ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ; ರೇಖಾ ಆರೋಪಕ್ಕೆ ಸ್ಪಷ್ಟನೆ ನೀಡಿದ ಪತ್ನಿ ಸುಮಾ
ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಖಾ ಮಾಡಿದ ಆರೋಪಗಳಿಗೆ ಪತ್ನಿ ಸುಮಾ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಬಿಜೆಪಿ (BJP) ಮುಖಂಡ ಅನಂತರಾಜು (Antha Raju) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಖಾ ಮಾಡಿದ ಆರೋಪಗಳಿಗೆ ಪತ್ನಿ ಸುಮಾ ಸುದ್ದಿಗೋಷ್ಟಿ ನಡೆಸಿ ಮಾರ್ಚ್ ೨೪ ರ ರಾತ್ರಿ ನನಗೆ ವಿಷಯ ಗೊತ್ತಾಯ್ತು. ಏಪ್ರಿಲ್ 7 ರಂದು ನಾನು ಮನೆಗೆ ವಾಪಾಸ್ ಬಂದೆ. ನನ್ನ ಗಂಡನಿಗೆ ನಾನು ಹೋಂ ಅರೆಸ್ಟ್ ಮಾಡಿಲ್ಲ, ನನ್ನ ಗಂಡನನ್ನ ಪ್ರೀತಿಸುತ್ತಿದ್ದೆ. ಎಆರ್ ಆರ್ ಗೆ ಹೋದಮೇಲೆ ನನ್ನ ಗಂಡನಿಗೆ ಬ್ಲಾಕ್ ಮೇಲ್ ಮೇಸೆಜ್ ಕಳಿಸಿದಳು. ಓರ್ವ ವಿಐಪಿಗೆ ಪೋಟೊ,ವಿಡಿಯೋ ಕಳಿಸುವುದಾಗಿ ಬೆದರಿಕೆ ಹಾಕಿದಳು ಎಂದು ಸ್ಪಷ್ಟನೆ ನೀಡಿದರು.
ಯಾವ ಹೆಂಡತಿ ಕೂಡಾ ಪತಿಯನ್ನ ಕೊಲ್ಲುವುದಿಲ್ಲ. ನನ್ನ ಗಂಡ ಮತ್ತು ಆಕೆಗೆ 2 ವರೆ ಲಕ್ಷ ಟ್ರಾನ್ಸ್ಆಕ್ಷನ್ ಆಗಿದೆ. ನನಗೆ ಅನಂತರಾಜು ಇಲ್ಲದಿದ್ದರೆ, ನಿನಗೂ ಸಿಗಲು ಬಿಡುವುದಿಲ್ಲ ಅಂದಿದ್ದಳು. ಅವಳಿಂದ ನನಗೆ ಟಾರ್ಚರ್ ಇದೆ ಎಂದು ಅಂತಾ ಅನಂತರಾಜು ಹೇಳಿದ್ದರು. ಸುಳ್ಳು ಹೇಳಿ ಆಕೆಗೆ ಹೆದರಿಸಿದರೆ ನನ್ನ ಗಂಡನನ್ನ ಉಳಿಸಿಕೊಳ್ಳಲು ಈ ರೀತಿ ಮಾಡಿದ್ದೇನೆ. ಹೊಟ್ಟೆ ಉರಿಗೆ ನನ್ನ ಗಂಡನ ಜತೆ ಜಗಳ ಮಾಡಿದ್ದೇನೆ ವಿನಃ ನಾನು ಅವರಿಗೆ ನೋವು ಮಾಡಿಲ್ಲ ಎಂದರು.
ಇದನ್ನು ಓದಿ: ಯುವಕರನ್ನು ಕಾಡುತ್ತಿರುವ ಪರಿಧಮನಿ ಕಾಯಿಲೆ ಬಗ್ಗೆ ಉಪಯುಕ್ತ ಮಾಹಿತಿ
ಆತ್ಮಹತ್ಯೆ ಮಾಡಿಕೊಂಡ ದಿನ ನಾವೀಬ್ಬರು ಒಟ್ಟಿಗೆ ಹೊರಗೆ ಹೋಗಿ ಬಂದಿದ್ದೀವಿ. ರೇಖಾ ಮಗಳಿಗೆ ಮೆಡಿಕಲ್ ಓದುವಷ್ಟು ಹಣ ನೀಡಬೇಕದು ಡಿಮ್ಯಾಂಡ್ ಮಾಡಿದ್ದಳು. ರೇಖಾ ಬ್ಲಾಕ್ ಮೇಲ್ ಶುರುಮಾಡಿದ್ದಳು. ಈ ಹಿಂದೆಯೂ ಕೂಡ ಅನಂತರಾಜು ನಿದ್ದೆ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆ ಗೆ ಯತ್ನಿಸಿದ್ದರು ಎಂದು ಸುಮಾ ಅತ್ತಿಗೆ ಗೀತಾಂಜಲಿ ಹೇಳಿದ್ದಾರೆ.
