Amit Shah: ಪಂಚಕುಲದಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್​ಗೆ ಗೃಹ ಸಚಿವ ಅಮಿತ್ ಶಾ ಚಾಲನೆ

TV9 Digital Desk

| Edited By: Sushma Chakre

Updated on: Jun 04, 2022 | 8:18 AM

ಒಟ್ಟಾರೆಯಾಗಿ, 2,262 ಹುಡುಗಿಯರು ಸೇರಿದಂತೆ 4,700 ಅಥ್ಲೀಟ್‌ಗಳು 25 ಕ್ರೀಡೆಗಳಲ್ಲಿ 269 ಚಿನ್ನ, 269 ಬೆಳ್ಳಿ ಮತ್ತು 358 ಕಂಚಿನ ಪದಕಗಳಿಗಾಗಿ ಸ್ಪರ್ಧಿಸಲಿದ್ದಾರೆ. ಈ ಕ್ರೀಡಾ ಸ್ಪರ್ಧೆ ಇಂದು ಆರಂಭವಾಗಲಿದ್ದು, ಜೂನ್ 13ರವರೆಗೆ ನಡೆಯಲಿದೆ.

Amit Shah: ಪಂಚಕುಲದಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್​ಗೆ ಗೃಹ ಸಚಿವ ಅಮಿತ್ ಶಾ ಚಾಲನೆ
ಅಮಿತ್ ಶಾ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು (ಜೂನ್ 4) ಹರಿಯಾಣದ ಪಂಚಕುಲದಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್ 2021ರ (Khelo India Youth Games 2021) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತದ ಅತಿದೊಡ್ಡ ಕ್ರೀಡಾ ಸ್ಪರ್ಧೆ 2018ರಲ್ಲಿ ಕೇಂದ್ರ ಸರ್ಕಾರದಿಂದ ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ (Anurag Singh Thakur) ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಭಾಗವಹಿಸಲಿದ್ದಾರೆ.

ಹಾಗೇ, ಹರಿಯಾಣ ರಾಜ್ಯ ಕ್ರೀಡಾ ಸಚಿವ ಸಂದೀಪ್ ಸಿಂಗ್ ಸೇರಿದಂತೆ ಹರಿಯಾಣದ ಇತರ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಒಟ್ಟಾರೆಯಾಗಿ, 2,262 ಹುಡುಗಿಯರು ಸೇರಿದಂತೆ 4,700 ಅಥ್ಲೀಟ್‌ಗಳು 25 ಕ್ರೀಡೆಗಳಲ್ಲಿ 269 ಚಿನ್ನ, 269 ಬೆಳ್ಳಿ ಮತ್ತು 358 ಕಂಚಿನ ಪದಕಗಳಿಗಾಗಿ ಸ್ಪರ್ಧಿಸಲಿದ್ದಾರೆ. ಈ ಕ್ರೀಡಾ ಸ್ಪರ್ಧೆ ಇಂದು ಆರಂಭವಾಗಲಿದ್ದು, ಜೂನ್ 13ರವರೆಗೆ ನಡೆಯಲಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಹೆಚ್ಚಿದ ಟಾರ್ಗೆಟ್ ಹತ್ಯೆ; ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಇಂದು ಮಹತ್ವದ ಸಭೆ

KIYG 2021ರಲ್ಲಿ ಭಾರತದ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಇದು 5 ನಗರಗಳಲ್ಲಿ (ಪಂಚಕುಲ, ಶಹಬಾದ್, ಅಂಬಾಲಾ, ಚಂಡೀಗಢ ಮತ್ತು ದೆಹಲಿ) ನಡೆಯಲಿದೆ. ಈ ಸ್ಪರ್ಧೆ ಒಟ್ಟು 25 ಕ್ರೀಡೆಗಳನ್ನು ಒಳಗೊಂಡಿರುತ್ತವೆ. ಇದರಲ್ಲಿ ಭಾರತದ 5 ಸ್ಥಳೀಯ ಆಟಗಳಾದ ಕಲರಿಪಯಟ್ಟು, ತಂಗ್-ಟಾ, ಗಟ್ಕಾ, ಮಲ್ಲಕಂಬ ಮತ್ತು ಯೋಗಾಸನ ಕೂಡ ಇರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada