಲ ಬಾಲ್ ಆಡುತ್ತೇನೆ ಎಂದು ಕೈಸುಟ್ಟುಕೊಂಡ ವಾರ್ನರ್
    Image
    RCB, IPL 2022: ತೂಗುಯ್ಯಾಲೆಯಲ್ಲಿ ಆರ್​​ಸಿಬಿ ಪ್ಲೇ ಆಫ್ ಭವಿಷ್ಯ: ಆ ಒಂದು ಪಂದ್ಯದ ಮೇಲೆ ಎಲ್ಲರ ಕಣ್ಣು
  4. ಮತ್ತೊಂದು ಹೊಸ ತಂಡವಾದ ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ ಮೂರನೇ ಸ್ಥಾನಕ್ಕೆ ಕುಸಿದಿದೆ. ಆಡಿದ 13 ಪಂದ್ಯಗಳ ಪೈಕಿ ಎಂಟರಲ್ಲಿ ಗೆದ್ದು ಐದು ಪಂದ್ಯಗಳಲ್ಲಿ ಸೋತು ಒಟ್ಟು 16 ಅಂಕದೊಂದಿಗೆ ಲಖನೌದ ನಿವ್ವಳ ರನ್ ರೇಟ್ 0.262 ಆಗಿದೆ.
  5. ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್​ ವಿರುದ್ಧ ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. 14 ಅಂಕದೊಂದಿಗೆ ಡೆಲ್ಲಿಯ ನಿವ್ವಳ ರನ್ ರೇಟ್ 0.255 ಆಗಿದೆ.
  6. ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐದನೇ ಸ್ಥಾನಕ್ಕೆ ಕುಸಿದಿದೆ. ಆಡಿದ 13 ಪಂದ್ಯಗಳಲ್ಲಿ ಆರರಲ್ಲಿ ಸೋಲು ಏಳರಲ್ಲಿ ಗೆಲುವು ಕಂಡಿದೆ. 14 ಅಂಕದೊಂದಿಗೆ RCB ನಿವ್ವಳ ರನ್ ರೇಟ್ -0.323 ಆಗಿದೆ.
  7. ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರನೇ ಸ್ಥಾನದಲ್ಲಿದೆ. ಆಡಿದ 13 ಪಂದ್ಯಗಳ ಪೈಕಿ ಆರರಲ್ಲಿ ಗೆಲುವು, ಏಳರಲ್ಲಿ ಸೋಲು ಕಂಡು ಒಟ್ಟು 12 ಅಂಕದೊಂದಿಗೆ 0.160 ರನ್​​ರೇಟ್​ ಹೊಂದಿದೆ.
  8. ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಏಳನೇ ಸ್ಥಾನದಲ್ಲಿದೆ. 13 ಪಂದ್ಯಗಳ ಪೈಕಿ 6 ರಲ್ಲಿ ಗೆಲುವು ಏಳರಲ್ಲಿ ಸೋಲು ಕಂಡು 12 ಅಂಕದೊಂದಿಗೆ ಪಂಜಾಬ್ ನಿವ್ವಳ ರನ್ ರೇಟ್ -0.043 ಆಗಿದೆ.
  9. ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಎಂಟನೇ ಸ್ಥಾನಕ್ಕೆ ಕುಸಿದಿದೆ. ಆಡಿದ 12 ಪಂದ್ಯಗಳಲ್ಲಿ ಐದರಲ್ಲಷ್ಟೆ ಜಯ ಸಾಧಿಸಿ 10 ಅಂಕ ಸಂಪಾದಿಸಿ -0.270 ರನ್ ರೇಟ್ ಹೊಂದಿದೆ.
  10. ಇತ್ತ ಆಡಿದ 13 ಪಂದ್ಯಗಳ ಪೈಕಿ 9 ರಲ್ಲಿ ಸೋಲು ನಾಲ್ಕರಲ್ಲಿ ಗೆಲುವು ಕಂಡಿರುವ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ಅಂಕದೊಂದಿಗೆ -0.206 ರನ್​ರೇಟ್​​ ಹೊಂದಿ ಎಂಟನೇ ಸ್ಥಾನದಲ್ಲಿದೆ.
  11. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಎಂಐ ಆಡಿದ 12 ಪಂದ್ಯದ ಪೈಕಿ ಮೂರರಲ್ಲಿ ಜಯ ಸಾಧಿಸಿದೆ. ಮುಂಬೈ ನಿವ್ವಳ ರನ್ ರೇಟ್ -0.613.

