ಭಾರತದಿಂದ ಜಮೈಕಾಕ್ಕೆ ಕ್ರಿಕೆಟ್ ಕಿಟ್ ಉಡುಗೊರೆ: ಇದೊಂದು ಹೆಮ್ಮೆಯ ಕ್ಷಣ ಎಂದ ಜಮೈಕಾ ಕ್ರಿಕೆಟ್ ಮುಖ್ಯಸ್ಥ

ಎರಡು ದೇಶಗಳ ನಡುವೆ ಕ್ರೀಡಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಒಪ್ಪಂದವೊಂದು ಆಗುತ್ತಿದ್ದು, ಇದು ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿದೆ. ಇದರ ನಡುವೆ ಜಮೈಕಾದ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳಿಗೆ ಭಾರತದ ಕಡೆಯಿಂದ ಕಿಟ್‌ಗಳ ಉಡುಗೊರೆ ನೀಡಿದ್ದಾರೆ.

ಭಾರತದಿಂದ ಜಮೈಕಾಕ್ಕೆ ಕ್ರಿಕೆಟ್ ಕಿಟ್ ಉಡುಗೊರೆ: ಇದೊಂದು ಹೆಮ್ಮೆಯ ಕ್ಷಣ ಎಂದ ಜಮೈಕಾ ಕ್ರಿಕೆಟ್ ಮುಖ್ಯಸ್ಥ
Ram Nath Kovind and Billy Heaven
Follow us
TV9 Web
| Updated By: Vinay Bhat

Updated on: May 17, 2022 | 11:13 AM

ಜಮೈಕಾಗೆ ನಾಲ್ಕು ದಿನದ ಭೇಟಿ ನಡೆಸಿರುವ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಅವರಿಗೆ ಕಿಂಗ್ಸ್‌ಟನ್‌ನಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಜಮೈಕಾಕ್ಕೆ ಭಾರತೀಯ ಅಧ್ಯಕ್ಷರ ಮೊದಲ ಭೇಟಿ ಇದಾಗಿದೆ. ಪತ್ನಿ ಸವಿತಾ ಕೋವಿಂದ್, ಪುತ್ರಿ ಸ್ವಾತಿ ಕೋವಿಂದ್, ಕೇಂದ್ರ ಸಚಿವ ಪಂಕಜ್ ಚೌಧರಿ, ಲೋಕಸಭೆ ಸಂಸದೆ ರಮಾದೇವಿ, ಸತೀಶ್ ಕುಮಾರ್ ಗೌತಮ್ ಮತ್ತು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ರಾಷ್ಟ್ರಪತಿಗಳ ಪ್ರವಾಸದಲ್ಲಿದ್ದಾರೆ. ಈ ನಾಲ್ಕು ದಿನಗಳ ಜಮೈಕಾ ಭೇಟಿ ವೇಳೆ ರಾಮನಾಥ್ ಕೋವಿಂದ್ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಕೆಲ ಒಪ್ಪಂದಗಳಿಗೆ ಸಹಿ ಕೂಡ ಹಾಕಲಿದ್ದಾರೆ. ಪ್ರಮುಖವಾಗಿ ಈ ಎರಡು ದೇಶಗಳ ನಡುವೆ ಕ್ರೀಡಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಒಪ್ಪಂದವೊಂದು ಆಗುತ್ತಿದ್ದು, ಇದು ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿದೆ. ಇದರ ನಡುವೆ ಜಮೈಕಾದ (Jamaica) ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳಿಗೆ ಭಾರತದ ಕಡೆಯಿಂದ ಕಿಟ್‌ಗಳ ಉಡುಗೊರೆ ನೀಡಿದ್ದಾರೆ.

