ಮತ್ತೊಂದು ಧರ್ಮ ದಂಗಲ್​ಗೆ ಸಾಕ್ಷಿಯಾಗಲಿದ್ಯಾ ಮಂಡ್ಯ ಜಿಲ್ಲೆ? ಹನುಮ ಮಾಲಾಧಾರಿಗಳಿಂದ ಜಾಮಿಯಾ ಮಸೀದಿ ಪ್ರವೇಶಕ್ಕೆ ಸಿದ್ಧತೆ

ಜೂನ್ 4 ರಂದು ಸಹಸ್ರಾರು ಸಂಖ್ಯೆಯಲ್ಲಿ ಶ್ರೀರಂಗಪಟ್ಟಣ ಚಲೋ ಚಾಲನೆಗೆ ಸಿದ್ಧತೆ ನಡೆಯುತ್ತಿದ್ದು,  ಮಂಡ್ಯ ಜಿಲ್ಲೆ ಈಗ ಮತ್ತೊಂದು ಧರ್ಮ ದಂಗಲ್​ಗೆ ಸಾಕ್ಷಿಯಾಗಲಿದ್ಯಾ ಎನ್ನುವ ಮಾತು ಕೇಳಿಬರುತ್ತಿವೆ.

ಮತ್ತೊಂದು ಧರ್ಮ ದಂಗಲ್​ಗೆ ಸಾಕ್ಷಿಯಾಗಲಿದ್ಯಾ ಮಂಡ್ಯ ಜಿಲ್ಲೆ? ಹನುಮ ಮಾಲಾಧಾರಿಗಳಿಂದ ಜಾಮಿಯಾ ಮಸೀದಿ ಪ್ರವೇಶಕ್ಕೆ ಸಿದ್ಧತೆ
ಹನುಮ ಮಾಲಾಧಾರಿಗಳಿಂದ ಜಾಮಿಯಾ ಮಸೀದಿ ಪ್ರವೇಶಕ್ಕೆ ಸಿದ್ಧತೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 31, 2022 | 9:22 AM

ಮಂಡ್ಯ: ಈ ಬಾರಿಯ ಹನುಮ ಜಯಂತಿಗೆ ಜಿಲ್ಲೆಯ ಶ್ರೀರಂಗಟ್ಟಣದಲ್ಲಿರುವ ಜಾಮಿಯ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಹಿಂದು ಪರ ಸಂಘಟನೆಗಳು ಮನವಿ ಮಾಡಿಕೊಂಡಿದ್ದರು. ಹಾಗಾಗಿ ಜಾಮಿಯ ಮಸೀದಿಯಲ್ಲಿ ವಾಸಿಸುತ್ತಿದ್ದವರನ್ನು ಖಾಲಿ ಮಾಡಿಸುವಂತೆ ಭಜರಂಗದಳದ ಸದಸ್ಯರು ಸೂಚಿಸಿದ್ದರು. ಆದರೆ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನಲೆ, ಜೂನ್ 4 ರಂದು ಸಹಸ್ರಾರು ಸಂಖ್ಯೆಯಲ್ಲಿ ಶ್ರೀರಂಗಪಟ್ಟಣ ಚಲೋ ಚಾಲನೆಗೆ ಸಿದ್ಧತೆ ನಡೆಯುತ್ತಿದ್ದು,  ಮಂಡ್ಯ ಜಿಲ್ಲೆ ಈಗ ಮತ್ತೊಂದು ಧರ್ಮ ದಂಗಲ್​ಗೆ ಸಾಕ್ಷಿಯಾಗಲಿದ್ಯಾ ಎನ್ನುವ ಮಾತು ಕೇಳಿಬರುತ್ತಿವೆ. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಶ್ರೀರಂಗಪಟ್ಟಣ ಚಲೋಗೆ ಚಾಲನೆ ನೀಡಿದ್ದು, ಜೂನ್ 4 ರಂದು ಹನುಮ ಮಾಲಾದಾರಿಗಳಿಂದ  ಜಾಮಿಯ ಮಸೀದಿ ಪ್ರವೇಶಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಮೇ 20 ರಂದು ಜಿಲ್ಲಾಡಳಿತ, ಪ್ರಾಚೀನ ಹಾಗೂ ಪುರಾತತ್ವ ಇಲಾಖೆಗೆ ಹಿಂದು ಪರ ಸಂಘಟನೆಗಳು ವಾರಣಾಸಿಯ ಜ್ಞಾನವಾಪಿ ಮಸೀದಿಯಂತೆ ವಿಡಿಯೋ ಚಿತ್ರೀಕರಿಸಲು ಮನವಿ ಮಾಡಲಾಗಿತ್ತು.

