AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುವರ್ಣಸೌಧದ ಮೆಟ್ಟಿಲು ಮೇಲೆ ಶಾವಿಗೆ ಒಣ ಹಾಕಿದ್ದ ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿಲ್ಲ; ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ

ಬೆಳಗಾವಿ ಸುವರ್ಣಸೌಧದ ಮುಖ್ಯ ದ್ವಾರದ ಮೆಟ್ಟಿಲು ಮೇಲೆ ಶಾವಿಗೆ ಒಣ ಹಾಕಿದ್ದ ಮಲ್ಲವ್ವಾಳನ್ನು ಕೆಲಸದಿಂದ ತೆಗೆದಿದ್ದ ವಿಚಾರವಾಗಿ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಲ್ಲವ್ವಾ ಅವರನ್ನ ಕೆಲಸದಿಂದ ತೆಗೆದು ಹಾಕಿರಲಿಲ್ಲ, ಇನ್ನೊಂದು ಸೈಟ್ ನಲ್ಲಿ ಕೆಲಸ ನೀಡಲಾಗಿತ್ತು.

ಸುವರ್ಣಸೌಧದ ಮೆಟ್ಟಿಲು ಮೇಲೆ ಶಾವಿಗೆ ಒಣ ಹಾಕಿದ್ದ ಕಾರ್ಮಿಕ ಮಹಿಳೆಯನ್ನು  ಕೆಲಸದಿಂದ ತೆಗೆದು ಹಾಕಿಲ್ಲ; ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್
TV9 Web
| Updated By: ವಿವೇಕ ಬಿರಾದಾರ|

Updated on:Jun 03, 2022 | 4:15 PM

Share

ಬೆಂಗಳೂರು: ಬೆಳಗಾವಿ (Belagavi) ಸುವರ್ಣಸೌಧದ (suvarna soudha) ಮುಖ್ಯ ದ್ವಾರದ ಮೆಟ್ಟಿಲು ಮೇಲೆ ಶಾವಿಗೆ ಒಣ ಹಾಕಿದ್ದ ಮಲ್ಲವ್ವಾಳನ್ನು ಕೆಲಸದಿಂದ ತೆಗೆದಿದ್ದ ವಿಚಾರವಾಗಿ  ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ (Nitesh Patil) ಮಲ್ಲವ್ವಾ ಅವರನ್ನ ಕೆಲಸದಿಂದ ತೆಗೆದು ಹಾಕಿರಲಿಲ್ಲ, ಇನ್ನೊಂದು ಸೈಟ್ ನಲ್ಲಿ ಕೆಲಸ ನೀಡಲಾಗಿತ್ತು. ಸುವರ್ಣ ಸೌಧಕ್ಕೆ ಭೇಟಿ ನೀಡಿದಾಗಲೇ ಕೆಲಸದಿಂದ ತೆಗೆಯದಂತೆ, ವೇತನ ಕಟ್ ಮಾಡದಂತೆ ಹೇಳಿದ್ದೆ. ಬೇರೆ ಸ್ಥಳದಲ್ಲಿ ಕೆಲಸ ನೀಡಿತ್ತು ಅಲ್ಲಿಂದ ಮತ್ತೆ ಸುವರ್ಣಸೌಧದಲ್ಲಿ ಕೆಲಸ ನೀಡುವಂತೆ ಹೇಳಿದ್ದೇನೆ ಎಂದರು.

ಎಲ್ಲಾ ಕೆಲಸ ಮಾಡುವ ಕಾರ್ಮಿಕರಿಗೆ ಸುವರ್ಣಸೌಧ ಘನತೆ ಎತ್ತಿ ಹಿಡಿಯುವಂತೆ ಸೂಚನೆ ನೀಡಿದ್ದೇನೆ. ಗಂಡ ಮೃತಪಟ್ಟ ಬಳಿಕ ತವರು ಮನೆ ಕೊಂಡಸಕೊಪ್ಪದಲ್ಲಿದ್ದಾರೆ‌‌. ಮಹಿಳೆಗೆ ಸರ್ಕಾರದ ವತಿಯಿಂದ ಬಸ್ತವಾಡ ಗ್ರಾಮದಲ್ಲಿ ಜಾಗ ಕೊಟ್ಟು ಮನೆ ಕೊಡುತ್ತೇವೆ ಎಂದು ಹೇಳಿದರು.