ಆರೆಂಜ್ ಕ್ಯಾಪ್:

ಅತಿ ಹೆಚ್ಚು ರನ್ ಗಳಿಸಿದವರ ಮೊದಲ ಸ್ಥಾನದಲ್ಲಿ ಆರ್​ ಆರ್​ ತಂಡದ ಜೋಸ್ ಬಟ್ಲರ್ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದ್ದು ಮೂರು ಅರ್ಧಶತಕ 3 ಶತಕದೊಂದಿಗೆ ಇವರು 13 ಪಂದ್ಯಗಳಿಂದ 627 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಲಖನೌ ತಂಡದ ನಾಯಕ ಕೆಎಲ್ ರಾಹುಲ್ ಎರಡನೇ ಸ್ಥಾನದಲ್ಲಿದ್ದು 13 ಪಂದ್ಯಗಳಿಂದ 469 ರನ್ ಗಳಿಸಿದ್ದಾರೆ. ಮೂರನೇ ಸ್ಥಾನಕ್ಕೆ ಡೆಲ್ಲಿ ಬ್ಯಾಟರ್ ಡೇವಿಡ್ ವಾರ್ನರ್ ಜಿಗಿದಿದ್ದು 11 ಪಂದ್ಯಗಳಿಂದ 427 ರನ್ ಕಲೆಹಾಕಿದ್ದಾರೆ. ಶಿಖರ್ ಧವನ್ ನಾಲ್ಕನೇ ಸ್ಥಾನದಲ್ಲಿದ್ದು 13 ಪಂದ್ಯಗಳಿಂದ 421 ರನ್ ಸಿಡಿಸಿದ್ದಾರೆ. ದೀಪಕ್ ಹೂಡ 13 ಪಂದ್ಯಗಳಲ್ಲಿ 406 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್:

ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಯುಜ್ವೇಂದ್ರ ಚಹಲ್ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಇವರು ಆಡಿದ 13 ಪಂದ್ಯಗಳಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದು 24 ವಿಕೆಟ್ ಕಬಳಿಸಿದ್ದಾರೆ. ವನಿಂದು ಹಸರಂಗ ಎರಡನೇ ಸ್ಥಾನಕ್ಕೆ ಕುಸಿದಿದ್ದು 13 ಪಂದ್ಯಗಳಿಂದ 23 ವಿಕೆಟ್ ಕಿತ್ತಿದ್ದಾರೆ. ಮೂರನೇ ಸ್ಥಾನದಲ್ಲಿ ಕಗಿಸೊ ರಬಾಡ ಅವರಿದ್ದು 12 ಪಂದ್ಯಗಳಿಂದ 22 ವಿಕೆಟ್ ತಮ್ಮದಾಗಿಸಿದ್ದಾರೆ.  ಕುಲ್ದೀಪ್ ಯಾದವ್ 4ನೇ ಸ್ಥಾನದಲ್ಲಿದ್ದು 13 ಪಂದ್ಯಗಳಲ್ಲಿ 20 ವಿಕೆಟ್ ಪಡೆದಿದ್ದಾರೆ. ಮೊಹಮ್ಮದ್ ಶಮಿ 13 ಪಂದ್ಯಗಳಲ್ಲಿ 18 ವಿಕೆಟ್ ಪಡೆದು 5ನೇ ಸ್ಥಾನದಲ್ಲಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:24 pm, Tue, 17 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