ಉಡುಗೊರೆ ಸ್ವೀಕರಿಸಿದ ಬಳಿಕ ಮಾತನಾಡಿದ ಜಮೈಕಾ ಕ್ರಿಕೆಟ್ ಮುಖ್ಯಸ್ಥ ವಿಲ್ಫರ್ಡ್​​ ಬಿಲ್ಲಿ ಹೆವೆನ್, “ಇದು ವೈಯಕ್ತಿಕವಾಗಿ ನನಗೆ ಮತ್ತು ಜಮೈಕಾದ ಕ್ರಿಕೆಟ್ ಸಹೋದರರಿಗೆ ಹೆಮ್ಮೆಯ ಕ್ಷಣವಾಗಿದೆ. ಭಾರತ ನೀಡಿರುವ 100 ಕ್ರಿಕೆಟ್ ಕಿಟ್‌ಗಳ ಈ ಉಡುಗೊರೆಯಿಂದ ಜಮೈಕಾ ಕ್ರಿಕೆಟ್ ಅಸೋಸಿಯೇಷನ್ ​​ಸಂತೋಷವಾಗಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
David Warner: ಸರ್ಫರಾಜ್​ರನ್ನು ತಡೆದು ನಾನು ಮೊದಲ ಬಾಲ್ ಆಡುತ್ತೇನೆ ಎಂದು ಕೈಸುಟ್ಟುಕೊಂಡ ವಾರ್ನರ್
Image
RCB, IPL 2022: ತೂಗುಯ್ಯಾಲೆಯಲ್ಲಿ ಆರ್​​ಸಿಬಿ ಪ್ಲೇ ಆಫ್ ಭವಿಷ್ಯ: ಆ ಒಂದು ಪಂದ್ಯದ ಮೇಲೆ ಎಲ್ಲರ ಕಣ್ಣು
Image
Thomas Cup: ಥಾಮಸ್ ಕಪ್ ವಿಜೇತರಿಗೆ ಕೇಂದ್ರದಿಂದ 1 ಕೋಟಿ, ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಬಹುಮಾನ ಘೋಷಣೆ
Image
MI vs SRH IPL 2022 Match Prediction: ಹೈದರಾಬಾದ್‌ ಪ್ಲೇಆಫ್​ಗೇರಬೇಕೆಂದರೆ ಮುಂಬೈ ತಂಡವನ್ನು ಸೋಲಿಸಲೇಬೇಕು

ವೆಸ್ಟ್ ಇಂಡೀಸ್​​ನಲ್ಲಿರುವ ಹೆಚ್ಚಿನವರು ಕ್ರಿಕೆಟ್ ಪ್ರೇಮಿಗಳಾಗಿದ್ದಾರೆ. ಅನೇಕ ಕ್ರಿಕೆಟ್ ದಿಗ್ಗಜರ ಹೆಸರಿನಲ್ಲಿ ಕೆರಿಬಿಯನ್ನರು ಕೂಡ ಇದ್ದಾರೆ. ಕ್ರಿಸ್ ಗೇಲ್, ಆಂಡ್ರೆ ರಸೆಲ್, ಕೀರೊನ್ ಪೊಲಾರ್ಡ್​​ರಂತಹ ಸ್ಫೋಟಕ ಆಟಗಾರರು ಇದೇ ದೇಶದವರಾಗಿದ್ದು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಟವಾಡಿದ್ದಾರೆ.

ರಾಷ್ಟ್ರಪತಿಗೆ ಜಮೈಕಾದಲ್ಲಿ ಭವ್ಯ ಸ್ವಾಗತ:

ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕಿಂಗ್ಸ್‌ಟನ್‌ನಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಇಲ್ಲಿಯ ನಾರ್ಮನ್ ಮ್ಯಾನ್ಲೀ ಇಂಟರ್ನ್ಯಾಷನಲ್ ಏರ್‌ಪೊರ್ಟ್‌ನಲ್ಲಿ ಕೋವಿಡ್ ಸ್ವಾಗತಕ್ಕೆ ಭಾರತೀಯ ಮೂಲದ ಸಮುದಾಯದವರು ಮತ್ತು ಜಮೈಕಾದ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಕೋವಿಂದ್ ಅವರಿಗೆ ಗೌರವ ರಕ್ಷೆ (ಗಾರ್ಡ್ ಆಫ್ ಆನರ್) ಹಾಗೂ 21 ಗನ್ ಸಲ್ಯೂಟ್ ವಂದನೆ ನೀಡಲಾಯಿತು. ಜಮೈಕಾದ ರಕ್ಷಣಾ ಪಡೆಗಳ ಮುಖ್ಯಸ್ಥರು (ಸಿಡಿಎಸ್) ರಾಷ್ಟ್ರಪತಿಗಳನ್ನು ಬರಮಾಡಿಕೊಂಡು ಕರೆದೊಯ್ದರು. ಈ ಸಂದರ್ಭದಲ್ಲಿ ಜಮೈಕಾಗೆ ಭಾರತೀಯ ರಾಯಭಾರಿಯಾಗಿರುವ ಮಸಕುಯ್ ರುಂಗ್‌ಸುಂಗ್ ಮತ್ತವರ ಪತ್ನಿ ಕೂಡ ಅಲ್ಲಿಗೆ ಬಂದು ಕೋವಿಂದ್‌ರನ್ನು ಭೇಟಿ ಮಾಡಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ನಾಲ್ಕು ದಿನಗಳ ಜಮೈಕಾ ಭೇಟಿ ವೇಳೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಕೆಲ ಒಪ್ಪಂದಗಳಿಗೆ ಸಹಿ ಕೂಡ ಹಾಕಲಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