Deepak Chahar Injury: ಸೋಲಿನ ಸುಳಿಯಲ್ಲಿರುವ ಚೆನ್ನೈಗೆ ಆಘಾತ; ಐಪಿಎಲ್​ನಿಂದ ದೀಪಕ್ ಚಹರ್ ಔಟ್!

Deepak Chahar Injury: ಪವರ್‌ಪ್ಲೇಯಲ್ಲಿ ಯಶಸ್ಸನ್ನು ಪಡೆಯುವಲ್ಲಿ ನಿಷ್ಣಾತರಾಗಿದ್ದ ದೀಪಕ್ ಚಹರ್ ಗಾಯವು ಚೆನ್ನೈ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಚಹರ್ ಪವರ್‌ಪ್ಲೇನಲ್ಲಿ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು.

Deepak Chahar Injury: ಸೋಲಿನ ಸುಳಿಯಲ್ಲಿರುವ ಚೆನ್ನೈಗೆ ಆಘಾತ; ಐಪಿಎಲ್​ನಿಂದ ದೀಪಕ್ ಚಹರ್ ಔಟ್!
ದೀಪಕ್ ಚಾಹರ್
Follow us
TV9 Web
| Updated By: ಪೃಥ್ವಿಶಂಕರ

Updated on:Apr 15, 2022 | 5:50 PM

ಐಪಿಎಲ್ 2022 (IPL 2022)ರಲ್ಲಿ ಇದುವರೆಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ಪ್ರದರ್ಶನ ಅತ್ಯಂತ ಕಳಪೆಯಾಗಿದೆ. ಐದು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಪಡೆದಿರುವ ಈ ತಂಡಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ತಂಡದ ಆಲ್ ರೌಂಡರ್ ದೀಪಕ್ ಚಹರ್ (Deepak Chahar) ಟೂರ್ನಿಯಿಂದ ಹೊರಗುಳಿದಿದ್ದಾರೆ. ಗಾಯದ ಕಾರಣ ದೀಪಕ್ ಚಹರ್ ಮೊದಲ ಐದು ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ, ಆದರೆ ಈ ಸಮಯದಲ್ಲಿ ಅವರು ಮತ್ತೊಂದು ಗಾಯಕ್ಕೆ ಒಳಗಾಗಿದ್ದರು. ದೀಪಕ್ ಚಹರ್ ಬೆನ್ನುನೋವಿಗೆ ಒಳಗಾಗಿದ್ದರು, ಈ ಕಾರಣದಿಂದಾಗಿ ಅವರು ಈಗ ಇಡೀ ಋತುವಿನಿಂದ ಹೊರಗುಳಿದಿದ್ದಾರೆ. ದೀಪಕ್ ಚಹಾರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿಗೆ ಖರೀದಿಸಿತು. ಚಹರ್ ಚೆನ್ನೈ ಸೂಪರ್ ಕಿಂಗ್ಸ್‌ನ ಅತ್ಯಂತ ದುಬಾರಿ ಆಟಗಾರರಾಗಿದ್ದು, ಅವರ ಇಂಜುರಿ ಸಮಸ್ಯೆ ತಂಡ ಮತ್ತು ದೀಪಕ್ ಚಹರ್ ಅವರ ಭರವಸೆಯನ್ನು ಹಾಳುಮಾಡಿದೆ.

