Rajya Sabha Election: ಪಿ. ಚಿದಂಬರಂ, ಕಪಿಲ್ ಸಿಬಲ್ ಸೇರಿ 41 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧ ಆಯ್ಕೆ

11 ರಾಜ್ಯಗಳ 41 ಅಭ್ಯರ್ಥಿಗಳು ಶುಕ್ರವಾರ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೂನ್ 10ರಂದು ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣದಲ್ಲಿ ರಾಜ್ಯಸಭಾ ಚುನಾವಣೆಗಳು ನಡೆಯಲಿವೆ.

Rajya Sabha Election: ಪಿ. ಚಿದಂಬರಂ, ಕಪಿಲ್ ಸಿಬಲ್ ಸೇರಿ 41 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧ ಆಯ್ಕೆ
ಪಿ ಚಿದಂಬರಂ- ಕಪಿಲ್ ಸಿಬಲ್Image Credit source: Indian Express
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 04, 2022 | 9:35 AM

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ (P Chidambaram), ಮಾಜಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ (Kapil Sibal), ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ, ಆರ್‌ಜೆಡಿಯ ಮಿಸಾ ಭಾರತಿ, ಬಿಜೆಡಿಯ ಸಸ್ಮಿತ್ ಪಾತ್ರ ಮತ್ತು ವೈಎಸ್‌ಆರ್‌ಸಿಪಿಯ ವಿ ವಿಜಯಸಾಯಿ ರೆಡ್ಡಿ ಸೇರಿದಂತೆ 11 ರಾಜ್ಯಗಳ 41 ಅಭ್ಯರ್ಥಿಗಳು ಶುಕ್ರವಾರ ರಾಜ್ಯಸಭೆಗೆ (Rajya Sabha Election)  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೂನ್ 10ರಂದು ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣದಲ್ಲಿ ರಾಜ್ಯಸಭಾ ಚುನಾವಣೆಗಳು ನಡೆಯಲಿವೆ.

ಉತ್ತರ ಪ್ರದೇಶದಲ್ಲಿ 11 ಅಭ್ಯರ್ಥಿಗಳು, ತಮಿಳುನಾಡಿನ 6, ಬಿಹಾರದಲ್ಲಿ 5, ಆಂಧ್ರಪ್ರದೇಶದಲ್ಲಿ 4, ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಮೂವರು, ಛತ್ತೀಸ್‌ಗಢ, ಪಂಜಾಬ್, ತೆಲಂಗಾಣ ಮತ್ತು ಜಾರ್ಖಂಡ್‌ನಲ್ಲಿ ತಲಾ ಇಬ್ಬರು ಮತ್ತು ಉತ್ತರಾಖಂಡದಲ್ಲಿ ಒಬ್ಬ ಅಭ್ಯರ್ಥಿ ಸ್ಪರ್ಧೆಯಿಲ್ಲದೆ ಅವಿರೋಧವಾಗಿ ಗೆದ್ದಿದ್ದಾರೆ.

15 ರಾಜ್ಯಗಳ ರಾಜ್ಯಸಭೆಯ 57 ಸ್ಥಾನಗಳನ್ನು ತುಂಬಲು ಚುನಾವಣೆಗಳು ನಡೆಯುತ್ತಿವೆ. ಹರಿಯಾಣದ ಎರಡು ಸ್ಥಾನಗಳಿಗೆ ಮಾಧ್ಯಮ ದೊರೆ ಕಾರ್ತಿಕೇಯ ಶರ್ಮಾ ಮೂರನೇ ಅಭ್ಯರ್ಥಿಯಾಗಿ ಮತ್ತು ಜೀ ಮೀಡಿಯಾ ಸಂಸ್ಥಾಪಕ ಸುಭಾಷ್ ಚಂದ್ರ ಅವರು ರಾಜಸ್ಥಾನದ ನಾಲ್ಕು ಸ್ಥಾನಗಳಿಗೆ ಐದನೇ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಪ್ರವೇಶಿಸಿದ್ದಾರೆ.

