AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಮೀಯ ಮಸೀದಿ ಶೇ.100ರಷ್ಟು ಮಸೀದಿಯೇ, ಬ್ರಿಟಿಷರ ಉಲ್ಲೇಖವನ್ನು ಒಪ್ಪಲ್ಲ: ಆಸಿಫ್ ಸೇಠ್

ಶ್ರೀರಂಗಪಟ್ಟಣದ ಜಾಮೀಯ ಮಸೀದಿ ಶೇ.100ರಷ್ಟು ಮಸೀದಿಯೇ, ಮೈಸೂರು ಗೆಜಿಟಿಯರ್​ನಲ್ಲಿ ಉಲ್ಲೇಖ ಆಗಿರೋದು ಬ್ರಿಟಿಷರ ಕಾಲದಲ್ಲಿ. ಆ ಉಲ್ಲೇಖವನ್ನು ನಾವು ಒಪ್ಪುವುದಿಲ್ಲ ಎಂದು ಟಿಪ್ಪು ವೈಸ್ ಪ್ರೆಸಿಡೆಂಟ್ ಆಸಿಫ್ ಸೇಟ್ ಹೇಳಿಕೆ ನೀಡಿದ್ದಾರೆ.

ಜಾಮೀಯ ಮಸೀದಿ ಶೇ.100ರಷ್ಟು ಮಸೀದಿಯೇ, ಬ್ರಿಟಿಷರ ಉಲ್ಲೇಖವನ್ನು ಒಪ್ಪಲ್ಲ: ಆಸಿಫ್ ಸೇಠ್
ಜಾಮಿಯಾ ಮಸೀದಿ, ಮಂಡ್ಯ
TV9 Web
| Edited By: |

Updated on:Jun 04, 2022 | 9:50 PM

Share

ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ (Jamia mosque) ಶೇ.100ರಷ್ಟು ಮಸೀದಿಯೇ ಎಂದು ಟಿಪ್ಪು ವಕ್ಫ್ ಬೋರ್ಡ್ ಉಪಾಧ್ಯಕ್ಷ ಆಸಿಫ್ ಸೇಠ್ ಹೇಳಿಕೆ ನೀಡಿದ್ದಾರೆ. ಜಾಮಿಯಾ ಮಸೀದಿ ಬಳಿ ಮಾತನಾಡಿದ ಅವರು, ಮಸೀದಿ ಇರುವ ಜಾಗ ವಕ್ಫ್ ಬೋರ್ಡ್​ಗೆ ಸೇರಿದ್ದಾಗಿದೆ. ಇದರ ನಿರ್ವಹಣೆಯನ್ನ ಎಎಸ್​ಐ ಮಾಡುತ್ತಿದೆ. ಟಿಪ್ಪು ವಕ್ಫ್ ಬೋರ್ಡ್ ಯಾವಾಗ ಸ್ಥಾಪನೆ ಆಯ್ತೋ ಅಂದಿನಿಂದ ಇದು ವಕ್ಫ್ ಬೋರ್ಡ್ ಆಸ್ತಿಯಾಗಿದೆ. ಟಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಟಿಪ್ಪು ಜಾಗವನ್ನೆಲ್ಲ ಆರ್ಕ್ಯಾಲಜಿ ಡಿಪಾರ್ಟ್ಮೆಂಟ್ ಅವರು ನಿರ್ವಹಣೆಗೆ ಪಡೆದಿದೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ತಮ್ಮ ತಲೆ ಮೇಲೆ ಚಪ್ಪಡಿ ಎಳೆದುಕೊಂಡಿದ್ದಾರೆ, ಜಾಮಿಯಾ ಮಸೀದಿಯಲ್ಲಿ ದೇಗುಲ ಇದ್ದುದು ನಿಜ: ಎಚ್​ಡಿ ಕುಮಾರಸ್ವಾಮಿ

ಟಿಪ್ಪು ಒಬ್ಬ ಸಂತ, ಸಂತರ ಕೆಲಸ ಹಿಂದೂ, ಮುಸ್ಲಿಂ ಎನ್ನದೆ ಒಟ್ಟಿಗೆ ಬದುಕುವುದು. ಚಿಲ್ಲರೆ ಪ್ರಚಾರ ಪಡೆಯಲು ಇಂದು ಈ ರೀತಿ ಮಾಡಲಾಗುತ್ತಿದೆ. ಹಿಂದೂ ಸಂಸ್ಕೃತಿ ಇರುವ ಪಕ್ಕಾ ಹಿಂದೂಗಳು ಇಂಥ ಕೆಲಸ ಮಾಡುವುದಿಲ್ಲ. ಹಿಂದೂ ಮತ್ತು ಮುಸ್ಲಿಂ ಇಲ್ಲಿ ಎರಡು ಕಣ್ಣುಗಳು ಇದ್ದಂತೆ. ಸರ್ಕಾರದ ಮೇಲೆ ನಂಬಿಕೆ ಇದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ತಾರೆ. ಮಸೀದಿಗೆ ಭದ್ರತೆ ನೀಡುವ ಮೂಲಕ ಮುಖ್ಯಮಂತ್ರಿಗಳು ಹಾಗೂ ಪೊಲೀಸ್ ಇಲಾಖೆ ಒಳ್ಳೆಯ ಕೆಲಸ ಮಾಡಿದೆ ಎಂದರು.

ಇದನ್ನೂ ಓದಿ: ಜಾಮಿಯಾ ಮಸೀದಿ ವಿವಾದ: ಹಿಂದೂ ಪರ ಸಂಘಟನೆಗಳಿಂದ ಇಂದು ಶ್ರೀರಂಗಪಟ್ಟಣ ಚಲೋ

ಟಿಪ್ಪು ಸುಲ್ತಾನ್ ಕಾಲದಿಂದಲೂ ಇಲ್ಲಿ ಮದರಸ ನಡೆದುಕೊಂಡು ಬರ್ತಿದೆ. ಬ್ರಿಟಿಷರಿಗೆ ಮುಸ್ಲಿಮರನ್ನ ಕಂಡರೆ ಆಗಲ್ಲ. ಹೀಗಾಗಿ ಟಿಪ್ಪು ಕೊಂದ ಬಳಿಕ ಅವರಿಗೆ ಸಂತೋಷವಾಯ್ತು. ಮೈಸೂರು ಗೆಜಿಟಿಯರ್​ನಲ್ಲಿ ಉಲ್ಲೇಖ ಆಗಿರೋದು ಬ್ರಿಟಿಷರ ಕಾಲದಲ್ಲಿ. ಬ್ರಿಟಿಷರ ಉಲ್ಲೇಖವನ್ನ ನಾವು ಒಪ್ಪುವುದಿಲ್ಲ. ಇಲ್ಲಿ ಮಸೀದಿ ಕಾಣುತ್ತಿದ್ದೆ. ಇದು ಶೇ.100ರಷ್ಟು ಮಸೀದಿಯೇ ಎಂದರು. ಅಲ್ಲದೆ, ಸಬ್ಕ ಸಾತ್ ಸಬ್ಕ ವಿಕಾಸ್ ಎಂದು ನಮ್ಮ ಮೋದಿ ಹೇಳಿದ್ದಾರೆ. ಅದರಂತೆ ನಾವೆಲ್ಲ ನಡೆಯಬೇಕು ಎಂದರು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:56 pm, Sat, 4 June 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