Coronary Artery Disease: ಯುವಕರನ್ನು ಕಾಡುತ್ತಿರುವ ಪರಿಧಮನಿ ಕಾಯಿಲೆ ಬಗ್ಗೆ ಉಪಯುಕ್ತ ಮಾಹಿತಿ

Coronary Artery Disease: ಹೃದಯಕ್ಕೆ ಆಮ್ಲಜನಕಭರಿತ ರಕ್ತದ ಪರಿಚಲನೆಗೆ ಅಡ್ಡಿಯುಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಪರಿಧಮನಿಯ ಕಾಯಿಲೆ ಶುರುವಾಗುತ್ತದೆ.

Coronary Artery Disease: ಯುವಕರನ್ನು ಕಾಡುತ್ತಿರುವ ಪರಿಧಮನಿ ಕಾಯಿಲೆ ಬಗ್ಗೆ ಉಪಯುಕ್ತ ಮಾಹಿತಿ
Coronary Artery Disease
Follow us
TV9 Web
| Updated By: ನಯನಾ ರಾಜೀವ್

Updated on: Jun 03, 2022 | 5:05 PM

ಹೃದಯಕ್ಕೆ ಆಮ್ಲಜನಕಭರಿತ ರಕ್ತದ ಪರಿಚಲನೆಗೆ ಅಡ್ಡಿಯುಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಪರಿಧಮನಿಯ ಕಾಯಿಲೆ ಶುರುವಾಗುತ್ತದೆ. ಪರಿಧಮನಿ ಫಿಟ್ನೆಸ್ ಮತ್ತು ಆಹಾರದಲ್ಲಿ ಜಾಗರೂಕರಾಗಿದ್ದರೂ ಬೇರೆ ಸಮಸ್ಯೆಯಿಂದ ಹೃದಯ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಅತಿಯಾದ ಒತ್ತಡ ಕೂಡ ಇದ್ದಕ್ಕೆ ಕಾರಣ.ಇದಲ್ಲದೆ ಕುಟುಂಬದ ಹಿನ್ನಲೆ ಕೂಡ ಮಹತ್ವ ಪಡೆಯುತ್ತದೆ. ಕುಟುಂಬಸ್ಥರದಲ್ಲಿ ಈ ಖಾಯಿಲೆಯಿದ್ದರೆ ವಂಶಪಾರಂಪರ್ಯವಾಗಿ ಇದು ಬರುತ್ತದೆ.

ಇದಲ್ಲದೆ ಬಾಲ್ಯದಲ್ಲಿ ಅಪಧಮನಿಗಳಲ್ಲಿ ಕಾಣಿಸಿಕೊಂಡಿದ ಸಮಸ್ಯೆ ಪ್ರೌಢಾವಸ್ಥೆಯಲ್ಲಿ ಹೆಚ್ಚಾಗಬಹುದು. ಹೃದಯದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗಬೇಕೆಂದರೆ ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಧೂಮಪಾನ, ಮದ್ಯಪಾನ, ಅಧಿಕರಕ್ತದೊತ್ತಡ, ಬೊಜ್ಜು, ಜಡ ಜೀವನಶೈಲಿ ಈ ರೀತಿಯ ಹಲವು ಅಂಶಗಳಿಂದ ಕೊಬ್ಬಿನ ಶೇಖರಣೆಯಾಗಬಹುದು. ಮತ್ತು ಹೆಂಗಸರಲ್ಲಿರುವ ಈಸ್ಟ್ರೋಜೆನ್ ಹಾರ್ಮೋನುಗಳಿಂದಾಗಿ ಪರಿಧಮನಿ ಕಾಯಿಲೆಯಾಗುವ ಸಾಧ್ಯತೆಗಳು ತೀರಾ ಕಡಿಮೆಯಿರುತ್ತದೆ.

ಪರಿಧಮನಿ ಕಾಯಿಲೆಗೆ ಇರುವ ಚಿಕಿತ್ಸೆಯೇನು? ಮಧುಮೇಹ, ಅಧಿಕ ರಕ್ತದೊತ್ತಡದ ನಿಯಂತ್ರಣ, ಧೂಮಪಾನದ ಚಟಕ್ಕೆ ಕಡಿವಾಣ ಹಾಕುವುದು, ನಿಯಮಿತ ವ್ಯಾಯಾಮ ಮತ್ತು ಕೊಲೆಸ್ಟರೋಲ್ ಕಡಿಮೆ ಮಾಡುವ ಔಷಧಿಗಳ ನಿಯಮಿತ ಸೇವನೆಯಿಂದ ಪರಿಧಮನಿ ಕಾಯಿಲೆಯನ್ನು ಗುಣಪಡಿಸಬಹುದು.

