AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಹೈದರಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೆಕೆಆರ್ ತಂಡಕ್ಕೆ ಆಘಾತ; ಐಪಿಎಲ್​ನಿಂದ ತಂಡದ ಸ್ಟಾರ್ ಬೌಲರ್ ಔಟ್!

IPL 2022: ಜಮ್ಮು ಮತ್ತು ಕಾಶ್ಮೀರದ ಬಲಗೈ ವೇಗದ ಬೌಲರ್ ರಾಸಿಖ್ ಸಲಾಮ್ ಗಾಯಗೊಂಡಿದ್ದಾರೆ. ಮಾಹಿತಿ ಪ್ರಕಾರ ಕೆಕೆಆರ್ ಮತ್ತು ಡೆಲ್ಲಿ ನಡುವಿನ ಪಂದ್ಯದ ವೇಳೆ ಅವರಿಗೆ ಈ ಗಾಯವಾಗಿದೆ.

IPL 2022: ಹೈದರಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೆಕೆಆರ್ ತಂಡಕ್ಕೆ ಆಘಾತ; ಐಪಿಎಲ್​ನಿಂದ ತಂಡದ ಸ್ಟಾರ್ ಬೌಲರ್ ಔಟ್!
ರಾಸಿಖ್ ಸಲಾಮ್
TV9 Web
| Updated By: ಪೃಥ್ವಿಶಂಕರ|

Updated on: Apr 15, 2022 | 5:15 PM

Share

ಐಪಿಎಲ್ 2022 (IPL 2022)ರಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ಇಲ್ಲಿಯವರೆಗೆ ಉತ್ತಮ ಲಯದಲ್ಲಿದೆ. ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದಲ್ಲಿ ಈ ತಂಡ 5 ಪಂದ್ಯಗಳಲ್ಲಿ 3 ರಲ್ಲಿ ಗೆದ್ದು 2 ರಲ್ಲಿ ಸೋತಿದೆ. ತಂಡವು ಕೆಲವು ದಿನಗಳ ಕಾಲ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಆದರೆ, ಕಳೆದ ಪಂದ್ಯದಲ್ಲಿ ಸೋಲು ತಂಡಕ್ಕೆ ಹೊಡೆತ ನೀಡಿದೆ. ಈಗ ಈ ತಂಡವು ತಮ್ಮ ಋತುವಿನ ಆರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH vs KKR) ವಿರುದ್ಧ ಮೈದಾನಕ್ಕಿಳಿಯಲಿದೆ. ಈ ಪಂದ್ಯವು ಶುಕ್ರವಾರ, ಏಪ್ರಿಲ್ 15 ರಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ, ಆದರೆ ಅದಕ್ಕೂ ಮುನ್ನ ತಂಡವು ಮತ್ತೊಂದು ಹಿನ್ನಡೆ ಅನುಭವಿಸಿದೆ. ತಂಡದ ಆಟಗಾರರೊಬ್ಬರು ಗಾಯಗೊಂಡಿದ್ದಾರೆ. ಮಾಹಿತಿಯ ಪ್ರಕಾರ, ಕೆಕೆಆರ್‌ನ ಯುವ ವೇಗದ ಬೌಲರ್ ರಸಿಖ್ ಸಲಾಂ ಗಾಯದ ಕಾರಣ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ದೆಹಲಿ ಬೌಲರ್ ಕೋಲ್ಕತ್ತಾ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಬಲಗೈ ವೇಗದ ಬೌಲರ್ ರಾಸಿಖ್ ಸಲಾಮ್ ಗಾಯಗೊಂಡಿದ್ದಾರೆ. ಮಾಹಿತಿ ಪ್ರಕಾರ ಕೆಕೆಆರ್ ಮತ್ತು ಡೆಲ್ಲಿ ನಡುವಿನ ಪಂದ್ಯದ ವೇಳೆ ಅವರಿಗೆ ಈ ಗಾಯವಾಗಿದೆ. ಈ ಪಂದ್ಯದಲ್ಲಿ ಅವರು ಕೇವಲ ಒಂದು ಓವರ್ ಅನ್ನು ಮಾತ್ರ ಬೌಲ್ ಮಾಡಲು ಸಾಧ್ಯವಾಯಿತು, ಇದರಲ್ಲಿ ಅವರು 10 ರನ್ ನೀಡಿದರು. ಈ ಋತುವಿನ ಆರಂಭದಲ್ಲಿ ನಡೆದ ಹರಾಜಿನಲ್ಲಿ 22 ವರ್ಷದ ರಾಸಿಖ್ ಸಲಾಮ್ ಅವರನ್ನು ಕೆಕೆಆರ್ ಖರೀದಿಸಿತ್ತು. ಈ ಋತುವಿನಲ್ಲಿ ಅವರು ಎರಡು ಪಂದ್ಯಗಳನ್ನು ಆಡಿ ಅದರಲ್ಲಿ ಅವರು ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಅವರು 4 ಓವರ್‌ಗಳಲ್ಲಿ ಒಟ್ಟು 28 ರನ್‌ಗಳನ್ನು ಖರ್ಚು ಮಾಡಿದರು. ಈ ಹಿಂದೆ 2019ರಲ್ಲಿ ಮುಂಬೈ ಇಂಡಿಯನ್ಸ್ ಪರ ಪಂದ್ಯವನ್ನೂ ಆಡಿದ್ದರು.

