ಜಾಮಿಯಾ ಮಸೀದಿ ವಿವಾದ: ಹಿಂದೂ ಪರ ಸಂಘಟನೆಗಳಿಂದ ಇಂದು ಶ್ರೀರಂಗಪಟ್ಟಣ ಚಲೋ

ಜಾಮಿಯಾ ಮಸೀದಿಯಲ್ಲಿ ಮದರಸಾ ಶಿಕ್ಷಣ ಮುಂದುವರಿದದಿದೆ. ಮಸೀದಿಯಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮದರಸಾ ಶಿಕ್ಷಣ ನೀಡಲಾಗುತ್ತಿದೆ. ಇಬ್ಬರು ಮೌಲ್ವಿಗಳು ವಿದ್ಯಾರ್ಥಿಗಳಿಗೆ ಧಾರ್ಮಿಕ ಪಾಠ ಬೋಧನೆ ಮಾಡುತ್ತಿದ್ದಾರೆ.

ಜಾಮಿಯಾ ಮಸೀದಿ ವಿವಾದ: ಹಿಂದೂ ಪರ ಸಂಘಟನೆಗಳಿಂದ ಇಂದು ಶ್ರೀರಂಗಪಟ್ಟಣ ಚಲೋ
ಜಾಮಿಯ ಮಸೀದಿ
Follow us
| Updated By: sandhya thejappa

Updated on:Jun 04, 2022 | 10:33 AM

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ (Srirangapatna) ಜಾಮಿಯಾ ಮಸೀದಿ (Jamiya Masjid) ವಿವಾದ ಹೆಚ್ಚಾಗುತ್ತಿದ್ದು, ಹಿಂದೂ ಪರ ಸಂಘಟನೆಗಳಿಂದ ಇಂದು (ಜೂನ್ 4) ಶ್ರೀರಂಗಪಟ್ಟಣ ಚಲೋ ನಡೆಯುತ್ತದೆ. ಈ ಹಿನ್ನೆಲೆ ಜಾಮಿಯಾ ಮಸೀದಿ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಜಾಮಿಯಾ ಮಸೀದಿಯಲ್ಲಿ ಮದರಸಾ ಶಿಕ್ಷಣ ಮುಂದುವರಿದದಿದೆ. ಮಸೀದಿಯಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮದರಸಾ ಶಿಕ್ಷಣ ನೀಡಲಾಗುತ್ತಿದೆ. ಇಬ್ಬರು ಮೌಲ್ವಿಗಳು ವಿದ್ಯಾರ್ಥಿಗಳಿಗೆ ಧಾರ್ಮಿಕ ಪಾಠ ಬೋಧನೆ ಮಾಡುತ್ತಿದ್ದಾರೆ.

ಜಾಮಿಯಾ ಮಸೀದಿಯನ್ನು ಪ್ರವೇಶಿಸಿ ತೀರುವುದಾಗಿ ಹಿಂದುತ್ವವಾದಿಗಳು ಶುಕ್ರವಾರ ಕರಪತ್ರಗಳನ್ನು ಹಂಚಿದ್ದರು. ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದ್ದರೂ, ಪಟ್ಟಣ ವ್ಯಾಪ್ತಿಯಲ್ಲಿ ಚುರುಕಿನ ಚಟುವಟಿಕೆಗಳು ಕಂಡು ಬಂದಿವೆ. ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿಯಲ್ಲಿ ಹಿಂದುತ್ವವಾದಿ ಮುಖಂಡ ಶಿವಕುಮಾರ್ ಆರಾಧ್ಯ ಈ ಸಂಬಂಧ ಕರಪತ್ರ ಹಂಚಿದ್ದು, ಪೊಲೀಸರಿಗೆ ಸೆಡ್ಡು ಹೊಡೆದಿದ್ದಾರೆ.