ಗುಣವಾಗಲು ಎಷ್ಟು ಸಮಯ ಬೇಕು? ಸಮಸ್ಯೆಯನ್ನು ಹೆಚ್ಚು ಮಾಡುವ ಅಥವಾ ಉದ್ರೇಕಗೊಳಿಸುವ ಅಂಶಗಳನ್ನು ತಡೆಗಟ್ಟಲು ತೆಗೆದುಕೊಂಡ ಸಾಕಷ್ಟು ಕ್ರಮಗಳು ಪರಿಧಮನಿ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ. ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಔಷಧಿಗಳು ಸಹ ರಕ್ತನಾಳಗಳಲ್ಲಿನ ಶೇಖರಣೆಯನ್ನು ಪುನಃ ಕಡಿಮೆ ಮಾಡಿ ರಕ್ತನಾಳಗಳ ಪುನಶ್ಚೇತನಕ್ಕೆ ಸಹಾಯಮಾಡುತ್ತದೆ.

ಪರಿಧಮನಿ ಕಾಯಿಲೆಯನ್ನು ನಾವು ಹೇಗೆ ತಡೆಗಟ್ಟಬಹುದು? ಆರೋಗ್ಯಕರ ಜೀವನಶೈಲಿ ಬದಲಾವಣೆ, ಆರೋಗ್ಯಕರ ಸಮತೋಲಿತ ಆಹಾರ, ಮತ್ತು ನಿಯಮಿತವಾದ ವ್ಯಾಯಾಮ ಮಾಡುವುದರಿಂದ ಪರಿಧಮನಿ ಸಮಸ್ಯೆಯಾಗುವುದನ್ನು ತಡೆಗಟ್ಟಬಹುದು. ಅಷ್ಟೇ ಅಲ್ಲದೆ ಧೂಮಪಾನ ಮಾಡುವುದನ್ನು ಬಿಡಬೇಕು, ತೂಕವನ್ನು ಕಡಿಮೆ ಮಾಡಬೇಕು, ಮತ್ತು ಮಧುಮೇಹ ಮತ್ತು ಅಧಿಕ ರಕ್ತದಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಸಹ ಪರಿಧಮನಿ ಕಾಯಿಲೆಯಾಗುವುದನ್ನು ತಡೆಗಟ್ಟಬಹುದು.

ಪರಿಧಮನಿ ಕಾಯಿಲೆಯಿಂದಾಗುವ ಗಂಭೀರ ಸಮಸ್ಯೆಗಳೇನು? ಪರಿಧಮನಿ ಸಮಸ್ಯೆಗಳಿಂದ ಹೃದಯಾಘಾತ ಮತ್ತು ಸಾವು ಕೂಡ ಸಂಭವಿಸಬಹುದು

ಈ ಕಿರಿದಾದ ನಾಳದೊಳಗಿನಿಂದ ಅಗತ್ಯ ಮಟ್ಟದ ರಕ್ತವನ್ನು ಪಡೆಯಲಾಗದೇ ಹೃದಯ ಹೆಚ್ಚು ಒತ್ತಡದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಒಂದು ದಿನ ರಕ್ತದ ಹರಿವೇ ಸಾಧ್ಯವಿಲ್ಲದಂತೆ ಮುಚ್ಚಿಬಿಟ್ಟಾಗ ಹೃದಯಕ್ಕೆ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಸ್ತಬ್ಧವಾಗುತ್ತದೆ. ಇದೇ ಹೃದಯಾಘಾತ.