ಯಾವ ಬೌಲರ್ ಸ್ಥಾನ ಪಡೆಯುತ್ತಾನೆ? ಆದರೆ, ರಾಸಿಖ್ ಸಲಾಂ ಗಾಯಗೊಂಡಿರುವ ಬಗ್ಗೆ ತಂಡದಿಂದ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾವ ಆಟಗಾರನಿಗೆ ಸ್ಥಾನ ಸಿಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಪಿಟಿಐ ಪ್ರಕಾರ, ಕೆಕೆಆರ್ ಯುವ ದೆಹಲಿ ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು ಬದಲಿಯಾಗಿ ಸೇರಿಸಿಕೊಳ್ಳಬಹುದು. ಹರ್ಷಿತ್ ರಾಣಾ ಮೂರು ವರ್ಷಗಳ ಹಿಂದೆ 19 ವರ್ಷದೊಳಗಿನವರ ಕ್ರಿಕೆಟ್ ತಂಡದ ಭಾಗವಾಗಿದ್ದರು. ಆದರೆ ಇಲ್ಲಿಯವರೆಗೆ ಅವರಿಗೆ ದೆಹಲಿ ಪರ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿಲ್ಲ. ಈ ಋತುವಿನಲ್ಲಿ ಅವರು ಗುಜರಾತ್ ಟೈಟಾನ್ಸ್ ತಂಡದ ನೆಟ್ ಬೌಲರ್ ಆಗಿದ್ದಾರೆ.

KKR ಜೊತೆಗೆ ಉತ್ತಮ ವೇಗದ ದಾಳಿ ಕೋಲ್ಕತ್ತಾದ ಬೌಲರ್‌ಗಳ ಮಟ್ಟಿಗೆ ಹೇಳುವುದಾದರೆ, ತಂಡವು ಪ್ಯಾಟ್ ಕಮಿನ್ಸ್, ಉಮೇಶ್ ಯಾದವ್, ಟಿಮ್ ಸೌಥಿ ಮತ್ತು ಶಿವಂ ಮಾವಿ ರೂಪದಲ್ಲಿ ಪ್ರಮುಖ ವೇಗದ ಬೌಲರ್‌ಗಳನ್ನು ಹೊಂದಿದೆ. ಅವರೆಲ್ಲರೂ ಈ ಋತುವಿನಲ್ಲಿ ಕೆಲವು ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ ಉಮೇಶ್ ಯಾದವ್ ವಿಶೇಷವಾಗಿ ಪರಿಣಾಮಕಾರಿಯಾಗಿದ್ದಾರೆ. 5 ಪಂದ್ಯಗಳಲ್ಲಿ ತಮ್ಮ ತಂಡದ ಪರ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಹೊರತಾಗಿ, ಬ್ಯಾಟ್‌ನ ಹೊರತಾಗಿ ಮಧ್ಯಮ ವೇಗದಲ್ಲಿ ಕೊಡುಗೆ ನೀಡುವ ಆಂಡ್ರೆ ರಸೆಲ್ ರೂಪದಲ್ಲಿ ಡ್ಯಾಶಿಂಗ್ ಆಲ್‌ರೌಂಡರ್ ಕೂಡ ಇದ್ದಾರೆ.

ಇದನ್ನೂ ಓದಿ:IPL 2022 MI vs LSG Live Streaming: ಗೆಲ್ಲಲೇಬೇಕಾದ ಒತ್ತಡದಲ್ಲಿ ಮುಂಬೈ; ಪಂದ್ಯದ ಬಗೆಗಿನ ಪೂರ್ಣ ಮಾಹಿತಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್