BS Chandrasekhar: ಪೋಲಿಯೋ ಕೈಯಿಂದ ವಿಶ್ವಶ್ರೇಷ್ಠ ಲೆಗ್ ಸ್ಪಿನ್ನರ್: ಇಂದು ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಬಿಎಸ್ ಚಂದ್ರಶೇಖರ್ ಹುಟ್ಟುಹಬ್ಬ

Happy Birthday BS Chandrasekhar: 1945, ಮೇ 17 ರಂದು ಮೈಸೂರಿನಲ್ಲಿ ಜನಿಸಿದ ಚಂದ್ರಶೇಖರ್ ಇಂದು 77ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಲೆಗ್ ಸ್ಪಿನ್ನರ್ ಆಗಿದ್ದ ಇವರು 1964ರಿಂದ 1979ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

BS Chandrasekhar: ಪೋಲಿಯೋ ಕೈಯಿಂದ ವಿಶ್ವಶ್ರೇಷ್ಠ ಲೆಗ್ ಸ್ಪಿನ್ನರ್: ಇಂದು ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಬಿಎಸ್ ಚಂದ್ರಶೇಖರ್ ಹುಟ್ಟುಹಬ್ಬ
BS Chandrasekhar
Follow us
TV9 Web
| Updated By: Vinay Bhat

Updated on:May 17, 2022 | 12:05 PM

ಭಾರತೀಯ ಕ್ರಿಕೆಟ್ (Indian Cricket) ಕಂಡ ಶ್ರೇಷ್ಠ ಸ್ಪಿನ್ ಬೌಲರ್ ದಿಗ್ಗಜ ಬಿಎಸ್ ಚಂದ್ರಶೇಖರ್ (BS Chandrasekhar) ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 1945, ಮೇ 17 ರಂದು ಮೈಸೂರಿನಲ್ಲಿ ಜನಿಸಿದ ಚಂದ್ರಶೇಖರ್ ಇಂದು 77ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಲೆಗ್ ಸ್ಪಿನ್ನರ್ ಆಗಿದ್ದ ಇವರು 1964ರಿಂದ 1979ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ತಮ್ಮ ಮಾರಕ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದ್ದ ಚಂದ್ರಶೇಖರ್ ಇಎಎಸ್ ಪ್ರಸನ್ನ, ಬಿಷನ್ ಸಿಂಗ್ ಬೇಡಿ ಹಾಗೂ ಎಸ್ ವೆಂಕಟ ರಾಘವನ್ ಅವರ ಜೊತೆಗೆ ಭಾರತ ತಂಡದ ದೊಡ್ಡ ಅಸ್ತ್ರವಾಗಿದ್ದರು. 16 ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ಚಂದ್ರಶೇಖರ್ ಅವರು ಬಾಲ್ಯದಲ್ಲಿ ಬೌಲರ್​ ಆಗಬೇಕೆಂದು ಕನಸು ಕಂಡರೂ ಆರಂಭದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿವಹಿಸಿಕೊಳ್ಳುತ್ತಿದ್ದರಂತೆ. ಕಾರಣ ತಮ್ಮಲ್ಲಿನ ನೂನ್ಯತೆ. ಆದರೆ ಅದೊಂದು ದಿನ ಬೌಲಿಂಗ್ ಮಾಡಲು ಪ್ರಯಸ್ನಿದಾಗ ಚೆಂಡು ತುಸು ಜಾಸ್ತಿಯೇ ಸ್ಪಿನ್ ಆಗಿ ಐದಕ್ಕೂ ಹೆಚ್ಚು ವಿಕೆಟ್ ಲಭಿಸಿತು. ಅಲ್ಲಿಂದ ಗ್ಲೌಸ್ ಕೆಳಗಿಟ್ಟ ಚಂದ್ರಶೇಖರ್ ಬೌಲಿಂಗ್ ಅಭ್ಯಾಸಕ್ಕೆ ಇಳಿಯುತ್ತಾರೆ.

ಸಾಮಾನ್ಯವಾಗಿ ಸ್ಪಿನ್ ಬೌಲರ್​ಗಳು ನಿಧಾನಗತಿಯಲ್ಲಿ ಚೆಂಡನ್ನು ಎಸೆಯುತ್ತಿದ್ದರು. ಆದರೆ ಚಂದ್ರಶೇಖರ್ ಅವರಿಂದ ಬರುತ್ತಿದ್ದ ಬಾಲ್ ಯಾವುದೇ ವೇಗದ ಚೆಂಡಿಗಿಂತಲೂ ಕಡಿಮೆ ಇರಲಿಲ್ಲ. ಅದರಲ್ಲೂ ಅವರು ಎಸೆಯುತ್ತಿದ್ದ ಚೆಂಡು ಪುಟಿದೇಳುತ್ತಿತ್ತು. ಯಾವುದು ನೂನ್ಯತೆ ಎಂದು ಭಾವಿಸಿದರೋ ಅದೇ ಪೋಲಿಯೋ ಕೈ ಮುಂದೆ ಸ್ಪಿನ್ ಮೋಡಿಗೆ ನೆರವಾಯಿತು.