ಹೃದಯಾಘಾತದ ಲಕ್ಷಣಗಳು

​ಯಾವುದೇ ವಯಸ್ಸಿನ ವ್ಯಕ್ತಿಗೂ ಎದುರಾಗಬಹುದು

ಹೃದಯಾಘಾತ ಎದುರಾಗಲು ವ್ಯಕ್ತಿ ವೃದ್ದನಾಗಿರಬೇಕೆಂದೇನೂ ಇಲ್ಲ. ಹಿಂದೆ ಹೆಚ್ಚಿನ ಹೃದಯಾಘಾತಗಳು ವೃದ್ದರಿಗೇ ಸಂಭವಿಸುತ್ತಿದ್ದ ಕಾರಣ ಹೀಗೆಂಬ ಭಾವನೆ ಬೆಳೆದಿತ್ತೇ ವಿನಃ ಇಂದು ಇದು ಯಾವುದೇ ವಯಸ್ಸಿನ ವ್ಯಕ್ತಿಗೂ ಎದುರಾಗಬಹುದು. ಆತಂಕಕಾರಿಯಾಗಿ, ಇಂದು ಯುವಜನತೆಯಲ್ಲಿಯೂ ಹೃದಯಸಂಬಂಧಿ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಸಂಸ್ಥೆಯ ಪ್ರಕಾರ, ಈ ತೊಂದರೆ ಎದುರಾದ ವ್ಯಕ್ತಿಗಳಲ್ಲಿ ಅರ್ಧದಷ್ಟು ವ್ಯಕ್ತಿಗಳು ಯಾವುದೇ ವೈದ್ಯಕೀಯ ಆರೈಕೆಯನ್ನು ಪಡೆಯುವ ಮುನ್ನವೇ ಹೃದಯಾಘಾತದಿಂದ ಸಾವಿಗೆ ಶರಣಾಗುತ್ತಾರೆ.

ಆದರೆ ಹೆಚ್ಚಿನವರಿಗೆ ತಿಳಿದಿಲ್ಲದ ಸಂಗತಿಯೆಂದರೆ, ಹೃದಯಾಘಾತ ಸಂಭವಿಸುವ ಕೆಲವು ದಿನಗಳ ಮೊದಲೇ ಕೆಲವು ಸಂಜ್ಞೆಗಳನ್ನು ದೇಹ ಪ್ರಕಟಿಸುತ್ತದೆ ಹಾಗೂ ಸೂಕ್ಷ್ಮವಾಗಿ ಗಮನಿಸಿದರೆ ಇವನ್ನು ಗುರುತಿಸಬಹುದು. ಹೃದಯಾಘಾತವನ್ನು ತಡೆಗಟ್ಟಲು ಮತ್ತು ನಿಮ್ಮ ಜೀವವನ್ನು ಉಳಿಸಲು ದೇಹ ಯಾವ ಬಗೆಯ ಸಂಜ್ಞೆಗಳನ್ನು ನೀಡುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಇದನ್ನು ಅರಿತುಕೊಂಡಿರುವುದು ಅಗತ್ಯವಾಗಿದೆ.

ಅತಿಯಾದ ಬೆವರುವಿಕೆ

ನಿಮ್ಮ ರಕ್ತನಾಳಗಳ ಒಳಭಾಗದಲ್ಲಿ ಜಿಡ್ಡಿನ ತಡೆಯುಂಟಾದಾಗ, ಅವು ನಿಮ್ಮ ಹೃದಯಕ್ಕೆ ಅಗತ್ಯ ಪ್ರಮಾಣದ ರಕ್ತವನ್ನು ದೂಡಿ ಕೊಡಲು ಹೆಣಗಾಡಬೇಕಾಗುತ್ತದೆ. ಹೃದಯಕ್ಕೆ ಆಮ್ಲಜನಕ-ಭರಿತ ರಕ್ತದ ಹರಿವಿನ ಕೊರತೆಯಾಗಿ ನಂತರ ನೀವು ಯಾವುದೇ ದೈಹಿಕ ಚಟುವಟಿಕೆಯಲ್ಲಿ ತೊಡಗಿದಾಗ ನಿಮ್ಮ ಹೃದಯಕ್ಕೆ ಹೆಚ್ಚುವರಿ ಒತ್ತಡವನ್ನು ಹೇರುತ್ತದೆ.