ಈ ಬಾರಿಯ ಹನುಮ ಜಯಂತಿಗೆ ಜಿಲ್ಲೆಯ ಶ್ರೀರಂಗಟ್ಟಣದಲ್ಲಿರುವ ಜಾಮಿಯ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಹಿಂದು ಪರ ಸಂಘಟನೆಗಳು ಮನವಿ ಮಾಡಿಕೊಂಡಿದ್ದರು. ಹಾಗಾಗಿ ಜಾಮಿಯ ಮಸೀದಿಯಲ್ಲಿ ವಾಸಿಸುತ್ತಿದ್ದವರನ್ನು ಖಾಲಿ ಮಾಡಿಸುವಂತೆ ಭಜರಂಗದಳದ ಸದಸ್ಯರು ಸೂಚಿಸಿದ್ದರು. ಆದರೆ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆ, ಇಂದು ಸಹಸ್ರಾರು ಸಂಖ್ಯೆಯಲ್ಲಿ ಶ್ರೀರಂಗಪಟ್ಟಣ ಚಲೋ ಚಾಲನೆಗೆ ಸಿದ್ಧತೆ ನಡೆಯುತ್ತಿದೆ.

ಇದನ್ನೂ ಓದಿ
Image
ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಕರ್ನಾಟಕದ ಸರ್ಕಾರಿ ಬಸ್ ಚಾಲಕ, ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ!
Image
Rohith Chakrathirtha: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣೆ ಸಮಿತಿ ವಿಸರ್ಜನೆ; ಸಿಎಂ ಹೇಳಿಕೆಯ ಒಳಾರ್ಥಗಳು ಹಲವು
Image
Priyamani Birthday: ಬಹುಬೇಡಿಕೆಯ ನಟಿ ಪ್ರಿಯಾಮಣಿಗೆ ಹುಟ್ಟುಹಬ್ಬದ ಸಡಗರ; ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬೆಡಗಿ ಈಗ ಸಖತ್​ ಬ್ಯುಸಿ
Image
ಊಟಕ್ಕೆ ಮೊದಲು ಉಪ್ಪಿನಕಾಯಿ ಅಲ್ಲ ಸ್ವಾಮಿ, ಸಿಹಿತಿಂಡಿ! ಇದನ್ನು ಓದಿದರೆ ನಿಮಗೆ ಗೊತ್ತಾಗುತ್ತದೆ!

ಇದನ್ನೂ ಓದಿ: ಮಕ್ಕಳ ಬಿಸಿಯೂಟದ 4.42 ಲಕ್ಷ ರೂ. ದುರುಪಯೋಗ ಆರೋಪ: ಹನಗೋಡು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಅಮಾನತು

ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಶ್ರೀರಂಗಪಟ್ಟಣ ಚಲೋಗೆ ಚಾಲನೆ ನೀಡಿದ್ದು, ಜೂನ್ 4 ರಂದು ಹನುಮ ಮಾಲಾದಾರಿಗಳಿಂದ ಜಾಮಿಯ ಮಸೀದಿ ಪ್ರವೇಶಕ್ಕೆ ಸಿದ್ಧತೆ ನಡೆದಿದೆ.

ಶೃಂಗಾರ್ ಗೌರಿ-ಜ್ಞಾನವಾಪಿ ಮಸೀದಿ ಮೊಕದ್ದಮೆಗೆ ತಡೆ ನೀಡಲು ಸುಪ್ರೀಂ ನಿರಾಕರಣೆ: ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ದೇವರ ದೈನಂದಿನ ಪೂಜೆ ಮತ್ತು ಆಚರಣೆಗಳಿಗೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿಯೊಂದಿಗೆ ಪ್ರಸ್ತುತ ಕಾನೂನು ಹೋರಾಟ ಪ್ರಾರಂಭವಾಗಿತ್ತು. ಅನಾದಿ ಕಾಲದಿಂದಲೂ ಶೃಂಗಾರ್ ಗೌರಿ ದೇವಿಯು ಸ್ಥಳದಲ್ಲಿ ನೆಲೆಸಿದ್ದಾಳೆ ಎಂದು ಅರ್ಜಿದಾರರು ವಾದಿಸಿದ್ದು, ಅದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವನ್ನು ಒತ್ತಾಯಿಸಿದರು.

