12 ವರ್ಷವಾದ್ರೂ ವರ್ಗಾವಣೆ ಸಿಗುತ್ತಿಲ್ಲ: ಕಲ್ಯಾಣ ಕರ್ನಾಟಕ ಶಿಕ್ಷಕರ ಅಳಲು

ನಮ್ಮ ಕುಟುಂಬಗಳಿಂದ ದೂರ ಇರಬೇಕಾಗಿದೆ. ಇಲಾಖೆಯ ನಿಯಮದಂತೆ 10 ವರ್ಷ ಒಂದೇ ಕಡೆ ಸೇವೆ ಸಲ್ಲಿಸಿದರೂ ಇನ್ನೂ ವರ್ಗಾವಣೆ ಸಿಕ್ಕಿಲ್ಲ ಎಂದು ಶಿಕ್ಷಕರು ದೂರಿದ್ದಾರೆ.

12 ವರ್ಷವಾದ್ರೂ ವರ್ಗಾವಣೆ ಸಿಗುತ್ತಿಲ್ಲ: ಕಲ್ಯಾಣ ಕರ್ನಾಟಕ ಶಿಕ್ಷಕರ ಅಳಲು
ಬೆಂಗಳೂರಿನಲ್ಲಿ ಶಿಕ್ಷಕರೊಂದಿಗೆ ಪ್ರತಿಭಟನೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 03, 2022 | 3:55 PM

ಬೆಂಗಳೂರು: ಕಲ್ಯಾಣ ಕರ್ನಾಟಕದಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ತಮಗೆ ವರ್ಗಾವಣೆ ಸಿಗುತ್ತಿಲ್ಲ ಎಂದು ಅಲವತ್ತು ಕೊಂಡಿದ್ದಾರೆ. 12 ವರ್ಷ ಸೇವೆ ಸಲ್ಲಿಸಿದರೂ ವರ್ಗಾವಣೆ ದೊರೆತಿಲ್ಲ. ಹೀಗಾಗಿ ನಮ್ಮ ಕುಟುಂಬಗಳಿಂದ ದೂರ ಇರಬೇಕಾಗಿದೆ. ಇಲಾಖೆಯ ನಿಯಮದಂತೆ 10 ವರ್ಷ ಒಂದೇ ಕಡೆ ಸೇವೆ ಸಲ್ಲಿಸಿದರೂ ಇನ್ನೂ ವರ್ಗಾವಣೆ ಸಿಕ್ಕಿಲ್ಲ ಎಂದು ಶಿಕ್ಷಕರು ದೂರಿದ್ದಾರೆ. ಶೇ 25ರಷ್ಟು ಶಿಕ್ಷಕರಿಗೆ ವರ್ಗಾವಣೆ ಸೌಕರ್ಯ ಸಿಗುತ್ತಿಲ್ಲ. ಒಂದು ಬಾರಿ ವರ್ಗಾವಣೆ ಕೊಡಿ ಎಂದು ಪರಿಪರಿಯಾಗಿ ಎಂದು ನೊಂದ ಶಿಕ್ಷಕರ ಕುಟುಂಬಗಳು ಅಲವತ್ತುಕೊಳ್ಳುತ್ತಿದೆ.

ರಾಜ್ಯದಲ್ಲಿ ಮೂರುವರೆ ಸಾವಿರ ಶಿಕ್ಷಕರು ವರ್ಗಾವಣೆ ಕೋರುತ್ತಿದ್ದಾರೆ. ಗಂಡ ಒಂದು ಕಡೆ, ಹೆಂಡತಿ ಮತ್ತೊಂದು ಕಡೆ ಕೆಲಸ ಮಾಡುತ್ತಿದ್ದಾರೆ. ಅಜ್ಜ-ಅಜ್ಜಿಯ ಮನೆಗಳಲ್ಲಿ ಮಕ್ಕಳು ಬೆಳೆಯುತ್ತಿದ್ದಾರೆ. ‘ಅಪ್ಪ-ಅಮ್ಮ ಒಂದೊಂದು ಕಡೆ ಆಗಿದ್ದಾರೆ. ದಯವಿಟ್ಟು ಅವರನ್ನು ಒಂದೇ ಕಡೆ ಇರುವಂತೆ ಮಾಡಿ’ ಎಂದು ಶಿಕ್ಷಕರ ಮಕ್ಕಳು ಕೈಮುಗಿದು ಕೇಳಿಕೊಳ್ಳುತ್ತಿದ್ದಾರೆ.

ವರ್ಗಾವಣೆಗಾಗಿ ಶಿಕ್ಷಕರು ನಿನ್ನೆಯಿಂದಲೂ ನಗರದ ಫ್ರೀಡಂ ಪಾರ್ಕ್ ಬಳಿ ಹೋರಾಟ ನಡೆಸುತ್ತಿದ್ದಾರೆ. ಹೋರಾಟದಲ್ಲಿ ಸಾವಿರಾರು ಶಿಕ್ಷಕರು ಪಾಲ್ಗೊಂಡಿದ್ದು, ಶೀಘ್ರ ತಮ್ಮನ್ನು ವರ್ಗಾವಣೆ ಮಾಡಬೇಕು ಎಂದು ವಿನಂತಿಸುತ್ತಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