​ಎದೆಯಲ್ಲಿ ನೋವು

ಎದೆಯ ನಡುವಿನಿಂದ ಕೊಂಚವೇ ಎಡಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು ಹಾಗೂ ಇದು ನಿಧಾನಕ್ಕೆ ಕೈಗಳು, ಭುಜಗಳು ಮತ್ತು ಎಡದವಡೆಯತ್ತ ಮುಂದುವರೆದಂತಹ ಅನುಭವವಾಗಬಹುದು. ಎದೆಯುರಿ ಅಥವಾ ಹೊಟ್ಟೆಯುರಿ ಎದುರಾದಾಗ ಹಲವರು ಇದು ಹೃದಯದ ತೊಂದರೆ ಎಂದು ಭಾವಿಸಿ ಗೊಂದಲಕ್ಕೊಳಗಾಗುತ್ತಾರೆ. ವಾಸ್ತವದಲ್ಲಿ, ಹೊಟ್ಟೆಯುರಿ ಎದುರಾದರೆ ಇದು ಎದೆಯ ನಟ್ಟ ನಡುವೆ ಮತ್ತು ಹೊಟ್ಟೆ ಮತ್ತು ಎದೆಯ ನಡುವಣ ಭಾಗದಲ್ಲಿ ನೋವಿಗಿಂತಲೂ ಉರಿಯ ರೂಪದಲ್ಲಿ ಕಾಡುತ್ತದೆ. ಈ ನೋವು ಹೃದಯಕ್ಕೆ ಸಂಬಂಧಿಸಿಲ್ಲ. ಹಾಗಾಗಿ ಈ ಉರಿಯನ್ನು ತಗ್ಗಿಸಲು ಸೂಕ್ತ ಔಷಧಿಗಳನ್ನು ಸೇವಿಸಿದರೆ ಸಾಕು, ಗೊಂದಲಗೊಳ್ಳಬೇಕಿಲ್ಲ.

​ಹೆಚ್ಚಿದ ಹೃದಯದ ಬಡಿತ ಹೆಚ್ಚಿದ ಹೃದಯದ ಬಡಿತ ಏಕಪ್ರಕಾರವಾಗಿ ಇರದೇ ನಡು ನಡುವೆ ಬಡಿತ ನಿಲ್ಲಿಸಿದಂತೆ, ಕೆಲವೊಮ್ಮೆ ನಗಾರಿಯಂತೆ, ಕೆಲವೊಮ್ಮೆ ಚಿಕ್ಕದಾಗಿ, ಆದರೆ ಬೇಗಬೇಗನೇ ಬಡಿದಂತೆ ಬಡಿದುಕೊಳ್ಳುತ್ತದೆ. ಇವು ರಕ್ತನಾಳಗಳ ಒಳಗೆ ಜಿಡ್ದು ಕಟ್ಟಿಕೊಂಡು ರಕ್ತದ ಹರಿವಿಗೆ ಅಡ್ಡಿ ಮಾಡುತ್ತಿರುವ ಸಂಕೇತವಾಗಿದೆ. ​

ಉಸಿರು ತೆಗೆದುಕೊಳ್ಳಲು ಕಷ್ಟವಾಗುವುದು ಒಂದು ವೇಳೆ ಸ್ವಲ್ಪವೂ ಆಯಾಸಕರ ಚಟುವಟಿಕೆ ನಿರ್ವಹಿಸಿದ ಬಳಿಕ ಉಸಿರಾಡಲು ಕಷ್ಟವಾಗುತ್ತಿದೆಯೇ, ಸರಳ ವ್ಯಾಯಾಮ ಅಥವಾ ನಡಿಗೆ ಅಥವಾ ಒಂದೆರಡು ಮಹಡಿಗಳನ್ನು ಏರಿದ ಬಳಿಕ ಉಸಿರು ತೆಗೆದುಕೊಳ್ಳಲು ಕಷ್ಟವಾಗುತ್ತಿದೆಯೇ? ಇದು ನಿಮ್ಮ ಹೃದಯದ ನಾಳಗಳಲ್ಲಿ ಕೆಲವೆಡೆ ಜಿಡ್ಡು ಕಟ್ಟಿಕೊಂಡಿರುವುದನ್ನು ಸೂಚಿಸುತ್ತದೆ. ಇವು ನಿಧಾನಕ್ಕೆ ಹೆಚ್ಚುತ್ತಾ ಹೃದಯಾಘಾತ ಕೆಲವೇ ದಿನಗಳಲ್ಲಿ ಸಂಭವಿಸಲಿದೆ ಎಂದು ಸೂಚಿಸುತ್ತವೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್