ಬೆಂಗಳೂರು, ಮಾರ್ಚ್.14: ಬೆಂಗಳೂರಿನ ಕೊಡಿಗೇಹಳ್ಳಿಯ ಲಕ್ಷ್ಮೀ ಬ್ಯಾಂಕರ್ಸ್ & ಜ್ಯುವೆಲ್ಲರಿ ಶಾಪ್ನಲ್ಲಿ ಗುರುವಾರ ಗುಂಡಿನ ದಾಳಿ (Open Fire) ನಡೆದಿದ್ದು ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ದೇವಿನಗರದಲ್ಲಿರುವ ಲಕ್ಷ್ಮಿ ಜ್ಯುವೆಲ್ಲರಿ ಶಾಪ್ಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಚಿನ್ನಾಭರಣ ಮಳಿಗೆಯ ಮಾಲೀಕ ಹಣ ನೀಡುವುದಕ್ಕೆ ವಿರೋಧಿಸಿದ್ದು ದುಷ್ಕರ್ಮಿಗಳು ಹಾಗೂ ಮಾಲೀನ ನಡುವೆ ಮಾತಿನ ಚಕಮಕಿಯಾಗಿದೆ. ಆಗ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಅಪ್ಪುರಾಮ್, ಅಭಿರಾಮ್ ಎಂಬುವವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಅಪ್ಪುರಂ ಮತ್ತು ಆನಂದರಾಮ್ ಅವರನ್ನು M.S.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು ಮೂರು ಸುತ್ತು ಗುಂಡು ಹಾರಿಸಲಾಗಿದೆ ಎನ್ನಲಾಗುತ್ತಿದೆ. ಇನ್ನು ಮತ್ತೊಂದೆಡೆ ದುಷ್ಕರ್ಮಿಗಳು ದರೋಡೆ ಅಲ್ಲದೆ ಸುಪಾರಿ ಪಡೆದು ಜ್ಯುವೆಲ್ಲರಿ ಅಂಗಡಿ ಮಾಲೀಕನನ್ನು ಕೊಲೆ ಮಾಡಲು ಬಂದಿದ್ದರು ಎಂಬ ಶಂಕೆ ಕೂಡ ವ್ಯಕ್ತವಾಗಿದೆ.
ಇದನ್ನೂ ಓದಿ: ಕನ್ನಡಿಗರು ‘ರೇಸಿಸ್ಟ್’ ಎಂದ ಯೂಟ್ಯೂಬರ್, ಹಾಕಿದ್ದಾನೆ ಸವಾಲು
ಆರೋಪಿಗಳು ಏನು ದೋಚಲು ಆಗಿಲ್ಲ. ಕೇವಲ ಗುಂಡು ಹಾರಿಸಿದ್ದಾರೆ. ಓರ್ವನಿಗೆ ಕಾಲಿಗೆ, ಮತ್ತೋರ್ವನಿಗೆ ಹೊಟ್ಟೆಗೆ ಗುಂಡು ತಾಕಿದೆ. ಆರೋಪಿಗಳು ಚಿನ್ನದಂಗಡಿಯೊಳಗೆ ಕೇವಲ ಒಂದು ನಿಮಿಷಗಳ ಕಾಲ ಇದ್ದರು. ಸದ್ಯಕ್ಕೆ ಆಭರಣ ಮಳಿಗೆಯಲ್ಲಿ ಕಳ್ಳತನ ನಡೆದಿರುವುದು ಪತ್ತೆಯಾಗಿಲ್ಲ. ಆರೋಪಿಗಳು ಬಂದು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಆರೋಪಿಗಳು ಪಿಸ್ತೂಲ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಸ್ಥಳಕ್ಕೆ ಡಿಜಿ, ಐಜಿಪಿ ಅಲೋಕ್ ಮೋಹನ್ ಮತ್ತು ನಗರ ಪೊಲೀಸ್ ಆಯುಕ್ತ ದಯಾನಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಾರೆ. ಸ್ಥಳದಲ್ಲಿ ಒಂದು ಮಚ್ಚು ಸಹ ಪತ್ತೆಯಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:10 pm, Thu, 14 March 24