Viral Video: ನಟಿಯ ಜೊತೆ ಜಿಮ್​ನಲ್ಲಿ ಶಿಖರ್ ಧವನ್ ಭರ್ಜರಿ ವರ್ಕೌಟ್

IPL 2022: ಪಂಜಾಬ್ ಕಿಂಗ್ಸ್ ಗೆಲುವಿನ ಓಟದಲ್ಲಿ ಹಿಂದೆ ಉಳಿದಿದೆ. ಏಕೆಂದರೆ ಪಂಜಾಬ್ ಪಡೆಯು ಪ್ಲೇಆಫ್ ಪ್ರವೇಶಿಸಬೇಕಿದ್ದರೆ ಮುಂದಿನ 3 ಪಂದ್ಯಗಳಲ್ಲಿ ಗೆಲ್ಲಲೇಬೇಕು.

Viral Video: ನಟಿಯ ಜೊತೆ ಜಿಮ್​ನಲ್ಲಿ ಶಿಖರ್ ಧವನ್ ಭರ್ಜರಿ ವರ್ಕೌಟ್
Shikar Dhawan - Preity Zinta
Follow us
TV9 Web
| Updated By: ಝಾಹಿರ್ ಯೂಸುಫ್

Updated on: May 12, 2022 | 5:48 PM

IPL 2022: ಐಪಿಎಲ್ ಸೀಸನ್ 15 ನಲ್ಲಿ ಆಡಿರುವ 11 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವು ಕೇವಲ 5 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಇನ್ನು ಮೂರು ಪಂದ್ಯಗಳು ಉಳಿದಿದ್ದು, ಈ ಮ್ಯಾಚ್​ಗಳಲ್ಲಿ ಗೆಲ್ಲುವ ಮೂಲಕ ಪ್ಲೇಆಫ್ ಪ್ರವೇಶಿಸುವ ಇರಾದೆಯಲ್ಲಿದೆ ಪಂಜಾಬ್ ಕಿಂಗ್ಸ್​. ಇದಕ್ಕಾಗಿ ಆಟಗಾರರು ಮೈದಾನದಲ್ಲಿ ಹಾಗೂ ಜಿಮ್​ನಲ್ಲಿ ಸಖತ್ ಕಸರತ್ತನ್ನು ಮುಂದುವರೆಸಿದ್ದಾರೆ. ಅದರಲ್ಲೂ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ. ವಿಶೇಷ ಎಂದರೆ ಈ ಬಾರಿ ಧವನ್ ಜೊತೆ ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲಕಿ ಬಾಲಿವುಡ್ ನಟಿ ಪ್ರೀತಿ ಝಿಂಟಾ ಕಾಣಿಸಿಕೊಂಡಿದ್ದಾರೆ.

ನಟಿ ಪ್ರೀತಿ ಝಿಂಟಾ ಜೊತೆಗೆ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋವನ್ನು ಶಿಖರ್ ಧವನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎಡಿಟೆಡ್ ವೀಡಿಯೋದಲ್ಲಿ ಟೈಗರ್ ಶ್ರಾಫ್ ಅಭಿನಯದ ಹೀರೊಪಂತಿ-2 ಚಿತ್ರದ ಡೈಲಾಗ್​ ಅನ್ನು ಹಿನ್ನಲೆಯಾಗಿ ಬಳಸಲಾಗಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ.

ಈ ಬಾರಿಯ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಧವನ್ 11 ಪಂದ್ಯಗಳಲ್ಲಿ 3 ಅರ್ಧಶತಕ ಬಾರಿಸುವ ಮೂಲಕ ಒಟ್ಟು 381 ರನ್ ಕಲೆಹಾಕಿದ್ದಾರೆ. ಇದಾಗ್ಯೂ ಪಂಜಾಬ್ ಕಿಂಗ್ಸ್ ಗೆಲುವಿನ ಓಟದಲ್ಲಿ ಹಿಂದೆ ಉಳಿದಿದೆ. ಏಕೆಂದರೆ ಪಂಜಾಬ್ ಪಡೆಯು ಪ್ಲೇಆಫ್ ಪ್ರವೇಶಿಸಬೇಕಿದ್ದರೆ ಮುಂದಿನ 3 ಪಂದ್ಯಗಳಲ್ಲಿ ಗೆಲ್ಲಲೇಬೇಕು. ಇದಾಗ್ಯೂ ಪಾಯಿಂಟ್ಸ್ ಟೇಬಲ್​ನಲ್ಲಿ ಟಾಪ್ 4 ತಂಡಗಳಲ್ಲಿ ಒಂದು ತಂಡವು 16 ಅಂಕ ಪಡೆದರೆ ಮಾತ್ರ ನೆಟ್​ ರನ್​ ರೇಟ್ ಮೂಲಕ ಈ ಅವಕಾಶ ದೊರೆಯಲಿದೆ. ಅಂದರೆ ಅಂಕಪಟ್ಟಿಯಲ್ಲಿ ಟಾಪ್-4 ತಂಡಗಳು 18 ಪಾಯಿಂಟ್ಸ್ ಪಡೆದರೆ ಪಂಜಾಬ್ ಕಿಂಗ್ಸ್ ತಂಡವು ಪ್ಲೇಆಫ್ ರೇಸ್​ನಿಂದ ಹೊರಬೀಳಲಿದೆ. ಹೀಗಾಗಿ ಮುಂದಿನ 3 ಪಂದ್ಯಗಳನ್ನು ಗೆದ್ದರೂ ಅದೃಷ್ಟದ ಬಲದಿಂದ ಮಾತ್ರ ಪಂಜಾಬ್ ಕಿಂಗ್ಸ್ ಪ್ಲೇಆಫ್ ಆಡಬಹುದು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.