ಇದನ್ನೂ ಓದಿ
Image
ಭಾರತದಿಂದ ಜಮೈಕಾಕ್ಕೆ ಕ್ರಿಕೆಟ್ ಕಿಟ್ ಉಡುಗೊರೆ: ಇದೊಂದು ಹೆಮ್ಮೆಯ ಕ್ಷಣ ಎಂದ ಜಮೈಕಾ ಕ್ರಿಕೆಟ್ ಮುಖ್ಯಸ್ಥ
Image
David Warner: ಸರ್ಫರಾಜ್​ರನ್ನು ತಡೆದು ನಾನು ಮೊದಲ ಬಾಲ್ ಆಡುತ್ತೇನೆ ಎಂದು ಕೈಸುಟ್ಟುಕೊಂಡ ವಾರ್ನರ್
Image
RCB, IPL 2022: ತೂಗುಯ್ಯಾಲೆಯಲ್ಲಿ ಆರ್​​ಸಿಬಿ ಪ್ಲೇ ಆಫ್ ಭವಿಷ್ಯ: ಆ ಒಂದು ಪಂದ್ಯದ ಮೇಲೆ ಎಲ್ಲರ ಕಣ್ಣು
Image
Thomas Cup: ಥಾಮಸ್ ಕಪ್ ವಿಜೇತರಿಗೆ ಕೇಂದ್ರದಿಂದ 1 ಕೋಟಿ, ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಬಹುಮಾನ ಘೋಷಣೆ

ಸ್ಪಿನ್ ಮೋಡಿ ಬಳಕೆಗೆ ಬರುತ್ತಿದ್ದಂತೆ ದೊಡ್ಡ ಕನಸಿನೊಂದಿಗೆ ಬಿ.ಎಸ್ ಚಂದ್ರಶೇಖರ್ ಅವರು ಬೆಂಗಳೂರಿನ ಸಿಟಿ ಕ್ರಿಕಿಟರ್ಸ್ ತಂಡಕ್ಕೆ ಸೇರಿದರು. ಅಲ್ಲಿ ಸ್ಪಿನ್ , ಗೂಗ್ಲಿ, ಲೆಗ್ ಬ್ರೇಕ್ ಬೌಲಿಂಗ್​ ಮೂಲಕ ಕಮಾಲ್ ಮಾಡಿದ ಕನ್ನಡಿಗ ಶೀಘ್ರದಲ್ಲಿಯೇ ಕರ್ನಾಟಕದ ರಣಜಿ ತಂಡದಲ್ಲೂ ಸ್ಥಾನ ಪಡೆದರು. ಕರ್ನಾಟಕದ ಪರವಾಗಿ ಕಣಕ್ಕಿಳಿದ ಚಂದ್ರಶೇಖರ್ ಅವರ ಮಾಂತ್ರಿಕ ಸ್ಪಿನ್​ಗೆ ಎದುರಾಳಿ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಪರೇಡ್ ಮಾಡುತ್ತಿದ್ದರು.

ಚಂದ್ರಶೇಖರ್ ಅವರು ಒಟ್ಟು 58 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 242 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿದ ರನ್‌ಗಿಂತ ಅಧಿಕ ವಿಕೆಟ್ ಪಡೆದ ವಿಶ್ವದ ಕೆಲವೇ ಕೆಲವು ಆಟಗಾರರ ಪೈಕಿ ಚಂದ್ರಶೇಖರ್ ಕೂಡ ಒಬ್ಬರಾಗಿದ್ದಾರೆ. 1976ರ ಫೆಬ್ರುವರಿ 22ರಲ್ಲಿ ಅಂತರರಾಷ್ಟ್ರೀಯ ಓಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, ಆಡಿದ ಒಂದೇ ಒಂದು ಪಂದ್ಯದಲ್ಲಿ ಮೂರು ವಿಕೆಟ್‌ ಕಬಳಿಸಿದ್ದರು. ನಂತರ, ಏಕದಿನ ಕ್ರಿಕೆಟ್‌ನಲ್ಲಿ ಬಿಎಸ್‌ ಚಂದ್ರಶೇಖರ್‌ ಮುಂದುವರಿಯಲಿಲ್ಲ.

ಇನ್ನು ಕರ್ನಾಟಕದ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬಿಎಸ್‌ಸಿ, 246 ಪಂದ್ಯಗಳಿಂದ 1063 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲಿಸ್ಟ್‌ ‘ಎ’ 7 ಪಂದ್ಯಗಳಿಂದ 8 ವಿಕೆಟ್‌ ಕಿತ್ತಿದ್ದಾರೆ. 1972ರಲ್ಲಿ ಚಂದ್ರಶೇಖರ್ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. 2002ರಲ್ಲಿ ವಿಸ್ಡನ್‌ನ “ಶತಮಾನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ” ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:05 pm, Tue, 17 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