ನಿಷೇಧಾಜ್ಞೆ ಜಾರಿ: ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿ ಸುತ್ತ ಜಿಲ್ಲಾಡಳಿತ 5 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದೆ. ನಾಲ್ವರು ಡಿವೈಎಸ್​, 11 ಸಿಪಿಐ, 34 ಪಿಎಸ್​ಐ, 400 ಕಾನ್ಸ್​ಟೇಬಲ್​, 2 ಕೆಎಸ್​ಆರ್​ಪಿ ತುಕಡಿ, 4 ಡಿಎಆರ್​ ತುಕಡಿ ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಗಳನ್ನ ಕೈಗೊಳ್ಳಲಾಗಿದೆ

ಇನ್ನು ಕೆಲವೇ ಕ್ಷಣದಲ್ಲಿ ಭಜರಂಗದದಳ ಮುಖಂಡರು ಶ್ರೀರಂಗಪಟ್ಟಣಕ್ಕೆ ತೆರಳುತ್ತಾರೆ. 10.30 ಕ್ಕೆ ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಪ್ರತಿಭಟನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೂಡಲ ಬಾಗಿಲು ಆಂಜನೇಯ ದೇವಾಲಯದ ಮುಂದೆ ಹಿಂದೂಪರ ಮುಖಂಡರು ಹನುಮಾನ್ ಚಾಲೀಸ್ ಪಠಿಸುತ್ತಾರೆ.

ಯಾವುದೇ ಕಾರಣಕ್ಕೂ ಪೂಜೆಗೆ ಅವಕಾಶ ಕೊಡಲ್ಲ: ಚಲೋ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ವಕ್ಫ್ ಬೋರ್ಡ್ ಕಾರ್ಯದರ್ಶಿ ಇರ್ಫಾನ್, ನಾಳೆ ಎಂದಿನಂತೆ ಐದು ಬಾರಿ ನಮಾಜ್ ಆಜಾನ್ ನಡೆಯುತ್ತದೆ. ಇದು ವಕ್ಫ್ ಬೋರ್ಡ್​ಗೆ ಸಂಬಂಧಪಟ್ಟ ಜಾಗವಾಗಿದೆ. ನಾವು ಯಾವುದೇ ಕಾರಣಕ್ಕೂ ಪೂಜೆಗೆ ಅವಕಾಶ ಕೊಡುವುದಿಲ್ಲ. ಇದು ಮಸೀದಿಯಾಗಿದೆ ಮಸೀದಿಯಾಗಿಯೆ ಉಳಿಯುತ್ತದೆ. ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಆಗಿರುತ್ತೆ ಅಷ್ಟೇ. ಈ ವಿವಾದ ಯಾಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಕೊಟ್ಟರೆ ನಾವು ಕಾನೂನು ಹೋರಾಟ ಮಾಡುತ್ತೇವೆ. ನಾವು ಕೂಡ ನಮ್ಮ ಧರ್ಮದವರಿಗೆ ಶಾಂತಿಯಿಂದ ಇರುವಂತೆ ಮನವಿ ಮಾಡಿದ್ದೇವೆ. ನಾಳೆ ಇಲ್ಲಿ ಸಂತೆಯಿತ್ತು 144 ಸೆಕ್ಷನ್ ಜಾರಿ ಹಿನ್ನಲೆ ಸಂತೆಯನ್ನ ರದ್ದು ಮಾಡಲಾಗಿದೆ. ಈ ರೀತಿ ಕೆಲಸವನ್ನ ಮಾಡಬಾರದು ನಾವು ಒಂದಾಗಿ ಇರಬೇಕಿದೆ ಎಂದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:07 am, Sat, 4 June 22

ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