ಇದನ್ನೂ ಓದಿ
Image
Terrorist Encounter: ಜಮ್ಮು ಕಾಶ್ಮೀರದ ಅನಂತ್​ನಾಗ್​ನಲ್ಲಿ ಎನ್​ಕೌಂಟರ್; ಹಿಜ್ಬ್ ಕಮಾಂಡರ್ ಹತ್ಯೆ
Image
Amit Shah: ಪಂಚಕುಲದಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್​ಗೆ ಗೃಹ ಸಚಿವ ಅಮಿತ್ ಶಾ ಚಾಲನೆ
Image
ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗೆ ಹೆಚ್ಚು‘ವರಿ’ಯಾದ ಅಭ್ಯರ್ಥಿಗಳು, ಎಲ್ಲರೂ ಕಣದಲ್ಲಿದ್ದಾರೆ! ಮುಂದೇನು?

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಜೆಡಿಎಸ್-ಕಾಂಗ್ರೆಸ್ ಪಾಳಯದಲ್ಲಿ ರಾಜಕಾರಣ ಚುರುಕು, ಕಾದು ನೋಡುವ ತಂತ್ರಕ್ಕೆ ಬಿಜೆಪಿ

ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಲ್ಕನೇ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಚುನಾವಣೆ ಅನಿವಾರ್ಯವಾಗಿದೆ. ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಬಿಜೆಪಿ ಮೂವರು, ಕಾಂಗ್ರೆಸ್ ಇಬ್ಬರು ಮತ್ತು ಜೆಡಿಎಸ್ ಒಬ್ಬರನ್ನು ಕಣಕ್ಕಿಳಿಸಿದೆ. ಮಹಾರಾಷ್ಟ್ರದಲ್ಲಿಯೂ ತೆರವಾಗಿರುವ ಆರು ಸ್ಥಾನಗಳಿಗೆ ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಮಿಳುನಾಡಿನಲ್ಲಿ ಗೆದ್ದ ಆರು ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ನ ಪಿ. ಚಿದಂಬರಂ, ಆಡಳಿತಾರೂಢ ಡಿಎಂಕೆಯ ಎಸ್ ಕಲ್ಯಾಣಸುಂದರಂ, ಆರ್ ಗಿರಿರಾಜನ್ ಮತ್ತು ಕೆಆರ್ ಎನ್ ರಾಜೇಶ್ ಕುಮಾರ್, ಎಐಎಡಿಎಂಕೆಯ ಸಿ ವಿ ಷಣ್ಮುಗಂ ಮತ್ತು ಆರ್ ಧರ್ಮರ್ ಸೇರಿದ್ದಾರೆ. ಬಿಹಾರದಿಂದ ಆಯ್ಕೆಯಾದವರಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರತಿ ಮತ್ತು ಅವರ ಪಕ್ಷದ ಸಹೋದ್ಯೋಗಿ ಫಯಾಜ್ ಅಹ್ಮದ್, ಜೆಡಿಯುನ ಖಿರು ಮಹ್ತೋ ಮತ್ತು ಬಿಜೆಪಿಯ ಸತೀಶ್ ಚಂದ್ರ ದುಬೆ ಮತ್ತು ಶಂಭು ಶರಣ್ ಪಟೇಲ್ ಸೇರಿದ್ದಾರೆ. ಛತ್ತೀಸ್‌ಗಢದಿಂದ ಹಿರಿಯ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಮತ್ತು ಎಐಸಿಸಿ ಕಾರ್ಯದರ್ಶಿ ರಂಜಿತಾ ರಂಜನ್ ಆಯ್ಕೆಯಾಗಿದ್ದಾರೆ.

ಮಧ್ಯಪ್ರದೇಶದಿಂದ ಕಾಂಗ್ರೆಸ್ ನಾಯಕ ವಿವೇಕ್ ತಂಖಾ ಮತ್ತು ಬಿಜೆಪಿಯ ಸುಮಿತ್ರಾ ವಾಲ್ಮೀಕಿ ಮತ್ತು ಕವಿತಾ ಪಾಟಿದಾರ್ ಆಯ್ಕೆಯಾಗಿದ್ದಾರೆ. ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್‌ನ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದ್ದಾರೆ. ಒಡಿಶಾದಲ್ಲಿ ಪಾತ್ರಾ ಸೇರಿದಂತೆ ಆಡಳಿತಾರೂಢ ಬಿಜೆಡಿಯ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:34 am, Sat, 4 June 22