Shikhar Dhawan Acting Debut: ನಟನೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಶಿಖರ್ ಧವನ್; ಮೊದಲ ಚಿತ್ರ ಇದೇ ವರ್ಷ ರಿಲೀಸ್!

Shikhar Dhawan Acting Debut: ಶಿಖರ್ ಧವನ್ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕಾಗಿ ಅವರು ತಯಾರಿ ಕೂಡ ನಡೆಸುತ್ತಿದ್ದಾರಂತೆ. ಆದರೆ ಆ ಚಿತ್ರಕ್ಕೂ ಮೊದಲು ಈಗಾಗಲೇ ಶಿಖರ್ ಧವನ್ ಒಂದು ಚಿತ್ರದಲ್ಲಿ ನಟಿಸಿದ್ದು, ಚಿತ್ರದ ಶೂಟಿಂಗ್ ಕೂಡ ಮುಗಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

Shikhar Dhawan Acting Debut: ನಟನೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಶಿಖರ್ ಧವನ್; ಮೊದಲ ಚಿತ್ರ ಇದೇ ವರ್ಷ ರಿಲೀಸ್!
ಶಿಖರ್ ಧವನ್
Follow us
TV9 Web
| Updated By: ಪೃಥ್ವಿಶಂಕರ

Updated on:May 17, 2022 | 4:27 PM

ತಮ್ಮ ಬ್ಯಾಟಿಂಗ್ ಮೂಲಕ ಜಗತ್ತಿನಲ್ಲಿ ಕ್ರಿಕೆಟ್ ಅಭಿಮಾನಗಳ ಹೃದಯದಲ್ಲಿ ಸ್ಥಾನ ಪಡೆದಿರುವ ಕ್ರಿಕೆಟಿಗ ಶಿಖರ್ ಧವನ್ (Shikhar Dhawan) ಕ್ರೀಡಾ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಮೈದಾನದಲ್ಲಿ ಮಾರಕ ಬೌಲರ್‌ಗಳನ್ನು ಸರಿಯಾಗಿ ದಂಡಿಸಿ, ಸಿಕ್ಸರ್‌, ಬೌಂಡರಿಗಳನ್ನು ಬಾರಿಸುವ ಧವನ್​ರನ್ನು ಕ್ರಿಕೆಟ್ ಅಭಿಮಾನಿಗಳು ‘ಗಬ್ಬರ್’ ಎಂದು ಕರೆಯುತ್ತಾರೆ. ಏತನ್ಮಧ್ಯೆ, ಶಿಖರ್ ಧವನ್ ಅಭಿಮಾನಿಗಳಿಗೆ ಶುಭ ಸುದ್ದಿಯೊಂದು ಕೇಳಿಬಂದಿದೆ. ಹೌದು, ಶಿಖರ್ ಧವನ್ ಶೀಘ್ರದಲ್ಲೇ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ (Shikhar Dhawan Acting Debut). ಎಂಬ ಮಾತು ಕೇಳಿ ಬರುತ್ತಿದೆ. ವರದಿಗಳ ಪ್ರಕಾರ, ಶಿಖರ್ ಧವನ್ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕಾಗಿ ಅವರು ತಯಾರಿ ಕೂಡ ನಡೆಸುತ್ತಿದ್ದಾರಂತೆ. ಆದರೆ ಆ ಚಿತ್ರಕ್ಕೂ ಮೊದಲು ಈಗಾಗಲೇ ಶಿಖರ್ ಧವನ್ ಒಂದು ಚಿತ್ರದಲ್ಲಿ ನಟಿಸಿದ್ದು, ಚಿತ್ರದ ಶೂಟಿಂಗ್ ಕೂಡ ಮುಗಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಚಿತ್ರದ ಶೀರ್ಷಿಕೆ ಇನ್ನೂ ಬಹಿರಂಗವಾಗಿಲ್ಲ.