ಇದನ್ನು ಓದಿ: 12 ವರ್ಷವಾದ್ರೂ ವರ್ಗಾವಣೆ ಸಿಗುತ್ತಿಲ್ಲ: ಕಲ್ಯಾಣ ಕರ್ನಾಟಕ ಶಿಕ್ಷಕರ ಅಳಲು

ಜೂನ್​ 1 ರಂದು ಬೆಳಗಾವಿ  ಸುವರ್ಣಾಸೌಧದ ಮುಖ್ಯ ದ್ವಾರದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣಗಿಸಲು ಹಾಕಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಗುತ್ತಿಗೆದಾರನಿಗೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ಕಳಿಸಲಾಗಿದೆ. ಸ್ವಚ್ಛತಾ ಕಾರ್ಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರನಿಗೆ ಇಲಾಖೆ ನೋಟಿಸ್ ಕಳಿಸಿದ್ದು ಕೊಂಡಸಕೊಪ್ಪ ಗ್ರಾಮದ ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ದಿನಗೂಲಿ ಆಧಾರದ ಮೇಲೆ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯನ್ನು ಗುತ್ತಿಗೆದಾರ ಕೆಲಸದಿಂದ ವಜಾ ಮಾಡಿದ್ದಾರೆ. ಅಚಾತುರ್ಯದಿಂದ ಘಟನೆ ನಡೆದಿದೆ ಎಂದು ಸಮಜಾಯಿಷಿ ನೀಡಿದ್ದು. ಘಟನೆ ಮರುಕಳಿಸಿದಂತೆ ಎಲ್ಲಾ ಗುತ್ತಿಗೆದಾರರಿಗೂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯಿಂದ ನೋಟಿಸ್ ಕಳಿಸಲಾಗಿದೆ. ನೋಟಿಸ್ ನೀಡಿದ ಬಗ್ಗೆ ಬೆಳಗಾವಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ: ಕುಸಿಯುತ್ತಿರುವ ಗದಗ ಜಿಲ್ಲೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮೇಲ್ಛಾವಣಿ: ಭಯದ ನಡುವೆ ಉಪನ್ಯಾಸಕರ ಪಾಠ

ಹಿನ್ನಲೆ ಓರ್ವ ಕಾರ್ಮಿಕ ಮಹಿಳೆಗೆ ಸಾಂಬ್ರಾ ಮೂಲದ ಕಾರ್ಮಿಕ ಮಹಿಳೆ ಶಾವಿಗೆ ತಂದು ಕೊಟ್ಟಿದ್ದರು. ಶಾವಿಗೆ ಹಸಿ ಇದ್ದವು ಎಂಬ ಕಾರಣಕ್ಕೆ ಸೀರೆ ಹಾಸಿ ಮಹಿಳೆ ಶಾವಿಗೆ ಒಣಹಾಕಿದ್ದಾರೆ. ಮಧ್ಯಾಹ್ನ ಪೆಟ್ರೋಲಿಂಗ್ ವೇಳೆ ಶಾವಿಗೆ ಒಣಹಾಕಿದ್ದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣ ಶಾವಿಗೆ ತೆರವುಗೊಳಿಸಿ ಕಾರ್ಮಿಕ ಮಹಿಳೆಯರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋಗಳು ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನರು ಟೀಕೆ ಟಿಪ್ಪಣಿ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:11 pm, Fri, 3 June 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?