ಅನಂತರಾಜು ಆತ್ಮಹತ್ಯೆ ಮಾಡಿಕೊಂಡ ದಿನ ಅನಂತರಾಜು ಮತ್ತು ನಾನು ಸಂಜೆ 5:30 ಕ್ಕೆ ಲಾಂಗ್ ಡ್ರೈವ್ ಹೋಗಿ ಬಂದ್ವಿ. ಎದೆ ನೋವು ಅಂತ ಅನಂತರಾಜು ರೂಂ ಗೆ ರೆಸ್ಟ್ ಮಾಡಲು ತೆರಳಿದ್ದರು. ಆ ಬಳಿಕ ಬೇಗ ಅಡಿಗೆ ಮಾಡುವುದಾಗಿ ಹೇಳಿದ್ದೆ. ಮಗಳು ಊಟಕ್ಕೆಂದು ತಂದೆ ಯನ್ನು ಎಬ್ಬಿಸಲು ತೆರಳಿದ್ದಳು. ಆಗ ಡೋರ್ ಲಾಕ್ ಓಪನ್ ಆಗಿರಲಿಲ್ಲ ಬಳಿಕ ಮನೆ ಸದಸ್ಯರು ನೋಡಿದಾಗ ನೇಣು ಬಿಗಿದುಕೊಂಡಿದ್ದು ಗೊತ್ತಾಯ್ತು ಎಂದರು.
ಇದನ್ನು ಓದಿ: ಆರ್ಯ ಸಮಾಜ ನೀಡಿದ ವಿವಾಹ ಸರ್ಟಿಫಿಕೇಟ್ಗೆ ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್
ಸುಮಾ ಅನಂತರಾಜು ಪರ ವಕೀಲೆ ಹೇಮಲತಾ ಸುದ್ದಿಗೋಷ್ಟಿ ನಡೆಸಿ ನನಗೆ ಬ್ಲಾಕ್ ಮೇಲ್ ಆಕ್ತಿದೆ. ಫೇಸ್ ಬುಕ್ ನಲ್ಲಿ ಪರಿಚಿತರಾದ ರೇಖಾ ಬ್ಲಾಕ್ ಮೇಲ್ ಮಾಡ್ತಿದ್ದಾರೆ. ಕೆಲವು ಖಾಸಗಿ ಪೋಟೊ,ವಿಡಿಯೋಗಳು ನನ್ನ ಬಳಿ ಇದೆ. ನ್ಯಾಯಾಲಯದಿಂದ ಏಪ್ರಿಲ್ 18 ಕ್ಕೆ ಇಂಜೆಂಕ್ಷ ಆರ್ಡರ್ ತೆಗೆದುಕೊಂಡಿದ್ದರು. ಹೀಗಾಗಿ ಇಂಜೆಕ್ಷನ್ ಆರ್ಡರ್ ಕೂಡ ಸಿಕ್ಕಿತ್ತು. ರಾಜಕೀಯವಾಗಿ ಮನೆಯಲ್ಲಿದ್ದು ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಹೀಗಾಗಿ ನನಗೆ ಇದೇ ವಿಚಾರವಾಗಿ ಬ್ಲಾಕ್ ಮೇಲ್ ಮಾಡ್ತಿದ್ದಾರೆ ಅಂತಾ ಅನಂತರಾಜು ವಕೀಲೆ ಹೇಮಲತಾ ಅವರಿಗೆ ಹೇಳಿದ್ದರು ಅಂತ ಹೇಳಿದರು.
ಆತ್ಮಹತ್ಯೆ ಗೂ ಮುನ್ನಾ ನನ್ನ ಸಂಪರ್ಕ ಮಾಡಿದ್ರು. ಈ ವಿಚಾರ ಸಂಬಂಧಿಸಿದಂತೆ ಈ ಹಿಂದೆ NCR ದಾಖಲಿಸಿದ್ದ ಬಗ್ಗೆ ಹೇಳಿದ್ದರು. ರೇಖಾ ಇತರರಿಗೂ ಇದೇ ರೀತಿ ಫ್ರೆಂಡ್ ಆಗಲು ಯತ್ನಿಸ್ತಿದ್ದಳು. ಹೀಗಾಗಿ ನನಗೂ ರೇಖಾಳ ಬ್ಲಾಕ್ ಮೇಲ್ ಮಾಡಿದ್ದ ಮೇಸೆಜ್ ತೋರಿಸಿದ್ದರು ಎಂದು ಹೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.