IPL 2022: ನಿರ್ಣಾಯಕ ಪಂದ್ಯಕ್ಕೆ RCB ತಂಡದಲ್ಲಿ 1 ಬದಲಾವಣೆ ಸಾಧ್ಯತೆ..!
IPL 2022 RCB Playing 11: ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ಬೌಲರ್ಗಳು ದುಬಾರಿಯಾಗಿದ್ದರು. ಅದರಲ್ಲೂ ಜೋಶ್ ಹ್ಯಾಝಲ್ವುಡ್ ಹಾಗೂ ಮೊಹಮ್ಮದ್ ಸಿರಾಜ್ ಕೇವಲ 6 ಓವರ್ಗಳಲ್ಲಿ 100 ರನ್ ಬಿಟ್ಟುಕೊಟ್ಟಿದ್ದರು.
IPL 2022: ಐಪಿಎಲ್ನ 67ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಗುಜರಾತ್ ಟೈಟನ್ಸ್ (RCB vs GT) ಮುಖಾಮುಖಿಯಾಗಲಿದೆ. ಈಗಾಗಲೇ ಪ್ಲೇಆಫ್ ಪ್ರವೇಶಿಸಿರುವ ಗುಜರಾತ್ ತಂಡಕ್ಕೆ ಇದು ಔಪಚಾರಿಕ ಪಂದ್ಯವಾಗಿದ್ದರೆ, ಆರ್ಸಿಬಿ (RCB) ಪಾಲಿಗೆ ನಿರ್ಣಾಯಕ ಪಂದ್ಯ. ಅದರಲ್ಲೂ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಸೋಲುವ ಮೂಲಕ ಇದೀಗ ಆರ್ಸಿಬಿ ಸಂಕಷ್ಟಕ್ಕೆ ಸಿಲುಕಿದೆ. ಏಕೆಂದರೆ ಪ್ಲೇಆಫ್ ಪ್ರವೇಶಿಸಲು ಈ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ಪಡೆ ಗೆಲ್ಲಲೇಬೇಕು. ಹೀಗಾಗಿ ಒಂದಾರ್ಥದಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ಆರ್ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಹೀಗಾಗಿ ಈ ಪಂದ್ಯದಲ್ಲಿ ಆರ್ಸಿಬಿ ತಂಡವು ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಬೇಕಿದೆ.
ಏಕೆಂದರೆ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ಬೌಲರ್ಗಳು ದುಬಾರಿಯಾಗಿದ್ದರು. ಅದರಲ್ಲೂ ಜೋಶ್ ಹ್ಯಾಝಲ್ವುಡ್ ಹಾಗೂ ಮೊಹಮ್ಮದ್ ಸಿರಾಜ್ ಕೇವಲ 6 ಓವರ್ಗಳಲ್ಲಿ 100 ರನ್ ಬಿಟ್ಟುಕೊಟ್ಟಿದ್ದರು. ಹೀಗಾಗಿ ಇವರಿಬ್ಬರಲ್ಲಿ ಒಬ್ಬರನ್ನು ಆರ್ಸಿಬಿ ತಂಡ ಕೈಬಿಡುವ ಸಾಧ್ಯತೆಯಿದೆ. ಅದರಂತೆ ಸಿರಾಜ್ ತಂಡದಿಂದ ಹೊರಬೀಳಬಹುದು. ಏಕೆಂದರೆ ಪಂಜಾಬ್ ಕಿಂಗ್ಸ್ ವಿರುದ್ದ ಸಿರಾಜ್ 2 ಓವರ್ಗಳಲ್ಲಿ 36 ರನ್ ನೀಡಿದ್ದರು. ಅಷ್ಟೇ ಅಲ್ಲದೆ ಈ ಬಾರಿ ಸಿರಾಜ್ ಕಡೆಯಿಂದ ನಿರೀಕ್ಷಿತ ಮಟ್ಟದ ಬೌಲಿಂಗ್ ಪ್ರದರ್ಶನ ಕೂಡ ಮೂಡಿಬಂದಿಲ್ಲ.
ಇದನ್ನೂ ಓದಿ: IPL 2022: ಏನಿದು RCB ಹಾಲ್ ಆಫ್ ಫೇಮ್ ಪ್ರಶಸ್ತಿ?
ಕಳೆದ 13 ಪಂದ್ಯಗಳಲ್ಲಿ ಸಿರಾಜ್ ಒಟ್ಟು 270 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ನೀಡಿರುವುದು ಬರೋಬ್ಬರಿ 442 ರನ್ಗಳು. ಅಂದರೆ ಪ್ರತಿ ಓವರ್ಗೆ 9.82 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಇನ್ನು ಪಡೆದಿರುವುದು ಕೇವಲ 8 ವಿಕೆಟ್ ಮಾತ್ರ. ಅದೇ ಕಳೆದ ಸೀಸನ್ನಲ್ಲಿ ಮೊಹಮ್ಮದ್ ಸಿರಾಜ್ ನೀಡಿದ್ದು ಪ್ರತಿ ಓವರ್ಗೆ ಕೇವಲ 6.78 ಮಾತ್ರ. ಅಂದರೆ ಈ ಬಾರಿ ಆರ್ಸಿಬಿ ವೇಗಿಯ ಲಯ ತಪ್ಪಿರುವುದು ಸ್ಪಷ್ಟ.
ಅದರಲ್ಲೂ ಆರ್ಸಿಬಿ ಪಾಲಿಗೆ ನಿರ್ಣಾಯಕವಾಗಿದ್ದ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ದುಬಾರಿಯಾಗಿದ್ದರು. ಇದೀಗ ಗುಜರಾತ್ ಟೈಟನ್ಸ್ ವಿರುದ್ದದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್ಸಿಬಿ ಸಿರಾಜ್ ಅವರನ್ನು ಕೈ ಬಿಡುವ ಸಾಧ್ಯತೆಯಿದೆ. ಅವರ ಬದಲಿಗೆ ಸಿದ್ದಾರ್ಥ್ ಕೌಲ್ ಅಥವಾ ಆಕಾಶ್ ದೀಪ್ಗೆ ಚಾನ್ಸ್ ನೀಡಬಹುದು. ಈ ಮೂಲಕ ಬಲಗೈ ವೇಗಿಯನ್ನು ರಿಪ್ಲೇಸ್ ಮಾಡಬಹುದು.
ಒಂದು ವೇಳೆ ಗುಜರಾತ್ ಟೈಟನ್ಸ್ ವಿರುದ್ದ ಆರ್ಸಿಬಿ ತಂಡವು ಸೋತರೆ, ಮುಂಬೈ ಇಂಡಿಯನ್ಸ್ ವಿರುದ್ದ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಬಹುದು. ಹೀಗಾಗಿ ಗುಜರಾತ್ ಟೈಟನ್ಸ್ ವಿರುದ್ದ ಭರ್ಜರಿ ಜಯ ಸಾಧಿಸುವ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೇರುವ ಪ್ಲ್ಯಾನ್ನಲ್ಲಿ ಆರ್ಸಿಬಿ. ಹಾಗಾಗಿ ಆರ್ಸಿಬಿ ಹಾಗೂ ಗುಜರಾತ್ ಟೈಟನ್ಸ್ ನಡುವಣ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:08 pm, Wed, 18 May 22