ಪವರ್‌ಪ್ಲೇಯಲ್ಲಿ ಯಶಸ್ಸನ್ನು ಪಡೆಯುವಲ್ಲಿ ನಿಷ್ಣಾತರಾಗಿದ್ದ ದೀಪಕ್ ಚಹರ್ ಗಾಯವು ಚೆನ್ನೈ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಚಹರ್ ಪವರ್‌ಪ್ಲೇನಲ್ಲಿ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ಈಗ ಅವರ ಗಾಯದಿಂದಾಗಿ, ಚೆನ್ನೈ ತಂಡವು ಆರಂಭಿಕ ಓವರ್‌ಗಳಲ್ಲಿ ಯಶಸ್ಸನ್ನು ಸಾಧಿಸಲು ಕಷ್ಟಕರವಾಗಿದೆ. ದೀಪಕ್ ಚಹಾರ್ ಬದಲಿಗೆ, ಚೆನ್ನೈ ತಂಡವು ಮುಖೇಶ್ ಚೌಧರಿ ಅವರನ್ನು ಆಡುವ XI ಗೆ ಸೇರಿಸಿಕೊಳ್ಳಲು ಆಸಕ್ತಿ ತೋರಿದೆ. ಆದರೆ ಮುಖೇಶ್, ಚಹರ್​ನಷ್ಟು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ದೀಪಕ್ ಚಹರ್ ಶೀಘ್ರದಲ್ಲೇ ಫಿಟ್ ಆಗಲಿದ್ದು, ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ಚೆನ್ನೈ ಆಶಿಸಿತ್ತು. ಆದರೆ ಅವರು ಚೇತರಿಸಿಕೊಳ್ಳುವ ಸಮಯದಲ್ಲಿ ಮತ್ತೊಂದು ಗಾಯಕ್ಕೆ ತುತ್ತಾಗಿರುವುದು ಅವರನ್ನು ಐಪಿಎಲ್​ನಿಂದ ಹೊರಗಿಡುವಂತೆ ಮಾಡಿದೆ.

ದೀಪಕ್ ಚಹರ್ ಚೆನ್ನೈನ ಪ್ರಮುಖ ಅಸ್ತ್ರ ದೀಪಕ್ ಚಹರ್ ಚೆನ್ನೈನ ವಿಶೇಷ ಆಟಗಾರರಾಗಿದ್ದರು, ಐಪಿಎಲ್ 2022 ಹರಾಜಿನ ಸಮಯದಲ್ಲಿ ಎಲ್ಲರಿಗೂ ಅದರ ಕಲ್ಪನೆ ಸಿಕ್ಕಿತು. ಈ ಆಟಗಾರನನ್ನು ಖರೀದಿಸಲು ಚೆನ್ನೈ ಸಂಪೂರ್ಣ 14 ಕೋಟಿ ಖರ್ಚು ಮಾಡಿತ್ತು. ಚೆನ್ನೈ ಯಾವ ಆಟಗಾರನಿಗೂ ಇಷ್ಟು ಹಣ ಖರ್ಚು ಮಾಡಿರಲಿಲ್ಲ. ದೀಪಕ್ ಚಹಾರ್ ಅವರು ಬ್ಯಾಟ್‌ನೊಂದಿಗೆ ಅದ್ಭುತ ಫಾರ್ಮ್‌ನಲ್ಲಿದ್ದು, ಈ ತಂಡಕ್ಕೆ ದೊಡ್ಡ ಪಂದ್ಯ ವಿಜೇತ ಎಂದು ಸಾಬೀತುಪಡಿಸುತ್ತಿದ್ದರು. ಆದರೆ ಈಗ ಅವರ ಇಂಜುರಿ ಸಮಸ್ಯೆ ಚೆನ್ನೈನ ಸಂಪೂರ್ಣ ತಂತ್ರವನ್ನು ಹಾಳುಮಾಡಿದೆ.

ಐಪಿಎಲ್‌ನಲ್ಲಿ ದೀಪಕ್ ಚಹರ್ ಅದ್ಭುತ ಪ್ರದರ್ಶನ ಐಪಿಎಲ್‌ನಲ್ಲಿ ದೀಪಕ್ ಚಹರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು 63 ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದಾರೆ. ದೀಪಕ್ ಚಹರ್ 2019 ರಲ್ಲಿ 22 ವಿಕೆಟ್ ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅಲ್ಲದೆ ಕೆಳ ಕ್ರಮಾಂಕದಲ್ಲಿ ಅವರ ಬ್ಯಾಟಿಂಗ್ ಕೂಡ ಚೆನ್ನೈಗೆ ಉಪಯುಕ್ತವಾಗಿತ್ತು.

ಇದನ್ನೂ ಓದಿ:IPL 2022: 15ನೇ ಆವೃತ್ತಿಯ ಐಪಿಎಲ್​ಗೂ ಕೊರೊನಾ ಕಾಟ; ದೆಹಲಿ ತಂಡದಲ್ಲಿ ಸೋಂಕಿನ ಪ್ರಕರಣ ಪತ್ತೆ!

Published On - 5:50 pm, Fri, 15 April 22