ಶೃಂಗಾರ್ ಗೌರಿ-ಜ್ಞಾನವಾಪಿ ಮಸೀದಿ ಮೊಕದ್ದಮೆಗೆ ತಡೆ ನೀಡಲು ಸುಪ್ರೀಂ ನಿರಾಕರಣೆ

ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ದೇವರ ದೈನಂದಿನ ಪೂಜೆ ಮತ್ತು ಆಚರಣೆಗಳಿಗೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿಯೊಂದಿಗೆ ಪ್ರಸ್ತುತ ಕಾನೂನು ಹೋರಾಟ ಪ್ರಾರಂಭವಾಗಿತ್ತು. ಅನಾದಿ ಕಾಲದಿಂದಲೂ ಶೃಂಗಾರ್ ಗೌರಿ ದೇವಿಯು ಸ್ಥಳದಲ್ಲಿ ನೆಲೆಸಿದ್ದಾಳೆ ಎಂದು ಅರ್ಜಿದಾರರು ವಾದಿಸಿದ್ದು, ಅದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವನ್ನು ಒತ್ತಾಯಿಸಿದರು.

ಇದನ್ನೂ ಓದಿ: ತುಳುನಾಡಿನಲ್ಲಿ ಪತ್ತನಾಜೆ : ನೇಮ, ಜಾತ್ರೆಗೆ ಬ್ರೇಕ್, ಕೃಷಿ ಕಾರ್ಯಕ್ಕೆ ಚಾಲನೆ

ಏಪ್ರಿಲ್ 26 ರಂದು ವಾರಣಾಸಿಯ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ಅವರು ಅರ್ಜಿದಾರರ ವಾದದ ಮೇರೆಗೆ ವಿಡಿಯೊಗ್ರಫಿ ಸಮೀಕ್ಷೆಗೆ ಆದೇಶಿಸಿದರು. ನ್ಯಾಯಾಲಯದ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ನೇತೃತ್ವದ ತಂಡವು ಮೇ 6 ರಂದು ಮಸೀದಿಯ ಹೊರಗಿನ ಕೆಲವು ಪ್ರದೇಶಗಳಲ್ಲಿ ಭಾಗಶಃ ಸಮೀಕ್ಷೆ ನಡೆಸಿದರೆ, ನ್ಯಾಯಾಲಯದ ಆದೇಶದ ವ್ಯಾಖ್ಯಾನದ ವಿವಾದದ ಕಾರಣ ಮರುದಿನ ಮಸೀದಿ ಸಂಕೀರ್ಣಕ್ಕೆ ಪ್ರವೇಶಿಸದಂತೆ ತಡೆಯಲಾಯಿತು. ಅಂತಿಮವಾಗಿ, ನ್ಯಾಯಾಲಯವು ಮಸೀದಿ ಆವರಣದ ವಿಡಿಯೊಗ್ರಫಿ ಸಮೀಕ್ಷೆಗೆ ಅನುಮತಿ ನೀಡಿತು, ಅದು ಮೇ 16 ರಂದು ಪೂರ್ಣಗೊಂಡಿತು. ವರದಿಯ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಆರೋಪದಲ್ಲಿ ಅಡ್ವೊಕೇಟ್ ಕಮಿಷನರ್ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಲಾಯಿತು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