ಈ ಕುರಿತು ಚಿತ್ರದ ಮೂಲಗಳು ಹೇಳುವುದೆಂದರೆ, ಶಿಖರ್ ಯಾವಾಗಲೂ ನಟರನ್ನು ತುಂಬಾ ಗೌರವಿಸುತ್ತಾರೆ. ಹೀಗಿರುವಾಗ ನಟನೆಯ ಆಫರ್ ಬಂದಾಗ ಖುಷಿಯಿಂದಲೇ ಹೌದೆಂದು ಹೇಳಿ ಶೂಟಿಂಟಿಗ್​ನಲ್ಲಿ ಪಾಲ್ಗೊಂಡರು. ಅದೇ ಸಮಯದಲ್ಲಿ, ನಿರ್ದೇಶಕರು ಈ ಪಾತ್ರಕ್ಕಾಗಿ ಶಿಖರ್ ಸೂಕ್ತ ಎಂದಿದ್ದರು. ಕೆಲವು ತಿಂಗಳ ಹಿಂದೆ, ನಿರ್ಮಾಪಕರು ಈ ಚಿತ್ರಕ್ಕಾಗಿ ಶಿಖರ್ ಅವರನ್ನು ಸಂಪರ್ಕಿಸಿದ್ದರು. ಈ ಚಿತ್ರದ ಉದ್ದಕ್ಕೂ ಶಿಖರ್ ಅವರ ಪಾತ್ರ ಇರಲಿದ್ದು, ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಶಿಖರ್​ರವರದ್ದು ಅತಿಥಿ ಪಾತ್ರವಲ್ಲ. ಅಲ್ಲದೆ ಶಿಖರ್ ಅವರ ಪಾತ್ರವು ಚಿತ್ರಕ್ಕೆ ಬಹಳ ಮುಖ್ಯವಾಗಿದ್ದು, ಈ ಚಿತ್ರ ಇದೇ ವರ್ಷ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.

ರಾಮ ಸೇತು’ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದ ಶಿಖರ್ ಧವನ್ ಶಿಖರ್ ಧವನ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ ‘ರಾಮ್ ಸೇತು’ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನುಶ್ರತ್ ಭರುಚಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿಖರ್ ಸೆಟ್‌ಗೆ ಭೇಟಿ ನೀಡಿದ್ದರಿಂದ ಅವರೂ ಚಿತ್ರದ ಭಾಗವಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಮೂಲಗಳ ಪ್ರಕಾರ ಶಿಖರ್ ‘ರಾಮ ಸೇತು’ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿಲ್ಲ.

ಇದನ್ನೂ ಓದಿ
Image
IND vs SA: ಭಾರತ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಪ್ರಕಟ! ಬೇಬಿ ಎಬಿಗಿಲ್ಲ ಅವಕಾಶ
Image
PBKS vs DC Highlights, IPL 2022: ಪಂಜಾಬ್ ಮಣಿಸಿದ ಡೆಲ್ಲಿ; 5ನೇ ಸ್ಥಾನಕ್ಕಿಳಿದ ಆರ್​ಸಿಬಿ
Image
MI vs SRH IPL 2022 Match Prediction: ಹೈದರಾಬಾದ್‌ ಪ್ಲೇಆಫ್​ಗೇರಬೇಕೆಂದರೆ ಮುಂಬೈ ತಂಡವನ್ನು ಸೋಲಿಸಲೇಬೇಕು

ಅಕ್ಷಯ್ ಮತ್ತು ರಣವೀರ್ ಜೊತೆ ಉತ್ತಮ ಬಾಂಧವ್ಯ ಅಕ್ಷಯ್ ಮತ್ತು ಶಿಖರ್ ತುಂಬಾ ಆತ್ಮೀಯರು. ಇದಲ್ಲದೇ ನಟ ರಣವೀರ್ ಸಿಂಗ್ ಜೊತೆ ಶಿಖರ್ ಬಾಂಧವ್ಯ ಕೂಡ ತುಂಬಾ ಹತ್ತಿರವಾಗಿದೆ. ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ನಟನೊಂದಿಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಆರೆಂಜ್ ಕ್ಯಾಪ್​ ರೇಸ್‌ನಲ್ಲಿ ನಾಲ್ಕನೇ ಸ್ಥಾನ ಈಗ ನಡೆಯುತ್ತಿರುವ ಐಪಿಎಲ್‌ನಲ್ಲಿ ಶಿಖರ್ ಬ್ಯಾಟ್ ಅಬ್ಬರಿಸುತ್ತಿದೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಲ್ಲಿಯವರೆಗೆ ಅವರು 421 ರನ್ ಗಳಿಸಿದ್ದಾರೆ. ಮೂರು ಅರ್ಧಶತಕಗಳೊಂದಿಗೆ 88 ಅವರ ಗರಿಷ್ಠ ಸ್ಕೋರ್ ಆಗಿದೆ. ಮೇ 22ರ ಭಾನುವಾರದಂದು ಪಂಜಾಬ್ ಕಿಂಗ್ಸ್ ಲೀಗ್‌ನಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಲಿದೆ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಈ ಸುದ್ದಿಯನ್ನು ತೆಲುಗಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Tue, 17 May 22